PM Internship Scheme ಮೂಲಕ ಯುವ ಪದವೀಧರರಿಗೆ ಸುವರ್ಣಾವಕಾಶ

(ನ್ಯೂಸ್ ಕಡಬ) newskadaba.com ಫೆ. 21. : PM Internship Scheme ಯೋಜನೆಯಡಿ ಯುವಕರಿಗೆ ಇಂಟರ್ನ್ಶಿಪ್ ಗೆ ಹೊಸ ಅವಕಾಶಗಳನ್ನು ನೀಡಲಾಗಿದೆ. ಈ ಯೋಜನೆಯ ಮೂಲಕ 1 ಕೋಟಿ ಯುವಕರಿಗೆ ಕೇಂದ್ರ ಇಂಟರ್ನ್ಶಿಪ್ ಅವಕಾಶಗಳನ್ನು ಒದಗಿಸುವುದು ಕೇಂದ್ರ ಸರಕಾರದ ಗುರಿಯಾಗಿದೆ. ಈ ಯೋಜನೆಯಡಿಯಲ್ಲಿ ಯುವಕರಿಗೆ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಕಲಿಸುವ ಮೂಲಕ ಭವಿಷ್ಯದ ಉದ್ಯೋಗಕ್ಕಾಗಿ ಅವರನ್ನು ಸಿದ್ಧಪಡಿಸಲಾಗುತ್ತದೆ ಅದೇ ರೀತಿ ಈ ಯೋಜನೆಯಡಿಯಲ್ಲಿ ತರಬೇತಿ ಪಡೆಯುತ್ತಿರುವ ಯುವಕರು ತಮ್ಮ ಉದ್ಯೋಗದಲ್ಲಿ ಉತ್ತಮ ತಾಂತ್ರಿಕ ಜ್ಞಾನವನ್ನು ಪಡೆಯುತ್ತಾರೆ,ಇದು ಅವರ ವೃತ್ತಿ ಮತ್ತು ಭವಿಷ್ಯವನ್ನು ಬಲಪಡಿಸುತ್ತದೆ.

PM Internship Scheme ಮೂಲಕ ಯುವ ಪದವೀಧರರಿಗೆ ಸುವರ್ಣಾವಕಾಶ Read More »

ಬ್ರೇಕಿಂಗ್ ನ್ಯೂಸ್

315 ಕೋಟಿ ಹೂಡಿಕೆ, 550 ಉದ್ಯೋಗ ಸೃಷ್ಟಿಯ ಕ್ರೋನ್ಸ್ ಕಂಪನಿಯ ಉತ್ಪಾದನಾ ಘಟಕ ವೇಮಗಲ್‌ನಲ್ಲಿ ಆರಂಭ

(ನ್ಯೂಸ್ ಕಡಬ) newskadaba.com ಫೆ. 20. ಬೆಂಗಳೂರು:   ಇತ್ತೀಚೆಗಷ್ಟೇ ಮುಕ್ತಾಯವಾದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ-25 ರ ಒಟ್ಟಾರೆ 10.27 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯ ಭಾಗವಾಗಿದ್ದ ₹315 ಕೋಟಿ ರೂಪಾಯಿಗಳ ಜರ್ಮನಿ ಮೂಲದ ಕ್ರೋನ್ಸ್ ಕಂಪನಿಯ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕ ನಿರ್ಮಾಣದ ಅನುಷ್ಠಾನ ಗುರುವಾರ ಆರಂಭಗೊಂಡಿತು. (Kolar News) ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಕಂಪನಿ ನಿರ್ಮಿಸಲಿರುವ ಬಾಟ್ಲಿಂಗ್ ಯಂತ್ರಗಳ ಉತ್ಪಾದನಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.

315 ಕೋಟಿ ಹೂಡಿಕೆ, 550 ಉದ್ಯೋಗ ಸೃಷ್ಟಿಯ ಕ್ರೋನ್ಸ್ ಕಂಪನಿಯ ಉತ್ಪಾದನಾ ಘಟಕ ವೇಮಗಲ್‌ನಲ್ಲಿ ಆರಂಭ Read More »

ಕರ್ನಾಟಕ

ಹಳೆ ಪಿಂಚಣಿ ಯೋಜನೆ ಜಾರಿಯ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಫೆ. 20. ಬೆಂಗಳೂರು:   ಹೊಸ ಪಿಂಚಣಿ ಯೋಜನೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಕಾಂಗ್ರೆಸ್ ಪ್ರಣಾಳಿಕೆಯನುಸಾರ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಅಧ್ಯಯನ ಸಮಿತಿ ವರದಿ ಬಳಿಕ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರ ಹಾಗೂ ಜಿಲ್ಲೆ, ತಾಲ್ಲೂಕು ಶಾಖೆಗಳ ನಿರ್ದೇಶಕರ ಪದಾಧಿಕಾರಿಗಳ ಸಮಾವೇಶದಲ್ಲಿ ಆನ್‌ಲೈನ್ ಮೂಲಕ ಮಾತನಾಡಿದ ಅವರು, 2006 ರ ಏಪ್ರಿಲ್ 1ರ ನಂತರ ನೇಮಕವಾಗಿರುವವರಿಗೆ

ಹಳೆ ಪಿಂಚಣಿ ಯೋಜನೆ ಜಾರಿಯ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಗೆ ಸಕಲ ಸಿದ್ಧತೆ : ಸಚಿವ ಮಧು ಬಂಗಾರಪ್ಪ

(ನ್ಯೂಸ್ ಕಡಬ) newskadaba.com ಫೆ. 20. ಬೆಂಗಳೂರು:  ಪ್ರಸಕ್ತ 2024-25ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅನ್ನು ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಪರೀಕ್ಷೆ ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ದ್ವಿತೀಯ ಪಿಯುಸಿ ಮಾರ್ಚ್ 1 ರಿಂದ 20 ರವರೆಗೆ

ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಗೆ ಸಕಲ ಸಿದ್ಧತೆ : ಸಚಿವ ಮಧು ಬಂಗಾರಪ್ಪ Read More »

ಕರ್ನಾಟಕ

ಕೊಪ್ಪಳ: ರೀಲ್ಸ್ ಗಾಗಿ ತುಂಗಭದ್ರಾ ನದಿಗೆ ಹಾರಿದ್ದ ಹೈದರಬಾದ್ ಮೂಲದ ವೈದ್ಯೆ ಶವ ಪತ್ತೆ!

(ನ್ಯೂಸ್ ಕಡಬ) newskadaba.com ಫೆ. 20. ಕೊಪ್ಪಳ: ಮೋಜಿಗಾಗಿ ಫ್ರೆಂಡ್ಸ್ ಮುಂದೆಯೇ ತುಂಗಭದ್ರಾ ನದಿಗೆ ಹಾರಿದ್ದ ಹೈದರಾಬಾದ್ ಮೂಲದ ಮಹಿಳಾ ವೈದ್ಯೆ ಅನನ್ಯಾ ರಾವ್ ಶವ ಪತ್ತೆಯಾಗಿದೆ. ಈ ಘಟನೆ ಹಂಪಿಯಲ್ಲಿ ನಡೆದಿದೆ. ಡಾ. ಅನನ್ಯಾ ರಾವ್ ಮತ್ತು ಇತರೆ ಇಬ್ಬರು ಸ್ನೇಹಿತರಾದ ಸತ್ವಿನ್ ಮತ್ತು ಹಶಿತಾ ಜತೆ ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದರು. ಸ್ಮಾರಕಗಳಿಗೆ ಭೇಟಿ ನೀಡಿದ ನಂತರ, ಮಂಗಳವಾರ ರಾತ್ರಿ ಸಣಾಪುರ ಗ್ರಾಮದ ಅತಿಥಿ ಗೃಹದಲ್ಲಿ ತಂಗಿದ್ದರು. ಬುಧವಾರ ಮಧ್ಯಾಹ್ನ ಮೂವರು ಈಜಲೆಂದು ತುಂಗಭದ್ರಾ ನದಿಗೆ ತೆರಳಿದ್ದಾರೆ.

ಕೊಪ್ಪಳ: ರೀಲ್ಸ್ ಗಾಗಿ ತುಂಗಭದ್ರಾ ನದಿಗೆ ಹಾರಿದ್ದ ಹೈದರಬಾದ್ ಮೂಲದ ವೈದ್ಯೆ ಶವ ಪತ್ತೆ! Read More »

ಕರ್ನಾಟಕ

ಕರಿ ಮೆಣಸಿಗೆ ಜಿಎಸ್‌ಟಿ ರದ್ದು – ಸಂಸದ ಯದುವೀರ್ ಒಡೆಯರ್‌ಗೆ ಧನ್ಯವಾದ ಹೇಳಿದ ಬೆಳೆಗಾರರು

(ನ್ಯೂಸ್ ಕಡಬ) newskadaba.com ಫೆ. 20. ಮಡಿಕೇರಿ: ಕೇಂದ್ರ ಸರ್ಕಾರ ಕರಿ ಮೆಣಸಿಗೆ ವಿಧಿಸಿದ್ದಂತಹ ಜಿಎಸ್‌ಟಿಯನ್ನು ಸಂಪೂರ್ಣ ತೆಗೆದು ಹಾಕಿದೆ. ಈ ಹಿನ್ನೆಲೆ ಕರಿಮೆಣಸು ಬೆಳೆಗಾರರು ಸಂಸದ ಯದುವೀರ್ ಒಡೆಯರ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಕೊಡಗಿನ ಗೋಣಿಕೊಪ್ಪ ಬೆಳೆಗಾರರೋಬ್ಬರಿಗೆ 1 ಕೋಟಿ ಜಿಎಸ್‌ಟಿ ಕಟ್ಟುವಂತೆ ನೋಟಿಸ್ ನೀಡಲಾಗಿತ್ತು. ತದನಂತರ ಅವರು ಕರ್ನಾಟಕ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ನಿಯೋಗದೊಂದಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಸಂಪರ್ಕಿಸಿ ಮನವಿಯನ್ನು ಸಲ್ಲಿಸಿದ್ದರು.

ಕರಿ ಮೆಣಸಿಗೆ ಜಿಎಸ್‌ಟಿ ರದ್ದು – ಸಂಸದ ಯದುವೀರ್ ಒಡೆಯರ್‌ಗೆ ಧನ್ಯವಾದ ಹೇಳಿದ ಬೆಳೆಗಾರರು Read More »

ಕರ್ನಾಟಕ

ಬಜೆಟ್ ನಂತರ ನಂದಿನಿ ಹಾಲು ದರದಲ್ಲಿ 5 ರೂ. ಏರಿಕೆ

(ನ್ಯೂಸ್ ಕಡಬ) newskadaba.com ಫೆ. 20. ಪುತ್ತೂರು: ಗ್ರಾಹಕರು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಕಂಗಾಲಾಗಿದ್ದಾರೆ, ಇದೀಗ ಇನ್ನಷ್ಟು ಹಣಕಾಸು ಒತ್ತಡ ಎದುರಿಸಬೇಕಾಗಿದೆ. ಮಾ. 7ರಂದು ರಾಜ್ಯ ಬಜೆಟ್ ಮಂಡನೆಯ ನಂತರ ನಂದಿನಿ ಹಾಲು ದರ ₹5 ಹೆಚ್ಚಳವಾಗಲಿದೆ. ಹಾಲಿನ ಪ್ರಮಾಣವನ್ನು ಪ್ರಸ್ತುತ ಪ್ರತಿ ಪ್ಯಾಕೆಟ್‌ಗೆ 1,050 ಎಂಎಲ್‌ನಿಂದ ಪೂರ್ಣ ಲೀಟರ್‌ಗೆ ಸರಿಹೊಂದಿಸಲಾಗುತ್ತದೆ. ಇದರಿಂದ ಒಂದು ಲೀಟರ್ ನಂದಿನಿ ಟೋನ್ಡ್ ಹಾಲಿನ ಬೆಲೆ 47 ರೂಪಾಯಿಗೆ ಏರಿಕೆಯಾಗಲಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಹಾಲು

ಬಜೆಟ್ ನಂತರ ನಂದಿನಿ ಹಾಲು ದರದಲ್ಲಿ 5 ರೂ. ಏರಿಕೆ Read More »

ಕರ್ನಾಟಕ

ಪುತ್ತೂರು: 13 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಫೆ. 20. ಪುತ್ತೂರು: ಉಪ್ಪಿನಂಗಡಿಯ ಖಾಸಗಿ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿದ್ದ 13 ವರ್ಷದ ಶ್ರವಣ್ ಎಂಬ ವಿದ್ಯಾರ್ಥಿ ಫೆ.18ರಂದು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ದೊಂಬಯ್ಯ ಗೌಡ ಎಂಬುವವರ ಪುತ್ರ ಶ್ರವಣ್ ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಶ್ರವಣ್ ಮಂಗಳವಾರ ರಾತ್ರಿ ತನ್ನ ತಾಯಿಯೊಂದಿಗೆ ಊಟ ಮಾಡಿದ್ದಾನೆ. ಅದರಲ್ಲಿ ಅವರ ಚಿಕ್ಕಮ್ಮ ತಯಾರಿಸಿದ ಚಿಕನ್‌ ಊಟವನ್ನು ಮಾಡಿದ್ದಾನೆ.

ಪುತ್ತೂರು: 13 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ Read More »

ಕರಾವಳಿ

ತಿಪ್ಪಸಂದ್ರದಲ್ಲಿ ಏಕಾಏಕಿ ಎರಡು ಅಂತಸ್ತಿನ ಕಟ್ಟಡ ಕುಸಿತ

(ನ್ಯೂಸ್ ಕಡಬ) newskadaba.com ಫೆ. 20. ಬೆಂಗಳೂರು: ಜೀವನ್ ಭೀಮಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಪ್ಪಸಂದ್ರದಲ್ಲಿ 2 ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಘಟನೆ ಬುಧವಾರ ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಕಟ್ಟಡದ ಪಕ್ಕದಲ್ಲಿ ಮತ್ತೊಂದು ಕಟ್ಟಡಕ್ಕೆ ಪಾಯ ತೆಗೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸಂಜೆ 4:58ರ ಸುಮಾರಿಗೆ ಕಟ್ಟಡ ಕುಸಿದಿದೆ. ಮನೆ ವಾಲುತ್ತಿರುವ ಕುರಿತು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಕರೆ ಬಂದಿದ್ದು, ಕೂಡಲೇ ಎರಡು ಅಗ್ನಿಶಾಮಕ ದಳದ ವಾಹನಗಳು ಎಸ್‌ಡಿಆರ್‌ಎಫ್ ತಂಡದೊಂದಿಗೆ

ತಿಪ್ಪಸಂದ್ರದಲ್ಲಿ ಏಕಾಏಕಿ ಎರಡು ಅಂತಸ್ತಿನ ಕಟ್ಟಡ ಕುಸಿತ Read More »

ಕರ್ನಾಟಕ

ಪೊಲೀಸರ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲರು ಹತ

(ನ್ಯೂಸ್ ಕಡಬ) newskadaba.com ಫೆ. 20. ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲೀಯರು ಹತರಾಗಿದ್ದಾರೆ. ಛತ್ತೀಸ್‌ಗಢ ಗಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಕ್ಸಲ್ ಹಾಕ್ ವಿರೋಧಿ ಪಡೆ ಮತ್ತು ಸ್ಥಳೀಯ ಪೊಲೀಸ್ ತಂಡಗಳು ಭಾಗವಹಿಸಿದ್ದವು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ದಾಬ‌ರ್ ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿಮೀ ದೂರದ ಸ್ಥಳದಲ್ಲಿ ಬೆಳಿಗ್ಗೆ ಗುಂಡಿನ ಕಾಳಗ ನಡೆದಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ದಾಬರ್‌ತಿಳಿಸಿದ್ದಾರೆ. ಹಾಕ್

ಪೊಲೀಸರ ಎನ್‌ಕೌಂಟರ್‌ನಲ್ಲಿ ಮೂವರು ಮಹಿಳಾ ನಕ್ಸಲರು ಹತ Read More »

ರಾಷ್ಟ್ರೀಯ ನ್ಯೂಸ್
Scroll to Top