ಫರಂಗಿಪೇಟೆ: ದಿಗಂತ್ ನಾಪತ್ತೆ ಪ್ರಕರಣದ ತನಿಖೆಗೆ ಸಂಬಂದಿಸಿ ಎಸ್ಪಿ ನೇತೃತ್ವದ 7 ತಂಡಗಳ ರಚನೆ-ಸಚಿವ ಮಧು ಬಂಗಾರಪ್ಪ

(ನ್ಯೂಸ್ ಕಡಬ) newskadaba.com ಮಾ. 05 ಫರಂಗಿಪೇಟೆ: ಫರಂಗಿಪೇಟೆಯಲ್ಲಿ ನಾಪತ್ತೆಯಾಗಿರುವ ಪಿಯು ಕಾಲೇಜು ವಿದ್ಯಾರ್ಥಿ ದಿಗಂತ್ ನಾಪತ್ತೆ ವಿಚಾರ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಬುಧವಾರ ಪ್ರಸ್ತಾಪವಾಯಿತು. ವಿಷಯ ಪ್ರಸ್ತಾಪಿಸಿದ ಸ್ಪೀಕರ್ ಯು.ಟಿ.ಖಾದರ್, ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಫೆ.25ರಿಂದ ನಾಪತ್ತೆಯಾಗಿರುವ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದ ತನಿಖೆ ಏನಾಯಿತು? ಆತನ ಪತ್ತೆಗೆ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ? ಎಂದು ಪ್ರಶ್ನಿಸಿದರು. ದಿಗಂತ್ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಸರಕಾರಕ್ಕೆ ಸೂಚಿಸಿದರು. ಈ ವೇಳೆ ರಾಜ್ಯ ಗೃಹಸಚಿವರ ಅನುಪಸ್ಥಿತಿಯಲ್ಲಿ ಪ್ರತಿಕ್ರಿಯೆ ನೀಡಿದ […]

ಫರಂಗಿಪೇಟೆ: ದಿಗಂತ್ ನಾಪತ್ತೆ ಪ್ರಕರಣದ ತನಿಖೆಗೆ ಸಂಬಂದಿಸಿ ಎಸ್ಪಿ ನೇತೃತ್ವದ 7 ತಂಡಗಳ ರಚನೆ-ಸಚಿವ ಮಧು ಬಂಗಾರಪ್ಪ Read More »

ಕರಾವಳಿ

ನಕ್ಸಲರಿಂದ ಐಇಡಿ ಸ್ಪೋಟ-3 ಯೋಧರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಾ. 05 ಜಾರ್ಖಂಡ್: ನಕ್ಸಲರು ಐಇಡಿ(ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಳಿಸಿದ ಪರಿಣಾಮ ಜಾರ್ಖಂಡ್‌ನ ಬಲಿಬಾ ಪ್ರದೇಶದಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ಈ ಘಟನೆಯು ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಚರಣೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ನಡೆದಿದ್ದು ಗಾಯಗೊಂಡ ಸೈನಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಾಂಚಿಗೆ ಕರೆದೊಯ್ಯಲಾಗಿದೆ. ನಕ್ಸಲ್ ಚಟುವಟಿಕೆಗಳನ್ನು ಎದುರಿಸಲು ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನಕ್ಸಲರಿಂದ ಐಇಡಿ ಸ್ಪೋಟ-3 ಯೋಧರಿಗೆ ಗಾಯ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸಾಮರಸ್ಯ ಅತ್ಯಗತ್ಯ: ಸ್ಪೀಕರ್ ಯು.ಟಿ. ಖಾದರ್

(ನ್ಯೂಸ್ ಕಡಬ) newskadaba.com ಮಾ. 05 ಬೆಂಗಳೂರು: ಸೌಹಾರ್ದತೆಗೆ ಒತ್ತು ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಜನರನ್ನು ಪ್ರೀತಿಯಿಂದ ಬರುವಂತೆ ಮಾಡಬೇಕು. ಭಯ ಪಡಿಸುವಂತಾಗಬಾರದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಮಂಗಳವಾರ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಘಂಟಿಹೊಳೆ ಅವರು ಕರಾವಳಿ ಪ್ರವಾಸೋದ್ಯಮವನ್ನು ವಿಶೇಷ ಪ್ಯಾಕೇಜ್ ಎಂದು ಪರಿಗಣಿಸುವ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು, ರಾಜ್ಯದಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಸುಧಾರಿಸುವ ಪ್ರಸ್ತಾಪವನ್ನು ವಿವರಿಸಿದರು. ಕರಾವಳಿ ಭಾಗಕ್ಕೆ

ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ಸಾಮರಸ್ಯ ಅತ್ಯಗತ್ಯ: ಸ್ಪೀಕರ್ ಯು.ಟಿ. ಖಾದರ್ Read More »

ಕರಾವಳಿ, ಕರ್ನಾಟಕ

ಹಾಸ್ಟೇಲ್, ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ

(ನ್ಯೂಸ್ ಕಡಬ) newskadaba.com ಮಾ. 05 ಮಂಗಳೂರು: ಮಂಗಳೂರು-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಕಾಲೇಜುಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಪದವಿ ಕಾಲೇಜು, ತಾಂತ್ರಿಕ ಇಂಜಿನಿಯರಿಂಗ್ ಕಾಲೇಜು, ಸಮಾಜ ಕಲ್ಯಾಣ ಇಲಾಖೆಗಳ ಮುಖ್ಯಸ್ಥರುಗಳ ಸಭೆಯನ್ನು ಮಂಗಳವಾರ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಬೇಸಿಗೆ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ತೆಗೆದುಕೊಳ್ಳಬೇಕಾಗುವ ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಹಾಜರಾಗಿರುವ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಸಾಂಕ್ರಾಮಿಕ ರೋಗಗಳ

ಹಾಸ್ಟೇಲ್, ಕಾಲೇಜುಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ Read More »

ಕರಾವಳಿ, ಕರ್ನಾಟಕ

ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾರಾವ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಮಾ. 05 ಬೆಂಗಳೂರು: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂದಿಸಿ ನಟಿ ರನ್ಯಾ ರಾವ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಧೀಶರು ಹೊರಡಿಸಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ. ಸೋಮವಾರ ರಾತ್ರಿ ದೆಹಲಿಯಿಂದ ಬಂದಿಳಿದ ನಟಿ ರನ್ಯಾ ರಾವ್ ಬಳಿ 12 ಕೋಟಿ ಮೌಲ್ಯದ 14.8 ಕೆಜಿ ಚಿನ್ನ ಪತ್ತೆಯಾಗಿದೆ. ಬ್ಯುಸಿನೆಸ್ ಮೇಲೆ ದುಬೈ ಹೋಗಿ ಬರುತ್ತಿದ್ದ ನಟಿ

ಅಕ್ರಮ ಚಿನ್ನ ಸಾಗಾಟ ಪ್ರಕರಣ: ನಟಿ ರನ್ಯಾರಾವ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏ. 2ರಿಂದ ಭಾರತ, ಚೀನಾ ದೇಶದ ಮೇಲೆ ಪ್ರತಿ ಸುಂಕ- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ

(ನ್ಯೂಸ್ ಕಡಬ) newskadaba.com ಮಾ. 05: ವಾಷಿಂಗ್ಟನ್: ಭಾರತ, ಚೀನಾ ಸೇರಿದಂತೆ ಮತ್ತಿತರ ರಾಷ್ಟ್ರಗಳು ಅಮೆರಿಕದ ಉತ್ಪನ್ನಗಳ ಬಗ್ಗೆ ಹೆಚ್ಚಿ ಸುಂಕ ವಿಧಿಸುವ ಬಗ್ಗೆ ಕಿಡಿಕಾರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದು ಅಮೆರಿಕಕ್ಕೆ ಆಗುತ್ತಿರುವ ‘ಅನ್ಯಾಯ ಎಂದಿದ್ದು, ಮುಂದಿನ ತಿಂಗಳಿನಿಂದ ಪ್ರತಿಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಪ್ರತಿ ಸುಂಕ ಏಪ್ರಿಲ್ 2 ರಂದು ಜಾರಿಗೆ ಬರಲಿದ್ದು, ಅಮೆರಿಕದ ಉತ್ಪನ್ನಗಳ ಮೇಲೆ ಸುಂಕದಷ್ಟೇ ವಿದೇಶಿ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಸುಂಕ ವಿಧಿಸಲಾಗುವುದು. ಇತರ ದೇಶಗಳು ದಶಕಗಳಿಂದಲೂ ನಮ್ಮ ಉತ್ಪನ್ನಗಳ ಮೇಲೆ ಸುಂಕ ವಿಧಿಸುತ್ತಲೇ ಇವೆ. ಈಗ

ಏ. 2ರಿಂದ ಭಾರತ, ಚೀನಾ ದೇಶದ ಮೇಲೆ ಪ್ರತಿ ಸುಂಕ- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ Read More »

ಕರ್ನಾಟಕ
crime, arrest, suspected

ಗುಪ್ತಚರ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 30 ಜನರಿಗೆ ವಂಚನೆ; ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಾ. 05 ಬೆಂಗಳೂರು: ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನಲ್ಲಿ ಗುಪ್ತಚರ ವಿಶೇಷ ಅಧಿಕಾರಿಗಳ ಉದ್ಯೋಗಗಳನ್ನು ಕೊಡಿಸುವುದಾಗಿ ಸುಮಾರು 30 ಜನರಿಗೆ ವಂಚನೆ ಮಾಡಿದ ಆರೋಪದ ಮೇಲೆ ಕೇಂದ್ರ ಅಪರಾಧ ಶಾಖೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೀದರ್‌ನ ವೇಣುಗೋಪಾಲ್ (38) ಮತ್ತು ಆಂಧ್ರಪ್ರದೇಶದ ಅರವಿಂದ್ ನಾಯ್ಡು (36). ಆರೋಪಿಗಳು ವಂಚನೆಗೆ ಬಳಸಿದ್ದ ‘ರಾ’ ಸಂಸ್ಥೆಯ 86 ಲೆಟರ್‌ಹೆಡ್‌, 6 ಗುರುತಿನ ಚೀಟಿ, 6 ನಕಲಿ ನೇಮಕಾತಿ ಪತ್ರ ಹಾಗೂ 9

ಗುಪ್ತಚರ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ 30 ಜನರಿಗೆ ವಂಚನೆ; ಇಬ್ಬರ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ವಿಮಾನನಿಲ್ದಾಣ ವಿಸ್ತರಣೆ ಸಂಬಂದಿಸಿ ಅತೀ ಶೀಘ್ರದಲ್ಲೇ ಕೇಂದ್ರದೊಂದಿಗೆ ಮಾತುಕತೆ

(ನ್ಯೂಸ್ ಕಡಬ) newskadaba.com ಮಾ. 05 ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತರಿಸುವ ವೆಚ್ಚವನ್ನು ಭರಿಸಲಾಗುವುದಿಲ್ಲ ಎಂಬ ಸರ್ಕಾರದ ನಿಲುವು ಕುರಿತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸೋಮವಾರ ಸ್ಪಷ್ಟನೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ಅವರ ಗಮನ ಸೆಳೆಯುವ ಸೂಚನೆಗೆ ಸಚಿವ ಎಂಬಿ. ಪಾಟೀಲ್ ಅವರು ಉತ್ತರ ನೀಡಿದರು, ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಿದೆ. ಅದರಿಂದಾಗಿ ಆ ಸಂಸ್ಥೆಯೇ ಭೂಸ್ವಾಧೀನ ಮಾಡಿ ಕೊಂಡು,

ಮಂಗಳೂರು: ವಿಮಾನನಿಲ್ದಾಣ ವಿಸ್ತರಣೆ ಸಂಬಂದಿಸಿ ಅತೀ ಶೀಘ್ರದಲ್ಲೇ ಕೇಂದ್ರದೊಂದಿಗೆ ಮಾತುಕತೆ Read More »

ಕರಾವಳಿ, ಕರ್ನಾಟಕ

ಹಕ್ಕಿಜ್ವರ: ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

(ನ್ಯೂಸ್ ಕಡಬ) newskadaba.com ಮಾ. 05 ಬೆಂಗಳೂರು: ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳ ನಂತರ ಇದೀಗ ಬೆಂಗಳೂರಿಗೂ ಹಕ್ಕಿಜ್ವರ ಭೀತಿ ಕಾಡಲು ಶುರುವಾಗಿದೆ, ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರ ಧೃಡಪಟ್ಟಿದ್ದು, ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ ಮತ್ತು ಹಕ್ಕಿಜ್ವರ ನಿಯಂತ್ರಣಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೀಗ ಬೆಂಗಳೂರಿನ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಸಿದ್ಧತೆಗೆ ಸೂಚನೆ ನೀಡಲಾಗಿದ್ದು, ಪ್ರತ್ಯೇಕ ವಾರ್ಡ್ ಮಾಡುವಂತೆ ನಿರ್ದೇಶನ ಮಾಡಲಾಗಿದೆ. ಹಕ್ಕಿಜ್ವರದ ಗುಣಲಕ್ಷಣಗಳು ಕಂಡು ಬಂದರೆ RTPCR ಟೆಸ್ಟ್ ಕಡ್ಡಾಯಗೊಳಿಸಲಾಗಿದೆ.ಇನ್ನು ಜ್ವರ ಬಂದಲ್ಲಿ ಜನರು ವೈದ್ಯರನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಹಕ್ಕಿಜ್ವರ: ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ Read More »

ಕರ್ನಾಟಕ

ಗೃಹಜ್ಯೋತಿ ಯೋಜನೆ: ಹೊಸ ಗ್ರಾಹಕರಿಗೆ ‘ಅರ್ಧ ಜ್ಯೋತಿ’ ಭಾಗ್ಯ; ಇದರಿಂದ ಸರ್ಕಾರಕ್ಕೆ 600 ಕೋಟಿ ಉಳಿತಾಯ!

(ನ್ಯೂಸ್ ಕಡಬ) newskadaba.com ಮಾ. 03: ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿಗೆ ಷರತ್ತು ವಿಧಿಸಲಾಗಿದೆ. ಹೌದು… ಈ ಹಿಂದೆ ಪ್ರತಿ ಗೃಹ ಬಳಕೆದಾರರು ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನ ಪೂರ್ಣ ಲಾಭ ಪಡೆಯುತ್ತಿದ್ದರು. ಆದರೆ ಇದೀಗ ಹೊಸದಾಗಿ ಮನೆ ಕಟ್ಟಿದವರು ಹಾಗೂ ಬಾಡಿಗೆ ಮನೆ ಬದಲಾಯಿಸಿದವರಿಗೆ ಈ ಲಾಭ ಸಿಗುತ್ತಿಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚಿಸಿದ ಬಳಿಕ 2022–23ರ ಆರ್ಥಿಕ ವರ್ಷದಲ್ಲಿ ಬಳಕೆ ಮಾಡಿದ ವಿದ್ಯುತ್‌ ಯೂನಿಟ್‌ನ ಸರಾಸರಿ ಪ್ರಮಾಣ ಆಧರಿಸಿ 2023ರ

ಗೃಹಜ್ಯೋತಿ ಯೋಜನೆ: ಹೊಸ ಗ್ರಾಹಕರಿಗೆ ‘ಅರ್ಧ ಜ್ಯೋತಿ’ ಭಾಗ್ಯ; ಇದರಿಂದ ಸರ್ಕಾರಕ್ಕೆ 600 ಕೋಟಿ ಉಳಿತಾಯ! Read More »

ಕರ್ನಾಟಕ
Scroll to Top