ಮಹಿಳೆಗೆ ಚಿನ್ನ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ- ನಿರ್ವಾಹಕ

(ನ್ಯೂಸ್ ಕಡಬ) newskadaba.com ಬಾಗೇಪಲ್ಲಿ, ನ. 20. ಬಂಗಾರ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆಯ ಮುಖದಲ್ಲಿ ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆ ಮಂದಹಾಸ ಮೂಡಿಸಿದೆ. ಬಸ್‌‍ನಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಬಂಗಾರವನ್ನು ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ ಮತ್ತು ನಿರ್ವಾಹಕ ಮಹಿಳೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬಾಗೇಪಲ್ಲಿ ಪಟ್ಟಣದ 4ನೇ ವಾರ್ಡ್‌ ನಿವಾಸಿ ನಾಗಮಣಿ ಎಂಬುವವರು ಬಾಗೇಪಲ್ಲಿ ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ತನ್ನ ಇಬ್ಬರು ಮಕ್ಕಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಸುಮಾರು ಒಂದೂವರೆ ಲಕ್ಷ ರೂ. […]

ಮಹಿಳೆಗೆ ಚಿನ್ನ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ- ನಿರ್ವಾಹಕ Read More »

ಕರ್ನಾಟಕ

ರಫೆಲ್‌ ನಡಾಲ್‌ ಸೋಲಿನೊಂದಿಗೆ ಟೆನಿಸ್‌ ​ವೃತ್ತೀಜಿವನಕ್ಕೆ ವಿದಾಯ

(ನ್ಯೂಸ್ ಕಡಬ) newskadaba.com ಮ್ಯಾಡ್ರಿಡ್, ನ. 20. ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ ರಫೆಲ್‌ ನಡಾಲ್‌ ಇಂದು ಅಧಿಕೃತವಾಗಿ 20 ವರ್ಷಗಳ ಟೆನಿಸ್​ ವೃತ್ತೀಜಿವನಕ್ಕೆ ವಿದಾಯ ಹೇಳಿದರು. ಸ್ಪೇನ್ ನ ಖ್ಯಾತ ಟೆನಿಸ್ ಆಟಗಾರ, ಆವೆ ಅಂಗಣದ ರಾಜ ಎಂದೇ ಕರೆಸಿಕೊಂಡಿರುವ ರಫೇಲ್ ನಡಾಲ್ 14 ಫ್ರೆಂಚ್ ಓಪನ್ ಕಿರೀಟ ಸೇರಿದಂತೆ 22 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದ ಸಾಧಕನಾಗಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಬೆಳಗ್ಗೆ ನಡೆದಿದ್ದ ಡೇವಿಸ್‌ ಕಪ್‌ ಟೂರ್ನಿಯ ನೆದರ್ಲೆಂಡ್ಸ್‌ ವಿರುದ್ಧದ

ರಫೆಲ್‌ ನಡಾಲ್‌ ಸೋಲಿನೊಂದಿಗೆ ಟೆನಿಸ್‌ ​ವೃತ್ತೀಜಿವನಕ್ಕೆ ವಿದಾಯ Read More »

ಕ್ರೀಡಾ ನ್ಯೂಸ್

ಮದುವೆ ಆಮಂತ್ರಣದ ರೀತಿಯಲ್ಲಿ ಹೊಸ “ಸೈಬರ್ ಸ್ಕ್ಯಾಮ್” ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 20. ಮದುವೇ ಸೀಸನ್ ಶುರುವಾಗಿದೆ. ಬಹುತೇಕರು ಡಿಜಿಟಲ್ ಆಮಂತ್ರಣ ಪತ್ರಿಕೆ ಮಾಡಿಸಿ ವ್ಯಾಟ್ಸಾಪ್ ಮೂಲಕ ಹಂಚುತ್ತಾರೆ. ಬಳಿಕ ಕರೆ ಮಾಡಿ ಮದುವೆಗೆ ಆಮಂತ್ರಣ ಮಾಡುವ ಪದ್ದತಿಯೇ ಈಗ ಹೆಚ್ಚು. ಆದರೆ ಇದೇ ಡಿಜಿಟಲ್ ವೆಡ್ಡಿಂಗ್ ಇನ್ವಿಟೇಶನ್ ಸಂದರ್ಭವನ್ನು ಸೈಬರ್ ಕ್ರೈಮ್ ಕಿರಾತಕರು ಬಹಿಮಾಚಲ ಪ್ರದೇಶದ ಸೈಬರ್ ಪೊಲೀಸರು ಇದೀಗ ಹೊಸ ಸೈಬರ್ ಸ್ಕ್ಯಾಮ್ ಕುರಿತು ಎಚ್ಚರಿಸಿದ್ದಾರೆ. ಪ್ರತಿಯೊಬ್ಬರು ಡಿಜಿಟಲ್ ವೆಡ್ಡಿಂಗ್ ಇನ್ವಿಟೇಶನ್ ಸೈಬರ್ ಸ್ಕ್ಯಾಮ್ ಕುರಿತು ಎಚ್ಚರವಾಗಿರಬೇಕು. ಒಂದು ಸಣ್ಣ

ಮದುವೆ ಆಮಂತ್ರಣದ ರೀತಿಯಲ್ಲಿ ಹೊಸ “ಸೈಬರ್ ಸ್ಕ್ಯಾಮ್” ಪತ್ತೆ Read More »

ಬ್ರೇಕಿಂಗ್ ನ್ಯೂಸ್

ಸುಳ್ಯದಲ್ಲಿ ತಡ ರಾತ್ರಿ ಹೋಗುತ್ತಿದ್ದ ವಾಹನಕ್ಕೆ ಎದುರುಗೊಂಡ ಎರಡು ಕಾಡಾನೆಗಳು: ಚಾಲಕ ಮಾಡಿದ್ದೇನು?

(ನ್ಯೂಸ್ ಕಡಬ) newskadaba.com ಸುಳ್ಯ, ನ. 20. ಸುಳ್ಯ- ಸುಬ್ರಹ್ಮಣ್ಯದ ಕಾಡಂಚಿನ ಪ್ರದೇಶಗಳಲ್ಲಿ ರಾತ್ರಿ ಸಾಮಾನ್ಯವಾಗಿ ಕಾಡಾನೆಗಳು ಓಡಾಟ ಮಾಡುವುದು ಸಾಮಾನ್ಯವಾಗಿದೆ. ಇದೀಗ ಸುಳ್ಯದ ಮರ್ಕಂಜದಲ್ಲಿ ತಡ ರಾತ್ರಿ ಮುಖ್ಯ ರಸ್ತೆಯಲ್ಲಿಯೇ ಕಾಡಾನೆ ಸಂಚರಿಸಿದೆ. ಮೈಸೂರಿನಂತ ಬಾಡಿಗೆಗೆ ತೆರಳಿ ವಾಪಾಸು ಬರುತ್ತಿದ್ದ ವಾಹನವೊಂದಕ್ಕೆ ಹೈದಂಗೂರು ರಸ್ತೆಯ ಮಧ್ಯೆ 2 ಕಾಡಾನೆಗಳು ಎದುರಾದ ಘಟನೆ ನ. 17ರಂದು ನಡೆದಿದ್ದು ಚಾಲಕ ಜಾಣತನದಿಂದ ಆನೆಗಳು ಹೋದ ಬಳಿಕ ವಾಹನವನ್ನು ಚಲಾಯಿಸಿಕೊಂಡು ಮುಂದೆ ಸಾಗಿದ್ದಾರೆ. ಯಶಸ್ವಿ ಹೆಸರಿನ ವ್ಯಾನ್ ಪ್ರಯಾಣಿಕರನ್ನು ಬಿಟ್ಟು

ಸುಳ್ಯದಲ್ಲಿ ತಡ ರಾತ್ರಿ ಹೋಗುತ್ತಿದ್ದ ವಾಹನಕ್ಕೆ ಎದುರುಗೊಂಡ ಎರಡು ಕಾಡಾನೆಗಳು: ಚಾಲಕ ಮಾಡಿದ್ದೇನು? Read More »

ಕರಾವಳಿ

ಪದವಿನಂಗಡಿ: ಸರಣಿ ಅಪಘಾತ; ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 20. ಮಂಗಳೂರಿನ ಪದವಿನಂಗಡಿಯಲ್ಲಿ ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಮದ್ಯಾಹ್ನ ಸಂಭವಿಸಿದೆ. ಜಯಶೀಲ ಮೃತಪಟ್ಟವರು ಎಂದು ತಿಳಿದು ಬಂದಿದೆ. ಜಯಶೀಲರವರು ರಸ್ತೆಬದಿ ನಿಂತಿದ್ದ ವೇಳೆ ಕಾರು ಬಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಕಾರು ಏಕಾಏಕೀ ಬಂದು ಮುಂದೆ ನಿಂತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು, ಆ ಕಾರು ಮತ್ತೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸರಣಿ

ಪದವಿನಂಗಡಿ: ಸರಣಿ ಅಪಘಾತ; ಮಹಿಳೆ ಮೃತ್ಯು Read More »

ಕರಾವಳಿ

ಕೆನರಾ ಇಂಜಿನಿಯರಿಂಗ್ ಕಾಲೇಜು ನೂತನ ಇನ್ಕ್ಯುಬೇಶನ್ ಸೆಂಟರ್ ಸೆಕ್ಷನ್ ಇನ್ಫಿನಿಟಿ 8 ಫೌಂಡೇಶನ್ ಒಪ್ಪಂದ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ. 20. ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜು ನೂತನ ಇನ್ಕ್ಯುಬೇಶನ್ ಸೆಂಟರ್ ಹಾಗೂ ಸ್ಟಾರ್ಟ್ ಅಪ್ ಇಕೋಸಿಸ್ಟಮ್ ವೃದ್ಧಿಗಾಗಿ ಸೆಕ್ಷನ್ ಇನ್ಫಿನಿಟಿ 8 ಫೌಂಡೇಶನ್ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಕೆನರಾ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜನ್ಮದಿನಾಚರಣೆಯ ಸುದಿನ ಅವರ ಉದ್ಯಮಶೀಲತೆಯ ಪರಂಪರೆಯನ್ನು ಮುಂದಿನ ಯುವ ಪೀಳಿಗೆಗಾಗಿ ಮುನ್ನಡೆಸುವ ಸಂಕಲ್ಪದೊಂದಿಗೆ ನ.19ರಂದು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೆನರಾ ಸಿಬಿಎಸ್ಸಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಜರುಗಿದ ಈ ಸಮಾರಂಭದಲ್ಲಿ

ಕೆನರಾ ಇಂಜಿನಿಯರಿಂಗ್ ಕಾಲೇಜು ನೂತನ ಇನ್ಕ್ಯುಬೇಶನ್ ಸೆಂಟರ್ ಸೆಕ್ಷನ್ ಇನ್ಫಿನಿಟಿ 8 ಫೌಂಡೇಶನ್ ಒಪ್ಪಂದ Read More »

ಕರಾವಳಿ

ಮಹಾರಾಷ್ಟ್ರ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ತಾರಾ ಬಳಗ

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ನ. 20. ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟ ಅಕ್ಷಯ್ ಕುಮಾರ್ ಮತ್ತು ರಾಜ್‌ಕುಮಾರ್ ರಾವ್ ಅವರು ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ 2024 ರಲ್ಲಿ ಭಾಗವಹಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮುಂಬೈನ ಮತಗಟ್ಟೆಯಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಮತದಾನ ಮಾಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಕ್ಷಯ್ ಕುಮಾರ್ ಮತದಾನ ಮಾಡುವಂತೆ ಸ್ಪಷ್ಟನೆ ನೀಡಿದ್ದಾರೆ. ಮತಗಟ್ಟೆಯಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಶ್ಲಾಘಿಸಿದ ಅಕ್ಷಯ್

ಮಹಾರಾಷ್ಟ್ರ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ತಾರಾ ಬಳಗ Read More »

ರಾಷ್ಟ್ರೀಯ ನ್ಯೂಸ್

2028ಕ್ಕೆ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ: ಸಿಎಂ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 20. ಮಹಿಳೆಯರು, ಬಡವರು, ತಳ ಸಮುದಾಯಗಳ ಮೀಸಲಾತಿ ವಿರೋಧಿಯಾಗಿರುವ ಬಿಜೆಪಿ ಸರ್ಕಾರ 2028ರ ಬಳಿಕ ಅಧಿಕಾರದಲ್ಲಿ ಇರುವುದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳವಾರ ಭಾರತ್ ಜೋಡೋ ಭವನದಲ್ಲಿರುವ ಇಂದಿರಾ ಗಾಂಧಿ ಆಡಿಟೋರಿಯಂನಲ್ಲಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ

2028ಕ್ಕೆ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ: ಸಿಎಂ Read More »

ಕರ್ನಾಟಕ

ಮಸ್ಕ್‌ ನ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ಭಾರತೀಯ ಉಪಗ್ರಹ ಉಡಾವಣೆ ಯಶಸ್ವಿ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ನ. 20. ಇದೇ ಮೊದಲ ಬಾರಿಗೆ ಇಸ್ರೋ ಸಂಸ್ಥೆ ವಿಶ್ವದ ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ ಮಾಲೀಕತ್ವದ ಸ್ಪೇಸ್‌ಎಕ್ಸ್‌ ಕಂಪನಿಯ ರಾಕೆಟ್‌ ಬಳಸಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿ ಯಶಸ್ಸಿಯಾಗಿದೆ. ಇಸ್ರೋದ ಜಿಸ್ಯಾಟ್‌ -20 ಸಂವಹನ ಉಪಗ್ರಹವನ್ನು ಹೊತ್ತುಕೊಂಡಿದ್ದ ಸ್ಪೇಸ್‌ಎಕ್ಸ್‌ ನ ಫಾಲ್ಕನ್ 9 ರಾಕೆಟ್ ಭಾರತೀಯ ಕಾಲಮಾನ ಸೋಮವಾರ ರಾತ್ರಿ 23:45ಕ್ಕೆ ಅಮೆರಿಕದ ಫ್ಲೋರಿಡಾ ರಾಜ್ಯದ ಕೇಪ್ ಕೆನವೆರಲ್‌ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿದೆ. 34 ನಿಮಿಷದಲ್ಲಿ ರಾಕೆಟ್‌ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ

ಮಸ್ಕ್‌ ನ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ಭಾರತೀಯ ಉಪಗ್ರಹ ಉಡಾವಣೆ ಯಶಸ್ವಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ದೆಹಲಿ ವಾಯುಮಾಲಿನ್ಯ: ಆಸ್ಪತ್ರೆಗಳಲ್ಲಿ ಉಸಿರಾಟದ ಸಮಸ್ಯೆ ರೋಗಿಗಳು ಹೆಚ್ಚಳ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 20. ದೆಹಲಿ ಹಾಗೂ ಸುತ್ತಮುತ್ತ ವಾಯುಗುಣಮಟ್ಟದ ಹದಗೆಡುವಿಕೆ ಮುಂದುವರೆದಿದ್ದು ರೈಲು, ವಿಮಾನ ಸಂಚಾರ ಹಾಗೂ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ಸಾಲದ್ದಕ್ಕೆ ಜನರ ಉಸಿರಾಟಕ್ಕೂ ಸಮಸ್ಯೆ ಆಗುತ್ತಿದ್ದು, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಶೇ.300ರಷ್ಟು ಏರಿದೆ. ದಿಲ್ಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅತಿ ಗಂಭೀರ ಎಂದು ಪರಿಗಣಿಸಲಾಗುವ 488 ಅಂಕ ತಲುಪಿದೆ. ಈ ಪೈಕಿ ದಿಲ್ಲಿಯ ಅಲಿಪುರ ಹಾಗೂ ಸೋನಿಯಾ ವಿಹಾರ ಪ್ರದೇಶದಲ್ಲಿ 500 ಅಂಕ ದಾಖಲಾಗಿದೆ.

ದೆಹಲಿ ವಾಯುಮಾಲಿನ್ಯ: ಆಸ್ಪತ್ರೆಗಳಲ್ಲಿ ಉಸಿರಾಟದ ಸಮಸ್ಯೆ ರೋಗಿಗಳು ಹೆಚ್ಚಳ Read More »

ರಾಷ್ಟ್ರೀಯ ನ್ಯೂಸ್
Scroll to Top