ಸೋಲಾರ್ ಕಾರ್ ► ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಹೊಸ ಆವಿಷ್ಕಾರ..!!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.18,  ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಮುಂದಿನ ದಿನಗಳಲ್ಲಿ ಬೇಕಾದಷ್ಟು ಪೆಟ್ರೋಲ್ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ಎಲ್ಲದಕ್ಕೂ ಪರ್ಯಾಯ ಹುಡುಕುವ ಕಾಲ ಬಂದಿದೆ. ಹೀಗಿರುವಾಗ ಉಚಿತವಾಗಿ ಸಿಗುವ ಸೂರ್ಯ ಶಕ್ತಿಯತ್ತ ಎಲ್ಲರೂ ಮುಖ ಮಾಡುತ್ತಿದ್ದು, ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೋಲಾರ್ ಕಾರನ್ನು ತಯಾರು ಮಾಡಿದ್ದಾರೆ. ನಾಲ್ಕು ಮಂದಿ ಆರಾಮವಾಗಿ ಓಡಾಡಬಹುದಾದ ಈ ಕಾರು ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಓಡುತ್ತೆದೆ. ಕಾರಿನ ಮೇಲೆ, ಮುಂದೆ-ಹಿಂಭಾಗ ಸೋಲಾರ್ ಪ್ಯಾನಲ್ ಜೋಡಿಸಿದ್ದಾರೆ. ಕಾರಿನ ಒಳಗೆ […]

ಸೋಲಾರ್ ಕಾರ್ ► ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಹೊಸ ಆವಿಷ್ಕಾರ..!! Read More »

ಕರಾವಳಿ

ಅಡುಗೆ ಮಾಹಿತಿ ► ಅವಲಕ್ಕಿ ಪಾಯಸ ಮಾಡುವ ವಿಧಾ‌ನ

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ,‌ ಸೆ.18. ನಾಲಿಗೆಗೆ ತುಂಬಾ ರುಚಿ ನೀಡುವ ಅವಲಕ್ಕಿಯಿಂದ ಪಾಯಸ ಮಾಡಿದ್ರೆ ಹೇಗೆ ಎಂದು ಗೊತ್ತಿದೆಯೇ….? ಅವಲಕ್ಕಿ ಪಾಯಸ ಮಾಡೋ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ಅವಲಕ್ಕಿ- 1/2 ಕಪ್ ಸಬ್ಬಕ್ಕಿ- 1/4 ಕಪ್ ಬೆಲ್ಲ- 1/2 ಕಪ್ ಹಾಲು- 1/2 ಕಪ್ ನೀರು- 1 ಅಥವಾ 1/2 ಕಪ್ ತುಪ್ಪ- 1 ಚಮಚ ಏಲಕ್ಕಿ ಪುಡಿ- ಸ್ವಲ್ಪ ಗೋಡಂಬಿ- 5 ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಬೆಲ್ಲವನ್ನು

ಅಡುಗೆ ಮಾಹಿತಿ ► ಅವಲಕ್ಕಿ ಪಾಯಸ ಮಾಡುವ ವಿಧಾ‌ನ Read More »

ಅಡುಗೆ

► ‘ನ್ಯೂಸ್ ಕಡಬ’ ಮೊಬೈಲ್ ಅಪ್ಲಿಕೇಶನ್ ಅನಾವರಣ

(ನ್ಯೂಸ್ ಕಡಬ) newskadaba.com ಕಡಬ, ಸೆ.18. ಸ್ಥಳೀಯ ಸುದ್ದಿಗಳ ಜಾಲತಾಣ ‘ನ್ಯೂಸ್ ಕಡಬ’ ಹೊರತಂದಿರುವ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನನ್ನು ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಸ್. ಬಾಲಕೃಷ್ಣ ಕೊಯಿಲ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ್ ಎನ್.ಕೆ., ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ವಿಜಯ ಕುಮಾರ್, ಪ್ರವೀಣ್ ರಾಜ್ ಕೊಯಿಲ, ಖಾದರ್ ಸಾಹೇಬ್ ಕಲ್ಲುಗುಡ್ಡೆ, ಸುದ್ದಿ ಬಿಡುಗಡೆ ಪ್ರತಿನಿಧಿ ಉದಯ ಕುಮಾರ್, ನ್ಯೂಸ್ ಕಡಬ ಸುದ್ದಿ ಸಂಸ್ಥೆಯ ನಿರ್ದೇಶಕರಾದ ಮಹಮ್ಮದ್

► ‘ನ್ಯೂಸ್ ಕಡಬ’ ಮೊಬೈಲ್ ಅಪ್ಲಿಕೇಶನ್ ಅನಾವರಣ Read More »

ಕರಾವಳಿ

ಬಡಗನ್ನೂರಿನ ಅಪಘಾತದ ಗಾಯಾಳು ವಿಧಿವಶ ► ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಹನುಮಂತಪ್ಪ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.18. ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ತೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. 2008ರಲ್ಲಿ ಡಿಎಆರ್ ಗೆ ಸೇರಿ ತದನಂತರ ನಾಗರಿಕ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಹನುಮಂತಪ್ಪ ಇತ್ತೀಚೆಗೆ ಬಡಗನ್ನೂರಿನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ನಿಧನರಾದರು.

ಬಡಗನ್ನೂರಿನ ಅಪಘಾತದ ಗಾಯಾಳು ವಿಧಿವಶ ► ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಹನುಮಂತಪ್ಪ ಮೃತ್ಯು Read More »

ಕರಾವಳಿ

ಭಾರತ – ಆಸ್ಟ್ರೇಲಿಯಾ ಏಕದಿನ ಸರಣಿ ► ಭಾರತಕ್ಕೆ 26 ರನ್‌ಗಳ ಜಯ

(ನ್ಯೂಸ್ ಕಡಬ) newskadaba.com ಚೆನ್ನೈ, ‌ಸೆ.18. ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಐದು ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 26 ರನ್ ಜಯಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 281 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡೆ ಶೂನ್ಯಕ್ಕೆ ಔಟಾದರೆ, ಅಜಿಂಕ್ಯ ರಹಾನೆ ಕೇವಲ 5 ರನ್ ಗಳಿಸಿದರು. ಧೋನಿ (79)

ಭಾರತ – ಆಸ್ಟ್ರೇಲಿಯಾ ಏಕದಿನ ಸರಣಿ ► ಭಾರತಕ್ಕೆ 26 ರನ್‌ಗಳ ಜಯ Read More »

ಕ್ರೀಡಾ ನ್ಯೂಸ್

ಪಣಂಬೂರು: ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು

(ನ್ಯೂಸ್ ಕಡಬ) newskadaba.com ಮಂಗಳೂರು‌, ಸೆ.17. ರಜೆಯ ಮಜಾ ಸವಿಯಲೆಂದು ಬಂದು ಸ್ನಾನಕ್ಕಿಳಿದ ಯುವಕನೋರ್ವ ಸಮುದ್ರಪಾಲಾದ ಘಟನೆ ಪಣಂಬೂರು ಮೀನಕಳಿಯ ಎಂಬಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ. ಆಂಧ್ರ ಪ್ರದೇಶದ ಮೂಲದ ಸಾಯಿಚರಣ್ (19) ಮೃತ ಯುವಕ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ ಸಾಯಿಚರಣ್ ತನ್ನ ನಾಲ್ಕು ಮಂದಿ ಗೆಳೆಯರೊಂದಿಗೆ ರಜೆ ಕಳೆಯಲು ಬಂದಿದ್ದ. ಮಡಿಕೇರಿಗೆ ತೆರಳಿ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯುವಕನ ಶವ ಪತ್ತೆಗೆ ಸಮುದ್ರದ ಅಲೆಗಳ ಹೊಡೆತ ಅಡ್ಡಿಯಾಗಿದ್ದು,

ಪಣಂಬೂರು: ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು Read More »

ಕರಾವಳಿ

ಕಾರವಾರ: ಸ್ನಾನ ಮಾಡುತ್ತಿದ್ದ ಆರು ಜನ ನೀರುಪಾಲು

(ನ್ಯೂಸ್ ಕಡಬ) newskadaba.com ಕಾರವಾರ, ಸೆ.17. ಗೋವಾದಿಂದ ಪ್ರವಾಸಕ್ಕೆಂದು ಬಂದಿದ್ದ ಆರು ಮಂದಿ ಪ್ರವಾಸಿಗರು ಜಲಪಾತದಲ್ಲಿ ಈಜುವ ವೇಳೆ ನೀರಿನ ರಭಸಕ್ಕೆ ನೀರುಪಾಲಾದ ಘಟನೆ ಕಾರವಾರ ತಾಲೂಕಿನ ಚೆಂಡಿಯಾ ಎಂಬಲ್ಲಿ ರವಿವಾರದಂದು ನಡೆದಿದೆ. ನಾಗರ ಮಡಿ ಜಲಪಾತಕ್ಕೆ ಪ್ರವಾಸಕ್ಕೆಂದು ಗೋವಾದ ವಾಸ್ಕೊದಿಂದ ಹಾಗೂ ಮಡಗಾಂವನಿಂದ ಆಗಮಿಸಿದ್ದ ಫ್ರಾನ್ಸಿಲಾ ಪೀರಿಸ್(21), ಫಿಯೋನಾ ಪಾಚಗೋ(26), ಮಸ್ರಿಲ್ಲಿನಾ ಮೆಕ್ಸಿಕ್ಸಾ(26), ರೇಣುಕಾ(23), ಸಿದ್ದು ಚೇರಿ(21) ಹಾಗೂ ಸಮೀರ ಗಾವಡೆ(23) ನೀರುಪಾಲಾಗಿದ್ದು, ಅದರಲ್ಲಿ ಫ್ರಾನ್ಸಿಲಾ ಪೀರಿಸ್(21), ಫಿಯೋನಾ ಪಾಚಗೋ(26) ಎಂಬವರ ಮೃತದೇಹ ಪತ್ತೆಯಾಗಿದೆ. ಉಳಿದ ಮೃತದೇಹಕ್ಕಾಗಿ

ಕಾರವಾರ: ಸ್ನಾನ ಮಾಡುತ್ತಿದ್ದ ಆರು ಜನ ನೀರುಪಾಲು Read More »

ರಾಷ್ಟ್ರೀಯ ನ್ಯೂಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.17. ಸೂಟ್‌ಕೇಸ್ ಇಲ್ಲದೆ ವಿಶ್ವವಿದ್ಯಾಲಯದ ಕೆಲಸಗಳಾಗುವುದಿಲ್ಲ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾಘಂಟಿ ಹೇಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಬ್ಬರು ಸಚಿವರ ವಿರುದ್ಧ ಭ್ರಷ್ಟ್ರಾಚಾರ ನಿಗ್ರಹ ದಳದಲ್ಲಿ (ಎಸಿಬಿ) ದೂರು ದಾಖಲಾಗಿದೆ. ಈ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆಯ ಅಧ್ಯಕ್ಷ ಎಚ್.ಬಿ. ನಾಗೇಶ್ ಎಂಬವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಮೇಶ್ ಕುಮಾರ್ ಮತ್ತು ಬಸವರಾಜ ರಾಯರೆಡ್ಡಿ ವಿರುದ್ಧ ಎಸಿಬಿಗೆ ದೂರು ನೀಡಿದ್ದಾರೆ. ಮಲ್ಲಿಕಾಘಂಟಿ ಅವರ ಹೇಳಿಕೆಯು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ವಿಶ್ವವಿದ್ಯಾಲಯದ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು Read More »

ಕರ್ನಾಟಕ

► ಇಂದಿನಿಂದ ಭಾರತ – ಆಸ್ಟ್ರೇಲಿಯಾ ಏಕದಿನ ಸರಣಿ

(ನ್ಯೂಸ್ ಕಡಬ) newskadaba.com ಚೆನ್ನೈ, ಸೆ.17. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾಕ್ಕೆ ಇದೀಗ ಆಸ್ಟ್ರೇಲಿಯ ವಿರುದ್ಧ ಸವಾಲು ಎದುರಾಗಿದ್ದು, ಐದು ಪಂದ್ಯಗಳ ಸರಣಿಯ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಚೆನ್ನೈನಲ್ಲಿ ರವಿವಾರ ನಡೆಯಲಿದೆ. ಈ ಸರಣಿಯು ಉಭಯ ತಂಡಗಳಿಗೂ ಐಸಿಸಿ ರ್ಯಾಂಕಿಂಗ್ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ಕಳೆದ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪ್ರವಾಸಿ ಭಾರತದ ವಿರುದ್ಧ ಆಸ್ಟ್ರೇಲಿಯ 4-1

► ಇಂದಿನಿಂದ ಭಾರತ – ಆಸ್ಟ್ರೇಲಿಯಾ ಏಕದಿನ ಸರಣಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ಕಲ್ಲುಗುಡ್ಡೆ: ತೀವ್ರ ವಿರೋಧದ ನಡುವೆಯೂ ಆರಂಭಗೊಂಡ ವೈನ್ ಶಾಪ್ ► ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ

(ನ್ಯೂಸ್ ಕಡಬ) newskadaba.com ಕಡಬ, ಸೆ.16. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಸರಕಾರಿ ಜಮೀನಿನಲ್ಲಿರುವ ಕಟ್ಟಡದಲ್ಲಿ ಗ್ರಾಮಸ್ಥರ ಪ್ರಬಲ ವಿರೋಧದ ನಡುವೆಯೂ ಕಳೆದ ಸೋಮವಾರದಂದು ಪ್ರಾರಂಭಗೊಂಡ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಸೆಪ್ಟೆಂಬರ್ 17 ಭಾನುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಲಿತ ಸಂಘಟನೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಗ್ರಾಮಸ್ಥರ ತೀವ್ರ ವಿರೋಧವನ್ನು ಗ್ರಾಮಸಭೆಯಲ್ಲಿ ನಿರ್ಣಯಿಸಿ ಕಳುಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ

ಕಲ್ಲುಗುಡ್ಡೆ: ತೀವ್ರ ವಿರೋಧದ ನಡುವೆಯೂ ಆರಂಭಗೊಂಡ ವೈನ್ ಶಾಪ್ ► ಮದ್ಯದಂಗಡಿ ಮುಚ್ಚುವಂತೆ ಆಗ್ರಹಿಸಿ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ Read More »

ಕರಾವಳಿ
Scroll to Top