ಮಂಗಳೂರು: ಕೈಯಲ್ಲಿ ಮಗು ಹಿಡಿದು ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba.com ನ. 09.ಮಂಗಳೂರು: ವ್ಯಕ್ತಿಯೊರ್ವನು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಸೇತುವೆ ಮೇಲೆ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಗುರುಪುರ ಸೇತುವೆ ಬಳಿ ನಡೆದಿದೆ. ಕೈಕಂಬ ನಿವಾಸಿ ಸಂದೀಪ್ ಎಂಬಾತ ತನ್ನ ಎರಡು ವರ್ಷದ ಮಗುವನ್ನೆತ್ತಿಕೊಂಡು ಸೇತುವೆಯ ಮೇಲೆ ಏರಿ ಮೇಲಿಂದ ಹಾರಲು ಸಿದ್ಧಯಾಗಿದ್ದ ಎನ್ನಲಾಗಿದೆ. ಸ್ಥಳದಲ್ಲಿದ್ದವರು ಯಾರೂ ಒಪ್ಪಿಸಿದ್ದಾರೆ. ಪೊಲೀಸರು ಸಂದೀಪ್ ಬಳಿ ವಿಚಾರಿಸಿದಾಗ ತಾನು ಮಗುವಿಗೆ ಹೊಳೆ ತೋರಿಸುವ ಉದ್ದೇಶದಿಂದ ಸೇತುವೆಯ ಮುಂದೆ ಬಾರದಂತೆ ಎಚ್ಚರಿಕೆ ನೀಡಿದ್ದ. ಈ ವೇಳೆ ಸಮಯ […]

ಮಂಗಳೂರು: ಕೈಯಲ್ಲಿ ಮಗು ಹಿಡಿದು ಆತ್ಮಹತ್ಯೆಗೆ ಯತ್ನ Read More »

ಕರಾವಳಿ

ಮತ್ತೆ ಚಿನ್ನದ ದರದಲ್ಲಿ ಇಂದು ಇಳಿಕೆ

(ನ್ಯೂಸ್ ಕಡಬ) newskadaba.com ನ. 09.ಬೆಂಗಳೂರು: ಮತ್ತೆ ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದ್ದು, ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ  ತಲಾ 55 ರೂ ಮತ್ತು 24 ಕ್ಯಾರಟ್‌ 1 ಗ್ರಾಂ ತಲಾ ಮತ್ತು 60 ರೂ. ಇಳಿಕೆ ಆಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,220 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,876 ರೂ.ಗೆ ತಲುಪಿದೆ. 22 ಕ್ಯಾರಟ್‌ ಚಿನ್ನದ

ಮತ್ತೆ ಚಿನ್ನದ ದರದಲ್ಲಿ ಇಂದು ಇಳಿಕೆ Read More »

ಕರ್ನಾಟಕ

ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ

(ನ್ಯೂಸ್ ಕಡಬ) newskadaba.com ನ. 09.ನವದೆಹಲಿ: ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸಂಜೀವ್ ಖನ್ನಾ ರವರು ಇಂದು (ಸೋಮವಾರ)ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದ್ರೌಪದಿ ಮುರ್ಮುರವರು ನ್ಯಾಯಮೂರ್ತಿ ಸಂಜೀವ್ ಖನ್ನಾರವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ನವೆಂಬರ್ 10ರಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಹುದ್ದೆಯಿಂದ ನಿವೃತ್ತರಾಗಿದ್ದರು. ನ್ಯಾಯಮೂರ್ತಿ ಸಂಜೀವ್ ಖನ್ನಾ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಆರು ತಿಂಗಳ ಅವಧಿಗೆ ಸೇವೆ ಸಲ್ಲಿಸಿದ್ದಾರೆ.

ಇಂದು ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ Read More »

ರಾಷ್ಟ್ರೀಯ ನ್ಯೂಸ್

ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಗ್ಯಾರಂಟಿ ಬಂದ್: ಹೆಚ್ .ಡಿ. ದೇವೆಗೌಡ

(ನ್ಯೂಸ್ ಕಡಬ) newskadaba.com ನ. 11.ಚನ್ನಪಟ್ಟಣ: ರಾಜ್ಯದ ಕಾಂಗ್ರೆಸ್ ಸರ್ಕಾರವು ಸರ್ಕಾರದ  ಖಜಾನೆಯನ್ನು ದಿವಾಳಿ ಮಾಡುತ್ತಿದೆ. ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಹಣವಿಲ್ಲ, ಆದರೆ ಉಪಚುನಾವಣೆ ದೃಷ್ಟಿಯಿಂದ ಚನ್ನಪಟ್ಟಣ ಕ್ಷೇತ್ರದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ಜಮೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪಿಸಿದರು. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರ ಅಪರಿಮಿತವಾಗಿ ಚುನಾವಣಾ ಅಕ್ರಮಗಳನ್ನು ಎಸಗುತ್ತಿದೆ. ಅದಕ್ಕೆ ಗ್ಯಾರಂಟಿ ಯೋಜನೆಗಳನ್ನು

ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಗ್ಯಾರಂಟಿ ಬಂದ್: ಹೆಚ್ .ಡಿ. ದೇವೆಗೌಡ Read More »

ಕರ್ನಾಟಕ

ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

(ನ್ಯೂಸ್ ಕಡಬ) newskadaba.com ನ. 09. ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಹಾಗೂ ಸರಸ್ವತಿ ವಿದ್ಯಾಲಯ ವಿದ್ಯಾನಗರ ಕಡಬ ಇದರ ಆಶ್ರಯದಲ್ಲಿ ನಡೆದ ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಿರಿಯ ಪ್ರಾಥಮಿಕ ವಿಭಾಗದ ಅಭಿನಯ ಗೀತೆ ಸ್ಪರ್ಧೆಯಲ್ಲಿ ಶಾರ್ವಿ ಎಸ್. ರೈ (6ನೇ ತರಗತಿ) ಪ್ರಥಮ ಸ್ಥಾನ, ಚಿತ್ರಕಲೆಯಲ್ಲಿ ಶಾಶ್ವತ್ ವಿ.ಎ. (6ನೇ ತರಗತಿ) ಪ್ರಥಮ ಸ್ಥಾನ,

ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ Read More »

ಕರಾವಳಿ

ಚಾರ್ಮಾಡಿ ಘಾಟ್ ದ್ವಿಪಥಗೊಳಿಸಲು 343.74 ಕೋಟಿ ರೂ. ಬಿಡುಗಡೆ- ಸಂಸದ ಕ್ಯಾ.ಚೌಟ

(ನ್ಯೂಸ್ ಕಡಬ) newskadaba.com ನ. 09. ಚಾರ್ಮಾಡಿ ಘಾಟ್‌ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈ ಯೋಜನೆಯ ಮೂಲಕ ಮಂಗಳೂರಿನಿಂದ ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ 86.20 ಕಿ.ಮೀ. ಅಂತರದವರೆಗೆ ಅಭಿವೃದ್ದಿಯಾಗಲಿದೆ. ಈ ಮೂಲಕ ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಯು ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ. ಈ ಹೆದ್ದಾರಿ ಕಾಮಗಾರಿಯ

ಚಾರ್ಮಾಡಿ ಘಾಟ್ ದ್ವಿಪಥಗೊಳಿಸಲು 343.74 ಕೋಟಿ ರೂ. ಬಿಡುಗಡೆ- ಸಂಸದ ಕ್ಯಾ.ಚೌಟ Read More »

ಕರಾವಳಿ, ಕರ್ನಾಟಕ

MBBS ವ್ಯಾಸಂಗ ಮಾಡುವ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ 50 ಲಕ್ಷ ರೂ. ನೀಡುವ ಸ್ಕೀಂ ಗೆ ಕೊಕ್..!

(ನ್ಯೂಸ್ ಕಡಬ) newskadaba.com ನ. 09. ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಕೋಟಾದಡಿ MBBS ವ್ಯಾಸಂಗ ಮಾಡುವ ಎಸ್ಸಿ, ಎಸ್ಟಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 50 ಲಕ್ಷ ರೂ.ವರೆಗೆ ಕಾಲೇಜು ಶುಲ್ಕ ಪಾವತಿಸುವ ಸಮಾಜ ಕಲ್ಯಾಣ ಇಲಾಖೆಯ ‘ಪ್ರೋತ್ಸಾಹಧನ ಯೋಜನೆ’ಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿರುವ ಕುರಿತು ವರದಿಯಾಗಿದೆ. ಸಮಾಜ ಕಲ್ಯಾಣ ಇಲಾಖೆಯು ಅ. 24ರಂದು ಹೊರಡಿಸಿರುವ ‘ಸೇರ್ಪಡೆ ಆದೇಶ’ದ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕ ಪಡೆದು, ನೀಟ್‌ ಪರೀಕ್ಷೆಯ ರ್‍ಯಾಂಕ್‌ ನಿಂದ ಸರ್ಕಾರಿ ಕೋಟಾದಡಿ

MBBS ವ್ಯಾಸಂಗ ಮಾಡುವ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ 50 ಲಕ್ಷ ರೂ. ನೀಡುವ ಸ್ಕೀಂ ಗೆ ಕೊಕ್..! Read More »

ಕರ್ನಾಟಕ

ಸರ್ಕಾರಿ ಕಛೇರಿಗಳಲ್ಲಿ ತಂಬಾಕು ನಿಷೇಧ- ರಾಜ್ಯ ಸರಕಾರ ಆದೇಶ

(ನ್ಯೂಸ್ ಕಡಬ) newskadaba.com ನ. 09. ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ತಂಬಾಕು ನಿಷೇಧಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಸೇವೆ ಸಲ್ಲಿಸಲು ಇರುವ ಸರ್ಕಾರಿ ಕಚೇರಿಗಳಲ್ಲಿ ಆರೋಗ್ಯಕರ ಪರಿಸರ ಒದಗಿಸುವ ಜವಾಬ್ದಾರಿ ನಮ್ಮದು. ಹೀಗಾಗಿ ನಮ್ಮ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಮತ್ತು ಆವರಣಗಳಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.

ಸರ್ಕಾರಿ ಕಛೇರಿಗಳಲ್ಲಿ ತಂಬಾಕು ನಿಷೇಧ- ರಾಜ್ಯ ಸರಕಾರ ಆದೇಶ Read More »

ಕರ್ನಾಟಕ

ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಫೋಟ: 24 ಮಂದಿ ಮೃತ್ಯು, 40ಕ್ಕೂ ಹೆಚ್ಚು ಜನರಿಗೆ ಗಾಯ..!

(ನ್ಯೂಸ್ ಕಡಬ) newskadaba.com ನ. 09. ರೈಲ್ವೇ ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 24 ಜನರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಕುರಿತು ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ವರದಿಯಾಗಿದೆ. ಸದ್ಯ ಬಾಂಬ್ ಸ್ಫೋಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಪಾಕಿಸ್ತಾನ ಸೇನಾ ಸೈನಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನವು ದಕ್ಷಿಣದಲ್ಲಿ ಪ್ರತ್ಯೇಕತಾವಾದಿ ಜನಾಂಗೀಯ ಉಗ್ರಗಾಮಿಗಳು ಮತ್ತು ವಾಯುವ್ಯದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ದಾಳಿಯ ಉಲ್ಬಣವನ್ನು ಎದುರಿಸುತ್ತಿದೆ. ಸ್ಫೋಟದಲ್ಲಿ ಈವರೆಗೆ 24 ಜನರು ಮೃಪಟ್ಟಿದ್ದಾರೆ

ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಫೋಟ: 24 ಮಂದಿ ಮೃತ್ಯು, 40ಕ್ಕೂ ಹೆಚ್ಚು ಜನರಿಗೆ ಗಾಯ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಯೂನಿಯನ್ ಬ್ಯಾಂಕ್ ನಲ್ಲಿ 1500 ಹುದ್ದೆಗಳು- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನ. 09. ಯೂನಿಯನ್ ಬ್ಯಾಂಕ್ ನಲ್ಲಿ 1,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಮುಂಬರುವ 13ನೇ ತಾರೀಖಿನೊಳಗೆ ಅರ್ಜಿ ಸಲ್ಲಿಕೆ ಮಾಡಬೇಕು.   ಇದರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್ 24ರಿಂದ ಆರಂಭವಾಗಿದ್ದು, ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳು 20 ರಿಂದ 30 ವರ್ಷದೊಳಗಿರಬೇಕು. ಸರ್ಕಾರಿ ನಿಯಮಗಳ ಪ್ರಕಾರ, ಹಿಂದುಳಿದ ವರ್ಗದವರಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ವಿನಾಯಿತಿ ನೀಡಲಾಗುವುದು. ಅಭ್ಯರ್ಥಿಗಳು ಯಾವ ರಾಜ್ಯಕ್ಕೆ ಸಲ್ಲಿಸುತ್ತಾರೋ

ಯೂನಿಯನ್ ಬ್ಯಾಂಕ್ ನಲ್ಲಿ 1500 ಹುದ್ದೆಗಳು- ಅರ್ಜಿ ಆಹ್ವಾನ Read More »

ಉದ್ಯೋಗ
Scroll to Top