ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾರಿಂದ “ಬೆಂಗಳೂರು ನೀರುಕರಡಿ” ಪ್ರಯೋಗ ಪೂರ್ಣ

(ನ್ಯೂಸ್ ಕಡಬ) newskadaba.com ಜು. 07, ನವದೆಹಲಿ: ಆಕ್ಸಿಯೋಂ-4 ಮಿಷನ್‌ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ನೀರುಕರಡಿ ಪ್ರಯೋಗ ಪೂರ್ಣಗೊಳಿಸಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಈ ಪ್ರಯೋಗವನ್ನು ಸಿದ್ಧಪಡಿಸಿತ್ತು. ಈ ಬಗ್ಗೆ ಇಸ್ರೋ ಮಾಹಿತಿ ಹಂಚಿಕೊಂಡಿದ್ದು, ‘ಶುಭಾಂಶು ಶುಕ್ಲಾ ಐಎಸ್‌ಎಸ್‌ನಲ್ಲಿ ನೀರುಕರಡಿಗಳನ್ನು ಒಳಗೊಂಡ ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗ ಪೂರ್ಣಗೊಳಿಸಿದ್ದಾರೆ. ಅಧ್ಯಯನವು ಬಾಹ್ಯಾಕಾಶದಲ್ಲಿ ಅವುಗಳ ಬದುಕುಳಿಯುವಿಕೆ, ಪುನರುಜ್ಜಿವನ ಮತ್ತು ಸಂತಾನೋತ್ಪತ್ತಿ ಮೇಲೆ ಕೇಂದ್ರೀಕರಿಸುತ್ತದೆ. ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಸರದಲ್ಲಿ ನೀರುಕರಡಿಗಳ ಜೈವಿಕ […]

ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾರಿಂದ “ಬೆಂಗಳೂರು ನೀರುಕರಡಿ” ಪ್ರಯೋಗ ಪೂರ್ಣ Read More »

ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್

ರಾಜ್ಯ ಸರಕಾರದಿಂದ ಬೆಟ್ಟಿಂಗ್ ದಂಧೆ ನಿಯಂತ್ರಣಕ್ಕೆ ಹೊಸ ಮಸೂದೆ..!

(ನ್ಯೂಸ್ ಕಡಬ) newskadaba.com ಜು. 07: ರಾಜ್ಯದಲ್ಲಿ ಬೆಟ್ಟಿಂಗ್ ದಂಧಯ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರಕಾರ, ಇದೀಗ ಹೊಸ ಮಸೂದೆಯನ್ನು ಜಾರಿಗೆ ತರುವ ಬಗ್ಗೆ ಚಿಂತನೆ ಮಾಡಿದೆ. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಬೆಟ್ಟಿಂಗ್ ನಿಯಂತ್ರಣಕ್ಕೆ ಹೊಸ ಮಸೂದೆ ಮಂಡಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಹೊಸ ಮಸೂದೆಯ ಅನ್ವಯ ಯಾವುದೇ ಆಟ, ಸ್ಪರ್ಧೆ ಅದೃಷ್ಟದಿಂದ ಗೆಲ್ಲುವ ಹಾಗಿದ್ದರೆ ಆ ರೀತಿಯ ಆಟಗಳನ್ನ ನಿಷೇಧ ಮಾಡಲಾಗುತ್ತದೆ. ಆದರೆ, ಆಟ (ಗೇಮ್) ಸ್ಕಿಲ್ ಹೊಂದಿರುವ ಆನ್‌ಲೈನ್ ಗೇಮಿಂಗ್‌ಗೆ ವಿನಾಯಿತಿ

ರಾಜ್ಯ ಸರಕಾರದಿಂದ ಬೆಟ್ಟಿಂಗ್ ದಂಧೆ ನಿಯಂತ್ರಣಕ್ಕೆ ಹೊಸ ಮಸೂದೆ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಸ್.ಎಸ್.ಎಲ್.ಸಿ ಪರೀಕ್ಷೆ-3 ಹಾಜರಾತಿ

(ನ್ಯೂಸ್ ಕಡಬ) newskadaba.com ಜು. 07. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ-3 ಪ್ರಥಮ ಭಾಷಾ ಪರೀಕ್ಷೆಗೆ 561 ವಿದ್ಯಾರ್ಥಿಗಳು ಹಾಜರಾಗಿದ್ದು, 468 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆ-3 ಹಾಜರಾತಿ Read More »

ಕರಾವಳಿ

ಮಹಿಳಾ ಪಾಲಿಟೆಕ್ನಿಕ್: ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜು. 07. ನಗರದ ಬೊಂದೇಲ್‍ ನಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ನಲ್ಲಿ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಕಮರ್ಷಿಯಲ್ ಪ್ರಾಕ್ಟೀಸ್ (ಇಂಗ್ಲೀಷ್ ಮತ್ತು ಕನ್ನಡ) ಹಾಗೂ ಲೈಬ್ರೆರಿ ಆ್ಯಂಡ್ ಇನ್‍ ಫಾರ್‍ಮೇಶನ್ ಸೈನ್ಸ್ ಕೋರ್ಸ್‍ ಗಳಿಗೆ ಸೇರಲು ಎಸ್.ಎಸ್.ಎಲ್.ಸಿ/ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರುವ ಹಾಗೂ ಲ್ಯಾಟರಲ್ ಎಂಟ್ರಿ ಸ್ಕೀಂ ಮುಖಾಂತರ 2ನೇ ವರ್ಷ/3ನೇ ಸೆಮಿಸ್ಟರ್ ಡಿಪ್ಲೋಮಾ ಕೋರ್ಸಿನ ಪ್ರವೇಶಕ್ಕೆ 2 ವರ್ಷಗಳ ಐ.ಟಿ.ಐ/ದ್ವಿತೀಯ

ಮಹಿಳಾ ಪಾಲಿಟೆಕ್ನಿಕ್: ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ

ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ‘ಹೃದಯ ತಪಾಸಣೆ’ ಯೋಜನೆ ರೂಪಿಸಲು ನಿರ್ಧಾರ..!

(ನ್ಯೂಸ್ ಕಡಬ) newskadaba.com ಜು. 07.  ಇತ್ತಿಚಿನ ದಿನಗಳಲ್ಲಿ ಯುವ ವಯಸ್ಸಿನವರು ಹೆಚ್ಚಾಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಕೆಎನ್ ರಾಜಣ್ಣ ತಿಳಿಸಿದ್ದಾರೆ. ಪ್ರತೀ ವರ್ಷ ರಾಜ್ಯಾದ್ಯಂತ ಶಾಲಾ ಹಂತದಲ್ಲೇ ಮಕ್ಕಳ ಹೃದಯದ ಆರೋಗ್ಯ ತಪಾಸಣೆಗೆ ಯೋಜನೆ ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಲೇಜು ಹಂತಕ್ಕೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು. ಇದೀಗ ಹೃದಯಾಘಾತ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ಎಲ್ಲಾ ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ

ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ‘ಹೃದಯ ತಪಾಸಣೆ’ ಯೋಜನೆ ರೂಪಿಸಲು ನಿರ್ಧಾರ..! Read More »

ಕರ್ನಾಟಕ

ಕಡಬ: ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕಗಳ ತರಬೇತಿ ಕಾರ್ಯಾಗಾರ ಪ್ರಥಮ ಚಿಕಿತ್ಸೆಯ ಸರಿಯಾದ ತಿಳುವಳಿಕೆ ಇದ್ದರೆ ಅದೇಷ್ಟೋ ಜೀವಗಳನ್ನು ಉಳಿಸಬಹುದು- ಕಮಾಂಡರ್ ಶಾಂತಿ ಲಾಲ್ ಜಟೀಯಾ

(ನ್ಯೂಸ್ ಕಡಬ) newskadaba.com ಕಡಬ, ಜು. 07. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕಿನ ಆರು ವಲಯಗಳ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕಗಳ ತರಬೇತಿ ಕಾರ್ಯಾಗಾರವು ಕಡಬ ಶ್ರೀ ದುರ್ಗಾಂಭಿಕಾ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿನ್ಸ್ಂಟ್ ಪಾಯಿಸ್ ರವರು ಮಾತನಾಡಿ, ಕಡಬ ತಾಲೂಕಿನ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ 120 ಸದಸ್ಯರು ಪ್ರತೀ ಗ್ರಾಮಗಳಲ್ಲಿ ಪ್ರಚಲಿತವಾಗಬೇಕು. ಆಕಸ್ಮಿಕ ಅವಘಡಗಳಲ್ಲಿ ಶೀಘ್ರವಾಗಿ

ಕಡಬ: ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕಗಳ ತರಬೇತಿ ಕಾರ್ಯಾಗಾರ ಪ್ರಥಮ ಚಿಕಿತ್ಸೆಯ ಸರಿಯಾದ ತಿಳುವಳಿಕೆ ಇದ್ದರೆ ಅದೇಷ್ಟೋ ಜೀವಗಳನ್ನು ಉಳಿಸಬಹುದು- ಕಮಾಂಡರ್ ಶಾಂತಿ ಲಾಲ್ ಜಟೀಯಾ Read More »

ಕರಾವಳಿ

ಆನ್ ಲೈನ್ ನಲ್ಲಿ ಮೀನಿನ ಬಲೆ ಖರೀದಿಸಿದ ಮಹಿಳೆಗೆ ವಂಚನೆ

(ನ್ಯೂಸ್ ಕಡಬ) newskadaba.com ಜು. 07. ಆನ್‌ ಲೈನ್ ಮೂಲಕ ಮೀನಿನ ಬಲೆ ಖರೀದಿಸಿದ ಮಹಿಳೆಯೋರ್ವರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ರೇಷ್ಮಾ ಎಂಬವರು ನೀಡಿದ ದೂರಿನ ಪ್ರಕಾರ, ಅವರು ಆನ್‌ ಲೈನ್‌ನಲ್ಲಿ ಮೀನಿನ ಬಲೆಯನ್ನು ಬುಕ್ ಮಾಡಿದ್ದು, ಈ ಬಗ್ಗೆ ಒಬ್ಬ ಅಪರಿಚಿತ ವ್ಯಕ್ತಿ ಕರೆ ಮಾಡಿ ಮೀನಿನ ಬಲೆಯನ್ನು ಡೆಲಿವರಿ ಕೊಡಲು ಹಣ ಪಾವತಿ ಮಾಡುವಂತೆ ತಿಳಿಸಿದ್ದನು. ಅದರಂತೆ ರೇಷ್ಮಾ ಜು. 02ರಿಂದ 4ರ ನಡುವೆ

ಆನ್ ಲೈನ್ ನಲ್ಲಿ ಮೀನಿನ ಬಲೆ ಖರೀದಿಸಿದ ಮಹಿಳೆಗೆ ವಂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

2026ರ ಹಜ್ ಯಾತ್ರೆಗೆ ವಾರದೊಳಗೆ ಅರ್ಜಿ ಸಲ್ಲಿಕೆ ಆರಂಭ..!

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 07. ಮುಂದಿನ ವರ್ಷದ ಪವಿತ್ರ ಹಜ್ ಯಾತ್ರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ವಾರದೊಳಗೆ ಆರಂಭಗೊಳ್ಳಲಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. 2026ರಲ್ಲಿ ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಬಯಸುವ ಯಾತ್ರಿಕರು ನಿಗದಿತ ಸಮಯದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಸರಕಾರವು 2026ರ ಹಜ್ ಅರ್ಜಿಗಳನ್ನು ಒಂದು ವಾರದೊಳಗೆ ಸ್ವೀಕರಿಸಲು ಪ್ರಾರಂಭಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದ್ದರಿಂದ ಹಜ್ ಯಾತ್ರೆಯನ್ನು ಕೈಗೊಳ್ಳಲು ಇಚ್ಚಿಸುವವರು ತಮ್ಮ ಪಾಸ್‌ಪೋರ್ಟ್‌

2026ರ ಹಜ್ ಯಾತ್ರೆಗೆ ವಾರದೊಳಗೆ ಅರ್ಜಿ ಸಲ್ಲಿಕೆ ಆರಂಭ..! Read More »

ರಾಷ್ಟ್ರೀಯ ನ್ಯೂಸ್

ಖ್ಯಾತ ಹಾಲಿವುಡ್ ನಟ ಮೈಕಲ್ ಮ್ಯಾಡ್ಸನ್ ಹೃದಯಾಘಾತದಿಂದ ಸಾವು

(ನ್ಯೂಸ್‌ ಕಡಬ) newskadaba.com ಜು.06: ‘ಕಿಲ್ ಬಿಲ್’, ‘ರಿಸವರ್ಯರ್ ಡಾಗ್ಸ್’, ‘ಡೈ ಅನದರ್ ಡೇ’, ‘ಸ್ಕೇರಿ ಮೂವಿ’ ಸೇರಿದಂತೆ ಹಲವಾರು ಸೂಪರ್ ಹಿಟ್ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಮೈಕಲ್ ಮ್ಯಾಡ್ಸನ್ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೈಕಲ್ ಮ್ಯಾಡ್ಸನ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾಗುತ್ತಿದೆ. ಮೈಕಲ್ ಅವರು ಅಮೆರಿಕದ ಕ್ಯಾಲಿಫೋರ್ನಿಯಾದ ಮ್ಯಾಡ್ಸನ್ ನಗರದಲ್ಲಿ ನೆಲೆಸಿದ್ದರು. ಮನೆಯಲ್ಲಿಯೇ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 1957ರಲ್ಲಿ ಶಿಕಾಗೊನಲ್ಲಿ ಜನಿಸಿದ ಮೈಕಲ್ ಅವರ ತಾಯಿ

ಖ್ಯಾತ ಹಾಲಿವುಡ್ ನಟ ಮೈಕಲ್ ಮ್ಯಾಡ್ಸನ್ ಹೃದಯಾಘಾತದಿಂದ ಸಾವು Read More »

ಕರಾವಳಿ

86.18 ಮೀಟರ್ ದೂರ ಜಾವೆಲಿನ್ ಎಸೆದು ಚೊಚ್ಚಲ ಎನ್‌ಸಿ‌ ಕ್ಲಾಸಿಕ್‌ ಗೆದ್ದ ನೀರಜ್‌ ಚೋಪ್ರಾ

(ನ್ಯೂಸ್‌ ಕಡಬ) newskadaba.com ಜು.06:  ವರ್ಲ್ಡ್ ಅಥ್ಲೆಟಿಕ್ಸ್‌ನಿಂದ ಅನುಮೋದಿತ ಚೊಚ್ಚಲ‌ ಆವೃತ್ತಿಯ ಎನ್‌ಸಿ‌ ಕ್ಲಾಸಿಕ್‌ ಪಂದ್ಯಾವಳಿಯಲ್ಲಿ ಭಾರತೀಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಚಾಂಪಿಯನ್ ಆಗಿ‌ ಹೊರಹೊಮ್ಮಿದ್ದಾರೆ. 86.18 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಅಗ್ರಸ್ಥಾನ ಗಳಿಸಿದರು. ಅಲ್ಲದೇ, ತಮ್ಮ ಹೆಸರಿನಲ್ಲೇ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ಆಯೋಜಿಸಿ, ಅದರಲ್ಲಿಯೇ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹಿರಿಮೆಗೂ ಪಾತ್ರರಾದರು. 2015ರ ವಿಶ್ವ ಚಾಂಪಿಯನ್ ಕೀನ್ಯಾದ ಜೂಲಿಯಸ್ ಯೆಗೊ 84.51 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ದ್ವಿತೀಯ

86.18 ಮೀಟರ್ ದೂರ ಜಾವೆಲಿನ್ ಎಸೆದು ಚೊಚ್ಚಲ ಎನ್‌ಸಿ‌ ಕ್ಲಾಸಿಕ್‌ ಗೆದ್ದ ನೀರಜ್‌ ಚೋಪ್ರಾ Read More »

ಕ್ರೀಡಾ ನ್ಯೂಸ್
Scroll to Top