ಸೇತುವೆಯಿಂದ ನದಿಗೆ ಉರುಳಿದ ಪ್ರವಾಸಿ ಬಸ್ ► ಮೂವರು ಮೃತ್ಯು, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.12. ಬೆಂಗಳೂರಿನಿಂದ ಕಣ್ಣೂರಿನ ತಲಶ್ಶೇರಿಯತ್ತ ಪ್ರಯಾಣ ಬೆಳಿಸಿದ್ದ ಪ್ರವಾಸಿ ಬಸ್‌ವೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿದ ಘಟನೆ ಪೆರಿಂಗತ್ತೂರ್‌ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಈ ಅವಘಡದಲ್ಲಿ ಮಹಿಳೆ, ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹಲವರು ಗಾಯಗೊಂಡಿದ್ದಾರೆ‌. ಚಾಲಕನ ನಿಯಂತ್ರಣ ತಪ್ಪಿದ ಬಸ್ ಪೆರಿಂಗತ್ತೂರ್ ಎಂಬಲ್ಲಿನ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನದಿಗೆ ಉರುಳಿದೆ. ಚಾಲಕ ಬಸ್‌ನಿಂದ ಜಿಗಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೇತುವೆಯಿಂದ ನದಿಗೆ ಉರುಳಿದ ಪ್ರವಾಸಿ ಬಸ್ ► ಮೂವರು ಮೃತ್ಯು, ಹಲವರಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಕೋಮುಜ್ವಾಲೆಗೆ ನಲುಗಿ ಹೊತ್ತಿ ಉರಿಯುತ್ತಿರುವ ಉತ್ತರಕನ್ನಡ ► ಹೊನ್ನಾವರ, ಶಿರಸಿಯಲ್ಲಿ ಮುಂದುವರಿದ ಹಿಂಸಾಕೃತ್ಯ

(ನ್ಯೂಸ್ ಕಡಬ) newskadaba.com ಕಾರವಾರ/ಶಿರಸಿ, ಡಿ.12. ಹಿಂದೂ ಕಾರ್ಯಕರ್ತನ ನಿಗೂಢ ಸಾವಿನಿಂದಾಗಿ ಕಳೆದ ಕೆಲ ದಿನಗಳಿಂದ ವಿಕೋಪಕ್ಕೆ ತಿರುಗಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮಂಗಳವಾರವೂ ಮುಂದುವರಿದಿದೆ. ಸೋಮವಾರದಂದು ಹೊನ್ನಾವರದಲ್ಲಿ ನಡೆದಿದ್ದ ಹಿಂಸಾಕೃತ್ಯ ಮಂಗಳವಾರದಂದು ಶಿರಸಿಯಲ್ಲೂ ಮುಂದುವರಿದಿದ್ದು, ಬಂದ್ ಹಿನ್ನೆಲೆಯಲ್ಲಿ ಉದ್ರಿಕ್ತರು ಪೊಲೀಸ್ ವಾಹನಗಳಿಗೆ ಕಲ್ಲು ತೂರಾಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹಿಂದೂ ಸಂಘಟನೆ ಪ್ರಮುಖರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಪ್ರತಿಭಟನೆ ಹಿಂಸೆಗೆ ತಿರುಗಿದೆ. ಕಂಡ ಕಂಡ ಕಡೆ ಉದ್ರಿಕ್ತ ಗುಂಪುಗಳು

ಕೋಮುಜ್ವಾಲೆಗೆ ನಲುಗಿ ಹೊತ್ತಿ ಉರಿಯುತ್ತಿರುವ ಉತ್ತರಕನ್ನಡ ► ಹೊನ್ನಾವರ, ಶಿರಸಿಯಲ್ಲಿ ಮುಂದುವರಿದ ಹಿಂಸಾಕೃತ್ಯ Read More »

ಕರ್ನಾಟಕ

ಶ್ರೀರಾಮ ಸೇನೆ ಕಡಬ ತಾಲೂಕು ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ಮೋಹನ್ ಕೆರೆಕೋಡಿ ಹಾಗೂ ಸಂಚಾಲಕರಾಗಿ ಗಣೇಶ್ ಮೀನಾಡಿ

(ನ್ಯೂಸ್ ಕಡಬ) newskadaba.com ಕಡಬ, ಡಿ.12. ಶ್ರೀ ರಾಮ ಸೇನೆ ಕಡಬ ತಾಲೂಕ್ ಅಧ್ಯಕ್ಷರಾಗಿ ಮೋಹನ್ ಕೆರೆಕೋಡಿ ಹಾಗೂ ಸಂಚಾಲಕರಾಗಿ ಗಣೇಶ್ ಮೀನಾಡಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ಸನ್ನಿಧಿಯಲ್ಲಿ ನಡೆದ ಶ್ರೀರಾಮ ಸೇನೆ ಕಡಬ ತಾಲೂಕು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸಹ ಸಂಚಾಲಕರಾಗಿ ಅರುಣ್ ಕುಮಾರ್ ರೈ, ಕಡಬ ನಗರ ಸಮಿತಿ ಅಧ್ಯಕ್ಷರಾಗಿ ಗಿರೀಶ್ ರೈ ಕಾಯಂದೂರು, ಸಂಚಾಲಕರಾಗಿ ಮೋಹನ್ ಮಠಂತ್ತಡಿ, ಸಹ ಸಂಚಾಲಕರಾಗಿ ಪ್ರದೀಪ್ ಕಡಬ ಮತ್ತು ಮೇಗೇಶ್ ರವರನ್ನು

ಶ್ರೀರಾಮ ಸೇನೆ ಕಡಬ ತಾಲೂಕು ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ಮೋಹನ್ ಕೆರೆಕೋಡಿ ಹಾಗೂ ಸಂಚಾಲಕರಾಗಿ ಗಣೇಶ್ ಮೀನಾಡಿ Read More »

ಕರಾವಳಿ

ಗೊಂದಲಗಳ ಮಧ್ಯೆ ಆರಂಭವಾದ ಉಸ್ತುವಾರಿ ಸಚಿವರ ‘ಸಾಮರಸ್ಯ ನಡಿಗೆ’ ► ಫರಂಗಿಪೇಟೆಯಲ್ಲಿ ಬಸ್‍ಗಳ ಮೇಲೆ ಕಲ್ಲು ತೂರಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕೆಲವು ಸ್ವಪಕ್ಷೀಯರ ವಿರೋಧದ ನಡುವೆಯೂ ಫರಂಗಿಪೇಟೆಯಿಂದ ಆರಂಭವಾದ ‘ಸಾಮರಸ್ಯದ ನಡಿಗೆ’ ಕೆಲದೂರ ಕ್ರಮಿಸುವುದಕ್ಕೆ ಮೊದಲೇ ಫರಂಗಿಪೇಟೆಯಲ್ಲಿ ರಾಜಹಂಸ ಸೇರಿದಂತೆ ಕೆಎಸ್ಸಾರ್ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ದುಷ್ಕರ್ಮಿಗಳು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಪ್ರಯಾಣಿಕರಿಗೆ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಫರಂಗಿಪೇಟೆಯಿಂದ ಮಾಣಿಯವರೆಗೆ ನಡೆಯಲಿರುವ ಸಾಮರಸ್ಯದ ನಡಿಗೆಗೆ ಪೂರ್ವದಲ್ಲೇ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು ಜಾಥಾಕ್ಕೆ ಆರಂಭದಲ್ಲೇ

ಗೊಂದಲಗಳ ಮಧ್ಯೆ ಆರಂಭವಾದ ಉಸ್ತುವಾರಿ ಸಚಿವರ ‘ಸಾಮರಸ್ಯ ನಡಿಗೆ’ ► ಫರಂಗಿಪೇಟೆಯಲ್ಲಿ ಬಸ್‍ಗಳ ಮೇಲೆ ಕಲ್ಲು ತೂರಾಟ Read More »

ಕರಾವಳಿ

ಪರಮೇಶ್ ಮೇಸ್ತ ಪ್ರಕರಣದ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ► ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಐಜಿಪಿ ನಿಂಬಾಲ್ಕರ್

(ನ್ಯೂಸ್ ಕಡಬ) newskadaba.com ಹೊನ್ನಾವರ, ಡಿ.11. ಪರೇಶ್ ಮೇಸ್ತ ಸಾವು ಪ್ರಕರಣದ ಬಗ್ಗೆ ಪಕ್ಷವೊಂದು ನೀಡಿದ್ದ ಪತ್ರಿಕಾ ಪ್ರಕಟಣೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಅಮಾಯಕ ಮನಸ್ಸುಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ತಂತ್ರವಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಧರ್ಮದ ಆಧಾರಲ್ಲಿ ಸಮಾಜವನ್ನು ಒಡೆಯುವ ಹಾಗೂ ಕೋಮುಭಾವನೆಯನ್ನು ಕೆರಳಿಸಲು ನಡೆಸಿದ ಷಡ್ಯಂತ್ರವು ಈ ವದಂತಿಗಳ ಹಿಂದೆ ಅಡಗಿದೆ. ಪರಮೇಶ ಮೇಸ್ತ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ

ಪರಮೇಶ್ ಮೇಸ್ತ ಪ್ರಕರಣದ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ► ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಐಜಿಪಿ ನಿಂಬಾಲ್ಕರ್ Read More »

ಕರ್ನಾಟಕ

ಡಿಸೆಂಬರ್ 16ರಂದು ರಾಮಕುಂಜದಲ್ಲಿ ಮಕ್ಕಳ ಶೈಕ್ಷಣಿಕ ಜಾತ್ರೆ

(ನ್ಯೂಸ್ ಕಡಬ) newskadaba.com ಕಡಬ, ಡಿ.11. ಪೇಜಾವರಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷ ವಾರ್ಷಿಕೋತ್ಸವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದ್ದು ದಶಂಬರ್ 16 ನೇ ಶನಿವಾರ ನಮ್ಮ ಮಕ್ಕಳ ಶೈಕ್ಷಣಿಕ ಜಾತ್ರೆ-2017 ಎಂದು ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ತಿಳಿಸಿದರು. ಅವರು ಸೋಮವಾರ ರಾಮಕುಂಜದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶೈಕ್ಷಣಿಕ ಜಾತ್ರೆಯಲ್ಲಿ ಮಕ್ಕಳ ವಾರ್ಷಿಕ ಸಾಧನಾ ಚಟುವಟಿಕೆಗಳ ಶೋಧನಾ ಕಾರ್ಯ ನಡೆಯಲಿದೆ ಎಂದು ಹೇಳಿದರು. ಶಿಕ್ಷಣ ಮಾಧ್ಯಮ ಯಾವುದೇ

ಡಿಸೆಂಬರ್ 16ರಂದು ರಾಮಕುಂಜದಲ್ಲಿ ಮಕ್ಕಳ ಶೈಕ್ಷಣಿಕ ಜಾತ್ರೆ Read More »

ಕರಾವಳಿ

ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ► ಕೇವಲ ಒಂದು ರೂ. ನೀಡಿ ಟಾಟಾ ಕಾರು ಮನೆಗೊಯ್ಯುವ ಅವಕಾಶ

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.11. ಈ ವರ್ಷ ಹೊಸ ಕಾರು ಖರೀದಿಸಲು ಯೋಜನೆ ರೂಪಿಸಿರುವವರಿಗೆ ಸಂತೋಷದ ವಿಷಯವೊಂದಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಭಾರತದ ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ಮೂಲಕ ಕೇವಲ 1.00 ರೂ.ನಲ್ಲಿ ಕಾರನ್ನು ನೀಡಲು ಮುಂದಾಗಿದೆ. ತನ್ನ ‘ಮೆಗಾ ಆಫರ್ ಮ್ಯಾಕ್ಸ್ ಸೆಲೆಬ್ರೇಷನ್ ಕ್ಯಾಂಪೇನ್’ ಅಡಿಯಲ್ಲಿ, ಖರೀದಿದಾರರು ಕೇವಲ ರೂ. 1.00 ನೀಡುವ ಮೂಲಕ ಟಾಟಾ ಕಾರನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ. ಕೇವಲ ಒಂದು ರೂಪಾಯಿ ಡೌನ್‌ಪೇಮೆಂಟ್ ಮಾಡುವ ಮೂಲಕ ಟಾಟಾ

ಕಾರು ಖರೀದಿದಾರರಿಗೆ ವರ್ಷಾಂತ್ಯದ ಆಫರ್ ► ಕೇವಲ ಒಂದು ರೂ. ನೀಡಿ ಟಾಟಾ ಕಾರು ಮನೆಗೊಯ್ಯುವ ಅವಕಾಶ Read More »

ರಾಷ್ಟ್ರೀಯ ನ್ಯೂಸ್

ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪ ► ಪತ್ರಕರ್ತ ರವಿ ಬೆಳಗೆರೆಗೆ ಜೈಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.11. ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪದಲ್ಲಿ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರವಿ ಬೆಳಗೆರೆ ಅವರನ್ನು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಇಂದು ಹಾಜರುಪಡಿಸಿದಾಗ ನ್ಯಾಯಾಧೀಶ ಜಗದೀಶ್ ಅವರು ರವಿಬೆಳೆಗೆರೆಗೆ ಡಿ.23 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ‌. ರವಿ ಬೆಳಗೆರೆಯವರ ವಕೀಲರ ತಂಡವು ಬುಧವಾರದಂದು ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.

ಸಹೋದ್ಯೋಗಿಯ ಕೊಲೆಗೆ ಸುಪಾರಿ ನೀಡಿದ ಆರೋಪ ► ಪತ್ರಕರ್ತ ರವಿ ಬೆಳಗೆರೆಗೆ ಜೈಲು Read More »

ಕರ್ನಾಟಕ

?ಎಚ್‌ಐವಿ/ಏಡ್ಸ್ ಪ್ರಕರಣ ► ದಕ್ಷಿಣ ಕನ್ನಡ ಜಿಲ್ಲೆಗೆ ಮೂರನೇ ಸ್ಥಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ,11. ಎಚ್‌ಐವಿ ಪೀಡಿತ ರೋಗಿಗಳ ಸಂಖ್ಯೆ ಈ ವರ್ಷ ಶೇ 50 ರಷ್ಟು ಕಡಿಮೆಯಾಗಿದ್ದು, ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿದೆ ಎಂದು ಏಡ್ಸ್‌ ನಿಯಂತ್ರಣ ಅಧಿಕಾರಿ ಡಾ. ಬದ್ರುದ್ದೀನ್‌ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದರು. ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ವರ್ಷ ಜನವರಿಯಿಂದ ಅಕ್ಟೋಬರ್‌ವರೆಗೆ ಒಟ್ಟು 512 ಜನರಲ್ಲಿ ರೋಗ ಪತ್ತೆಯಾಗಿದೆ ಎಂದ

?ಎಚ್‌ಐವಿ/ಏಡ್ಸ್ ಪ್ರಕರಣ ► ದಕ್ಷಿಣ ಕನ್ನಡ ಜಿಲ್ಲೆಗೆ ಮೂರನೇ ಸ್ಥಾನ Read More »

ಕರಾವಳಿ

ಇಂದು ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆ ► ಚಿನ್ನಾಭರಣಗಳೊಂದಿಗೆ ಪರಾರಿ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಡಿ.11. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಯುವಕನ ಜೊತೆ ಇಂದು ಹಸೆಮಣೆ ಏರಬೇಕಿದ್ದ ಯುವತಿಯೋರ್ವಳು ಮದುವೆ ಮನೆಯಿಂದಲೇ ಪರಾರಿಯಾದ ಘಟನೆ ಮೂಡಬಿದಿರೆಯಲ್ಲಿ ಭಾನುವಾರದಂದು ನಡೆದಿದೆ. ಇಲ್ಲಿನ ಧರೆಗುಡ್ಡೆ ನಿವಾಸಿ ಪ್ರೀಯಾಂಕಳಿಗೆ ವಿದೇಶದಲ್ಲಿ ನೌಕರಿ ಮಾಡುವ ಯುವಕನ ಜೊತೆ ಮದುವೆ ನಿಶ್ಚಯ ವಾಗಿತದ್ದು, ಸೋಮವಾರದಂದು ಮದುವೆ ನಡೆಯಲಿತ್ತು. ಅದರೆ ಪ್ರಿಯಾಂಕ ಮಾತ್ರ 10 ಪವನ್ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್,ಇತರ ವಸ್ತುಗಳೊಂದಿಗೆ ಪರಾರಿಯಾಗಿದ್ದಾಳೆ. ತಂದೆ ಇಲ್ಲದ ಮಗಳನ್ನು ತಾಯಿ ಕಷ್ಟಪಟ್ಟು ಸಾಕಿದ್ದು ಈಗ ಮಗಳೇ

ಇಂದು ಹಸೆಮಣೆ ಏರಬೇಕಿದ್ದ ಯುವತಿ ನಾಪತ್ತೆ ► ಚಿನ್ನಾಭರಣಗಳೊಂದಿಗೆ ಪರಾರಿ Read More »

ಕರಾವಳಿ
Scroll to Top