ಅಪಘಾತವನ್ನು ತಪ್ಪಿಸುವ ಭರದಲ್ಲಿ ಕಾವೇರಿ ನದಿಗೆ ಉರುಳಿದ ಕಾರು ► ನಾಲ್ವರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಮಡಿಕೇರಿ, ಡಿ.18. ಅಪಘಾತವನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾವೇರಿ ನದಿಗೆ ಉರುಳಿ ಬಿದ್ದ ಘಟನೆ ಕುಶಾಲನಗರ ಸಮೀಪದ ಬೇತ್ರಿ ಸೇತುವೆ ಬಳಿ ಭಾನುವಾರದಂದು ನಡೆದಿದೆ. ಆಂಧ್ರ ಪ್ರದೇಶ ಮೂಲದ ವಿಷ್ಣು ಎಂಬವರು ತನ್ನ ಸ್ನೇಹಿತರಾದ ರಕ್ಷಿತ, ಶರಣ್ಯ ಮತ್ತು ಚಂದನ್ ಎಂಬವರೊಂದಿಗೆ ಶನಿವಾರದಂದು ಬೆಂಗಳೂರಿನಿಂದ ಕಾರೊಂದನ್ನು ಬಾಡಿಗೆಗೆ ಪಡೆದು ಮಡಿಕೇರಿಗೆ ಆಗಮಿಸಿದ್ದರು. ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಮಡಿಕೇರಿಯಿಂದ ನಾಗರಹೊಳೆಗೆ ತೆರಳುತ್ತಿದ್ದಾಗ ಮೂರ್ನಾಡು ಬಳಿಯ ಬೇತ್ರಿ ಸೇತುವೆ ಬಳಿ […]

ಅಪಘಾತವನ್ನು ತಪ್ಪಿಸುವ ಭರದಲ್ಲಿ ಕಾವೇರಿ ನದಿಗೆ ಉರುಳಿದ ಕಾರು ► ನಾಲ್ವರು ಅಪಾಯದಿಂದ ಪಾರು Read More »

ಕರ್ನಾಟಕ

ಡಿ.21: ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ► ವಾರ್ಷಿಕ ದಫ್ ರಾತೀಬ್ ಹಾಗೂ ಧಾರ್ಮಿಕ ಮತ ಪ್ರವಚನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಡಿ.18. ಝಕರಿಯಾ ಜುಮಾ ಮಸೀದಿ ಬೆಳ್ಳಾರೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅನ್ಸಾರುದ್ದೀನ್ ರಿಫಾಯಿಯಾ ದಫ್ ಕಮಿಟಿಯು ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ವಾರ್ಷಿಕ ದಫ್ ರಾತೀಬ್ ಹಾಗೂ ಧಾರ್ಮಿಕ ಮತಪ್ರವಚನವು ಡಿಸೆಂಬರ್ 21 ರಂದು ಝಕರಿಯಾ ಜುಮಾ ಮಸೀದಿಯಲ್ಲಿ ನಡೆಯಲಿದೆ. ಸಂಜೆ ಘಂಟೆ 4.30 ರಿಂದ ದಫ್ ರಾತೀಬ್, ಮಗ್ರಿಬ್ ನಮಾಝಿನ ಬಳಿಕ ಸ್ವಲಾತ್ ಮಜ್ಲಿಸ್, ರಾತ್ರಿ ಘಂಟೆ 8.00 ರಿಂದ ಬಹು| ಇಬ್ರಾಹೀಂ ಬಾಖವಿ ಕೆ.ಸಿ. ರೋಡ್ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬಹು|

ಡಿ.21: ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ► ವಾರ್ಷಿಕ ದಫ್ ರಾತೀಬ್ ಹಾಗೂ ಧಾರ್ಮಿಕ ಮತ ಪ್ರವಚನ Read More »

ಕರಾವಳಿ

ರಾಮಕುಂಜ: ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ| ಹರೀಶ್ ಹಂದೆ ಭೇಟಿ ► ರಾಮಕುಂಜೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ

(ನ್ಯೂಸ್ ಕಡಬ) newskadaba.com ಕಡಬ, ಡಿ.18. ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಸೆಲ್ಕೋ ಇಂಡಿಯಾದ ಸಂಸ್ಥಾಪಕ ಡಾ.ಹರೀಶ್ ಹಂದೆ ಶುಕ್ರವಾರದಂದು ರಾಮಕುಂಜ ವಿದ್ಯಾಸಂಸ್ಥೆಗೆ ಭೇಟಿ ನೀಡಿದ್ದು ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ ನಡೆಸಿದರು. ಸಂಸ್ಥೆಯಲ್ಲಿ ಆಯೋಜಿಸಿದ್ದ ಗಣಿತ ಮಾದರಿಗಳ ಪ್ರದರ್ಶನವನ್ನು ಡಾ.ಹರೀಶ್ ಹಂದೆಯವರು ಈ ವೇಳೆ ಉದ್ಘಾಟಿಸಿದರು. ಭಾರತ ಅಭಿವೃದ್ಧಿ ಹೊಂದಿದಲ್ಲಿ ಮಾತ್ರ ವಿಶ್ವ ಅಭಿವೃದ್ಧಿಗೊಳ್ಳಲಿದೆ ಎಂಬುದು ದೆಹಲಿಯಲ್ಲಿ ಎರಡು ವರ್ಷ ವ್ಯಾಸಾಂಗ ಮಾಡಿದ ಅಮೆರಿಕನ್ ಪ್ರಜೆಯೊಬ್ಬರ ಅಭಿಪ್ರಾಯವಾಗಿದೆ. ಆತನಲ್ಲಿ ಭಾರತದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಗೊಳ್ಳದೇ ಇದ್ದಲ್ಲಿ ವಿಶ್ವ

ರಾಮಕುಂಜ: ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ| ಹರೀಶ್ ಹಂದೆ ಭೇಟಿ ► ರಾಮಕುಂಜೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಸಂವಾದ Read More »

ಕರಾವಳಿ

ಕಡಬದ ಹಿರಿಯ ಬಿಜೆಪಿ ಮುಖಂಡ ಮನವಳಿಕೆ ಉಮೇಶ್ ರೈ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಕಡಬ, ಡಿ.17. ಕಡಬದ ಹಿರಿಯ ಬಿಜೆಪಿ ಮುಖಂಡ ನೂಜಿಬಾಳ್ತಿಲ ಗ್ರಾಮದ ಪದಕ ನಿವಾಸಿ ಮನವಳಿಕೆ ಉಮೇಶ್ ರೈ(72) ಭಾನುವಾರ ರಾತ್ರಿ ವಿಧಿವಶರಾದರು. ಮೂಲತ ಆಲಂಕಾರು ಮನವಳಿಕೆ ಗುತ್ತು ಮನೆತನದ ಉಮೇಶ್ ರೈ ಕಡಬ ಪರಿಸರದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಅಪಾರ ಶ್ರಮ ವಹಿಸಿದ್ದರು. ಜಿಲ್ಲಾ ಸ್ಕ್ಯಾಡ್ಸ್ ಅಧ್ಯಕ್ಷರಾಗಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಇವರು ಕೆಲದಿನಗಳ ಅಸೌಖ್ಯದಿಂದಾಗಿ ಭಾನುವಾರ ರಾತ್ರಿ ನೂಜಿಬಾಳ್ತಿಲ ಗ್ರಾಮದ ಪದಕದ ತನ್ನ

ಕಡಬದ ಹಿರಿಯ ಬಿಜೆಪಿ ಮುಖಂಡ ಮನವಳಿಕೆ ಉಮೇಶ್ ರೈ ಇನ್ನಿಲ್ಲ Read More »

ಕರಾವಳಿ

ಕೊಯಿಲ ಗ್ರಾ.ಪಂ. ಉಪಚುನಾವಣೆ ► 65.03% ಶಾಂತಿಯುತ ಮತದಾನ

(ನ್ಯೂಸ್ ಕಡಬ) newskadaba.com ಕಡಬ, ಡಿ.17. ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕೊಯಿಲ ಗ್ರಾಮ ಪಂಚಾಯತ್ ನ ವಾರ್ಡ್ ನಂ4 ರ ಹಿಂದುಳಿದ ವರ್ಗ ‘ಎ’ಯ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯು ವಳಕಡಮೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಒಟ್ಟು 1184 ಮತದಾರರ ಪೈಕಿ 770 ಮತದಾರರು ಮತವನ್ನು ಚಲಾಯಿಸುವ ಮೂಲಕ 65.03% ಶಾಂತಿಯುತ ಮತದಾನ ನಡೆಯಿತು.

ಕೊಯಿಲ ಗ್ರಾ.ಪಂ. ಉಪಚುನಾವಣೆ ► 65.03% ಶಾಂತಿಯುತ ಮತದಾನ Read More »

ಕರಾವಳಿ

ಪ್ರಧಾನಿ ನರೇಂದ್ರ ಮೋದಿ ನಾಳೆ(ಡಿ.18) ಮಂಗಳೂರಿಗೆ ► ಡಿ.19 ರಂದು ಲಕ್ಷದ್ವೀಪಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17.‌ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಡಿಸೆಂಬರ್ 18 ಸೋಮವಾರದಂದು ರಾತ್ರಿ ಕರಾವಳಿಗೆ ಆಗಮಿಸಲಿದ್ದಾರೆ. ಸೋಮವಾರ ರಾತ್ರಿ 7.00 ಗಂಟೆಗೆ ವಿಶೇಷ ವಿಮಾನದ ಮೂಲಕ ಬಜಪೆ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ‌. ಡಿಸೆಂಬರ್ 19 ಮಂಗಳವಾರದಂದು ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ತೆರಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಾಳೆ(ಡಿ.18) ಮಂಗಳೂರಿಗೆ ► ಡಿ.19 ರಂದು ಲಕ್ಷದ್ವೀಪಕ್ಕೆ Read More »

ರಾಷ್ಟ್ರೀಯ ನ್ಯೂಸ್

ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲಾ ವಾರ್ಷಿಕೋತ್ಸವ ► ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.17. ಓರ್ವ ವಿದ್ಯಾರ್ಥಿಯ ಭವಿಷ್ಯದ ಅಡಿಪಾಯವು ತನ್ನ ಪ್ರೌಢಶಿಕ್ಷಣದಿಂದ ಆರಂಭವಾಗುತ್ತದೆ. ಪ್ರತಿಯೋರ್ವ ವಿದ್ಯಾರ್ಥಿಯೂ ಪ್ರೌಢಶಾಲೆಯಲ್ಲಿ ಕಲಿಯುವಂತಹ ವಿದ್ಯೆಯನ್ನು ತನ್ನ ಜೀವನದಲ್ಲಿ ರೂಪಿಸಿಕೊಂಡಾಗ ಜೀವನ ಯಶಸ್ವಿಯಾಗುತ್ತದೆ ಎಂದು ಕೊಕ್ಕಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ್ ರೈ ಪೆರ್ಲ ಹೇಳಿದರು. ಅವರು ಭಾನುವಾರದಂದು ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು‌. ವಿದ್ಯಾರ್ಥಿಗಳು ಸಮಾಜದ ಮುನ್ನೆಲೆಗೆ ಬರುವಲ್ಲಿ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಅತ್ಯಗತ್ಯವಾದುದು. ಆದುದರಿಂದ

ಮರ್ಧಾಳ ಸೈಂಟ್ ಮೇರೀಸ್ ಪ್ರೌಢಶಾಲಾ ವಾರ್ಷಿಕೋತ್ಸವ ► ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ Read More »

ಕರಾವಳಿ

ಇಪ್ಪತ್ತೆರಡು ಲಕ್ಷ ರೂ‌‌. ಬೆಲೆಯ ಬೈಕ್ ಅಪಘಾತ ► ದುಬಾರಿ ಬೆಲೆಯ ಹೆಲ್ಮೆಟ್ ತೆಗೆಯಲಾಗದೆ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ರಾಜಸ್ಥಾನ, ಡಿ.17. ದುಬಾರಿ ಬೆಲೆಯ ಬೈಕೊಂದು ಅಪಘಾತವಾಗಿ ತಾನು ಧರಿಸಿದ್ದ 50 ಸಾವಿರ ಬೆಲೆಬಾಳುವ ಹೆಲ್ಮೆಟ್ ಯುವಕನೋರ್ವನ ಪ್ರಾಣಕ್ಕೆ ಕುತ್ತಾದ ಘಟನೆ ರಾಜಸ್ಥಾನದಿಂದ ವರದಿಯಾಗಿದೆ. ರಾಜಸ್ಥಾನದ ಜೈಪುರ ನಿವಾಸಿ ಆಟೋಮೊಬೈಲ್ ಸಂಸ್ಥೆಯೊಂದರ ಸೇಲ್ಸ್ ಮ್ಯಾನೇಜರ್ ರೋಹಿತ್ ಸಿಂಗ್ ಶೆಖಾವತ್(30) ಎಂಬಾತ ತನ್ನ ಸುಮಾರು 22 ಲಕ್ಷ ಬೆಲೆಬಾಳುವ ಕವಾಸಾಕಿ ನಿಂಜಾ ಝೆಡ್ಎಕ್ಸ್ 10 ಆರ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಅಪಘಾತಕ್ಕೀಡಾಗಿದ್ದು, ರೋಹಿತ್ ಧರಿಸಿದ್ದ ನೂತನ ತಂತ್ರಜ್ಞಾನದ ಹೆಲ್ಮೆಟ್ ತೆಗೆಯಲಾಗದೆ ಮೆದುಳಿನ ರಕ್ತಸ್ರಾವ ಉಂಟಾಗಿದೆ‌.

ಇಪ್ಪತ್ತೆರಡು ಲಕ್ಷ ರೂ‌‌. ಬೆಲೆಯ ಬೈಕ್ ಅಪಘಾತ ► ದುಬಾರಿ ಬೆಲೆಯ ಹೆಲ್ಮೆಟ್ ತೆಗೆಯಲಾಗದೆ ಸವಾರ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಸುಳ್ಯ: ಗುಂಡು ಹಾರಿಸಿಕೊಂಡು ಯುವ ನ್ಯಾಯವಾದಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.17. ಯುವ ವಕೀಲರೋರ್ವರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ತಡರಾತ್ರಿ ಸುಳ್ಯ ಸಮೀಪದ ಸಂಪಾಜೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸಂಪಾಜೆಯ ಎನ್.ಎಸ್.ದೇವಿಪ್ರಸಾದ್ ಎಂಬವರ ಪುತ್ರ ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಎನ್.ಡಿ. ಚರಣ್ ಎಂದು ಗುರುತಿಸಲಾಗಿದೆ. ಇವರು ಶನಿವಾರದಂದು ತಡರಾತ್ರಿ ಸಂಪಾಜೆಯ ತನ್ನ ಮನೆಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಸುಳ್ಯ: ಗುಂಡು ಹಾರಿಸಿಕೊಂಡು ಯುವ ನ್ಯಾಯವಾದಿ ಆತ್ಮಹತ್ಯೆ Read More »

ಕರಾವಳಿ

ವಿಜೃಂಭಣೆಯಿಂದ ನಡೆದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ► ಕನ್ನಡದ ಕಂಪನ್ನು ಬೀರಿದ ಕದಂಬರ ನಾಡು

(ನ್ಯೂಸ್ ಕಡಬ) newskadaba.com ಕಡಬ, ಡಿ.16. ಕನ್ನಡವನ್ನು ಧರಿಸಬೇಕು ಮತ್ತು ಆಧರಿಸಬೇಕು. ಸಾಹಿತ್ಯ ಸಮ್ಮೇಳನ ವೈಭವಕ್ಕೆ ಸೀಮಿತವಾಗದೆ ಸಾಹಿತ್ಯ ಉಳಿಸುವುದಕ್ಕೆ ಪ್ರೇರಣೆಯಾಗಬೇಕು. ಎಂದು ನಿವೃತ್ತ ಶಿಕ್ಷಕ ಪಾದೆಕಲ್ಲು ವಿಷ್ಣು ಭಟ್ ಹೇಳಿದರು. ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಕಡಬದ ಸರಕಾರಿ ಪದವಿ ಪುರ್ವ ಕಾಲೇಜಿನ ಆವರಣದಲ್ಲಿ ಬಿ.ಟಿ.ಆರಿಗ ಜೈನಿ ಸಭಾಂಗಣದಲ್ಲಿ ಕುಲ್ಕುಂದ ಶಿವರಾಮ ವೇದಿಕೆಯಲ್ಲಿ ಶನಿವಾರದಂದು ನಡೆದ ಅವಿಭಜಿತ ಪುತ್ತೂರು ತಾಲೂಕಿನ 17 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು

ವಿಜೃಂಭಣೆಯಿಂದ ನಡೆದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ► ಕನ್ನಡದ ಕಂಪನ್ನು ಬೀರಿದ ಕದಂಬರ ನಾಡು Read More »

ಕರಾವಳಿ
Scroll to Top