ಚಿನ್ನದ ದರದಲ್ಲಿ ಇಳಿಕೆ

(ನ್ಯೂಸ್‌ ಕಡಬ) newskadaba.com,  ಅ.23: ಭಾರತದಲ್ಲಿ ಕಳೆದ ಆರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬರುತ್ತಿದೆ. ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ 8 ಸಾವಿರ ರೂ.ಗೂ ಅಧಿಕ ಕಡಿಮೆಯಾಗಿದೆ. ಕಳೆದ ಆರು ದಿನಗಳಲ್ಲಿ 7,050 ರೂ.ವರಗೆ ದರ ಇಳಿಕೆಯಾಗಿದೆ. ಚಿನ್ನದ ಬೆಲೆ ನಗರದಿಂದ ನಗರಕ್ಕೆ ಬದಲಾಗುತ್ತಿರುತ್ತದೆ. ಹಾಗೆಯೇ 22, 24 ಮತ್ತು 18 ಕ್ಯಾರಟ್ ಚಿನ್ನದ ಬೆಲೆಯಲ್ಲಿಯೂ ವ್ಯತ್ಯಾಸವಿರುತ್ತದೆ. ಇಂದು ಚಿನ್ನದ ಜೊತೆ ಬೆಳ್ಳಿ ದರವೂ ಗಣನೀಯವಾಗಿ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ […]

ಚಿನ್ನದ ದರದಲ್ಲಿ ಇಳಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ಹವಮಾನ ವರದಿ: ರಾಜ್ಯದಲ್ಲಿ ಇನ್ನೂ 5 ದಿನಗಳ ಮಳೆ ಮುಂದುವರಿಕೆ

(ನ್ಯೂಸ್‌ ಕಡಬ) newskadaba.com,  ಅ.23: ಈಶಾನ್ಯ ಹಿಂಗಾರು ಕ್ರಿಯಾಶೀಲವಾಗಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ, ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಮೇಲೈ ಸುಳಿಗಾಳಿಯ ಪರಿಣಾಮದಿಂದ ಹಿಂಗಾರು ಮಳೆ ಚೇತರಿಕೆ ಕಂಡಿದೆ. ಇದರಿಂದ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದ ಹಲವೆಡೆ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಲವೆಡೆ

ಇಂದಿನ ಹವಮಾನ ವರದಿ: ರಾಜ್ಯದಲ್ಲಿ ಇನ್ನೂ 5 ದಿನಗಳ ಮಳೆ ಮುಂದುವರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ : ಶಬರಿಮಲೆ ಮಾಜಿ ಆಡಳಿತಾಧಿಕಾರಿ ಎಸ್ಐಟಿ ವಶಕ್ಕೆ

(ನ್ಯೂಸ್‌ ಕಡಬ) newskadaba.com,  ಅ.23: ಶಬರಿಮಲೆ ದೇವಸ್ಥಾನದಿಂದ ಕಾಣೆಯಾದ ಚಿನ್ನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಇಂದು ಮಾಜಿ ಆಡಳಿತ ಅಧಿಕಾರಿ ಬಿ ಮುರಾರಿ ಬಾಬು ಅವರನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ. ಚಿನ್ನ ನಾಪತ್ತೆ ಪ್ರಕರಣದ ನಂತರ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯಿಂದ ಅಮಾನತುಗೊಂಡಿದ್ದ ಬಾಬು ಅವರನ್ನು ತಡರಾತ್ರಿ ಚಂಗನಶ್ಶೇರಿಯಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.ನಂತರ ಅವರನ್ನು ವಿಚಾರಣೆಗಾಗಿ ತಿರುವನಂತಪುರಂನಲ್ಲಿರುವ ಅಪರಾಧ ಶಾಖೆಯ ಕಚೇರಿಗೆ ಸ್ಥಳಾಂತರಿಸಲಾಯಿತು

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ : ಶಬರಿಮಲೆ ಮಾಜಿ ಆಡಳಿತಾಧಿಕಾರಿ ಎಸ್ಐಟಿ ವಶಕ್ಕೆ Read More »

ಬ್ರೇಕಿಂಗ್ ನ್ಯೂಸ್

ಹಾಸನ: ದಾಖಲೆ ನಿರ್ಮಾಣದೊಂದಿಗೆ ಹಾಸನಾಂಬೆ ಜಾತ್ರಾಮಹೋತ್ಸವ ಸಂಪನ್ನ

(ನ್ಯೂಸ್‌ ಕಡಬ) newskadaba.com,  ಅ.23: ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ವಾರ್ಷಿಕ ಜಾತ್ರಾಮಹೋತ್ಸವ ಈ ಬಾರಿ ಅಭೂತಪೂರ್ವ ಭಕ್ತರ ನಿರೀಕ್ಷೆಯೊಂದಿಗೆ ಇಂದು ಯಶಸ್ವಿಯಾಗಿ ಸಂಪನ್ನವಾಗಿದೆ. ಅಕ್ಟೋಬರ್ 10ರಿಂದ ಆರಂಭವಾದ ದರ್ಶನೋತ್ಸವದಲ್ಲಿ ಈವರೆಗೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 24 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಕ್ಟೋಬರ್ 22, ಅಂದರೆ ಇಂದು, ಜಾತ್ರೆಯ ಕೊನೆಯ ದಿನವಾಗಿದ್ದರಿಂದ ಮುಂಜಾನೆ 6 ಗಂಟೆಯಿಂದಲೇ ಭಕ್ತರ ದಂಡೆ ಹರಿದುಬಂದಿದ್ದು, ದೇವಾಲಯದ ಸುತ್ತಮುತ್ತ ಭಕ್ತರ ಬೃಹತ್ ಸಮುದಾಯ ಕಂಡುಬಂದಿತು. ಈ ವರ್ಷ

ಹಾಸನ: ದಾಖಲೆ ನಿರ್ಮಾಣದೊಂದಿಗೆ ಹಾಸನಾಂಬೆ ಜಾತ್ರಾಮಹೋತ್ಸವ ಸಂಪನ್ನ Read More »

ಕರ್ನಾಟಕ

ಕಿರಾಣಿ ಅಂಗಡಿಗೆ ಬೆಂಕಿ – 40 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮ

(ನ್ಯೂಸ್‌ ಕಡಬ) newskadaba.com,  ಅ.23: ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ. ಶ್ರೀನಿವಾಸ ಎಂಬವರಿಗೆ ಸೇರಿದ ಹೊಲ್‌ಸೇಲ್ ಕಿರಾಣಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಂದಾಜು ರೂ. 40 ಲಕ್ಷಕ್ಕೂ ಅಧಿಕ ಮೌಲ್ಯದ ದಿನಸಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಅಂಗಡಿಯೊಳಗೆ ಸಂಗ್ರಹಿಸಿಡಲಾಗಿದ್ದ ಎಲ್ಲಾ ಸಾಮಾಗ್ರಿಗಳು ಕೆಲವೇ ನಿಮಿಷಗಳಲ್ಲಿ ಬೆಂಕಿಗಾಹುತಿಯಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು ಎನ್ನಲಾಗಿದೆ.

ಕಿರಾಣಿ ಅಂಗಡಿಗೆ ಬೆಂಕಿ – 40 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮ Read More »

ಬ್ರೇಕಿಂಗ್ ನ್ಯೂಸ್

ಅಕ್ಟೋಬರ್ 24ಕ್ಕೆ ದಿಲ್ ಮಾರ್ ಚಲನಚಿತ್ರ ಬಿಡುಗಡೆ

(ನ್ಯೂಸ್‌ ಕಡಬ) newskadaba.com,  ಅ.21 ಶಿರಾ: ಶಿರಾ ತಾಲೂಕಿನ ಬರಪೀಡಿತ ಪ್ರದೇಶದಲ್ಲಿ ಹುಟ್ಟಿ ಬೆಳೆದು ಸಿನಿಮಾರಂಗದಲ್ಲಿ ಆಸಕ್ತಿ ಹೊಂದಿ ಏನಾದರೂ ಸಾಧಿಸಬೇಕೆಂದು ಪಣತೊಟ್ಟು ದಿಲ್‌ಮಾರ್ ಎಂಬ ಚಲನಚಿತ್ರದಲ್ಲಿ ತಾಲೂಕಿನ ಮಾನಂಗಿ ಗ್ರಾಮದ ರಾಮ್ ಗೌಡ ಅವರು ನಟಿಸಿದ್ದು, ಚಲನಚಿತ್ರವು ಅ.24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಎಲ್ಲರೂ ಚಲನಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ರಾಜ್ಯ ಜೆಡಿಎಸ್ ಪರಿಷತ್ ಅಧ್ಯಕ್ಷ ಆರ್.ಉಗ್ರೇಶ್ ಹೇಳಿದರು. ಅವರು ನಗರದ ಶ್ರೀ ದುರ್ಗಮ್ಮ ದೇವಾಲಯದ ಆವರಣದಲ್ಲಿ ನಡೆದ ದಿಲ್ ಮಾರ್ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ

ಅಕ್ಟೋಬರ್ 24ಕ್ಕೆ ದಿಲ್ ಮಾರ್ ಚಲನಚಿತ್ರ ಬಿಡುಗಡೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ

ಅ. 25 ರಂದು ದುಬೈ ಗಡಿನಾಡ ಉತ್ಸವ , ಗಡಿನಾಡ ರತ್ನ ಪ್ರಶಸ್ತಿ ಪ್ರದಾನ

(ನ್ಯೂಸ್‌ ಕಡಬ) newskadaba.com,  ಅ.21 ದುಬೈ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ “ಗಡಿನಾಡ ಉತ್ಸವ -2025” ಕಾರ್ಯಕ್ರಮವು ನಗರದ ಊದು ಮೇಥಾದ ಗ್ಲೆಂಡೇಲ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಅಕ್ಟೋಬರ್ 25 ರಂದು ಸಂಜೆ ನಾಲ್ಕರಿಂದ ರಾತ್ರಿ ಹನ್ನೊಂದರ ವರೆಗೆ ನಡೆಯಲಿದೆ. ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಾಧಕರಿಗೆ ಗೌರವ ಸನ್ಮಾನ ನಂತರ ಯುಎಇಯ ಪ್ರಸಿದ್ಧ ನೃತ್ಯ ತಂಡದವರಿಂದ ನೃತ್ಯ ವೈಭವ,ಗಾಯಕ ಗಾಯಕಿಯರಿಂದ ಸಂಗೀತ

ಅ. 25 ರಂದು ದುಬೈ ಗಡಿನಾಡ ಉತ್ಸವ , ಗಡಿನಾಡ ರತ್ನ ಪ್ರಶಸ್ತಿ ಪ್ರದಾನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹುಣಸೂರು: ಮನೆ ಸಾಲ ತೀರಿಸಲು ಆಗದೆ ಸೈನಿಕ ನೇಣುಬಿಗಿದು ದುರಂತ ಸಾವು

(ನ್ಯೂಸ್‌ ಕಡಬ) newskadaba.com,  ಅ.21 ಹುಣಸೂರು : ಮನೆ ಕಟ್ಟಲು ಮಾಡಿಕೊಂಡಿದ್ದ ಸಾಲದ ತೀರಿಸಲಾಗದೆ ಭಾರತೀಯ ಭೂಸೇನೆಯ ಸೈನಿಕರೊಬ್ಬರು ಆತ್ಮ೧ಹತ್ಯೆ ಮಾಡಿಕೊಂಡ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಕನಸಿನ ಮನೆ ನಿರ್ಮಾಣಕ್ಕೆ ಮೈತುಂಬಾ ಸಾಲ: ಮೃತರನ್ನು ಎಂ. ಚಂದ್ರಶೇಖರ್‌ (35) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಪ್ಯಾರಾಚೂಟ್‌ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಹುಣಸೂರಿನ ಹೊಸ ಬಡಾವಣೆಯಲ್ಲಿ ಚಂದ್ರಶೇಖರ್‌ ಅವರು ಕನಸಿನ ಮನೆ ನಿರ್ಮಿಸಿದ್ದರು. ಈ ಯೋಜನೆಗಾಗಿ ಬ್ಯಾಂಕ್‌ ಮತ್ತು

ಹುಣಸೂರು: ಮನೆ ಸಾಲ ತೀರಿಸಲು ಆಗದೆ ಸೈನಿಕ ನೇಣುಬಿಗಿದು ದುರಂತ ಸಾವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ

(ನ್ಯೂಸ್‌ ಕಡಬ) newskadaba.com,  ಅ.21 ದೀಪಾವಳಿ ಹಬ್ಬಕ್ಕೆಂದು ಚಿನ್ನ ಖರೀದಿಸಲು ಆಲೋಚಿಸಿದವರಿಗೆ ಇಂದು ಶಾಕ್‌ ಎದುರಾಗಿದೆ. ಕಳೆದೆರಡು ದಿನಗಳಿಂದ ಕೊಂಚ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಎಂದು ಮತ್ತೆ ಏರಿಕೆ ಕಂಡಿದೆ. ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 190 ರೂ. ಏರಿಕೆ ಕಂಡು ಬಂದಿದ್ದು, 12,170 ರೂ. ಗೆ ತಲುಪಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 208 ರೂ. ಏರಿಕೆಯಾಗಿ, 13,277 ರೂ ಆಗಿದೆ. 22 ಕ್ಯಾರಟ್‌ನ 8 ಗ್ರಾಂ

ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಲಂಕಾರಿಕ ದೀಪಗಳನ್ನು ಸರಿಪಡಿಸುವಾಗ ವಿದ್ಯುತ್ ಅವಘಡ – ವ್ಯಕ್ತಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಅ.21 ಕಾಸರಗೋಡು: ಸೀತಾಂಗೋಳಿ ಬಳಿಯ ಪುತ್ತಿಗೆಯಲ್ಲಿ ಸೋಮವಾರ ರಾತ್ರಿ ವಿದ್ಯುತ್ ಅವಘಡದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಪುತ್ತಿಗೆಯ ಆಚಾರಿಮೂಲೆ ನಿವಾಸಿ ರಾಜೇಶ್ ಆಚಾರ್ಯ (37) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ದೀಪಾವಳಿ ಆಚರಣೆಗಾಗಿ ರಾಜೇಶ್ ತಮ್ಮ ಮನೆಯ ಅಂಗಳದಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಲ್ಪಟ್ಟರು. ಕುಟುಂಬ ಸದಸ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ರಾಜೇಶ್ ವೃತ್ತಿಯಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಮೃತದೇಹವನ್ನು ಕಾಸರಗೋಡು

ಅಲಂಕಾರಿಕ ದೀಪಗಳನ್ನು ಸರಿಪಡಿಸುವಾಗ ವಿದ್ಯುತ್ ಅವಘಡ – ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top