ಕಡಬ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ಕೆ.ಎಸ್.ಬಾಲಕೃಷ್ಣ ಕೊೖಲ, ಪ್ರ.ಕಾರ್ಯದರ್ಶಿಯಾಗಿ ನಾಗರಾಜ್ ಎನ್.ಕೆ. ಪುನರಾಯ್ಕೆ
(ನ್ಯೂಸ್ ಕಡಬ) newskadaba.com ಕಡಬ, ಜ.05. ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷರಾಗಿ ವಿಜಯಕರ್ನಾಟಕ ಪತ್ರಿಕೆಯ ಕಡಬ ವರದಿಗಾರ ಕೆ.ಎಸ್.ಬಾಲಕೃಷ್ಣ ಕೊೖಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ಕಡಬ ವರದಿಗಾರ ನಾಗರಾಜ್ ಎನ್.ಕೆ ಪುನರಾಯ್ಕೆಯಾಗಿದ್ದಾರೆ. ಶುಕ್ರವಾರದಂದು ಕಡಬದ ಪ್ರೆಸ್ ಕ್ಲಬ್ನಲ್ಲಿ ಬಾಲಕೃಷ್ಣ ಕೊೖಲ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಹೊಸದಿಗಂತ ಹಾಗೂ ಉದಯವಾಣಿಯ ಸವಣೂರು ವರದಿಗಾರ ಪ್ರವೀಣ್ ಚೆನ್ನಾವರ, ಜತೆ ಕಾರ್ಯದರ್ಶಿಯಾಗಿ ವಾರ್ತಾಭಾರತಿ ಪತ್ರಿಕೆಯ ಕಡಬ ವರದಿಗಾರ ತಸ್ಲೀಂ ಮರ್ಧಾಳ, ಕೋಶಾಧಿಕಾರಿಯಾಗಿ […]










