ಬಂಟ್ವಾಳ: ಪಲ್ಟಿಯಾದ ಕಂಟೈನರ್ ತೆರೆದಾಗ ಪೊಲೀಸರಿಗೆ ಕಾದಿತ್ತು ಶಾಕಿಂಗ್ ನ್ಯೂಸ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.12. ಠಾಣಾ ವ್ಯಾಪ್ತಿಯ ವಗ್ಗ ಎಂಬಲ್ಲಿ ಕಂಟೈನರ್ ಲಾರಿಯೊಂದು ಸೋಮವಾರ ಬೆಳಿಗ್ಗೆ ಉರುಳಿ ಬಿದ್ದ ಪರಿಣಾಮ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ. ವಗ್ಗದ ಬಳಿಯ ಅಂಚಿಕಟ್ಟೆ ತಿರುವಿನಲ್ಲಿ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿ ಉರುಳಿ ಬಿದ್ದಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಅದರ ಕಂಟೇನರ್ ತೆರೆದು ನೋಡಿದಾಗ ಅದರ ಒಳಗೆ ಅಕ್ರಮವಾಗಿ ದನ ಮತ್ತು ಎಮ್ಮೆಗಳನ್ನು ಸಾಗಿಸುತ್ತಿದ್ದದ್ದು ಕಂಡು ಬಂದಿದೆ. ಅದರಲ್ಲಿದ್ದ 09 ಎತ್ತು […]

ಬಂಟ್ವಾಳ: ಪಲ್ಟಿಯಾದ ಕಂಟೈನರ್ ತೆರೆದಾಗ ಪೊಲೀಸರಿಗೆ ಕಾದಿತ್ತು ಶಾಕಿಂಗ್ ನ್ಯೂಸ್ Read More »

ಕರಾವಳಿ

ಇಂದು (ಫೆ.12) ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ಖ್ ಹುದವಿ ಆತೂರಿಗೆ

(ನ್ಯೂಸ್ ಕಡಬ) newskadaba.com ಕಡಬ, ಫೆ.12. ಆತೂರು ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಎಸ್ಕೆಎಸ್ಸೆಸ್ಸೆಫ್ ಆತೂರು ಶಾಖಾ ವತಿಯಿಂದ ಇಂದು (ಫೆ.12) ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ಅಂತರಾಷ್ಟ್ರೀಯ ವಾಗ್ಮಿ ಬಹು| ಉಸ್ತಾದ್ ಸಿಂಸಾರುಲ್ ಹಖ್ಖ್ ಹುದವಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಬಹು| ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಪೊಸೋಟು ದುಃಆ ನೆರವೇರಿಸಲಿದ್ದಾರೆ. ದ.ಕ ಖಾಝಿ ತ್ವಾಖ ಅಹಮ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆತೂರು ಬಿ.ಜೆಎಂ ಖತೀಬರಾದ ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಫೈಝಿ ಅಧ್ಯಕ್ಷತೆ

ಇಂದು (ಫೆ.12) ಅಂತರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ಖ್ ಹುದವಿ ಆತೂರಿಗೆ Read More »

ಕರಾವಳಿ

ಬೆಳ್ತಂಗಡಿ: ತಂದೆ, ಸಹೋದರನಿಂದ ಚೂರಿ ಇರಿದು ವ್ಯಕ್ತಿಯ ಕೊಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ.12. ತಂದೆ ಹಾಗೂ ಸಹೋದರ ಸೇರಿಕೊಂಡು ವ್ಯಕ್ತಿಯೋರ್ವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ಮಟ್ಲ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತಪಟ್ಟವರನ್ನು ಮೂಲತಃ ಹಾಸನದ ಪ್ರಸ್ತುತ ಬೆಳ್ತಂಗಡಿಯ ಕಸಬಾ ಗ್ರಾಮದ ಮಟ್ಲ ನಿವಾಸಿ ಮಂಜುನಾಥ ಎಂಬವರ ಪುತ್ರ ನವೀನ್(28) ಎಂದು ಗುರುತಿಸಲಾಗಿದೆ. ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ತನ್ನ ತಂದೆ ಮಂಜುನಾಥ ಹಾಗೂ ಸಹೋದರ ರಾಘವೇಂದ್ರ ಸೇರಿಕೊಂಡು ಚೂರಿಯಿಂದ

ಬೆಳ್ತಂಗಡಿ: ತಂದೆ, ಸಹೋದರನಿಂದ ಚೂರಿ ಇರಿದು ವ್ಯಕ್ತಿಯ ಕೊಲೆ Read More »

ಕರಾವಳಿ

ನೀವು ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯಬೇಕೇ..? ► ಹಾಗಾದರೆ ಈ ಪರೀಕ್ಷೆಯಲ್ಲಿ ತೇರ್ಗಡೆ ಆಗಲೇಬೇಕು..!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.11. ವಿದೇಶದ ವಿವಿಗಳಲ್ಲಿ ಎಂಬಿಬಿಎಸ್ ಅಧ್ಯಯನ ನಡೆಸ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ‘ನೀಟ್’ ತೇರ್ಗಡೆಯಾಗಬೇಕು ಎಂಬ ನಿಯಮವನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ. ಇದುವರೆಗೆ ದೇಶದ ಖಾಸಗಿ ಅಥವಾ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಮಾತ್ರ ‘ನೀಟ್’ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಅನ್ವಯವಾಗುತ್ತಿತ್ತು. ಇನ್ನು ಮುಂದೆ ‘ನೀಟ್’ ತೇರ್ಗಡೆಯಾದವರಿಗೆ ಮಾತ್ರ ನಿರಾಕ್ಷೇಪಣ ಪತ್ರ ನೀಡಲಾಗುವುದು ಎಂದು ಸರಕಾರ ತಿಳಿಸಿದೆ. ವೈದ್ಯಕೀಯ ಅಧ್ಯಯನಕ್ಕೆ ವಿದೇಶಗಳಿಗೆ ತೆರಳಿ,

ನೀವು ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯಬೇಕೇ..? ► ಹಾಗಾದರೆ ಈ ಪರೀಕ್ಷೆಯಲ್ಲಿ ತೇರ್ಗಡೆ ಆಗಲೇಬೇಕು..! Read More »

ಅಂತರ್ರಾಷ್ಟ್ರೀಯ ನ್ಯೂಸ್

‘ರಾಜ್ಯದ ಸ್ವಚ್ಛ ಗ್ರಾಮ’ ಖ್ಯಾತಿಯ ಕಡಬದಲ್ಲೀಗ ಮರೀಚಿಕೆಯಾಗಿರುವ ಸ್ವಚ್ಛತೆ ► ಬಯಲು ಶೌಚದ ದುರ್ನಾಥದಿಂದ ಮೂಗು ಮುಚ್ಚಿಕೊಂಡು ತೆರಳಬೇಕಾದ ಅನಿವಾರ್ಯತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.11. ಸ್ವಚ್ಛ ಗ್ರಾಮವೆಂದು ರಾಜ್ಯದ ಗಮನ ಸೆಳೆದಿದ್ದ ಕಡಬ ತಾಲೂಕಿನ ಕೇಂದ್ರ ಸ್ಥಾನವಾದ ಕಡಬದಲ್ಲಿ ಇದೀಗ ಸ್ವಚ್ಛತೆಯ ವಿಚಾರದಲ್ಲಿ ಮೂಗು ಮುಚ್ಚಿ ಕೊಳ್ಳುವಂತಾಗಿದೆ. ಕಡಬ ತಾಲೂಕಾಗಿ ಘೋಷಣೆಯಾಗಿದ್ದು ಈಗಾಗಲೇ ತಾಲೂಕು ಕೇಂದ್ರದ ಕಾರ್ಯವೈಖರಿಗಳು ಭರದಿಂದ ಸಾಗುತ್ತಿದ್ದರೂ ಇಲ್ಲಿನ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾತ್ರ ಅಧೋಗತಿ ತಲುಪಿದ್ದು, ಎರಡು ಶೌಚಾಲಯಗಳನ್ನು ಬಂದ್ ಮಾಡಿದ್ದರ ಪರಿಣಾಮವಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ದ್ರವ ತ್ಯಾಜ್ಯ ಮತ್ತು ಘನ ತಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿ ರಾಜ್ಯದಲ್ಲಿ ಮಾದರಿ ಗ್ರಾಮವೆಂಬ ಹೆಗ್ಗಳಿಕೆಗೆ

‘ರಾಜ್ಯದ ಸ್ವಚ್ಛ ಗ್ರಾಮ’ ಖ್ಯಾತಿಯ ಕಡಬದಲ್ಲೀಗ ಮರೀಚಿಕೆಯಾಗಿರುವ ಸ್ವಚ್ಛತೆ ► ಬಯಲು ಶೌಚದ ದುರ್ನಾಥದಿಂದ ಮೂಗು ಮುಚ್ಚಿಕೊಂಡು ತೆರಳಬೇಕಾದ ಅನಿವಾರ್ಯತೆ Read More »

ಕರಾವಳಿ

ಫೆಬ್ರವರಿ 18 ರಿಂದ 22 ರವರೆಗೆ ನೆಕ್ಕಿತ್ತಡ್ಕ ಮಖಾಂ ಉರೂಸ್ ► ಉರೂಸ್ ಅಂಗವಾಗಿ ಸಾರ್ವಜನಿಕ ಉಚಿತ ದಂತ ವೈದ್ಯಕೀಯ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಫೆ.11. ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಜುಮಾ ಮಸೀದಿಯ ಅಧೀನದಲ್ಲಿರುವ ನೆಕ್ಕಿತ್ತಡ್ಕ ಮಖಾಂನಲ್ಲಿ ಫೆಬ್ರವರಿ 18 ರಿಂದ 22 ರ ವರೆಗೆ ನಡೆಯಲಿರುವ ಉರೂಸ್ ಅಂಗವಾಗಿ ದೇರಳಕಟ್ಟೆ ಯೇನೆಪೋಯ ದಂತ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ದಂತ ವೈದ್ಯಕೀಯ ಶಿಬಿರ ಹಾಗೂ YEN ಆರೋಗ್ಯ ಕಾರ್ಡ್ ನೋಂದಾವಣೆ ಶಿಬಿರವು ಭಾನುವಾರದಂದು ಮರ್ಧಾಳ ಮದರಸ ಹಾಲ್‌ನಲ್ಲಿ ನಡೆಯಿತು. 70 ಕ್ಕೂ ಅಧಿಕ ಸಾರ್ವಜನಿಕರು ದಂತ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಪಡೆದರು. ಸಭಾಧ್ಯಕ್ಷತೆಯನ್ನು ಮರ್ಧಾಳ

ಫೆಬ್ರವರಿ 18 ರಿಂದ 22 ರವರೆಗೆ ನೆಕ್ಕಿತ್ತಡ್ಕ ಮಖಾಂ ಉರೂಸ್ ► ಉರೂಸ್ ಅಂಗವಾಗಿ ಸಾರ್ವಜನಿಕ ಉಚಿತ ದಂತ ವೈದ್ಯಕೀಯ ಶಿಬಿರ Read More »

ಕರಾವಳಿ

ದುಬೈನ ಪ್ರಪ್ರಥಮ ಹಿಂದೂ ದೇವಾಲಯಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ದುಬೈ, ಫೆ.11. ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ದುಬೈನ ಮೊದಲ ಹಿಂದು ದೇವಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾನುವಾರದಂದು ಶಿಲಾನ್ಯಾಸ ನೆರವೇರಿಸಿದರು.   ಅಬುಧಾಬಿ-ದುಬೈ ರಾಷ್ಟ್ರಿಯ ಹೆದ್ದಾರಿಯಲ್ಲಿ ದುಬೈನ ಪ್ರಪ್ರಥಮ ಭವ್ಯವಾದ ಸ್ವಾಮಿ ನಾರಾಯಣ ದೇವಾಲಯ ನಿರ್ಮಾಣಕ್ಕೆ ದುಬೈ ಸರಕಾರ ಅನುಮತಿ ನೀಡಿದೆ. ಈ ವೇಳೆ ದುಬೈನ ಓಪೆರಾ ಹಾಲ್ ನಲ್ಲಿ ನೆರೆದಿದ್ದ ಸಾವಿರಾರು ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ‘ದಶಕಗಳ ನಂತರ ಭಾರತವು ಗಲ್ಫ್ ರಾಷ್ಟ್ರಗಳೊಂದಿಗೆ ಮತ್ತೆ ಬಲವಾದ ಸಂಬಂಧವನ್ನು

ದುಬೈನ ಪ್ರಪ್ರಥಮ ಹಿಂದೂ ದೇವಾಲಯಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ Read More »

ಅಂತರ್ರಾಷ್ಟ್ರೀಯ ನ್ಯೂಸ್

ತೆಂಗಿನ ಚೂರು ಗಂಟಲಲ್ಲಿ ಸಿಲುಕಿ ಶಿಕ್ಷಕಿ ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ.11. ಗಂಟಲಿನಲ್ಲಿ ಕೊಬ್ಬರಿ ಚೂರು ಸಿಲುಕಿದ ಪರಿಣಾಮ ಶಿಕ್ಷಕಿಯೊಬ್ಬರು ಮೃತಪಟ್ಟ ಆಘಾತಕಾರಿ ಘಟನೆ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯಲ್ಲಿ ಶನಿವಾರದಂದು ನಡೆದಿದೆ. ಮೃತರನ್ನು ಹಿರೇಮಗಳೂರು ನಿವಾಸಿ ಚಿಕ್ಕಮಗಳೂರಿನ ಸಂಜೀವಿನಿ ಶಾಲೆಯ ಶಿಕ್ಷಕಿ ನವ್ಯಶ್ರೀ (28) ಎಂದು ಗುರುತಿಸಲಾಗಿದೆ. ನವ್ಯಶ್ರೀ ಚಿಕ್ಕಮಗಳೂರು ನಗರದಲ್ಲಿರುವ ಸಾಲುಮರದಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದ ತೆಂಗಿನ ಕಾಯಿಯ ಚೂರನ್ನು ತಿಂದಿದ್ದು, ಅವರ ಅನ್ನನಾಳಕ್ಕೆ ಕಾಯಿಯ ಚೂರು ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಇದ್ದಕ್ಕಿದ್ದಂತೆ ಎದೆನೋವೆಂದು ಕುಸಿದು ಬಿದ್ದ ಅವರಿಗೆ ತಕ್ಷಣವೇ ಅಲ್ಲಿದ್ದ ಶಿಕ್ಷಕರು

ತೆಂಗಿನ ಚೂರು ಗಂಟಲಲ್ಲಿ ಸಿಲುಕಿ ಶಿಕ್ಷಕಿ ಮೃತ್ಯು Read More »

ಕರ್ನಾಟಕ

ಹಾರೆಯಿಂದ ಹೊಡೆದು ವ್ಯಕ್ತಿಯ ಕೊಲೆ ► ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ

(ನ್ಯೂಸ್ ಕಡಬ) newskadaba.com ಕಾಪು, ಫೆ.11. ಠಾಣಾ ವ್ಯಾಪ್ತಿಯ ಕಟಪಾಡಿ ಸಮೀಪದ ಎಂಬಲ್ಲಿ ಶನಿವಾರ ರಾತ್ರಿ ಹಾರೆಯಿಂದ ಬಡಿದು ವ್ಯಕ್ತಿಯೋರ್ವರನ್ನು ಕೊಲೆಗೈಲಾಗಿದ್ದು, ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕೊಲೆಗೀಡಾದ ವ್ಯಕ್ತಿಯನ್ನು ಉತ್ತರಭಾರತದ ಕಾರ್ಮಿಕ ಎಂದು ಶಂಕಿಸಲಾಗಿದ್ದು, ವಿವರ ಇನ್ನಷ್ಟೇ ಪತ್ತೆಯಾಗಬೇಕಾಗಿದೆ. ಕಟಪಾಡಿಯ ಅಚ್ಚಡ ಕ್ರಾಸ್ ಬಳಿ ಮರಳಿನ ರಾಶಿಯ ಮೇಲೆ ಮೃತದೇಹವು ಬಿದ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಹಾರೆಯಿಂದ ಹೊಡೆದು ವ್ಯಕ್ತಿಯ ಕೊಲೆ ► ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ Read More »

ಕರಾವಳಿ

ಆದ್ಯಪಾಡಿ ಮಹಿಳಾ ಸಿಬ್ಬಂದಿಗೆ ಲೈಂಗಿಕ‌ ಕಿರುಕುಳ ಪ್ರಕರಣಕ್ಕೆ ಹೊಸ ತಿರುವು ► ಬೈಕಿಗೆ ಢಿಕ್ಕಿ ಹೊಡೆದಿರುವುದನ್ನು ವಿಚಾರಿಸಿದ್ದಕ್ಕೆ ಕಾರಿನಲ್ಲಿದ್ದವರು ಹಲ್ಲೆ ನಡೆಸಿದ್ದಾರೆಂದು ಮರು ದೂರು

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.11. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಮಹತ್ವದ ತಿರುವು ದೊರೆತಿದ್ದು, ಪರಸ್ಪರ ವಿರುದ್ದ ದೂರುಗಳು ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಲೈಂಗಿಕ ಕಿರುಕುಳ ಆರೋಪ ಮಾಡಿದ ಯುವತಿ ಹಾಗೂ ಆಕೆಯ ಜೊತೆಯಲ್ಲಿದ್ದ ಯುವಕನ ಕಡೆಯವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ರಕ್ಷಿತ್ ಎಂಬುವರು ಶನಿವಾರದಂದು ಬಜ್ಪೆ ಠಾಣೆಗೆ ಮರು ದೂರು ನೀಡಿದ್ದಾರೆ. ವಿಮಾನ‌ ನಿಲ್ದಾಣದ ಮಹಿಳಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಯುವತಿ ಶುಕ್ರವಾರ ರಾತ್ರಿ

ಆದ್ಯಪಾಡಿ ಮಹಿಳಾ ಸಿಬ್ಬಂದಿಗೆ ಲೈಂಗಿಕ‌ ಕಿರುಕುಳ ಪ್ರಕರಣಕ್ಕೆ ಹೊಸ ತಿರುವು ► ಬೈಕಿಗೆ ಢಿಕ್ಕಿ ಹೊಡೆದಿರುವುದನ್ನು ವಿಚಾರಿಸಿದ್ದಕ್ಕೆ ಕಾರಿನಲ್ಲಿದ್ದವರು ಹಲ್ಲೆ ನಡೆಸಿದ್ದಾರೆಂದು ಮರು ದೂರು Read More »

ಕರಾವಳಿ
Scroll to Top