ಬೆಳ್ತಂಗಡಿ: ರಿಕ್ಷಾ – ಪಿಕಪ್ ಢಿಕ್ಕಿ ► ಎಲ್.ಕೆ.ಜಿ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.22. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ರಿಕ್ಷಾ ಮತ್ತು ಪಿಕಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ LKG ವಿದ್ಯಾರ್ಥಿ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಬಾರ್ಯ ಎಂಬಲ್ಲಿ ಬುಧವಾರದಂದು ನಡೆದಿದೆ. ಮೃತ ವಿದ್ಯಾರ್ಥಿಯನ್ನು ಬಾರ್ಯ ಗ್ರಾಮದ ಮುದ್ದಡ್ಕ ಮದೀನತ್ತುಲ್ ಮುನವ್ವರ ಆಂಗ್ಲ ಮಾಧ್ಯಮ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿ ಮಹಮ್ಮದ್ ಸನದ್ ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಉಳಿದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ […]

ಬೆಳ್ತಂಗಡಿ: ರಿಕ್ಷಾ – ಪಿಕಪ್ ಢಿಕ್ಕಿ ► ಎಲ್.ಕೆ.ಜಿ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

‘ಅಮ್ಮ ಉತ್ತಮ, ಇಂದಿರಾ ಅತ್ಯುತ್ತಮ’ ► ಇಂದಿರಾ ಕ್ಯಾಂಟೀನ್ ಗೆ ಬ್ರಿಟಿಷ್ ಸುದ್ದಿವಾಹಿನಿ BBC ಯಿಂದ ಶಹಬ್ಬಾಸ್ ಗಿರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.22. ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಜನಪ್ರಿಯವಾಗುತ್ತಾ ಇರುವಾಗಲೇ ಇಂದಿರಾ ಕ್ಯಾಂಟೀನ್ ಬಗ್ಗೆ ಇನ್ನೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಬಡವರ ಹಸಿವು ನೀಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ‘ಇಂದಿರಾ ಕ್ಯಾಂಟೀನ್​​’ ಕಾರ್ಯಕ್ಕೆ ಬ್ರಿಟಿಷ್ ಸುದ್ದಿವಾಹಿನಿ ಬಿಬಿಸಿ ಶಹಭಾಷ್ ಅಂದಿದೆ. ಬಿಬಿಸಿ ವರದಿಗಾರ್ತಿಯಾಗಿರುವ ಗೀತಾ ಪಾಂಡೆ ಅವರು ಬೆಂಗಳೂರಿಗೆ ಆಗಮಿಸಿ ಈ ಹಿಂದೆ ತಮಿಳುನಾಡಿನ ಅಮ್ಮ ಕ್ಯಾಂಟೀನ್ ನಲ್ಲೂ ಊಟ ಮಾಡಿದ ಅನುಭವ ಉಲ್ಲೇಖಿಸಿ ಅಮ್ಮ ಕ್ಯಾಂಟೀನ್ ಉತ್ತಮ, ಇಂದಿರಾ ಕ್ಯಾಂಟೀನ್ ಅತ್ಯುತ್ತಮ ಎಂದು

‘ಅಮ್ಮ ಉತ್ತಮ, ಇಂದಿರಾ ಅತ್ಯುತ್ತಮ’ ► ಇಂದಿರಾ ಕ್ಯಾಂಟೀನ್ ಗೆ ಬ್ರಿಟಿಷ್ ಸುದ್ದಿವಾಹಿನಿ BBC ಯಿಂದ ಶಹಬ್ಬಾಸ್ ಗಿರಿ Read More »

ಕರ್ನಾಟಕ

ಟಿಪ್ಪರ್ ನ ಚಕ್ರಕ್ಕೆ ಸಿಲುಕಿ ಮಗುವಿನ ತಲೆಗೆ ಬಡಿದ ಕಲ್ಲು ► ಒಂದು ವರ್ಷದ ಮಗು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕಾರವಾರ, ನ.22. ಟಿಪ್ಪರ್ ನ ಚಕ್ರ ಸಿಲುಕಿ ಹಾರಿದ ಕಲ್ಲೊಂದು ರಸ್ತೆ ಬದಿಯಲ್ಲಿ ಮಲಗಿಸಿದ್ದ ಮಗುವಿನ ತಲೆಗೆ ಹೊಡೆದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಗಳವಾರದಂದು ಕಾರವಾರದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಸಾತೊಡ್ಡಿ ಜಲಪಾತಕ್ಕೆ ಹೋಗುವ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೆ ಕೂಲಿಯಾಳಾಗಿ ಬಂದಿದ್ದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ನರೇಗಲ್ ನಿವಾಸಿ ಮಂಜಮ್ಮ ಹರಿಜನ ಎಂಬಾಕೆ ತನ್ನ ಒಂದು ವರ್ಷದ ಮಗು ಅರ್ಪಿತಾಳನ್ನು

ಟಿಪ್ಪರ್ ನ ಚಕ್ರಕ್ಕೆ ಸಿಲುಕಿ ಮಗುವಿನ ತಲೆಗೆ ಬಡಿದ ಕಲ್ಲು ► ಒಂದು ವರ್ಷದ ಮಗು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ನವಂಬರ್ 24 ಉಡುಪಿಯಲ್ಲಿ ಹಿಂದೂ ಧರ್ಮ ಸಂಸತ್ ಅಧಿವೇಶನ ► ಕಡಬದಲ್ಲಿ ಸಮಾಲೋಚನಾ ಸಭೆ ಹಾಗೂ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ನ.22. ಉಡುಪಿಯಲ್ಲಿ ನವಂಬರ್ 24 ರಿಂದ 26 ರವರೆಗೆ ನಡೆಯಲಿರುವ ಹಿಂದೂ ಧರ್ಮ ಸಂಸತ್ ಅಧಿವೇಶನ ಮತ್ತು ಹಿಂದೂ ಸಮಜೋತ್ಸವದ ಆಮಂತ್ರಣ ಪತ್ರಿಕೆ ಹಾಗೂ ವಾಹನ,  ಅಂಗಡಿಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ ಕಡಬ ಪೇಟೆಯಲ್ಲಿ ನಡೆಯಿತು. ಹಿಂಜಾವೇ  ಮಂಗಳೂರು ವಿಭಾಗ ಸಹ ಸಂಚಾಲಕ ರವಿರಾಜ್ ಶೆಟ್ಟಿ,  ಕಡಬ ಸರಸ್ವತಿ ವಿದ್ಯಾಲಯ ಸಂಚಾಲಕ  ವೆಂಕಟ್ರಮಣ ರಾವ್ ಮಂಕುಡೆ, ಕಡಬ ಸಿ ಎ ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ

ನವಂಬರ್ 24 ಉಡುಪಿಯಲ್ಲಿ ಹಿಂದೂ ಧರ್ಮ ಸಂಸತ್ ಅಧಿವೇಶನ ► ಕಡಬದಲ್ಲಿ ಸಮಾಲೋಚನಾ ಸಭೆ ಹಾಗೂ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ರಮ Read More »

ಕರಾವಳಿ

ಕೊಯಿಲ: ಮಕ್ಕಳ ಗ್ರಾಮಸಭೆ ► ವಿದ್ಯಾರ್ಥಿಗಳಿಂದ ವಿವಿಧ ಬೇಡಿಕೆಗಳ ಮಂಡನೆ

(ನ್ಯೂಸ್ ಕಡಬ) newskadaba.com ಕಡಬ, ನ.22.   ಕೊಯಿಲ ಗ್ರಾ.ಪಂ. ಮಕ್ಕಳ ಗ್ರಾಮಸಭೆಯು ಗ್ರಾ.ಪಂ. ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ಆತೂರು ಬದ್ರಿಯಾ ಶಾಲಾ ನಾಯಕ ಮೊಹಮ್ಮದ್ ಮುಹಸೀನ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕೊಯಿಲ ಗ್ರಾ.ಪಂ.ವ್ಯಾಪ್ತಿಯ ವಳಕಡಮ ಕಿ.ಪ್ರಾ.ಶಾಲೆ, ಗಂಡಿಬಾಗಿಲು ಹಿ.ಪ್ರಾ.ಶಾಲೆ, ಕೊಯಿಲ ಹಿ.ಪ್ರಾ.ಶಾಲೆ ಹಾಗೂ ಸಬಳೂರು ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳು ಭಾಗವಿಸಿದ್ದು ವಿವಿಧ ಬೇಡಿಕೆಗಳನ್ನು ಮಂಡಿಸಿದ್ದಾರೆ. ಆತೂರು ಬದ್ರಿಯಾ ಶಾಲೆಯ ವಿದ್ಯಾರ್ಥಿ ಮಾತನಾಡಿ, ಶಾಲೆಗೆ ಕಸದಬುಟ್ಟಿ ಕೊಟ್ಟಿದ್ದು ಇದರಲ್ಲಿ ಕಸ ತುಂಬಿದೆ. 1 ವರ್ಷವಾದರೂ ವಿಲೇವಾರಿ ಆಗಿಲ್ಲ ಎಂದರು.

ಕೊಯಿಲ: ಮಕ್ಕಳ ಗ್ರಾಮಸಭೆ ► ವಿದ್ಯಾರ್ಥಿಗಳಿಂದ ವಿವಿಧ ಬೇಡಿಕೆಗಳ ಮಂಡನೆ Read More »

ಕರಾವಳಿ

ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮುಳುವಾಗಲಿದೆಯೇ ಸರಕಾರದ‌ ನೂತನ ಕಾನೂನು…? ► ಮಂತ್ರಿಗಳ, ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಕಡ್ಡಾಯ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.22. ಬೀದಿ ಬೀದಿಗಳಲ್ಲಿ ಖಾಸಗಿ ಶಾಲೆಗಳು ತಲೆಯೆತ್ತುತ್ತಿದ್ದು, ಇವುಗಳ ಅಭಿವೃದ್ಧಿಯ ಮುಂದೆ ಸರಕಾರಿ ಶಾಲೆಗಳು ಇಂದೋ ನಾಳೆಯೋ ಬಾಗಿಲು ಮುಚ್ಚುವ ಭೀತಿಯಲ್ಲಿ ಕಾರ್ಯಾಚರಿಸುತ್ತಿದೆ. ಒಂದೆಡೆ ಸರಕಾರಿ ಶಾಲೆಯಲ್ಲಿನ ಸೌಲಭ್ಯಗಳ ಕೊರತೆ, ಇನ್ನೊಂದೆಡೆ ಖಾಸಗಿ ಶಾಲೆಗಳ ದೌಲತ್ತಿನ ನಡುವೆ ಇದೀಗ ಚಳಿಗಾಲದ ಅಧಿವೇಶನದಲ್ಲಿ ಹೊಸದೊಂದು ಮಸೂದೆಯು ಮಂಡನೆಯಾಗುವ ಸಾಧ್ಯತೆಯಿದೆ. ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮಕ್ಕಳು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವುಳ್ಳ ಶಿಕ್ಷಣವನ್ನು ಪಡೆಯುತ್ತಿದ್ದರೆ, ಇನ್ನೊಂದೆಡೆ ಬಡಮಕ್ಕಳು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಧಿಕಾರಿಗಳ

ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮುಳುವಾಗಲಿದೆಯೇ ಸರಕಾರದ‌ ನೂತನ ಕಾನೂನು…? ► ಮಂತ್ರಿಗಳ, ಸರ್ಕಾರಿ ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವುದು ಕಡ್ಡಾಯ..! Read More »

ಕರಾವಳಿ

ವಿಟ್ಲ: ಚರಂಡಿಗಿಳಿದ ಟಾಟಾ ಮ್ಯಾಜಿಕ್ ಐರಿಸ್ ► ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ನ.22. ಪ್ರಯಾಣಿಕರನ್ನು ಕುಳ್ಳಿರಿಸಿ ಚಾಲಕ ಕೆಳಗಿಳಿದಾಗ ಹಠಾತ್ ಚಲಿಸಿದ ಟಾಟಾ ಮ್ಯಾಜಿಕ್ ಐರಿಸ್ ವಾಹನವೊಂದು ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಕಲ್ಲಡ್ಕ ಸಮೀಪದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ. ಟಾಟಾ ಮ್ಯಾಜಿಕ್ ಐರಿಸ್ ವಾಹನದಲ್ಲಿದ್ದ ಪ್ರಯಾಣಿಕ ಮಹಿಳೆಯೋರ್ವರು ಪಡಿಬಾಗಿಲು ಜಂಕ್ಷನ್ ನಲ್ಲಿ ಅಂಗಡಿಯಿಂದ ಸಾಮಾನು ಖರೀದಿಸಲೆಂದು ತೆರಳಿದ್ದು, ಆ ಸಂದರ್ಭದಲ್ಲಿ ಚಾಲಕನೂ ವಾಹನದಿಂದ ಇಳಿದು ಹೋಗಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ಇದ್ದಕ್ಕಿಂದಂತೆ ಚಲಿಸಿದ ಟಾಟಾ ಮ್ಯಾಜಿಕ್ ಸುಮಾರು ೨೦ ಅಡಿ ಆಳದ ಕಂದಕಕ್ಕೆ

ವಿಟ್ಲ: ಚರಂಡಿಗಿಳಿದ ಟಾಟಾ ಮ್ಯಾಜಿಕ್ ಐರಿಸ್ ► ನಾಲ್ವರಿಗೆ ಗಾಯ Read More »

ಕರಾವಳಿ

ಸುಳ್ಯ: ಡಬಲ್‌ ಮರ್ಡರ್ ಪ್ರಕರಣ ► ಆರೋಪಿಗೆ 10 ವರ್ಷ ಜೈಲು

(ನ್ಯೂಸ್ ಕಡಬ) newskadaba.com ಪುತ್ತೂರು, ನ.21. 2013ರಲ್ಲಿ ಸುಳ್ಯದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಸುಳ್ಯ ಕಸಬಾ ಗ್ರಾಮದ ನಾರಾಜೆ ನಿವಾಸಿ ಹರೀಶ್ ನಾಯ್ಕ ಎಂಬವರ ಪತ್ನಿ ಪದ್ಮಾವತಿ ಮತ್ತು ಮನೆಗೆಲಸಕ್ಕೆಂದು ಬಂದಿದ್ದ ಟಿಪ್ಪರ್ ಚಾಲಕ ಹಿತೇಶ್ ಅವರನ್ನು ಬರ್ಬರವಾಗಿ ಕೊಲೆಗೈದಿದ್ದ ಅಜ್ಜಾವರ ಗ್ರಾಮದ ಮುಳಿಯ ನಿವಾಸಿ ವಸಂತ ಶೇರಿಗಾರ್

ಸುಳ್ಯ: ಡಬಲ್‌ ಮರ್ಡರ್ ಪ್ರಕರಣ ► ಆರೋಪಿಗೆ 10 ವರ್ಷ ಜೈಲು Read More »

ಕರಾವಳಿ

ಬಂಟ್ವಾಳ: ಮದುವೆಯಾಗುವಂತೆ ಯುವತಿಗೆ ಪೀಡನೆ ► ಯುವಕ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ.21. ಯುವತಿಯೋರ್ವಳನ್ನು ಮದುವೆಯಾಗುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಯುವಕನೊಬ್ಬನನ್ನು ಬಂಟ್ವಾಳ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮಂಗಳವಾರದಂದು ನಡೆದಿದೆ.   ಪೊಲೀಸರ ವಶದಲ್ಲಿರುವ ಯುವಕನನ್ನು ಬಂಟ್ವಾಳ ಅಮ್ಟಾಡಿ‌ ನಿವಾಸಿ ಅನಿಲ್ ಪಿಂಟೋ‌ ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಯುವತಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ತನ್ನನ್ನು ಮದುವೆ ಆಗುವಂತೆ ನಿತ್ಯವೂ ಪೀಡಿಸುತ್ತಿದ್ದನೆನ್ನಲಾಗಿದ್ದು, ಇದನ್ನು ಪ್ರಶ್ನಿಸಿದ ಆಕೆಗೆ ಹಾಗೂ ಆಕೆಯ ಮನೆಯವರಿಗೂ ಕೊಲೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ. ಯುವತಿಯ ಮನೆಯವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ

ಬಂಟ್ವಾಳ: ಮದುವೆಯಾಗುವಂತೆ ಯುವತಿಗೆ ಪೀಡನೆ ► ಯುವಕ ಪೊಲೀಸ್ ವಶಕ್ಕೆ Read More »

ಕರಾವಳಿ

ಕ್ರೀಂ ಪಾರ್ಲರ್ ನಲ್ಲಿ ನಡೆಯಿತು ಪ್ರೇಮಿಗಳ ಲವ್ವಿಡವ್ವಿ ► ವೈರಲಾಯ್ತು ಮಂಗಳೂರು ಜೋಡಿಯ ಕಿಸ್ಸಿಂಗ್ ಸೀನ್

(ನ್ಯೂಸ್ ಕಡಬ) newskadaba.com ಮಂಗಳೂರು, ನ.21. ನಗರದ ಕ್ರೀಂ ಪಾರ್ಲರ್ ಒಂದರಲ್ಲಿ ಯುವಕನೊಬ್ಬ ಕಾಲೇಜು ಯುವತಿಗೆ ಮುತ್ತಿಟ್ಟ ದೃಶ್ಯದ ವಿಡಿಯೋವೊಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಬ್ಬರು ಕೆಫೆಯಲ್ಲಿ ಏನೋ ಮಾತನಾಡುತ್ತಾ ಕೂತಿದ್ದು, ಯುವಕ ಯುವತಿಯನ್ನು ಹತ್ತಿರಕ್ಕೆಳೆದುಕೊಂಡು ಮುತ್ತಿಡುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಮೇಲ್ನೋಟಕ್ಕೆ ಇವರಿಬ್ಬರು ಪ್ರೇಮಿಗಳಂತೆ ಕಂಡುಬರುತ್ತಿದ್ದು, ಯುವತಿ ಕಾಲೇಜಿನ ಸಮವಸ್ತ್ರ ಧರಿಸಿದ್ದು, ಯಾವ ಕಾಲೇಜಿನ ವಿದ್ಯಾರ್ಥಿನಿ ಎನ್ನುವುದು ಬಹಿರಂಗವಾಗಿಲ್ಲ. ವೀಡಿಯೋದಲ್ಲಿ ವಿದ್ಯಾರ್ಥಿನಿಯ ಮುಖಚಹರೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಮಂಗಳೂರಿನ ಯಾವುದೋ ಕ್ರೀಂ ಪಾರ್ಲರ್

ಕ್ರೀಂ ಪಾರ್ಲರ್ ನಲ್ಲಿ ನಡೆಯಿತು ಪ್ರೇಮಿಗಳ ಲವ್ವಿಡವ್ವಿ ► ವೈರಲಾಯ್ತು ಮಂಗಳೂರು ಜೋಡಿಯ ಕಿಸ್ಸಿಂಗ್ ಸೀನ್ Read More »

ಕರಾವಳಿ
Scroll to Top