ಡೆತ್ ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.09. ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆಯಲ್ಲಿ ಸೋಮವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಹಾಸನ ಮೂಲದ ತೇಜಸ್(17) ಎಂದು ಗುರುತಿಸಲಾಗಿದೆ. ಈತ ತನ್ನ ಪೋಷಕರ ಹಾಗೂ ಗೆಳೆಯರ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ‌ ಡೆತ್ ನೋಟ್ ಬರೆದಿಟ್ಟು ಸೋಮವಾರ ರಾತ್ರಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಡೆತ್ ನೋಟನ್ನು ವಶಪಡಿಸಿಕೊಂಡಿರುವ ಮೂಡುಬಿದಿರೆ […]

ಡೆತ್ ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ Read More »

ಕರಾವಳಿ

ಕರಿಬೇವಿನ ಸೇವನೆಯಿಂದ ಉಂಟಾಗುವ ಲಾಭಗಳು ತಿಳಿದಿವೆಯಾ…?

(ನ್ಯೂಸ್ ಕಡಬ) newskadaba.com ಆರೋಗ್ಯ, ಜ.09. ಕರಿಬೇವಿನ ಸೇವನೆಯಿಂದಾಗುವ 10 ಆಶ್ಚರ್ಯಕರ ಲಾಭಗಳು ಯಾವುದೆಂದು ತಿಳಿದಿವೆಯಾ…? ಕರಿಬೇವಿನ ಎಲೆಗಳಲ್ಲಿರುವ ಕಾರ್ಬಾಜೋಲ್ ಅಲ್ಕಲಾಯಿಡ್ಸ್ ಅಂಶಗಳು ಅತಿಸಾರವನ್ನು ತಡೆಗಟ್ಟಲು ಸಹಕಾರಿಯಾಗಿವೆ. ಕರಿಬೇವಿನಲ್ಲಿರುವ ಫೀನಾಲ್ ಹೆಸರಿನ ರಾಸಾಯನಿಕ ಘಟಕ ಲುಕೇಮಿಯಾ, ಪ್ರೊಸ್ಟ್ರೇಟ್ ಕ್ಯಾನ್ಸರ್ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಕರಿಬೇವಿನ ಸೇವನೆ ರಕ್ತದಲ್ಲಿನ ಸಕ್ಕರೆ ಅಂಶದ ಸಮತೋಲನವನ್ನು ಕಾಪಾಡಿ ಡಯಾಬಿಟೀಸ್ ಕಾಯಿಲೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಎ, ಬಿ, ಸಿ, ಇ ವಿಟಾಮಿನ್ ಹಾಗೂ ಆ್ಯಂಟಿ ಆ್ಯಕ್ಷಿಡೆಂಟ್ ಗಳನ್ನು ಹೊಂದಿರುವ ಕರಿಬೇವು

ಕರಿಬೇವಿನ ಸೇವನೆಯಿಂದ ಉಂಟಾಗುವ ಲಾಭಗಳು ತಿಳಿದಿವೆಯಾ…? Read More »

ಆರೋಗ್ಯ ಮಾಹಿತಿ

ಮಂಗಳೂರಿನಲ್ಲೂ ಆರಂಭವಾಯಿತು ಸಂಗೀತ ಕಾರಂಜಿ, ಲೇಸರ್ ಶೋ ► ಕದ್ರಿ ಪಾರ್ಕ್‌ನಲ್ಲಿ ಸಂಗೀತ ಕಾರಂಜಿಗೆ‌ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.09. ಲೇಸರ್ ಶೋ ಹಾಗೂ ಸಂಗೀತ ಕಾರಂಜಿ ನೋಡಬೇಕೆಂದಿದ್ದವರಿಗೆ ಸಂತೋಷದ ಸುದ್ದಿಯೊಂದಿದೆ‌. ಇನ್ಮುಂದೆ ಸಂಗೀತ ಕಾರಂಜಿ ನೋಡಬೇಕಾದಲ್ಲಿ ಮೈಸೂರಿಗೆ ತೆರಳಬೇಕೆಂದಿಲ್ಲ. ಕರಾವಳಿಯ ಹೃದಯಭಾಗದ ಕದ್ರಿಯಲ್ಲಿರುವ ಕದ್ರಿ ಜಿಂಕೆ ಉದ್ಯಾನವನದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಸಂಗೀತ ಕಾರಂಜಿ, ಲೇಸರ್ ಶೋ, ಪುಟಾಣಿ ರೈಲು ಮೊದಲಾದ ಉದ್ಯಾನವನದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಪಾರ್ಕ್‌ಗೆ ಬರುವ ಪರಿಸರ ಪ್ರೇಮಿಗಳ ಆಸೆಯನ್ನು ನೆರವೇರಿಸಲು ಮಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ಯೋಜನೆಗಳನ್ನು ಹಾಕಿವೆ. ನೂತನವಾಗಿ ಆರಂಭಗೊಂಡಿರುವ ಸಂಗೀತ ಕಾರಂಜಿ, ಲೇಸರ್

ಮಂಗಳೂರಿನಲ್ಲೂ ಆರಂಭವಾಯಿತು ಸಂಗೀತ ಕಾರಂಜಿ, ಲೇಸರ್ ಶೋ ► ಕದ್ರಿ ಪಾರ್ಕ್‌ನಲ್ಲಿ ಸಂಗೀತ ಕಾರಂಜಿಗೆ‌ ಚಾಲನೆ Read More »

ಕರಾವಳಿ

ದೀಪಕ್ ರಾವ್ ಹತ್ಯೆಗೆ ಬಿಜೆಪಿ ಕಾರ್ಪೋರೇಟರ್ ಸುಪಾರಿ ► ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ

(ನ್ಯೂಸ್ ಕಡಬ) newskadaba.com ಮೈಸೂರು, ಜ.08. ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳದಲ್ಲಿ ಜನವರಿ 3ರಂದು ಹಾಡುಹಗಲೇ ದುಷ್ಕರ್ಮಿಗಳಿಂದ ಬರ್ಬರ ಹತ್ಯೆಗೀಡಾದ‌ ದೀಪಕ್ ರಾವ್ ಹತ್ಯೆಗೆ ಬಿಜೆಪಿಯ ಸ್ಥಳೀಯ ಕಾರ್ಪೋರೇಟರ್ ಸುಪಾರಿ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ‌ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪಕ್ ರಾವ್ ಹತ್ಯೆ ಹಿಂದೆ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಸುಪಾರಿ ನೀಡಿರುವುದರ ಬಗ್ಗೆ ನನಗೆ ಮಾಹಿತೆಯಿದೆ. ಆದರೆ ಈ ಸತ್ಯಗಳೆಲ್ಲವನ್ನೂ ತನಿಖಾ ಸಂಸ್ಥೆಗಳ ಮೂಲಗಳಿಂದ ಮಾಹಿತಿ ಪಡೆದಿರುವ ಆಡಳಿತಾರೂಢ

ದೀಪಕ್ ರಾವ್ ಹತ್ಯೆಗೆ ಬಿಜೆಪಿ ಕಾರ್ಪೋರೇಟರ್ ಸುಪಾರಿ ► ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ Read More »

ಕರ್ನಾಟಕ

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಹೊಡೆದಾಟ ► ಜೈಲರ್ ಸೇರಿ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.08. ಓರ್ವ ಕೈದಿಯನ್ನು ಇನ್ನೋರ್ವ ಕೈದಿ ಗುರಾಯಿಸಿ ನೋಡಿದ್ದಾನೆ ಎಂಬ ಕಾರಣಕ್ಕಾಗಿ ಕೈದಿಗಳು ಹೊಡೆದಾಡಿಕೊಂಡ ಘಟನೆ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಸಂಜೆ ನಡೆದಿದೆ. ಘಟನೆಯಲ್ಲಿ ಇಬ್ಬರು ಕೈದಿಗಳು ಹಾಗೂ ಹೊಡೆದಾಟವನ್ನು ಬಿಡಿಸಲು ಹೋಗಿದ್ದ ಜೈಲರ್‌ ಗಾಯಗೊಂಡಿದ್ದು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರದಂದು ಸಂಜೆ ಸಂದರ್ಶನ ಸಮಯದಲ್ಲಿ ಓರ್ವ ಕೈದಿ ಇನ್ನೋರ್ವನನ್ನು ಗುರಾಯಿಸಿ ನೋಡಿದ್ದ ಎಂದು ಕೈದಿಗಳು ಹೊಡೆದಾಡಿಕೊಂಡಿದ್ದು, ಈ ವೇಳೆ ಇವರನ್ನು ಬಿಡಿಸಲು ಹೋದ ಜೈಲರ್ ಎಸ್.ಬಿ.ಪಾಟೀಲ್ ಅವರ

ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಹೊಡೆದಾಟ ► ಜೈಲರ್ ಸೇರಿ ಮೂವರಿಗೆ ಗಾಯ Read More »

ಕರಾವಳಿ

ಜ.20 ರಿಂದ ಶಿರಾಡಿ ಘಾಟ್ ರಸ್ತೆ ಬಂದ್ ► ವಾಹನಗಳನ್ನು A ಮತ್ತು B ಪಟ್ಟಿಗೆ ಸೇರಿಸಿ ಬದಲಿ ಸಂಚಾರಕ್ಕೆ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಹಾಸನ, ಜ.08. ಇದೇ ತಿಂಗಳ 20 ರಿಂದ ಮಂಗಳೂರು-ಬೆಂಗಳೂರು ಮಾರ್ಗದ ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಸ್ತೆ ಬಂದ್ ಮಾಡಲಾಗುತ್ತಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ. ಸಕಲೇಶಪುರ ಪ್ಲಾಂಟರ್ಸ್ ಕ್ಲಬ್ ನಲ್ಲಿ ಶಿರಾಡಿ ಘಾಟ್ ರಸ್ತೆಯ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡುವ ಮತ್ತು ಸಾಧಕ ಭಾದಕಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಸಚಿವರು, ಅಧಿಕವಾದ ಮಳೆಯಿಂದ

ಜ.20 ರಿಂದ ಶಿರಾಡಿ ಘಾಟ್ ರಸ್ತೆ ಬಂದ್ ► ವಾಹನಗಳನ್ನು A ಮತ್ತು B ಪಟ್ಟಿಗೆ ಸೇರಿಸಿ ಬದಲಿ ಸಂಚಾರಕ್ಕೆ ವ್ಯವಸ್ಥೆ Read More »

ಕರ್ನಾಟಕ

ರಾಜ್ಯ ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ► ಐವರು ಸಜೀವ ದಹನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08. ಬೆಳ್ಳಂಬೆಳಗ್ಗೆ ಉಂಟಾದ ಅಗ್ನಿ ಅವಘಡದಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಮಲಗಿದ್ದ ಐವರು ಸಜೀವ ದಹನವಾದ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಬಾರ್ ಅಂಡ್ ರೆಸ್ಟೋರೆಂಟ್‍ವೊಂದರಲ್ಲಿ ಸೋಮವಾರ ನಡೆದಿದೆ. ಹಳೆಯದಾದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಕೈಲಾಸ್ ಬಾರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ನಂತರ ಬೆಂಕಿಯ ಕೆನ್ನಾಲಗೆ ಇಡೀ ಕಟ್ಟಡವನ್ನೇ ಆವರಿಸಿದೆ. ಕಟ್ಟಡದಲ್ಲಿ ಯಾವುದೇ ಎಮರ್ಜೆನ್ಸಿ ಎಕ್ಸಿಟ್ ಇಲ್ಲದ ಕಾರಣ ರಾತ್ರಿ ಕೆಲಸ‌ ಮುಗಿಸಿ ನಿದ್ದೆ ಮಾಡಿ ಮಲಗಿದ್ದ

ರಾಜ್ಯ ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ► ಐವರು ಸಜೀವ ದಹನ Read More »

ಕರ್ನಾಟಕ

ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆ ► ಡಾ|| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.08. ಚಳಿಗಾಲ ಬಂತೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಚಳಿಗಾಲವನ್ನು ಇಷ್ಟಪಡುವವರೆ. ಮಳೆಗಾಲ ಮುಗಿದು ಚಳಿಗಾಲ ಶುರುವಾಗುತ್ತಿದ್ದಂತೆ ಬಣ್ಣ ಬಣ್ಣದ ಸ್ವೆಟರ್ಗಳು ವಾರ್ಡ್ರೋಬ್ನಲ್ಲಿ ತುಂಬಿ ಹೋಗಿರುತ್ತದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಿ, ಅದು ನಮ್ಮ ದೇಹದ ಚರ್ಮಕ್ಕೆ ಬಹಳ ತೊಂದರೆ ನೀಡುವ ಸಾಧ್ಯತೆ ಇದೆ. ಚಳಿಯಾದ ಗಾಳಿ ಮತ್ತು ಗಾಳಿಯಲ್ಲಿ ಕಡಿಮೆಯಾದ ನೀರಿನಂಶದಿಂದಾಗಿ, ಒಣಗಾಳಿಯಿಂದ ಚರ್ಮಕ್ಕೆ ಬಹಳ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಗಾಳಿಯಲ್ಲಿ ತೇವಾಂಶ ಕಡಿಮೆ

ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆ ► ಡಾ|| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲು ವಿಫಲ: ಸಂಸದ ನಳಿನ್ ► ಬಶೀರ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲು ಸಂಸದರಿಂದ ಆಗ್ರಹ

(ನ್ಯೂಸ್ ಕಡಬ) newskadaba.com ಉಡುಪಿ, ಜ.08. ಮಂಗಳೂರಿನ ಕೊಟ್ಟಾರಚೌಕಿಯಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಭಾನುವಾರ ಮೃತಪಟ್ಟ ಫಾಸ್ಟ್ ಫುಡ್ ವ್ಯಾಪಾರಿ ಬಶೀರ್ ಕುಟುಂಬಕ್ಕೆ ರಾಜ್ಯ ಸರಕಾರ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ. ಅವರು ಭಾನುವಾರದಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತಾಂಧರಿಂದ ನಿರಂತರ ಹತ್ಯೆಗಳು ನಡೆಯುತ್ತಿದ್ದು, ಇಂತಹ ಕೃತ್ಯ ಖಂಡನೀಯ. ಯಾವುದೇ ಧ್ವೇಷ ಇದ್ದರೂ ಕಾನೂನು ಕೈಗೆತ್ತಿಕೊಂಡು ಒಬ್ಬ ವ್ಯಕ್ತಿಯನ್ನು ಹತ್ಯೆಗೈಯ್ಯುವ ಹಕ್ಕು ಯಾರಿಗೂ

ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲು ವಿಫಲ: ಸಂಸದ ನಳಿನ್ ► ಬಶೀರ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲು ಸಂಸದರಿಂದ ಆಗ್ರಹ Read More »

ಕರಾವಳಿ

ದೀಪಕ್ ನಿವಾಸಕ್ಕೆ ತೆರಳಿದ ಬೆನ್ನಲ್ಲೇ ಬಶೀರ್ ಮನೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.07. ನಾಲ್ಕು ದಿನಗಳ ಹಿಂದೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಇಂದು ಮೃತಪಟ್ಟ ಬಶೀರ್ ಅವರ ಮಂಗಳೂರಿನ ಆಕಾಶಭವನದಲ್ಲಿರುವ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ರಾತ್ರಿ ಭೇಟಿ ನೀಡಿ ಸಾಂತ್ವನ ಹೇಳಿದರು. ಬಶೀರ್ ರವರ ಪುತ್ರರಿಗೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದರು. ಈ ಸಂದರ್ಭ ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್, ಶಾಸಕ ಮೊಯ್ದಿನ್ ಬಾವ, ಮೇಯರ್ ಕವಿತಾ

ದೀಪಕ್ ನಿವಾಸಕ್ಕೆ ತೆರಳಿದ ಬೆನ್ನಲ್ಲೇ ಬಶೀರ್ ಮನೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ Read More »

ಕರಾವಳಿ
Scroll to Top