ಕಬ್ಸ್ – ಬುಲ್ ಬುಲ್, ಸ್ಕೌಟ್- ಗೈಡ್ಸ್ ರೇಂಜರ್ ವಿಭಾಗದ ಗೀತ ಗಾಯನ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 09. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಂಗಳೂರು ನಗರ ದಕ್ಷಿಣ ಸ್ಥಳೀಯ ಸಂಸ್ಥೆಯ 2025ನೇ ಸಾಲಿನ ಕಬ್ಸ್ – ಬುಲ್ ಬುಲ್, ಸ್ಕೌಟ್ ಗೈಡ್ಸ್, ರೇಂಜರ್ ವಿಭಾಗದ ಗೀತ ಗಾಯನ ಸ್ಪರ್ಧೆಯು ಲೂಡ್ರ್ಸ್ ಸೆಂಟ್ರಲ್ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ನಗರ ದಕ್ಷಿಣ  ಸ್ಥಳೀಯ ಸಂಸ್ಥೆಯ ಅಧ್ಯಕ್ಷ  ಕೆ. ವಸಂತ್ ರಾವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರೀತಿ ಲೋಬೊ, ಲೂಡ್ರ್ಸ್ ಸೆಂಟ್ರಲ್ […]

ಕಬ್ಸ್ – ಬುಲ್ ಬುಲ್, ಸ್ಕೌಟ್- ಗೈಡ್ಸ್ ರೇಂಜರ್ ವಿಭಾಗದ ಗೀತ ಗಾಯನ ಸ್ಪರ್ಧೆ Read More »

ಕರಾವಳಿ

ಸಾಮಾಜಿಕ ಪ್ರಗತಿಗೆ ಅಕ್ಷರ ಜ್ಞಾನ ಅಗತ್ಯ- ಮೂಡಾ ಅಧ್ಯಕ್ಷ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 09. ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ. ಸಾರ್ವಜನಿಕರಲ್ಲಿ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಆಚರಿಸಲಾಗುತ್ತದೆ. ಸ್ಥಳೀಯ ಸಮುದಾಯಗಳಲ್ಲಿ ಅನಕ್ಷರತೆ ಎಂಬ ಸಾಮಾಜಿಕ ಪಿಡುಗನ್ನು ತೊಡೆದು ಹಾಕಬೇಕು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಹೇಳಿದರು. ಅವರು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಲೋಕ ಶಿಕ್ಷಣ ನಿರ್ದೇಶನಾಲಯ, ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರತಾ

ಸಾಮಾಜಿಕ ಪ್ರಗತಿಗೆ ಅಕ್ಷರ ಜ್ಞಾನ ಅಗತ್ಯ- ಮೂಡಾ ಅಧ್ಯಕ್ಷ Read More »

ಕರಾವಳಿ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಬೇಡಿ ಎಂದಿದ್ದಕ್ಕೆ ಯುವಕನ ಗುಂಡಿಕ್ಕಿ ಹತ್ಯೆ..!

(ನ್ಯೂಸ್‌ ಕಡಬ) newskadaba.com ಸೆ. 09. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಬೇಡಿ ಎಂದು ಹೇಳಿದ್ದಕ್ಕೆ ಹರಿಯಾಣದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಹರಿಯಾಣದ ಜಿಂದ್ ಜಿಲ್ಲೆಯ ಬರಾಹ್ ಕಲಾ ಗ್ರಾಮದ ಕಪಿಲ್ ಎಂದು ಗುರುತಿಸಲಾಗಿದೆ. ಕಪಿಲ್ ಕೆಲಸ ಮಾಡುತ್ತಿದ್ದ ಸ್ಟೋರ್‌ ನ ಹೊರಗಡೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದನ್ನು ಗಮನಿಸಿದ ಕಪಿಲ್ ಆತನ ಬಳಿ, ಸಾರ್ವಜನಿಕ ಸ್ಥಳವಾದ ಇಲ್ಲಿ ಮೂತ್ರ ವಿಸರ್ಜಿಸಬೇಡ ಎಂದಿದ್ದರು. ಈ ವೇಳೆ ಕೋಪಗೊಂಡ ವ್ಯಕ್ತಿ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಬೇಡಿ ಎಂದಿದ್ದಕ್ಕೆ ಯುವಕನ ಗುಂಡಿಕ್ಕಿ ಹತ್ಯೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 09. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್‍ಗಳ (ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾತಿ/ಪ.ವರ್ಗ ಸೇರಿದ ವಿದ್ಯಾರ್ಥಿಗಳಿಂದ 2025-26ನೇ ಸಾಲಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪ್ರವರ್ಗ-1, ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ 2.50 ಲಕ್ಷ ರೂ. ಇರಬೇಕು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶ: ಅರ್ಜಿ ಆಹ್ವಾನ Read More »

ಕರ್ನಾಟಕ
crime, arrest, suspected

16 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್‌ ಕಡಬ) newskadaba.com ಸೆ. 09. ಕಳೆದ 16 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತ ಆರೋಪಿಯನ್ನು ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಸೆಪ್ಟೆಂಬರ್ 7ರಂದು ಬೆಂಗಳೂರಿನ ಬನಶಂಕರಿ, ಇಟ್ಟಮಡು ಎಂಬಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಮಣಿಪಾಲ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಸಬ್ ಇನ್ಸ್‌ಪೆಕ್ಟರ್ ಅಕ್ಷಯ ಕುಮಾರಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರಾಜೇಶ್ ಮತ್ತು ಮಂಜುನಾಥ್ ಹಾವಂಜೆ ಅವರು ಆರೋಪಿಯನ್ನು ಯಶಸ್ವಿಯಾಗಿ

16 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

‘ನಮ್ಮ ಮೆಟ್ರೊ’ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭ ಸುದ್ದಿ

(ನ್ಯೂಸ್‌ ಕಡಬ) newskadaba.com ಸೆ. 09. ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ‘ನಮ್ಮ ಮೆಟ್ರೋ’ ಹಳದಿ ಮಾರ್ಗದಲ್ಲಿ ನಾಲ್ಕನೇ ರೈಲು ಈ ವಾರದಿಂದ ಸಂಚಾರ ಆರಂಭಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, ಪ್ರಸ್ತುತ ಈ ಮಾರ್ಗದಲ್ಲಿ 3 ರೈಲುಗಳು ಸಂಚರಿಸುತ್ತಿದ್ದು, 4ನೇ ರೈಲಿನ ಸೇರ್ಪಡೆಯು ಪೀಕ್-ಅವರ್’ನಲ್ಲಿ ಕಾಯುವಿಕೆ ಸಮಯವನ್ನು 25 ನಿಮಿಷಗಳಿಂದ ಸುಮಾರು 15 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. 4ನೇ ರೈಲಿನ ಪರೀಕ್ಷೆಗಳನ್ನು ನಡೆಸಲಾಗಿದ್ದು, ಈ

‘ನಮ್ಮ ಮೆಟ್ರೊ’ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭ ಸುದ್ದಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟ್ರೆಡ್ಸ್ ಮತ್ತು ಎಂ.ಎಸ್.ಎಂ.ಇ ಮಾಹಿತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 09. ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ವೇಗಗೊಳಿಸಲು  ರ್ಯಾಂಪ್ (RAMP) ಯೋಜನೆಯಡಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ,  ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (TECSOK), ಬೆಂಗಳೂರು ಹಾಗೂ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಹಯೋಗದಲ್ಲಿ  ಸೆಪ್ಟೆಂಬರ್ 16ರಂದು ಬೆಳಿಗ್ಗೆ 10 ಗಂಟೆಗೆ  ಟ್ರೆಡ್ಸ್ ಕಾರ್ಯಗಾರ ಮತ್ತು ಸೆಪ್ಟೆಂಬರ್ 17 ರಂದು ಅಪರಾಹ್ನ 3 ಗಂಟೆಗೆ ಇಎಸ್‍ಎಂ ಕಾರ್ಯಗಾರವನ್ನು ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ

ಟ್ರೆಡ್ಸ್ ಮತ್ತು ಎಂ.ಎಸ್.ಎಂ.ಇ ಮಾಹಿತಿ ಕಾರ್ಯಾಗಾರ Read More »

ಕರ್ನಾಟಕ

ಸೆಪ್ಟೆಂಬರ್ 16 ರಿಂದ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿ

(ನ್ಯೂಸ್ ಕಡಬ) newskadaba.com ಸೆ. 09. ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಆಗಸ್ಟ್-2025 ರ ಮಾಹೆಯಲ್ಲಿ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ. ತರಬೇತಿ ವಿವರ: ಸೆಪ್ಟೆಂಬರ್ 16 ರಿಂದ 17ರ ವರೆಗೆ ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ ನಡೆಯಲಿದೆ. ಸೆಪ್ಟೆಂಬರ್ 25 ರಿಂದ 26ರ ವರೆಗೆ ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ನಡೆಯಲಿದೆ. ಆಸಕ್ತ ರೈತ ಬಾಂಧವರು ತಮ್ಮ

ಸೆಪ್ಟೆಂಬರ್ 16 ರಿಂದ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿ Read More »

ಕರಾವಳಿ

ಎಸಿ ಸ್ಫೋಟ- ಒಂದೇ ಕುಟುಂಬದ ಮೂವರು ಬಲಿ; ಮತ್ತೊರ್ವ ಗಂಭೀರ

(ನ್ಯೂಸ್‌ ಕಡಬ) newskadaba.com ಸೆ. 09. ಕಟ್ಟಡವೊಂದರಲ್ಲಿ ಎಸಿ ಕಂಪ್ರೆಸ್ಸರ್ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದಿದೆ. ಈ ದುರಂತದಲ್ಲಿ ಅವರ ಸಾಕು ನಾಯಿ ಕೂಡ ಮೃತಪಟ್ಟಿದೆ. ಮೃತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ. 4 ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ಸೋಮವಾರದಂದು  ಮಧ್ಯರಾತ್ರಿ 1:30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಈ ವೇಳೆ ಅವರು

ಎಸಿ ಸ್ಫೋಟ- ಒಂದೇ ಕುಟುಂಬದ ಮೂವರು ಬಲಿ; ಮತ್ತೊರ್ವ ಗಂಭೀರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಪ್ರಾಪ್ತನ ಬಂಧನ

(ನ್ಯೂಸ್‌ ಕಡಬ) newskadaba.com ಸೆ. 09. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಒಂಟಿ ಮಹಿಳೆಯನ್ನು ಹೊಲಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ ಘಟನೆ ನೆಲಮಂಗಲದ ಬೋಳಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.   ಸುಮಾರು 17 ವರ್ಷದ ಹುಡುಗ ತನ್ನ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆಯ ಕೈ ಹಿಡಿದು ಹೊಲದ ಒಳಗೆ ಎಳೆದೊಯ್ದಿದ್ದಾನೆ. ಇದೇ ವೇಳೆ ಮಹಿಳೆ, ರಕ್ಷಣೆಗಾಗಿ ತಪ್ಪಿಸಿಕೊಳ್ಳಲು ಕೂಗಿಕೊಂಡಿದ್ದಾಳೆ. ಆಕೆಯ ಚೀರಾಟ ಕೇಳಿದ ಗ್ರಾಮಸ್ಥರು ಮಹಿಳೆಯನ್ನು ರಕ್ಷಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಪ್ರಾಪ್ತನ ಬಂಧನ Read More »

ಕರ್ನಾಟಕ
Scroll to Top