ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ ► ಎಎಸ್ಸೈ ಸೇರಿ ಮೂವರು ಪೊಲೀಸರ ಅಮಾನತು

(ನ್ಯೂಸ್ ಕಡಬ) newskadaba.com ಉಡುಪಿ, ಆ. 22. ಅನಿವಾಸಿ ಭಾರತೀಯ ಬೃಹತ್ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಗಳನ್ನು ಸೋಮವಾರದಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಹವಾನಿಯಂತ್ರಿತ ಇನ್ನೋವಾ ಕಾರಿನ ವ್ಯವಸ್ಥೆ ಕಲ್ಪಿಸಿ ರಾಜಾತಿಥ್ಯ ನೀಡಿದ ಕಾರಣಕ್ಕಾಗಿ ಎಎಸ್ಸೈ ಸಹಿತ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಉಡುಪಿ ಜಿಲ್ಲಾ ಎಸ್ಪಿ ಡಾ. ಸಂಜೀವ ಪಾಟೀಲ್ ಅಮಾನತುಗೊಳಿಸಿದ್ದಾರೆ. ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಮತ್ತು ನಿರಂಜನ್ ಭಟ್ ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಇಂದು ಭದ್ರತಾ ಕರ್ತವ್ಯ ನಿರ್ವಹಿಸಿದ ಉಡುಪಿ […]

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ ► ಎಎಸ್ಸೈ ಸೇರಿ ಮೂವರು ಪೊಲೀಸರ ಅಮಾನತು Read More »

ಕರಾವಳಿ

ಪಂಜ ಕಂದಾಯ ನಿರೀಕ್ಷಕ ಡಿ.ಟಿ. ದಯಾನಂದ್ ಎಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಸುಳ್ಯ, ಆ.21. ತಾಲೂಕಿನ ಪಂಜ ಹೋಬಳಿಯ ಕಂದಾಯ ನಿರೀಕ್ಷಕ ಡಿ.ಟಿ. ದಯಾನಂದರನ್ನು ಲಂಚ ತೆಗೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಪೊಲೀಸರು ಬಂಧಿಸಿದ ಘಟನೆ ಸೋಮವಾರ ಸಂಜೆ ಸುಳ್ಯದಲ್ಲಿ ನಡೆದಿದೆ. 94ಸಿ ಅರ್ಜಿಯ ಫಲಾನುಭವಿ ಮುರುಳ್ಯದ ಹರೀಶ್ ಕುಲಾಲ್ ರವರಿಂದ 8 ಸಾವಿರ ರೂ.ಗಳನ್ನು ಲಂಚದ ಬೇಡಿಕೆಯಿಟ್ಟ ಮೇರೆಗೆ ಹರೀಶ್ ರವರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಅದರಂತೆ ಇಂದು ಸಂಜೆ ಸುಳ್ಯದ ಸಂತೃಪ್ತಿ ಹೊಟೇಲಿನಲ್ಲಿ ಡಿ.ಟಿ. ದಯಾನಂದರು ಲಂಚ ಸ್ವೀಕರಿಸುತ್ತಿದ್ದಾಗ ದಾಳಿ

ಪಂಜ ಕಂದಾಯ ನಿರೀಕ್ಷಕ ಡಿ.ಟಿ. ದಯಾನಂದ್ ಎಸಿಬಿ ಬಲೆಗೆ Read More »

ಕರಾವಳಿ

ಮೊಟ್ಟೆ ಒಡೆದು, ನಿಂಬೆಹಣ್ಣು ಕುಯ್ದು ► ಸರ್ಕಾರಿ ಆಸ್ಪತ್ರೆಯಲ್ಲೇ ವಾಮಾಚಾರ

(ನ್ಯೂಸ್ ಕಡಬ) newskadaba.com ಮೈಸೂರು, ಆ .21, ಮೂರು ಕಡೆ ಕೂಡುವ ರಸ್ತೆಯಲ್ಲಿ, ಮನೆ ಹಾಗೂ ಕಚೇರಿ ಮುಂಭಾಗದ ರಸ್ತೆಗಳಲ್ಲಿ ವಾಮಾಚಾರ ಮಾಡುವುದನ್ನು ನೋಡಿದ್ದೇವೆ… ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಚೇರಿಯಲ್ಲಿ ವಾಮಾಚಾರ ನಡೆದಿರುವುದು ವೈದ್ಯರೂ ಸೇರಿದಂತೆ ಎಲ್ಲರಿಗೂ ಶಾಕ್ ನೀಡಿದೆ. ಇಂತಹದೊಂದು ಘಟನೆ ಮೈಸೂರಿನ ಕೆ.ಆರ್. ನಗರದಲ್ಲಿ ಸೋಮವಾರ ನಡೆದಿದೆ‌‌. ಕೆ.ಆರ್.ನಗರ ತಾಲೂಕಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೂಯ೯ಗ್ರಹಣ ಹಾಗೂ ಅಮವಾಸ್ಯೆ ಇರುವ ದಿನದಂದು ವಾಮಾಚಾರ ಮಾಡಿರುವುದರಿಂದ ಇಲ್ಲಿನ ಸಿಬ್ಬಂದಿ ಹಾಗೂ ವೈದ್ಯರು ಶಾಕ್ ಆಗಿದ್ದಾರೆ.

ಮೊಟ್ಟೆ ಒಡೆದು, ನಿಂಬೆಹಣ್ಣು ಕುಯ್ದು ► ಸರ್ಕಾರಿ ಆಸ್ಪತ್ರೆಯಲ್ಲೇ ವಾಮಾಚಾರ Read More »

ಕರ್ನಾಟಕ

ಮೊಬೈಲ್‍ ಆವಾಂತರ ► ಹಾಸ್ಟೆಲ್ ಮಹಡಿಯಿಂದ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಆ.21, ವಿದ್ಯಾರ್ಥಿನಿಯೊಬ್ಬಳು ಮೊಬೈಲ್‍ನಲ್ಲಿ ಮಾತನಾಡುತ್ತ ಹಾಸ್ಟೆಲ್ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಚಿತ್ರದುರ್ಗದ ಬಿಡಿ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಕೇರಳ ಮೂಲದವಳಾದ ಮೃದುಲಗ, ಚಿತ್ರದುರ್ಗದ ಬಿಡಿ ರಸ್ತೆಯಲ್ಲಿರುವ ಹಾಸ್ಟೆಲ್‍ನಲ್ಲಿದ್ದುಕೊಂಡು ಜೆಎಂಐಡಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಎಂದಿನಂತೆ ಆದಿತ್ಯವಾರ ರಾತ್ರಿ ಹಾಸ್ಟೆಲ್‍ನ 2ನೇ ಮಹಡಿಯಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊಬೈಲ್‍ ಆವಾಂತರ ► ಹಾಸ್ಟೆಲ್ ಮಹಡಿಯಿಂದ ಆಯತಪ್ಪಿ ಬಿದ್ದ ವಿದ್ಯಾರ್ಥಿನಿ Read More »

ಕರಾವಳಿ

ವರದಕ್ಷಿಣೆ ಕಿರುಕುಳ ► ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ…

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ .21, ಯಶವಂತಪುರದ ತ್ರಿವೇಣಿ ನಗರದಲ್ಲಿ ವರದಕ್ಷಿಣೆಗಾಗಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಹೆಬ್ಬಾಳದ ನಿವಾಸಿಗಳಾದ ಸುನಂದ ಮತ್ತು ಶಂಕರ್ ದಂಪತಿಯ ಮಗಳು ಚಂದ್ರಿಕಾ ಎಂಬಾಕೆಯನ್ನು ರಾಜೇಶ್ ಎಂಬಾತನ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ಆದಾಗಿನಿಂದಲೂ ರಾಜೇಶ್ ವರದಕ್ಷಿಣೆ ತರುವಂತೆ ಪತ್ನಿಗೆ ನಿತ್ಯವೂ ಚಿತ್ರ ಹಿಂಸೆ ನೀಡುತ್ತಿದ್ದನು. ಭಾನುವಾರ ರಾತ್ರಿಯು ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿ

ವರದಕ್ಷಿಣೆ ಕಿರುಕುಳ ► ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ… Read More »

ಕರ್ನಾಟಕ

ಕೊನೆಗೂ ಬರುತ್ತಿದೆ ಚಿತ್ರನಟ ಉಪೇಂದ್ರರ ಹೊಸ ರಾಜಕೀಯ ಪಕ್ಷ ► ಪಕ್ಷದ ಹೆಸರು ತಿಳಿಯುವ ಕುತೂಹಲವೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.21. ರಾಜ್ಯ ರಾಜಕಾರಣದ ಹೊಸ ಮುಖ, ಚಿತ್ರರಂಗದ ದಿಗ್ಗಜ ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷದ ಹೆಸರು ಕೊನೆಗೂ ಅಂತಿಮವಾಗಿದೆ. ಉಪೇಂದ್ರ ಅವರ ಪಕ್ಷದ ಹೆಸರು ಮಾಧ್ಯಮಗಳಲ್ಲಿ ಪ್ರಜಾಕಾರಣ, ಪ್ರಜಾಕೀಯ ಎಂದು ಬಿತ್ತರವಾಗಿತ್ತು. ಆದರೆ ಕೊನೆಗೆ ಪಕ್ಷದ ಹೆಸರು `ಉತ್ತಮ ಪ್ರಜಾ ಪಾರ್ಟಿ’ ಎಂದು ಅಂತಿಮಗೊಂಡಿದೆ ಎನ್ನಲಾಗಿದೆ. ಸದಸ್ಯತ್ವ ನೋಂದಣಿಯ ಅರ್ಜಿಯಲ್ಲಿ ಉಪೇಂದ್ರರ ನೂತನ ಪಕ್ಷದ ಹೆಸರು ಬಹಿರಂಗವಾಗಿದೆ. ಈಗಾಗಲೇ

ಕೊನೆಗೂ ಬರುತ್ತಿದೆ ಚಿತ್ರನಟ ಉಪೇಂದ್ರರ ಹೊಸ ರಾಜಕೀಯ ಪಕ್ಷ ► ಪಕ್ಷದ ಹೆಸರು ತಿಳಿಯುವ ಕುತೂಹಲವೇ…? Read More »

ಕರ್ನಾಟಕ

ಅಪರಿಚಿತ ವಾಹನ ಡಿಕ್ಕಿ ► ಅಮಾವಾಸ್ಯೆ ಪೂಜೆಗೆಂದು ಹೊರಟ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ಆ .21, ಅಮಾವಾಸ್ಯೆ ಪ್ರಯುಕ್ತ ಪೂಜೆ ಸಲ್ಲಿಸಲು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ಹೊರಟಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ, ಮದ್ದೂರು ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟವರನ್ನು ಮದ್ದೂರು ಪಟ್ಟಣದ ಶಿಕ್ಷಕರ ಬಡಾವಣೆಯ ನಿವಾಸಿಯಾದ ನಿವೃತ್ತ ಶಿಕ್ಷಕ ತಿಮ್ಮಯ್ಯ ಅವರ ಪತ್ನಿ (54) ಸುಧಾ ಎಂದು ಗುರುತಿಸಲಾಗಿದೆ. ಸುಧಾರವರು ಅಮವಾಸ್ಯೆ ಪೂಜೆ ಸಲ್ಲಿಸಲು ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಮದ್ದೂರಮ್ಮ ದೇವಾಲಯಕ್ಕೆ ಹೊರಟಿದ್ದರು. ಈ ವೇಳೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ

ಅಪರಿಚಿತ ವಾಹನ ಡಿಕ್ಕಿ ► ಅಮಾವಾಸ್ಯೆ ಪೂಜೆಗೆಂದು ಹೊರಟ ಮಹಿಳೆ ಮೃತ್ಯು Read More »

ಕರಾವಳಿ

ಕಾರಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್ ► ಅಪಾಯದಿಂದ ಪಾರಾದ ಕಾರು ಚಾಲಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ .21, ಚಲಿಸುತ್ತಿದ್ದ ಕಾರ್‍ಗೆ ಬಿಎಂಟಿಸಿ ಬಸ್ಸೊಂದು ಡಿಕ್ಕಿ ಹೊಡೆದುದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬೆಂಗಳೂರಿನ ನಾಯಂಡನಹಳ್ಳಿ ಜಂಕ್ಷನ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಮೈಸೂರು ರಸ್ತೆ ಕಡೆಗೆ ತೆರಳುತಿದ್ದ ಕಾರಿಗೆ ಬಿಎಂಟಿಸಿ ಬಸ್ ನಾಯಂಡನಹಳ್ಳಿ ಜಂಕ್ಷನ್ ಬಳಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದೆ. ಘಟನೆಯಿಂದಾಗಿ ಅದೃಷ್ಟವಶಾತ್ ಕಾರ್ ಚಾಲಕ ಕೀರ್ತಿ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್ ► ಅಪಾಯದಿಂದ ಪಾರಾದ ಕಾರು ಚಾಲಕ Read More »

ಕರ್ನಾಟಕ

ಇಂದು ಅತೀ ದೊಡ್ಡ ಸೂರ್ಯಗ್ರಹಣ ► ಇದರ ಎಫೆಕ್ಟ್ ಭಾರತದಲ್ಲಿ ಇದೆಯೇ..???

(ನ್ಯೂಸ್ ಕಡಬ) newskadaba.com ಕಡಬ, ಆ .21, ಸೌರಮಂಡಲದಲ್ಲಿ ಇಂದು ಶತಮಾನದ ಸೂರ್ಯ ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ಗತಿಸಿದ 2 ವಾರಗಳ ಅಂತರದಲ್ಲಿ ಸೂರ್ಯಗ್ರಹಣ ಸಂಭವಿಸ್ತಿರೋದು ವಿಜ್ಞಾನಿಗಳಿಗೆ ಹಬ್ಬವಾಗಿದೆ. ಅಮಾವಾಸ್ಯೆಗಳಂದು ಕಾಣುವ ಸೂರ್ಯಗ್ರಹಣವು ಈ ಹಿಂದೆ 1918ರಲ್ಲಿ ಖಗ್ರಾಸ್ ಆಗಿ ಇಡೀ ಅಮೆರಿಕದಾದ್ಯಂತ ಗೋಚರಿಸಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕದಲ್ಲಿ ಸೂರ್ಯನು ಹಗಲಲ್ಲೇ ಮರೆಯಾಗಲಿದ್ದಾನೆ. ಅಮೆರಿಕ, ಯುರೋಪ್ ಮತ್ತು ಆಫ್ರಿಕಾ ದೇಶಗಳಲ್ಲಿ ಈ ಅತಿದೊಡ್ಡ ಕೌತುಕ ಕಾಣಸಿಗಲಿದೆ. ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05ಕ್ಕೆ ಆರಂಭವಾಗುವ

ಇಂದು ಅತೀ ದೊಡ್ಡ ಸೂರ್ಯಗ್ರಹಣ ► ಇದರ ಎಫೆಕ್ಟ್ ಭಾರತದಲ್ಲಿ ಇದೆಯೇ..??? Read More »

ಕರಾವಳಿ

ನಾಳೆ ಬ್ಯಾಂಕ್ ಸಿಬ್ಬಂದಿಗಳ ಮುಷ್ಕರ ► ಯಾವೆಲ್ಲ ಬ್ಯಾಂಕುಗಳು ತೆರೆದಿರುತ್ತವೆ ಎಂದು ತಿಳಿಯಬೇಕೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.21. ಶುಕ್ರವಾರ ನಡೆದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್‍ಬಿಯು), ಭಾರತೀಯ ಬ್ಯಾಂಕ್‍ಗಳ ಒಕ್ಕೂಟ, ವಾಣಿಜ್ಯ ಸೇವಾ ಇಲಾಖೆ ಮತ್ತು ಮುಖ್ಯ ಕಾರ್ಮಿಕ ಆಯುಕ್ತರ ಸಭೆಯು ವಿಫಲವಾಗಿದ್ದರಿಂದ ಮಂಗಳವಾರದಂದು ಸಾರ್ವಜನಿಕ ರಂಗದ ರಾಷ್ಟ್ರೀಕೃತ ಬ್ಯಾಂಕ್‍ಗಳ ಬಂದ್ ಗೆ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ (ಎಐಬಿಒಸಿ) ಕಾರ್ಯದರ್ಶಿ ಡಿ. ಥಾಮಸ್ ಫ್ರಾಂಕೋ ರಾಜೇಂದ್ರ ದೇವ್ ಕರೆ ನೀಡಿದ್ದಾರೆ. ಸರಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಮತ್ತು ಖಾಸಗಿ ಬ್ಯಾಂಕ್‍ಗಳನ್ನು ಸದ್ಯ ವಿಲೀನಗೊಳಿಸಲು ಸಾಧ್ಯವಿಲ್ಲ.

ನಾಳೆ ಬ್ಯಾಂಕ್ ಸಿಬ್ಬಂದಿಗಳ ಮುಷ್ಕರ ► ಯಾವೆಲ್ಲ ಬ್ಯಾಂಕುಗಳು ತೆರೆದಿರುತ್ತವೆ ಎಂದು ತಿಳಿಯಬೇಕೇ..? Read More »

ರಾಷ್ಟ್ರೀಯ ನ್ಯೂಸ್
Scroll to Top