ಮರ್ಧಾಳ ಗುಡ್ ಶೆಫರ್ಡ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಪರಿಸರ ಕಾಳಜಿ ಮಾಹಿತಿ ಕಾರ್ಯಾಗಾರ ಮಗುವಿನ ಜನುಮದಿನ ಗಿಡನಾಟಿ ಮಾಡಿ ಆಚರಿಸಿ- ವಲಯಾರಣ್ಯಾಧಿಕಾರಿ ಅಪೂರ್ವ ಮಾವಿನಕಟ್ಟೆ ಸಲಹೆ
(ನ್ಯೂಸ್ ಕಡಬ) newskadaba.com ಜ. 23. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ವತಿಯಿಂದ ಮರ್ಧಾಳದ ಗುಡ್ ಶೆಫರ್ಡ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಗೆ ‘ಪರಿಸರದ ಮಹತ್ವ- ಮಕ್ಕಳ ಜವಾಬ್ದಾರಿ ಮಾಹಿತಿ’ ಕಾರ್ಯಕ್ರಮವು ನಡೆಯಿತು. ಸುಬ್ರಹ್ಮಣ್ಶ ವಲಯ ಅರಣ್ಶಾಧಿಕಾರಿ ಅಪೂರ್ವ ಮಾವಿನಕಟ್ಟೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ನಡೆಸಿರುವ ಶಾಲಾ ಮಕ್ಕಳಿಗೆ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ತಾಲೂಕಿನ ಅನೇಕ ಶಾಲೆಗಳಲ್ಲಿ ಮಾಹಿತಿಗಾರನಾಗಿ ಪಾಲ್ಗೊಂಡಿದ್ದೇನೆ. […]







