ಮಂಗಳೂರು: ಡಿ.22ರಂದು ಕದ್ರಿಪಾರ್ಕ್‌ನಲ್ಲಿ ವೈನ್ ಮೇಳ

(ನ್ಯೂಸ್ ಕಡಬ) newskadaba.com ಡಿ. 20:ಮಂಗಳೂರು ನಗರದ ಕದ್ರಿ ಪಾರ್ಕ್ನಲ್ಲಿ ನಡೆದಿದ್ದ ಎರಡು ವಾರಾಂತ್ಯಗಳಲ್ಲಿ ನಡೆದ ವೈನ್ ಮೇಳಕ್ಕೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಅಂಗವಾಗಿ ಗ್ರಾಹಕರಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ ಡಿ.22ರಂದು ಮತ್ತೆ ಕದ್ರಿ ಪಾರ್ಕ್‌ನಲ್ಲಿ ಬೆಳಗ್ಗೆ 10:30ರಿಂದ ರಾತ್ರಿ 9:30 ಗಂಟೆ ತನಕ ವೈನ್ ಮೇಳ ಆಯೋಜಿಸಲಾಗಿದೆ. ರತ್ನಾಸ್ ವೈನ್ ಗೇಟ್ ಹಾಗೂ ಶೂಲಿನ್ ಗ್ರೂಪ್ ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ತೋಟಗಾರಿಕಾ […]

ಮಂಗಳೂರು: ಡಿ.22ರಂದು ಕದ್ರಿಪಾರ್ಕ್‌ನಲ್ಲಿ ವೈನ್ ಮೇಳ Read More »

ಕರಾವಳಿ

ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆ: ಅಧಿಕೃತ ಅನುಮೋದನೆಯೊಂದೆ ಬಾಕಿ

(ನ್ಯೂಸ್ ಕಡಬ) newskadaba.com ಡಿ. 20: ಮಂಗಳೂರು- ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸುವ ಬಹು ಕಾಲದ ಬೇಡಿಕೆಗೆ ಕೊನೆಗೂ ನೈಋತ್ಯ ಮತ್ತು ದಕ್ಷಿಣ ರೈಲ್ವೇ ವಲಯಗಳಿಂದ ಅನು ಮೋದನೆ ಸಿಕ್ಕಿದ್ದು, ಪ್ರಸ್ತಾವನೆಯನ್ನು ಈಗ ಅನುಮತಿಗಾಗಿ ರೈಲ್ವೇ ಮಂಡಳಿಗೆ ಸಲ್ಲಿಸಲಾಗಿದೆ. ದಶಕಗಳ ಹಿಂದೆ ಮೀಟರ್‌ ಗೇಜ್‌ ಕಾಲದಲ್ಲಿ ಸುಬ್ರಹ್ಮಣ್ಯದಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತು ಮಂಗಳೂರು ವರೆಗೆ 2005ನೇ ಇಸವಿ ತನಕ 06484/85 ಹಾಗೂ 06486/87 ಪ್ಯಾಸೆಂಜರ್‌ ರೈಲು ಸಂಚರಿಸುತ್ತಿತ್ತು.ಹಳಿ ಪರಿವರ್ತನೆಯ ಅನಂತರ ಇದು ಪುತ್ತೂರಿನವರೆಗೆ ಮಾತ್ರ

ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆ: ಅಧಿಕೃತ ಅನುಮೋದನೆಯೊಂದೆ ಬಾಕಿ Read More »

ಕರಾವಳಿ

ಕೆದಿಲ ಶೌರ್ಯ ವಿಪತ್ತು ತಂಡದಿಂದ ಹಿಂದೂ ರುದ್ರಭೂಮಿ ಸ್ವಚ್ಛತೆ

(ನ್ಯೂಸ್ ಕಡಬ) newskadaba.com ಡಿ. 20. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಾಂಧಿನಗರದಲ್ಲಿನ ಹಿಂದೂ ರುದ್ರ ಭೂಮಿಯನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಕೆದಿಲ ಒಕ್ಕೂಟದ ಸದಸ್ಯರಾದ ಜಗದೀಶ, ಶೀನಪ್ಪ, ವೆಂಕಪ್ಪ, ಗಿರೀಶ ಹಾಗೂ ಕೆದಿಲ “B” ಒಕ್ಕೂಟದ ಸೇವಾಪ್ರತಿನಿಧಿ ಜಯಂತಿರವರು ಉಪಸ್ಥಿತರಿದ್ದರು.

ಕೆದಿಲ ಶೌರ್ಯ ವಿಪತ್ತು ತಂಡದಿಂದ ಹಿಂದೂ ರುದ್ರಭೂಮಿ ಸ್ವಚ್ಛತೆ Read More »

ಕರಾವಳಿ

ಮತ್ತೆ ಇಂದು ಚಿನ್ನದ ದರದಲ್ಲಿ ಇಳಿಕೆ

(ನ್ಯೂಸ್ ಕಡಬ) newskadaba.com ಡಿ. 20 ಬೆಂಗಳೂರು: ಚಿನ್ನದ ದರದಲ್ಲಿ ಇಂದು ಮತ್ತೆ ಇಳಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ ತಲಾ 30 ಮತ್ತು 33 ರೂ. ಕಡಿಮೆಯಾಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,040ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,680 ರೂ.ಗೆ ತಲುಪಿದೆ. 22 ಕ್ಯಾರಟ್‌

ಮತ್ತೆ ಇಂದು ಚಿನ್ನದ ದರದಲ್ಲಿ ಇಳಿಕೆ Read More »

ಕರ್ನಾಟಕ

ಸಂಸತ್ ಭವನದ ಯಾವುದೇ ಗೇಟ್‌ಗಳಲ್ಲಿ ಯಾವ ಸಂಸದರು ಕೂಡ ಪ್ರತಿಭಟನೆ ನಡೆಸಬಾರದು- ಲೋಕಸಭೆ ಸ್ಪೀಕರ್

(ನ್ಯೂಸ್ ಕಡಬ) newskadaba.com ಡಿ. 20 ನವದೆಹಲಿ : ಸಂಸತ್ ಭವನದ ಯಾವುದೇ ಗೇಟ್‌ಗಳಲ್ಲಿ ಯಾವ ಸಂಸದರು ಕೂಡ ಪ್ರತಿಭಟನೆ ನಡೆಸಬಾರದೆಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಸತ್ ಭವನದ ಮಕರ ದ್ವಾರದಲ್ಲಿ ಆಡಳಿತಾರೂಢ ಎನ್‌ಡಿಎ ಮತ್ತು ವಿರೋಧ ಪಕ್ಷದ ಸಂಸದರ ನಡುವೆ ಗಲಾಟೆ ನಡೆದ ನಂತರ ಈ ಸೂಚನೆಗಳು ನೀಡಲಾಗಿದೆ. ಸಂಸತ್ತಿನ ಯಾವುದೇ ಪ್ರವೇಶ ದ್ವಾರಗಳಲ್ಲಿ ಪ್ರತಿಭಟನೆ ನಡೆಸದಂತೆ ಬಿರ್ಲಾ ಅವರು ಎಲ್ಲಾ ಸಂಸದರಿಗೆ ಸೂಚನೆ

ಸಂಸತ್ ಭವನದ ಯಾವುದೇ ಗೇಟ್‌ಗಳಲ್ಲಿ ಯಾವ ಸಂಸದರು ಕೂಡ ಪ್ರತಿಭಟನೆ ನಡೆಸಬಾರದು- ಲೋಕಸಭೆ ಸ್ಪೀಕರ್ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ) newskadaba.com ಡಿ. 20. ಹೊಸ ವರ್ಷಾಚರಣೆಯ ಪ್ರಯುಕ್ತ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶಿಸಲಾಗಿದೆ. ಹೊಸ ವರ್ಷಕ್ಕೆ ಮಾರ್ಗಸೂಚಿಗಳು:- ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು ಮತ್ತು ಇತರ ಸಂಸ್ಥೆಗಳು ಹೊಸ ವರ್ಷದ ಹಬ್ಬಗಳನ್ನು ಆಯೋಜಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪೂರ್ವ ಅನುಮತಿ ಪಡೆಯಬೇಕು. ಅರ್ಜಿಗಳನ್ನು 23-12-2024 ರಂದು ಸಂಜೆ 5:00 ಗಂಟೆಯ ಒಳಗಾಗಿ ಸಲ್ಲಿಸಬೇಕು. ಹೊಸ ವರ್ಷದ ಕಾರ್ಯಕ್ರಮ ರಾತ್ರಿ 12:00

ಮಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ಮಾರ್ಗಸೂಚಿ ಪ್ರಕಟ Read More »

ಕರಾವಳಿ

ಮಂಗಳೂರು: ಅಡುಗೆ ಅನಿಲ ಸೋರಿಕೆ; 2 ಮಹಿಳೆಯರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಡಿ. 19 ಮಂಗಳೂರು : ಅಡುಗೆ ಮನೆಯ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಮನೆಯ ಯಜಮಾನ ವಾಮನ ಅವರ ಪತ್ನಿ ವಸಂತಿ (68) ಮತ್ತು ವಾಮನ ಅವರ ಅಕ್ಕ ಪುಷ್ಪಾ (72) ಗಾಯಾಳುಗಳು. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸಂತಿ ಅವರು ಗ್ಯಾಸ್ ಸೋರಿಕೆಯಾಗಿರುವುದನ್ನು ಗಮನಿಸದೆ ಮಧ್ಯಾಹ್ನ ಅಡುಗೆ ಕೋಣೆಗೆ ಹೋಗಿ ಸ್ಟವ್‌ಗೆ

ಮಂಗಳೂರು: ಅಡುಗೆ ಅನಿಲ ಸೋರಿಕೆ; 2 ಮಹಿಳೆಯರಿಗೆ ಗಂಭೀರ ಗಾಯ Read More »

ಕರಾವಳಿ

‘ಅಂಬೇಡ್ಕರ್ ಬಗ್ಗೆ ಬಿಜೆಪಿ ನಾಯಕರಿಗೆ ಕನಿಷ್ಠ ಗೌರವವಿಲ್ಲ’- ಪ್ರಿಯಾಂಕಾ ಗಾಂಧಿ

(ನ್ಯೂಸ್ ಕಡಬ) newskadaba.com ಡಿ. 19 :ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕುರಿತಂತೆ ಬಿಜೆಪಿ ನಾಯಕರಿಗೆ ಕನಿಷ್ಠ ಗೌರವವಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಕಿಡಿ ಕಾರಿದ್ದಾರೆ. ಅಂಬೇಡ್ಕರ್ ಕುರಿತಂತೆ ಅಮಿತ್ ಶಾ ಹೇಳಿಕೆ ಮತ್ತು ಅದಕ್ಕೆ ಬಿಜೆಪಿಗರ ಸಮರ್ಥನೆ ಕುರಿತಂತೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಮಿತ್ ಶಾ ಬಾಬಾಸಾಹೇಬರನ್ನು ಅವಮಾನಿಸಿದ್ದು ಮಾತ್ರವಲ್ಲದೆ, ಬಿಜೆಪಿ ಟ್ವಿಟರ್‌ನಲ್ಲಿ ಬಾಬಾಸಾಹೇಬರ ತಿರುಚಿದ ಚಿತ್ರವನ್ನು ಹಂಚಿಕೊಂಡಿದೆ. ಇದು ಬಾಬಾಸಾಹೇಬರ ಪ್ರತಿಮೆಯನ್ನು ಧ್ವಂಸ ಮಾಡುವ ಮನಸ್ಥಿತಿಯಾಗಿದೆ. ಬಿಜೆಪಿಗರನ್ನು ಯಾರು ನಂಬುತ್ತಾರೆ? ಮೀಸಲಾತಿಯನ್ನು

‘ಅಂಬೇಡ್ಕರ್ ಬಗ್ಗೆ ಬಿಜೆಪಿ ನಾಯಕರಿಗೆ ಕನಿಷ್ಠ ಗೌರವವಿಲ್ಲ’- ಪ್ರಿಯಾಂಕಾ ಗಾಂಧಿ Read More »

ಕರ್ನಾಟಕ

8000 ಮಹಿಳಾ ಪೌರ ಕಾರ್ಮಿಕರಿಗೆ ಕೆಲಸ ಕಾಯಂ

(ನ್ಯೂಸ್ ಕಡಬ) newskadaba.com ಡಿ. 19 ಬೆಂಗಳೂರು: ಹಲವು ವರ್ಷದಿಂದ ಗುತ್ತಿಗೆ ಹಾಗೂ ನೇರ ಪಾವತಿ ಮಹಿಳಾ ಪೌರ ಕಾರ್ಮಿಕರ ಕೆಲಸ ಕಾಯಂ ಆಗಿಇದೀಗ ಬಿಬಿಎಂಪಿಯಲ್ಲಿ ಮಾಡಲಾಗಿದೆ. ಕಾಯಂಗೊಂಡಿರುವ 12 ಸಾವಿರ ಹುದ್ದೆಗಳ ಪೈಕಿ ಸುಮಾರು 8 ಸಾವಿರ ಮಹಿಳಾ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರು ಗುತ್ತಿಗೆ ಹಾಗೂ ನೇರ ಪಾವತಿಯಡಿ ಕಾರ್ಯ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು. ಕಾಯಂಗೊಳಿಸುವುದಕ್ಕೆ ಕನಿಷ್ಠ ಎರಡು ವರ್ಷ ಅರ್ಹತೆ ಸೂಚಿಸಲಾಗಿತ್ತು. ಒಟ್ಟು 14980 ಪೌರಕಾರ್ಮಿಕರನ್ನು ಕಾಯಂಗೊಳಿಸವುದಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಪೈಕಿ

8000 ಮಹಿಳಾ ಪೌರ ಕಾರ್ಮಿಕರಿಗೆ ಕೆಲಸ ಕಾಯಂ Read More »

ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ..!

(ನ್ಯೂಸ್ ಕಡಬ) newskadaba.com ಡಿ. 19. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ಹೆದ್ದಾರಿಯ ಫರಂಗಿಪೇಟೆ ಎಂಬಲ್ಲಿ ಪಲ್ಟಿಯಾದ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿರುವ ಟಿ.ಟಿ.ವಾಹನ ಬೆಳಿಗ್ಗೆ 6:30ರ ಸುಮಾರಿಗೆ ಫರಂಗಿಪೇಟೆ ಜಂಕ್ಷನ್ ನಲ್ಲಿ ಡಿವೈಡರ್ ಮೇಲೆ ಏರಿ ಬಳಿಕ ಹೆದ್ದಾರಿಗೆ ಪಲ್ಟಿಯಾಗಿದೆ. ಟಿ.ಟಿ.ಯಲ್ಲಿ ಸುಮಾರು 10 ಮಂದಿ ಪ್ರಯಾಣಿಕರಿದ್ದು, ಯಾವುದೇ ಪ್ರಾಣಾಯಾವಿಲ್ಲದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೆಳಗ್ಗಿನ ಹೊತ್ತು ಚಾಲಕ ನಿದ್ಧೆ ಮಂಪರಿನಲ್ಲಿ ನಿಯಂತ್ರಣ ಕಳೆದು ಡಿವೈಡರ್

ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top