ಆಕಾಶಭವನ ಬಶೀರ್ ಕೊಲೆ ಪ್ರಕರಣ ► ಮತ್ತೋರ್ವ ಆರೋಪಿ ಪುತ್ತೂರಿನಲ್ಲಿ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.06. ಇತ್ತೀಚೆಗೆ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ನಡೆದ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ನಡೆದ ಆಕಾಶಭವನ ನಿವಾಸಿ ಬಶೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಕಾವೂರು ಪೊಲೀಸರು ಸೋಮವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಭಿಷೇಕ್ ಆರ್.ಎಸ್.(21) ಎಂದು ಗುರುತಿಸಲಾಗಿದೆ. ಪುತ್ತೂರು ತಾಲೂಕಿನ ಬನ್ನೂರು ಎಂಬಲ್ಲಿದ್ದ ಆರೋಪಿಯನ್ನು ವಿಶೇಷ ತನಿಖಾ ತಂಡದ ಕಾವೂರು ಠಾಣಾ ಪೊಲೀಸ್ ನಿರೀಕ್ಷಕ ಕೆ.ಆರ್.ನಾಯ್ಕ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪ್ರಕರಣಕ್ಕೆ […]

ಆಕಾಶಭವನ ಬಶೀರ್ ಕೊಲೆ ಪ್ರಕರಣ ► ಮತ್ತೋರ್ವ ಆರೋಪಿ ಪುತ್ತೂರಿನಲ್ಲಿ ಬಂಧನ Read More »

ಕರಾವಳಿ

ನೆಕ್ಕಿಲಾಡಿ: ಅಕ್ರಮ ಮದ್ಯ ಮಾರಾಟ ► ಹೊಟೇಲ್ ಮಾಲಕ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.06. ಯಾವುದೇ ಪರವಾನಗಿ ಇಲ್ಲದೆ ಅಕ್ರಮ ಮದ್ಯ ಮಾರಾಟವನ್ನು ಪತ್ತೆಹಚ್ಚಿರುವ ಬಂಟ್ವಾಳ ಪೊಲೀಸರು ವಿವಿಧ ಕಂಪೆನಿಗಳ ಮದ್ಯವನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ಕಡೇಶ್ವಾಲ್ಯದಲ್ಲಿ ಸೋಮವಾರದಂದು ನಡೆದಿದೆ. ಕಡೆಶ್ವಾಲ್ಯದ ನೆಕ್ಕಿಲಾಡಿಯ ಹೊಟೆಲ್ ನಲ್ಲಿ ಅಕ್ರಮವಾಗಿ ಯಾವುದೇ ಪರವಾನಗೆ ಇಲ್ಲದೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ 4,720 ರೂ ಬೆಲೆಯ ವಿವಿಧ ಕಂಪನಿಗಳ 11.880 ಲೀಟರ್

ನೆಕ್ಕಿಲಾಡಿ: ಅಕ್ರಮ ಮದ್ಯ ಮಾರಾಟ ► ಹೊಟೇಲ್ ಮಾಲಕ ಬಂಧನ Read More »

ಕರಾವಳಿ

ಕೌಕ್ರಾಡಿ: ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.05. ಅನಾರೋಗ್ಯದಿಂದ ಬಳಲುತ್ತಿದ್ದ ಅವಿವಾಹಿತ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ಕೌಕ್ರಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೌಕ್ರಾಡಿ ಗ್ರಾಮದ ಕೊಕ್ಕಡ ಕಾಪಿನ ಬಾಗಿಲು ನಿವಾಸಿ ದಿ| ದುಗ್ಗಣ್ಣ ಗೌಡ ಎಂಬವರ ಪುತ್ರ ನೇಮಣ್ಣ ಗೌಡ (56) ಎಂದು ಗುರುತಿಸಲಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಇವರು ತನ್ನ ಅನಾರೋಗ್ಯ ಪೀಡಿತ ತಾಯಿಯೊಂದಿಗೆ ವಾಸವಾಗಿದ್ದರು. ಅವಿವಾಹಿತರಾಗಿದ್ದ ಇವರು ಸೋಮವಾರ ಸಂಜೆ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೌಕ್ರಾಡಿ: ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ

ಮುಲ್ಕಿ: ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮುಲ್ಕಿ, ಫೆ.05. ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಲ್ಕಿಯ ಪೆಟ್ರೋಲ್ ಪಂಪು ಬಳಿ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಕಾರ್ನಾಡು ಸಮೀಪದ ಸುಖಾನಂದ ನಗರ ನಿವಾಸಿ ಮಧುಸೂಧನ್ ಕಾಮತ್ (61) ಎಂದು ಗುರುತಿಸಲಾಗಿದೆ. ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದು ಮಧುಸೂಧನ್ ಕಾಮತ್‌ ಸೋಮವಾರ ರಾತ್ರಿ ತನ್ನ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಮಂಗಳೂರು ಕಡೆಯಿಂದ ಹೋಗುತ್ತಿದ್ದ ಬಸ್ ಢಿಕ್ಕಿ ಹೊಡೆದಿದ್ದು, ಗಂಭೀರ

ಮುಲ್ಕಿ: ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಸಿದ್ದರಾಮಯ್ಯ ಸರಕಾರವನ್ನು ಹೊಗಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ರಾಜ್ಯಪಾಲ ► ಕಾಂಗ್ರೆಸ್ ವಿರುದ್ಧ ಪ್ರಧಾನಿಯಿಂದ ತೆಗಳಿಕೆ, ರಾಜ್ಯಪಾಲರಿಂದ ಹೊಗಳಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.05. ಭಾನುವಾರದಂದು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಹೀನಾ ಮಾನ ಟೀಕಿಸಿದರು. ಆದರೆ ಇಂದು ಅದೇ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲ ವಜುಭಾಯ್ ವಾಲಾ ಬಾಯ್ತುಂಬ ಹೊಗಳಿದ್ದಾರೆ. ವಿಧಾನಮಂಡಲ ಅಧಿವೇಶನದ ಮೊದಲ ದಿನವಾದ ಇಂದು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯ ಸರ್ಕಾರದ ಸಾಧನೆಗಳು, ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿ ಓದಿದರು. ಸರ್ಕಾರದ ಸಾಧನೆಗೆ

ಸಿದ್ದರಾಮಯ್ಯ ಸರಕಾರವನ್ನು ಹೊಗಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ರಾಜ್ಯಪಾಲ ► ಕಾಂಗ್ರೆಸ್ ವಿರುದ್ಧ ಪ್ರಧಾನಿಯಿಂದ ತೆಗಳಿಕೆ, ರಾಜ್ಯಪಾಲರಿಂದ ಹೊಗಳಿಕೆ Read More »

ಕರ್ನಾಟಕ

ನೇತ್ರಾವತಿ ನದಿಯಲ್ಲಿನ ಅಕ್ರಮ ಮರಳು ಅಡ್ಡೆಗೆ ದಾಳಿ ► ಎಂಟು ಮಂದಿಯ ಬಂಧನ, 15 ಲಕ್ಷದ ಸೊತ್ತು ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.05. ನಾಡ ದೋಣಿಯನ್ನು ಬಳಸಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಹಾಗೂ ಕಂದಾಯ ಇಲಾಖಾಧಿಕಾರಿಗಳು 15 ಲಕ್ಷ ಮೌಲ್ಯದ ಸೊತ್ತುಗಳ ಸಹಿತ 8 ಮಂದಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಭಾನುವಾರದಂದು ತಾಲೂಕಿನ ಅರಳ ಗ್ರಾಮದ ಮುಲಾರ ಪಟ್ಟಣದ ನೇತ್ರಾವತಿ ನದಿ ದಂಡೆಯಲ್ಲಿ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಎಸ್ಪಿ ರವಿಕಾಂತೇಗೌಡ IPS ರವರ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್ಪಿ ಸಜಿತ್ ರವರ ನೇತೃತ್ವದಲ್ಲಿ ಬಂಟ್ವಾಳ ತಹಶೀಲ್ದಾರ್

ನೇತ್ರಾವತಿ ನದಿಯಲ್ಲಿನ ಅಕ್ರಮ ಮರಳು ಅಡ್ಡೆಗೆ ದಾಳಿ ► ಎಂಟು ಮಂದಿಯ ಬಂಧನ, 15 ಲಕ್ಷದ ಸೊತ್ತು ವಶಕ್ಕೆ Read More »

ಕರಾವಳಿ

ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲವೆಂಬ ಆಕ್ರೋಶ ► ಕಾಂಗ್ರೆಸ್ ಶಾಸಕ ಇಕ್ಬಾಲ್ ಅನ್ಸಾರಿಗೆ ಚೊಂಬು, ಚಪ್ಪಲಿ ಎಸೆದ ಮಹಿಳೆಯರು

(ನ್ಯೂಸ್ ಕಡಬ) newskadaba.com ಕೊಪ್ಪಳ, ಫೆ.05. ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರು ತಂಬಿಗೆ ಮತ್ತು ಚಪ್ಪಲಿ ಎಸೆದ ಘಟನೆ ಭಾನುವಾರ ರಾತ್ರಿ ನಡೆದಿದ್ದು ಈ ಮೂಲಕ ಶಾಸಕ ಇಕ್ಬಾಲ್​ ಅನ್ಸಾರಿಗೆ ಮತ್ತೊಮ್ಮೆ ಅವಮಾನವಾಗಿದೆ. ಭಾನುವಾರ ರಾತ್ರಿ ಕೊಪ್ಪಳದ ಗಂಗಾವತಿ ನಗರದ 28 ನೇ ವಾರ್ಡ್​ ವೀಕ್ಷಣೆಗೆ ಹೋಗಿದ್ದ ಅನ್ಸಾರಿ ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅನ್ಸಾರಿ ಅವರ ಭಾಷಣಕ್ಕೆ ಮಹಿಳೆಯರು ಅಡ್ಡಿ ಪಡಿಸಿದ್ದು, ಮಹಿಳೆಯರನ್ನು

ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲವೆಂಬ ಆಕ್ರೋಶ ► ಕಾಂಗ್ರೆಸ್ ಶಾಸಕ ಇಕ್ಬಾಲ್ ಅನ್ಸಾರಿಗೆ ಚೊಂಬು, ಚಪ್ಪಲಿ ಎಸೆದ ಮಹಿಳೆಯರು Read More »

ಕರ್ನಾಟಕ

ಬೊಳುವಾರು: ಗುಜಿರಿ ಅಂಗಡಿಗೆ ಬೆಂಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.05. ಇಲ್ಲಿನ ಬೊಳುವಾರು ಸಮೀಪವಿರುವ ಗುಜಿರಿ ಅಂಗಡಿಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದ ಘಟನೆ ಭಾನುವಾರದಂದು ಮಧ್ಯಾಹ್ನ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕಾಗಮಿಸಿ ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಬೆಂಕಿ ಇನ್ನಷ್ಟು ವಿಪರೀತವಾಗುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಸ್ಥಳೀಯ ಮನೆಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಅಲ್ಲಿಂದ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಘಟನಾ ಸ್ಥಳದಲ್ಲಿ ನರೆದಿದ್ದವರನ್ನು ಚದುರಿಸಲು

ಬೊಳುವಾರು: ಗುಜಿರಿ ಅಂಗಡಿಗೆ ಬೆಂಕಿ Read More »

ಕರಾವಳಿ

ಯುದ್ಧ ವಿರಾಮ ಉಲ್ಲಂಘಿಸಿ ಭಾರತೀಯ ಮಿಲಿಟರಿ ನೆಲೆಗೆ ದಾಳಿ ನಡೆಸಿದ ಪಾಕ್ ಉಗ್ರರು ► ಮೂವರು ಭಾರತೀಯ ಸೈನಿಕರು ಹುತಾತ್ಮ

(ನ್ಯೂಸ್ ಕಡಬ) newskadaba.com ಜಮ್ಮು ಕಾಶ್ಮೀರ, ಫೆ.05. ಗಡಿ ನಿಯಂತ್ರಣಾ ರೇಖೆಯ ಬಗ್ಗೆ ಪಾಕಿಸ್ತಾನಿ ಉಗ್ರರು ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಭಾರತದ ಮೂವರು ಸೈನಿಕರು ಹುತಾತ್ಮರಾದ ಘಟನೆ ಭಾನುವಾರದಂದು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದಿದೆ. ಯುದ್ಧ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನಿ ಉಗ್ರರು ಭಾರತದ ಮಿಲಿಟರಿ ನೆಲೆ ಮತ್ತು ಪೂಂಛ್ ಮತ್ತು ರಾಜೌರಿ ಜಿಲ್ಲೆಯ ಗ್ರಾಮದಲ್ಲಿ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿದರು. ಭಾರತದ ಸೈನಿಕರು ಪ್ರತಿದಾಳಿ ನಡೆಸಿದ್ದು, ಉಗ್ರರ ದಾಳಿಯಲ್ಲಿ 15 ವರ್ಷದ

ಯುದ್ಧ ವಿರಾಮ ಉಲ್ಲಂಘಿಸಿ ಭಾರತೀಯ ಮಿಲಿಟರಿ ನೆಲೆಗೆ ದಾಳಿ ನಡೆಸಿದ ಪಾಕ್ ಉಗ್ರರು ► ಮೂವರು ಭಾರತೀಯ ಸೈನಿಕರು ಹುತಾತ್ಮ Read More »

ರಾಷ್ಟ್ರೀಯ ನ್ಯೂಸ್

ಕರೋಪಾಡಿ: ಜುಗಾರಿ ಅಡ್ಡೆಗೆ ದಾಳಿ ► ನಾಲ್ವರ ಬಂಧನ, ನಗದು ಸೇರಿದಂತೆ ನಾಲ್ಕು ಬೈಕ್ ವಶಕ್ಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ‌.04. ಠಾಣಾ ವ್ಯಾಪ್ತಿಯ ಕರೊಪಾಡಿ ಗ್ರಾಮದ ಆನೇಕಲ್ಲು ಎಂಬಲ್ಲಿ ಜುಗಾರಿ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಆರೋಪಗಳನ್ನು ಬಂಧಿಸಿ 6250/- ರೂ, ಹಾಗೂ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡ ಘಟನೆ ಭಾನುವಾರದಂದು ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಿಟ್ಲ ಠಾಣಾ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಹಾಗೂ ಸಿಬ್ಬಂದಿಗಳು ಆಟದಲ್ಲಿ ನಿರತರಾಗಿದ್ದ ಮಂಜೇಶ್ವರ ನಿವಾಸಿ ಜಿತೇಂದ್ರ(23), ಸಾಲೆತ್ತೂರು ನಿವಾಸಿ ಹ್ಯಾರಿಸ್ (25), ದೇರಳಕಟ್ಟೆ ನಿವಾಸಿ ಅಬ್ಬಾಸ್(48) ಹಾಗೂ ಮಂಜೇಶ್ವರ

ಕರೋಪಾಡಿ: ಜುಗಾರಿ ಅಡ್ಡೆಗೆ ದಾಳಿ ► ನಾಲ್ವರ ಬಂಧನ, ನಗದು ಸೇರಿದಂತೆ ನಾಲ್ಕು ಬೈಕ್ ವಶಕ್ಕೆ Read More »

ಕರಾವಳಿ
Scroll to Top