ಮಧ್ಯಾಹ್ನ 12 ರಿಂದ 3 ರವರೆಗೆ ಮನೆಯಲ್ಲೇ ಇರುವಂತೆ ದಿನೇಶ್ ಗುಂಡೂರಾವ್ ಸೂಚನೆ

(ನ್ಯೂಸ್ ಕಡಬ) newskadaba.com ಮಾ. 15 : ಮಂಗಳೂರು: ಈ ವರ್ಷ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದ್ದು, ಮಧ್ಯಾಹ್ನ 12 ರಿಂದ 3 ರವರೆಗೆ ಹೊರಗೆ ಕೆಲಸ ಮಾಡಬಾರದು, ಮನೆ, ಕಚೇರಿಯಲ್ಲೇ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈಗಾಗಲೇ ಸೂಚಿಸಿದ್ದೇವೆ. ಬಿಸಿಲು ಹೆಚ್ಚಾಗುತ್ತಿರುವುದರಿಂದ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆಯ ಬಗ್ಗೆ ಸರ್ಕಾರ ಮಟ್ಟದಲ್ಲಿ ತೀರ್ಮಾನ ಮಾಡಿಕೊಳ್ಳಲಿ. ಮಧ್ಯಾಹ್ನ ಹೊತ್ತು ಫೀಲ್ಡ್ ವಿಸಿಟ್ ಮಾಡುವುದನ್ನು ಅಧಿಕಾರಿಗಳು ಬಿಡಬೇಕು. ಸರ್ಕಾರಿ […]

ಮಧ್ಯಾಹ್ನ 12 ರಿಂದ 3 ರವರೆಗೆ ಮನೆಯಲ್ಲೇ ಇರುವಂತೆ ದಿನೇಶ್ ಗುಂಡೂರಾವ್ ಸೂಚನೆ Read More »

ಕರ್ನಾಟಕ

ತುಳು- ಕನ್ನಡ ವಿದ್ವಾಂಸ ವಾಮನ ನಂದಾವರ ನಿಧನ

(ನ್ಯೂಸ್ ಕಡಬ) newskadaba.com ಮಾ. 15 : ಮಂಗಳೂರು: ತುಳು- ಕನ್ನಡ ವಿದ್ವಾಂಸ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾಗಿದ್ದ ಡಾ.ವಾಮನ ನಂದಾವರ (81) ಶನಿವಾರ ನಿಧನರಾದರು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯ ಪೀಡಿತರಾಗಿದ್ದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಗ್ರಾಮದ ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದರು. ಹೆಸರಾಂತ ಜಾನಪದ ವಿದ್ವಾಂಸರಾಗಿದ್ದ ಡಾ. ವಾಮನ ಅವರು ಹೇಮಾಂಶು ಪ್ರಕಾಶನದ ಮೂಲಕ ಅನೇಕ ಬರಹಗಾರರನ್ನು, ಕಲಾವಿದರನ್ನು ರೂಪಿಸಿದ್ದಲ್ಲದೇ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ದಕ್ಷಿಣ ಕನ್ನಡ

ತುಳು- ಕನ್ನಡ ವಿದ್ವಾಂಸ ವಾಮನ ನಂದಾವರ ನಿಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 24×7 ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹ

(ನ್ಯೂಸ್ ಕಡಬ) newskadaba.com ಮಾ. 15 : ಬೆಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ (ಮಂಗಳೂರು ಮತ್ತು ಉಡುಪಿ) 24×7 ನಿರಂತರ ವಿದ್ಯುತ್ ಪೂರೈಸುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಕರ್ನಾಟಕದ ಇಂಧನ ಸಚಿವ ಕೆ.ಜಿ. ಜಾರ್ಜ್ ಅವರಿಗೆ ಒತ್ತಾಯಿಸಿದೆ. ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥಾಪಕ ತೋನ್ಸೆ ಜಯಶ್ರೀಕೃಷ್ಣ ಶೆಟ್ಟಿ ಅವರು, ಉಡುಪಿಯ ಪಡುಬಿದ್ರಿಯಲ್ಲಿ 1300 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರವು 2010 ರಿಂದ ಕಾರ್ಯನಿರ್ವಹಿಸುತ್ತಿದೆ. ನಾಗಾರ್ಜುನ/ಅದಾನಿ ವಿದ್ಯುತ್ ಸ್ಥಾವರವು ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಶೇ.45 ರಷ್ಟು ವಿದ್ಯುತ್ ಪೂರೈಸುತ್ತದೆ. ಇದು ರಾಜ್ಯಕ್ಕೆ

ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 24×7 ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹ Read More »

ಕರಾವಳಿ

ಕೊಂಚ ಇಳಿಮುಖವಾದ ಚಿನ್ನದ ಬೆಲೆ; ಇಂದಿನ ದರ ಇಷ್ಟಿದೆ

(ನ್ಯೂಸ್ ಕಡಬ) newskadaba.com ಮಾ. 15 : ಬೆಂಗಳೂರು: ಶುಕ್ರವಾರ ಭಾರಿ ಏರಿಕೆಯಾಗಿದ್ದ ಚಿನ್ನದ ದರ (Gold Price Today) ಇಂದು (ಮಾ. 15) ಕೊಂಚ ಕಡಿಮೆಯಾಗಿದ್ದು ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 10 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 11 ರೂ. ಇಳಿಕೆಯಾಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 8,220 ರೂ. ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ

ಕೊಂಚ ಇಳಿಮುಖವಾದ ಚಿನ್ನದ ಬೆಲೆ; ಇಂದಿನ ದರ ಇಷ್ಟಿದೆ Read More »

ಕರ್ನಾಟಕ

ವೈಮಾನಿಕ ದಾಳಿಯಲ್ಲಿ ಐಸಿಸ್ ಉಗ್ರ ಸಂಘಟನೆಯ ಮತ್ತೊಬ್ಬ ಪ್ರಮುಖನ ಹತ್ಯೆ

(ನ್ಯೂಸ್ ಕಡಬ) newskadaba.com ಮಾ. 15 : ಐಸಿಸ್ ಸಂಘಟನೆಯ ಪ್ರಮುಖ ನಾಯಕನನ್ನು ನಿಖರ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಅಮೆರಿಕ ಘೋಷಿಸಿದೆ. ಇರಾಕ್‌ನ ಅಲ್ ಅನ್ವರ್ ಪ್ರಾಂತ್ಯದಲ್ಲಿ ನಡೆದ ನಿಖರ ವೈಮಾನಿಕ ದಾಳಿಯಲ್ಲಿ ಅಬು ಖದೀಜಾ ಎಂದೂ ಕರೆಯಲ್ಪಡುವ ಅಬ್ದಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇರಾಕ್ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆ ಅಮೆರಿಕ ಘೋಷಿಸಿದೆ. ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು ಮತ್ತು ಜಾಗತಿಕವಾಗಿ ಗುಂಪಿನ ಎರಡನೇ

ವೈಮಾನಿಕ ದಾಳಿಯಲ್ಲಿ ಐಸಿಸ್ ಉಗ್ರ ಸಂಘಟನೆಯ ಮತ್ತೊಬ್ಬ ಪ್ರಮುಖನ ಹತ್ಯೆ Read More »

ಬ್ರೇಕಿಂಗ್ ನ್ಯೂಸ್

‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ’- ಬೊಮ್ಮಾಯಿ

(ನ್ಯೂಸ್ ಕಡಬ) newskadaba.com ಮಾ. 15 : ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ವಿಶೇಷವಾಗಿ ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಹತ್ಯೆ ಮಾಡುವ ಹೇಯ ಕೃತ್ಯಗಳು ಹೆಚ್ಚಾಗಿರುವುದು ಅತ್ಯಂತ ಆಘಾತಕಾರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಇತ್ತೀಚಿಗಿನ ಸ್ವಾತಿ ಬ್ಯಾಡಗಿ ಎಂಬವರ ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾ ಹಿರೇಮಠ ಬರ್ಬರ ಕೊಲೆಯ ನೋವು ಮಾಸುವ ಮುನ್ನ

‘ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ’- ಬೊಮ್ಮಾಯಿ Read More »

ಕರ್ನಾಟಕ

ಮಾ.31ರೊಳಗೆ ಆಸ್ತಿ ತೆರಿಗೆ ಪಾವತಿಸದಿದ್ರೆ ದುಪ್ಪಟ್ಟು

(ನ್ಯೂಸ್ ಕಡಬ) newskadaba.com ಮಾ. 15 : ಬೆಂಗಳೂರು: ಆಸ್ತಿ ಮಾಲೀಕರು ಇಲ್ಲಿ ಗಮನಿಸಬೇಕಾದ ಸುದ್ದಿ ಇದೆ. ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇದ್ದರೆ ಮಾ.31ರೊಳಗೆ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ಏಪ್ರಿಲ್ 1ರಿಂದ ಶೇ.100ರಷ್ಟು ದಂಡ ಬೀಳಲಿದೆ. ಅಂದರೆ ದುಪ್ಪಟ್ಟು ಮೊತ್ತ ಕಟ್ಟಬೇಕಾಗಲಿದೆ. ಈ ಕುರಿತು ಸೂಚನೆ ನೀಡಿದೆ. ಏಪ್ರಿಲ್‌ 1ರಿಂದ ₹100ಕ್ಕೆ 100 ದಂಡ ವಿಧಿಸುವ ಹಾಗೂ ವಾರ್ಷಿಕ ಬಾಕಿ ಮೊತ್ತಕ್ಕೆ ಶೇ.9 ರಿಂದ 15 ರಷ್ಟು ದಂಡ ವಿಧಿಸುವ ನಿಯಮ ಜಾರಿಗೆ ಬರುತ್ತಿದೆ. ರಾಜ್ಯ ಸರ್ಕಾರವು ಕಳೆದ ವರ್ಷ ಬಿಬಿಎಂಪಿಯ

ಮಾ.31ರೊಳಗೆ ಆಸ್ತಿ ತೆರಿಗೆ ಪಾವತಿಸದಿದ್ರೆ ದುಪ್ಪಟ್ಟು Read More »

ಕರ್ನಾಟಕ

ಕಾರಿನ ಮೇಲೆ ಬಿದ್ದ ಲಾರಿ – ಪವಾಡಸದೃಶವಾಗಿ ಇಬ್ಬರು ಪಾರು

(ನ್ಯೂಸ್ ಕಡಬ) newskadaba.com ಮಾ. 15 : ನೆಲಮಂಗಲದ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಟ್ರಕ್‌ ಬಿದ್ದು ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ ಘಟನೆ ಸಂಭವಿಸಿದ ರೀತಿಯಲ್ಲೇ ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬಳಿ ನಡೆದಿದೆ. ರಾಮದುರ್ಗ ತಾಲೂಕಿನ ಬಾಗೋಜಿಕೊಪ್ಪದ ನಿವಾಸಿಗಳಾದ ಪರಪ್ಪ ಮತ್ತು ನಾಗಪ್ಪ ಎಂಬುವವರು ಇಂದು ಬೆಳಗ್ಗೆ ತಮ್ಮ ವ್ಯಾಗನರ್‌ ಕಾರನ್ನು ಸರ್ವಿಸ್ ಮಾಡಿಸಬೇಕು ಎಂದು ಬೆಳಗಾವಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದ ಸಿಮೆಂಟ್‌ ಮಿಕ್ಸರ್‌ ಲಾರಿಯೊಂದು ಡಿವೈಡರ್‌ಗೆ ಡಿಕ್ಕಿಯಾಗಿ ಕಾರಿನ ಮೇಲೆ ಬಿದ್ದಿದೆ. ಲಾರಿ

ಕಾರಿನ ಮೇಲೆ ಬಿದ್ದ ಲಾರಿ – ಪವಾಡಸದೃಶವಾಗಿ ಇಬ್ಬರು ಪಾರು Read More »

ಕರ್ನಾಟಕ

ಅಮೃತಸರದ ಠಾಕೂರ್‌ ದ್ವಾರ್ ದೇಗುಲದ ಎದುರು ಸ್ಫೋಟ

(ನ್ಯೂಸ್ ಕಡಬ) newskadaba.com ಮಾ. 15 : ಪಂಜಾಬ್‌ ಅಮೃತಸರದ ಠಾಕೂರ್ ದ್ವಾರ್ ದೇವಾಲಯದ ಬಳಿ ಶನಿವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಗೋಡೆ ಹಾಗೂ ಕಿಟಕಿಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ವ್ಯಕ್ತಿಗೆ ಹಾನಿಯಾಗಿಲ್ಲ. ಆದರೆ ಖಂಡ್ವಾಲಾ ಪ್ರದೇಶದ ಸುತ್ತಮುತ್ತ ಸ್ಫೋಟದ ಶಬ್ದದಿಂದ ಜನರು ಭಯಭೀತರಾಗಿದ್ದಾರೆ. ಅಪರಿಚಿತ ವ್ಯಕ್ತಿಗಳು ದೇವಾಲಯದ ಬಳಿ ಬೈಕ್ನಲ್ಲಿ ಬರುತ್ತಿದ್ದ ವೇಳೆ ಕೆಲ ಸೆಕೆಂಡುಗಳ ಕಾಲಕಾದ ಅವರು, ದೇವಾಲಯದತ್ತ ಸ್ಫೋಟಕಗಳನ್ನು ಎಸೆದು, ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೃತಸರದ ಠಾಕೂರ್‌ ದ್ವಾರ್ ದೇಗುಲದ ಎದುರು ಸ್ಫೋಟ Read More »

ಕರ್ನಾಟಕ

ಒಂದು ರಾಷ್ಟ್ರ- ಒಂದು ಚುನಾವಣೆಯಿಂದ ಕಡಿಮೆ ಖರ್ಚು, ಅಭಿವೃದ್ಧಿ ಹೆಚ್ಚು: ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಮಾ. 15 ಬೆಂಗಳೂರು : ಒಂದು ದೇಶ ಒಂದೇ ಚುನಾವಣೆಯಿಂದ ಪ್ರಾದೇಶಿಕ ಪಕ್ಷವು ರಾಷ್ಟ್ರಹಿತದೊಂದಿಗೆ ಹಾಗೂ ರಾಷ್ಟ್ರೀಯ ಪಕ್ಷವು ಪ್ರಾದೇಶಿಕ ಹಿತೈಷಿಯಾಗಿ ಚಿಂತಿಸುವಂತೆ ಆಗಲಿದೆ ಎಂದು ತುಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಿಳಿಸಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಪಡಿಸುವ ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತಾಗಬೇಕು ಎಂದು ಆಶಿಸಿದ್ದಾರೆ. ತಮಿಳುನಾಡು ಬಜೆಟ್‌ನಲ್ಲಿ ರೂಪಾಯಿ ಚಿಹ್ನೆಯನ್ನು ತಮಿಳು ಅಕ್ಷರ ‘ರೂ’ ನೊಂದಿಗೆ ಬದಲಾಯಿಸುವ ಡಿಎಂಕೆ ನಿರ್ಧಾರವನ್ನು ಉಲ್ಲೇಖಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ‘ಒಂದು ರಾಷ್ಟ್ರ,

ಒಂದು ರಾಷ್ಟ್ರ- ಒಂದು ಚುನಾವಣೆಯಿಂದ ಕಡಿಮೆ ಖರ್ಚು, ಅಭಿವೃದ್ಧಿ ಹೆಚ್ಚು: ಅಣ್ಣಾಮಲೈ Read More »

ಬ್ರೇಕಿಂಗ್ ನ್ಯೂಸ್
Scroll to Top