ಉಪ್ಪಿನಂಗಡಿ: ಬೃಹತ್ ಪ್ರಮಾಣದ ಗಾಂಜಾ ಸಾಗಾಟ ಪತ್ತೆ ► 80 ಕೆಜಿ ಗಾಂಜಾ ಸಹಿತ ಕಾರು ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.24. ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 80 ಕಿಲೋಗ್ರಾಂ ಗಾಂಜಾವನ್ನು ಪತ್ತೆಹಚ್ಚಿರುವ ಉಪ್ಪಿನಂಗಡಿ ಪೊಲೀಸರು ಗಾಂಜಾ ಸಹಿತ ಕಾರನ್ನು ವಶಪಡಿಸಿಕೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಹೋಂಡಾ ಸಿಟಿ ಕಾರಿನಲ್ಲಿ ಸುಮಾರು ಆರು ಲಕ್ಷ ರೂ. ಮೌಲ್ಯದ 80 ಕೆ.ಜಿ. ಗಾಂಜಾವನ್ನು ಸಾಗಿಸುತ್ತಿದ್ದ ಆರೋಪಿಗಳು ಪೊಲೀಸರ ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ […]

ಉಪ್ಪಿನಂಗಡಿ: ಬೃಹತ್ ಪ್ರಮಾಣದ ಗಾಂಜಾ ಸಾಗಾಟ ಪತ್ತೆ ► 80 ಕೆಜಿ ಗಾಂಜಾ ಸಹಿತ ಕಾರು ವಶಕ್ಕೆ Read More »

ಕರಾವಳಿ

ಏರ್ ಟೆಲ್ ನಿಂದ ಭರ್ಜರಿ ಆಫರ್

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.24.‌ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಏರ್ ಟೆಲ್ ಹೊಸ ಪ್ರಿಪೇಯ್ಡ್ ಯೋಜನೆ ಪರಿಚಯಿಸಿದ್ದು, 49 ರೂ. ಗೆ 1 ಜಿಬಿ ಡೇಟಾ ನೀಡಲು ಮುಂದಾಗಿದೆ. 49 ರೂ. ಪ್ಲಾನ್ ನಲ್ಲಿ ದಿನವೊಂದಕ್ಕೆ 1 ಜಿಬಿ 4ಜಿ ಡೇಟಾ, ಉಚಿತ ಕರೆ ಸೌಲಭ್ಯವನ್ನು 7 ದಿನಗಳ ಅವಧಿಗೆ ಏರ್ ಟೆಲ್ ನೀಡಿದೆ. ಆದರೆ ಈ ಪ್ಲಾನ್ ಆಯ್ದ ಗ್ರಾಹಕರಿಗೆ ಮಾತ್ರ ಸಿಗಲಿದ್ದು, ಮೈ ಏರ್ ಟೆಲ್ ಆ್ಯಪ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ಏರ್ ಟೆಲ್ ನಿಂದ ಭರ್ಜರಿ ಆಫರ್ Read More »

ತಂತ್ರಜ್ಞಾನ

ಮುಲ್ಕಿ: ಉದ್ಯಮಿಯ ಮನೆಯಲ್ಲಿ ಶೂಟೌಟ್ ► ಮನೆಗೆ ಹಾಗೂ ಕಾರಿಗೆ ಹಾನಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24. ಉದ್ಯಮಿಯೋರ್ವರ ಮನೆಗೆ 3 ಸುತ್ತು ಗುಂಡು ಹಾರಾಟ ನಡೆಸಿರುವ ಘಟನೆ ನಗರದ ಹೊರವಲಯದ ಮುಲ್ಕಿ ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ನಡೆದಿದೆ. ಬೈಕಿನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಮುಲ್ಕಿ ನಿವಾಸಿ ಉದ್ಯಮಿಯಾಗಿ ಗುರುತಿಸಿಕೊಂಡಿರುವ ನಾಗರಾಜ್ ಮನೆಗೆ ಶೂಟೌಟ್ ನಡೆಸಿದ್ದು, ಇದರಿಂದಾಗಿ ಮನೆಯ ಬಾಗಿಲಿಗೆ ಹಾಗೂ ಕಾರಿಗೆ ಗುಂಡು ತಗುಲಿ ಹಾನಿಯಾಗಿವೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್, ಅಪರಾಧ ವಿಭಾಗದ ಡಿಸಿಪಿ ಉಮಾಪ್ರಶಾಂತ್ ಮತ್ತಿತರ ಹಿರಿಯ ಅಧಿಕಾರಿಗಳು

ಮುಲ್ಕಿ: ಉದ್ಯಮಿಯ ಮನೆಯಲ್ಲಿ ಶೂಟೌಟ್ ► ಮನೆಗೆ ಹಾಗೂ ಕಾರಿಗೆ ಹಾನಿ Read More »

ಕರಾವಳಿ

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23. ದಕ್ಷಿಣ ಕನ್ನಡ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನೆಗಳಲ್ಲಿ ಖಾಲಿ ಇರುವ 9 ಅಂಗನವಾಡಿ ಕಾರ್ಯಕರ್ತೆ ಹಾಗೂ 23 ಅಂಗನವಾಡಿ ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 22 ದಿನವಾಗಿದ್ದು, ಆಸಕ್ತರು ಕೆಳಗಿನ ವೆಬ್‍ಸೈಟ್ ವಿಳಾಸವನ್ನು ಸಂಪರ್ಕಿಸಬಹುದಾಗಿದೆ. http://www.anganwadirecruit.kar.nic.in ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾ ಕಛೇರಿಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ Read More »

ಕರಾವಳಿ

ಬೆದ್ರಾಳ: ಕೆಎಸ್ಸಾರ್ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ► ತಾಯಿ-ಮಗಳು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.23. ಕೆಎಸ್ಸಾರ್ಟಿಸಿ ಬಸ್ಸೊಂದು ಹೀರೋ ಪ್ಲೆಶರ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಾಯಿ – ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಇಲ್ಲಿಗೆ ಸಮೀಪದ ಬೆದ್ರಾಳ ಎಂಬಲ್ಲಿ ನಡೆದಿದೆ. ಪುತ್ತೂರಿನಿಂದ ಶಾಂತಿಗೋಡು ತೆರಳುತ್ತಿದ್ದ‌ ಕೆಎಸ್ಸಾರ್ಟಿಸಿ ಬಸ್ ಬೆದ್ರಾಳ ರೈಲ್ವ ಮೇಲ್ಸೇತುವೆ ಸಮೀಪ ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡಿ ಮುಂದುಗಡೆ ಹೋಗುವ ಧಾವಂತದಲ್ಲಿ ಬಸ್ಸಿನ ಹಿಂಭಾಗ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟ ತಾಯಿ-ಮಗು ಸ್ಥಳದಲ್ಲೇ

ಬೆದ್ರಾಳ: ಕೆಎಸ್ಸಾರ್ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ► ತಾಯಿ-ಮಗಳು ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ನಾಳೆ ಕಡಬ ಸಿ.ಎ. ಬ್ಯಾಂಕ್ ನೂತನ ಸುಸಜ್ಜಿತ ಕಟ್ಟಡ ಉದ್ಘಾಟನೆ ► 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಯೋಗಕ್ಷೇಮ’ ಸಹಕಾರ ಸೌಧ

(ನ್ಯೂಸ್ ಕಡಬ) newskadaba.com ಕಡಬ, ಡಿ.23. ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ‘ಯೋಗಕ್ಷೇಮ’ ಸಹಕಾರ ಸೌಧದ ಉದ್ಘಾಟನಾ ಸಮಾರಂಭವು ನಾಳೆ (ಡಿಸೆಂಬರ್ 24 ನೇ ಭಾನುವಾರ) ನಡೆಯಲಿದೆ. ನೂತನ ಕಟ್ಟಡವನ್ನು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರಕುಮಾರ್ ಉದ್ಘಾಟಿಸಲಿದ್ದು, ಸುಳ್ಯ ಶಾಸಕ ಎಸ್.ಅಂಗಾರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಆಡಳಿತ ಸಭಾ ಭವನವನ್ನು

ನಾಳೆ ಕಡಬ ಸಿ.ಎ. ಬ್ಯಾಂಕ್ ನೂತನ ಸುಸಜ್ಜಿತ ಕಟ್ಟಡ ಉದ್ಘಾಟನೆ ► 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಯೋಗಕ್ಷೇಮ’ ಸಹಕಾರ ಸೌಧ Read More »

ಕರಾವಳಿ

ಪುತ್ತೂರು: ಚೂರಿ ತೋರಿಸಿ ಬೆದರಿಸಿ, ಮನೆಯವರನ್ನು ಕಟ್ಟಿಹಾಕಿ ದರೋಡೆ ► ಹಣ, ಚಿನ್ನಾಭರಣ ದೋಚಿದ ದರೋಡೆಕೋರರು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.23. ಇಲ್ಲಿಗೆ ಸಮೀಪದ ಕೆದಿಲ ದೈವಸ್ಥಾನದ ಬಳಿಯ ಮನೆಯೊಂದಕ್ಕೆ ನುಗ್ಗಿರುವ ಮೂವರು ಅಪರಿಚಿತರ ತಂಡ ಪಿಸ್ತೂಲು ಹಾಗೂ ಚೂರಿ ತೋರಿಸಿ ಮನೆಯವರನ್ನು ಬೆದರಿಸಿ, ಚಿನ್ನಾಭರಣ, ನಗದು ದೋಚಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕೆದಿಲ ನಿವಾಸಿ ಶಿವಶಂಕರ ಪುತ್ತೂರಾಯ ಎಂಬವರ ಮನೆಗೆ ರಾತ್ರಿ ಆಗಮಿಸಿದ ಮೂವರು ತಂಡ, ಪಿಸ್ತೂಲು, ಚೂರಿ ತೋರಿಸಿ ಬೆದರಿಸಿ ಮನೆಯವರನ್ನು ಕಟ್ಟಿಹಾಕಿ ನೆಕ್ಲೇಸ್, ಕರಿಮಣಿ ಸರ, ಚೈನ್, ಕಿವಿಯೋಲೆ ಪಡೆದುಕೊಂಡಿದ್ದಲ್ಲದೆ ಬೆಡ್ ರೂಮಿನ ಕಪಾಟಿನಲ್ಲಿದ್ದ ನಗದು, ಮೊಬೈಲ್

ಪುತ್ತೂರು: ಚೂರಿ ತೋರಿಸಿ ಬೆದರಿಸಿ, ಮನೆಯವರನ್ನು ಕಟ್ಟಿಹಾಕಿ ದರೋಡೆ ► ಹಣ, ಚಿನ್ನಾಭರಣ ದೋಚಿದ ದರೋಡೆಕೋರರು Read More »

ಕರಾವಳಿ

ಕಡಬದ ಏಮ್ಸ್ ಕಾಲೇಜಿನಲ್ಲಿ ನಾಳೆ(ಡಿ.23) ಸ್ನೇಹ ಸಮ್ಮಿಲನ ► ಪೂರ್ವ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಡಿ.22. ಎ.ಎಂ.ಎಸ್ ಮತ್ತು ಏಮ್ಸ್ ಹಳೇ ವಿದ್ಯಾರ್ಥಿ ಸಂಘಗಳ ಒಕ್ಕೂಟದ ವತಿಯಿಂದ ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಪೂರ್ವ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ 09.30 ಕ್ಕೆ ಏಮ್ಸ್ ಪ್ರಥಮ ದರ್ಜೆ ಕಾಲೇಜು ಆವರಣದ ಗೋಪಾಲರಾವ್ ವೇದಿಕೆಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಏಮ್ಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸೆಮೀರಾ ಕೆ.ಎ. ನಿರ್ವಹಿಸಲಿದ್ದು, ಏಮ್ಸ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಕುಮಾರಿ ಫೌಝಿಯಾ ಬಿ.ಎಸ್.

ಕಡಬದ ಏಮ್ಸ್ ಕಾಲೇಜಿನಲ್ಲಿ ನಾಳೆ(ಡಿ.23) ಸ್ನೇಹ ಸಮ್ಮಿಲನ ► ಪೂರ್ವ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ Read More »

ಕರಾವಳಿ

ಕಡಬ: ತನ್ನ ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಡಿ.22. ಮದ್ದು ತರಲೆಂದು ತೆರಳಿದ್ದ ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಠಾಣಾ ವ್ಯಾಪ್ತಿಯ ಐತ್ತೂರು ಎಂಬಲ್ಲಿ ಡಿ.13 ರಂದು ನಡೆದಿದ್ದು, ಈ ಬಗ್ಗೆ ಹುಡುಕಾಡಿದ ಮಹಿಳೆಯ ಮನೆಯವರು ತಡವಾಗಿ ಕಡಬ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಮಹಿಳೆಯನ್ನು ಐತ್ತೂರು ಗ್ರಾಮದ ಓಟೆಕಜೆ ನಿವಾಸಿ ಸ್ವಾಮಿವೇಲು ಎಂಬವರ ಪತ್ನಿ ಜ್ಯೋತಿ ಮಾಲಾರ್(30) ಹಾಗೂ ಮಕ್ಕಳಾದ ವರ್ಷಿಣಿ(9) ನಿದೀಶ್(7) ಎಂದು ಗುರುತಿಸಲಾಗಿದೆ. ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಪತ್ತೆಯಾಗದಿದ್ದಾಗ ಕಡಬ ಪೊಲೀಸರಿಗೆ ದೂರು ನೀಡಿದ್ದು,

ಕಡಬ: ತನ್ನ ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ Read More »

ಕರಾವಳಿ

ಮಿತ್ತೂರು: ಪಾದಚಾರಿಗೆ ಢಿಕ್ಕಿ ಹೊಡೆದು ಓಮ್ನಿ ಪಲ್ಟಿ ► ಪಾದಚಾರಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.22. ಓಮ್ನಿ ಕಾರೊಂದು ಢಿಕ್ಕಿಯಾಗಿ ಪಾದಚಾರಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರದಂದು ರಾತ್ರಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಿತ್ತೂರು ತಿರುವಿನಲ್ಲಿ ನಡೆದಿದೆ. ಮೃತರನ್ನು ಪುತ್ತೂರು ತಾಲೂಕಿನ ಕೆದಿಲ ಗ್ರಾಮದ ಕರಿಮಜಲು ನಿವಾಸಿ ಬಾಲಕೃಷ್ಣ(33 ವ.) ಎಂದು ಗುರುತಿಸಲಾಗಿದೆ. ಇವರು ಮಿತ್ತೂರು ತಿರುವಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಾಣಿ ಕಡೆಯಿಂದ ಬಂದ ಕೇರಳ ನೋಂದಣಿಯ ಓಮ್ನಿ ಕಾರು ಇವರಿಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಬಾಲಕೃಷ್ಣರವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ

ಮಿತ್ತೂರು: ಪಾದಚಾರಿಗೆ ಢಿಕ್ಕಿ ಹೊಡೆದು ಓಮ್ನಿ ಪಲ್ಟಿ ► ಪಾದಚಾರಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ
Scroll to Top