ಇಂದು ಕುಕ್ಕೇ ಸುಬ್ರಹ್ಮಣ್ಯಕ್ಕೆ ಬಿಜೆಪಿ ಮಾಸ್ಟರ್ ಮೈಂಡ್ ಅಮಿತ್ ಷಾ ಆಗಮನ ► ರಾಷ್ಟ್ರಾಧ್ಯಕ್ಷರ ಸ್ವಾಗತಕ್ಕೆ ಭರದಿಂದ ಸಿದ್ಧಗೊಂಡಿದೆ ಪುಣ್ಯಕ್ಷೇತ್ರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ.19. ದಕ್ಷಿಣ ಭಾರತದ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇಂದು ರಾತ್ರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದು, ಅಧ್ಯಕ್ಷರ ಸ್ವಾಗತಕ್ಕೆ ಕುಕ್ಕೆಯಲ್ಲಿ ಭರದ ಸಿದ್ಧತೆ ನಡೆಸಲಾಗಿದೆ. ಕಳೆದ ಕೆಲವು ದಿನಗಳಿಂದ ಕಾರ್ಯಕರ್ತರು ಅಹರ್ನಿಶಿ ದುಡಿದು ನಗರಾಲಂಕಾರ ಮಾಡಿದ್ದಾರೆ. ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ಕುಕ್ಕೆ ಕ್ಷೇತ್ರವು ಕೇಸರಿಮಯವಾಗಿದೆ. ಬಿಜೆಪಿ ಧ್ವಜ ಮತ್ತು ಬೃಹತ್ ಕಟೌಟ್ಗಳ ಮೂಲಕ ಸುಬ್ರಹ್ಮಣ್ಯವನ್ನು ಕಾರ್ಯಕರ್ತರು ಅಲಂಕಾರ ಮಾಡಿದ್ದಾರೆ. ಒಟ್ಟಾಗಿ ಅಮಿತ್ ಷಾ ಅವರ ಸ್ವಾಗತಕ್ಕೆ ಕಾರ್ಯಕರ್ತರು ಆತುರದಿಂದ […]

ಇಂದು ಕುಕ್ಕೇ ಸುಬ್ರಹ್ಮಣ್ಯಕ್ಕೆ ಬಿಜೆಪಿ ಮಾಸ್ಟರ್ ಮೈಂಡ್ ಅಮಿತ್ ಷಾ ಆಗಮನ ► ರಾಷ್ಟ್ರಾಧ್ಯಕ್ಷರ ಸ್ವಾಗತಕ್ಕೆ ಭರದಿಂದ ಸಿದ್ಧಗೊಂಡಿದೆ ಪುಣ್ಯಕ್ಷೇತ್ರ Read More »

ಕರಾವಳಿ

ಗೋಳಿತೊಟ್ಟು: ಕಾರು – ಟಿಪ್ಪರ್ ಢಿಕ್ಕಿ ► ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಫೆ.19. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತೊಟ್ಟು ಎಂಬಲ್ಲಿ ಕಾರು ಹಾಗೆಯೇ ಟಿಪ್ಪರ್ ನಡುವೆ ಢಿಕ್ಕಿ ಸಂಭವಿಸಿ ಓರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರದಂದು ನಡೆದಿದೆ. ಗಾಯಾಳುವನ್ನು ಕಾರು ಚಾಲಕ ಸ್ಥಳೀಯ ನಿವಾಸಿ ಅಣ್ಣಿ ಗೌಡ ಎಂಬವರ ಪುತ್ರ ಯಶೋಧರ ಗೌಡ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿಯಿಂದ ನೆಲೆಯಾಗಿದೆ ಕಡೆಗೆ ತೆರಳುತ್ತಿದ್ದ ಮರಳು ಸಾಗಾಟದ ಟಿಪ್ಪರ್ ವಿರುದ್ಧ ದಿಕ್ಕಿನಿಂದ ಸಾಗಿ ಉಪ್ಪಿನಂಗಡಿ

ಗೋಳಿತೊಟ್ಟು: ಕಾರು – ಟಿಪ್ಪರ್ ಢಿಕ್ಕಿ ► ಇಬ್ಬರು ಗಂಭೀರ Read More »

ಕರಾವಳಿ

ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ವಿಧಿವಶ

(ನ್ಯೂಸ್ ಕಡಬ) newskadaba.com ಮಂಡ್ಯ, ಫೆ.18. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ, ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ(69) ಹೃದಯಾಘಾತದಿಂದಾಗಿ ಇಂದು ರಾತ್ರಿ ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ರೈತ ನಾಯಕರಾಗಿದ್ದ ಇವರು 2013ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ವೋದಯ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಗೊಂಡಿದ್ದರು. ಅವರು ಇಂದು ರಾತ್ರಿ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡು ಕುಸಿದುಬಿದ್ದರು. ಕೂಡಲೇ ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ

ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ ವಿಧಿವಶ Read More »

ಕರ್ನಾಟಕ

ಇನ್ನೋವಾ ಕಾರಿನಲ್ಲಿ ಬಂದು ಸೋಲಾರ್ ಬ್ಯಾಟರಿಗಳನ್ನು ದೋಚುವ ಹೈಟೆಕ್ ಕಳ್ಳರು ► ಪೊಲೀಸರಿಗೆ‌ ತಲೆನೋವಾಗಿರುವ ಕಡಬ ಪರಿಸರದ ಸಣ್ಣಪುಟ್ಟ ಕಳ್ಳತನ ಪ್ರಕರಣ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ಪರಿಸರದಲ್ಲಿ ಸಣ್ಣಪುಟ್ಟ ಕಳ್ಳತನ ನಡೆಸುವ ಪುಡಿಗಳ್ಳರ ಕಾಟ ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಸೋಲಾರ್ ಬ್ಯಾಟರಿಯನ್ನು ದೋಚುತ್ತಿರುವ ಹೈಟೆಕ್ ತಂಡವೊಂದು ಕಡಬ ಪರಿಸರದಲ್ಲಿ ಕಾರ್ಯಾಚರಿಸುತ್ತಿದೆ. ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರಚಡವು, ಎರ್ಮಾಳ, ಕುಪ್ಲಾಜೆ, ಮಾಯಿಲ್ಗ ಸೇರಿದಂತೆ ಇನ್ನೆರಡು ಕಡೆಗಳಲ್ಲಿ ಹಾಗೂ ಕುಟ್ರುಪ್ಪಾಡಿ ಗ್ರಾಮದ ಪೆರ್ಲದಕೆರೆ ಎಂಬಲ್ಲಿ ಸರಕಾರದಿಂದ ಅಳವಡಿಸಲಾದ ಸೋಲಾರ್ ದೀಪದ ಬ್ಯಾಟರಿಗಳನ್ನು ಫೆಬ್ರವರಿ 16 ರಂದು ರಾತ್ರಿ ಕಳ್ಳರು ದೋಚಿದ್ದು, ಇನ್ನೋವಾ ವಾಹನದಲ್ಲಿ ಬಂದಂತಹ

ಇನ್ನೋವಾ ಕಾರಿನಲ್ಲಿ ಬಂದು ಸೋಲಾರ್ ಬ್ಯಾಟರಿಗಳನ್ನು ದೋಚುವ ಹೈಟೆಕ್ ಕಳ್ಳರು ► ಪೊಲೀಸರಿಗೆ‌ ತಲೆನೋವಾಗಿರುವ ಕಡಬ ಪರಿಸರದ ಸಣ್ಣಪುಟ್ಟ ಕಳ್ಳತನ ಪ್ರಕರಣ Read More »

ಕರಾವಳಿ

ಕೇಂದ್ರದ ಅಡಿಕೆ‌ ನಿಷೇಧ ಹೇಳಿಕೆಯನ್ನು ಕರಾವಳಿಗೆ ಆಗಮಿಸುತ್ತಿರುವ ಅಮಿತ್ ಷಾರಲ್ಲಿ ಪಕ್ಷ ಭೇದ ಮರೆತು ಪ್ರಶ್ನಿಸಬೇಕಿದೆ: ವೆಂಕಪ್ಪ ಗೌಡ ► ಕಡಬದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪಕೋಡಾ ತಯಾರಿ ಅಣಕು ಪ್ರದರ್ಶಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ಕೇಂದ್ರದ ಮೋದಿ ಸರಕಾರದ ಬೆಲೆಯೇರಿಕೆ ವಿರೋಧಿಸಿ ಹಾಗೂ ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಕಡಬ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾನುವಾರ ಅಪರಾಹ್ನ ಕಡಬ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ ಮಾತನಾಡಿ, ಕೇಂದ್ರ ಆರೋಗ್ಯ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್ ರವರು ಅಡಿಕೆ ಸೇವನೆಯು ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಉಂಟುಮಾಡುತ್ತದೆ ಎಂದು ಹೇಳಿಕೆ ನೀಡಿದ್ದಾರೆ.ಅದರನ್ವಯ ಅಡಿಕೆ ಹಾಗೂ

ಕೇಂದ್ರದ ಅಡಿಕೆ‌ ನಿಷೇಧ ಹೇಳಿಕೆಯನ್ನು ಕರಾವಳಿಗೆ ಆಗಮಿಸುತ್ತಿರುವ ಅಮಿತ್ ಷಾರಲ್ಲಿ ಪಕ್ಷ ಭೇದ ಮರೆತು ಪ್ರಶ್ನಿಸಬೇಕಿದೆ: ವೆಂಕಪ್ಪ ಗೌಡ ► ಕಡಬದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಪಕೋಡಾ ತಯಾರಿ ಅಣಕು ಪ್ರದರ್ಶಿಸಿ ಪ್ರತಿಭಟನೆ Read More »

ಕರಾವಳಿ

ಅಕ್ರಮ ಜಿಂಕೆ ಚರ್ಮ ಸಾಗಾಟ ► ಬೈಕ್ ಸಹಿತ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.18. ಮಂಗಳೂರು ಅರಣ್ಯ ಸಂಚಾರಿ ದಳದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ಉಡುಪಿ ತಾಲೂಕಿನ ಸಾಸ್ತಾನ ಟೋಲ್ ಗೇಟ್ ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಅಕ್ರಮ ಸಾಗಾಟ ಮಾಡುತ್ತಿದ್ದ ಜಿಂಕೆ ಚರ್ಮವನ್ನು ವಶಕ್ಕೆ ಪಡೆದು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಾಗರದ ಮೋಹನ ಕುಮಾರ (22) ಮತ್ತು ಗಂಗೊಳ್ಳಿಯ ವಿಕ್ರಮ (24) ಎಂದು ಗುರುತಿಸಲಾಗಿದೆ. ಕುಂದಾಪುರ ಕಡೆಯಿಂದ ಬರುತ್ತಿದ್ದ ಬೈಕಿನಲ್ಲಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಒಂದು ಜಿಂಕೆ ಚರ್ಮವನ್ನು ಮಾರಾಟಕ್ಕಾಗಿ ಸಾಗಾಟ ಮಾಡುತ್ತಿದು

ಅಕ್ರಮ ಜಿಂಕೆ ಚರ್ಮ ಸಾಗಾಟ ► ಬೈಕ್ ಸಹಿತ ಇಬ್ಬರ ಬಂಧನ Read More »

ಕರಾವಳಿ

ಚುನಾವಣೆಗೆ ಮೊದಲೇ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ ► ಪಶ್ಚಿಮ ವಲಯ ಹಾಗೂ ಮಂಗಳೂರು ನಗರದ 117 ಸಬ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.18. ರಾಜ್ಯ ವಿಧಾನ ಸಭಾ ಚುನಾವಣೆ 2018 ರ ವರ್ಗಾವಣಾ ಮಾರ್ಗಸೂಚಿಯನುಸಾರ ಪಶ್ಚಿಮ ವಲಯ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 117 ಸಬ್ ಇನ್ಸ್‌ಪೆಕ್ಟರ್ ರವರನ್ನು ವಿವಿಧೆಡೆ ವರ್ಗಾವಣೆ ಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.   ಕುಕ್ಕೇ ಸುಬ್ರಹ್ಮಣ್ಯದಿಂದ ಹಿಡಿದು ಮಂಗಳೂರು ನಗರದವರೆಗಿನ ಕರಾವಳಿಯಲ್ಲಿನ ಹೆಚ್ಚಿನ ಎಲ್ಲಾ ಪೊಲೀಸ್ ಠಾಣೆಗಳ ಸಬ್ ಇನ್ಸ್‌ಪೆಕ್ಟರ್ ಗಳ ಮತ್ತು ಪಶ್ಚಿಮ ವಲಯದ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಬ್ ಇನ್ಸ್‌ಪೆಕ್ಟರ್ ಗಳನ್ನೂ ಸ್ಥಾನಪಲ್ಲಟಗೊಳಿಸಲಾಗಿದ್ದು, ಮುಂದಿನ

ಚುನಾವಣೆಗೆ ಮೊದಲೇ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಸರ್ಜರಿ ► ಪಶ್ಚಿಮ ವಲಯ ಹಾಗೂ ಮಂಗಳೂರು ನಗರದ 117 ಸಬ್ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ Read More »

ಕರಾವಳಿ

ಶಿವರಾತ್ರಿಯಂದು ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ಬಾಲಕರ ರಕ್ಷಣೆಯ ವಿಚಾರ ► ಕೆಲವರು ಪ್ರಚಾರ ಗಿಟ್ಟಿಸಲು ವದಂತಿ ಹಬ್ಬಿಸಿದ್ದಾರೆ: ಬಾಲಕರಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ಕಳೆದ ಫೆಬ್ರವರಿ 13 ರಂದು ಕುಂತೂರು ಪರಿಸರದ ಎಂಟುಮಂದಿ ಬಾಲಕರನ್ನು ನೀರಿನಿಂದ ರಕ್ಷಿಸಲಾಗಿದೆ ಎಂಬ ವರದಿಯನ್ನು ಕೆಲವು ದಿನಪತ್ರಿಕೆಗಳು ಹಾಗೂ ವೆಬ್‌ಸೈಟ್ ಗಳು ವರದಿ ಮಾಡಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ವಿದ್ಯಾರ್ಥಿಗಳು ಇದೀಗ ಸ್ಪಷ್ಟೀಕರಣ ನೀಡಿದ್ದಾರೆ. 8 ಮಂದಿ ಗೆಳೆಯರು ಶಿವರಾತ್ರಿ ಪ್ರಯುಕ್ತ ರಜೆ ಇದ್ದ ಕಾರಣ ಉರುಂಬಿ ಕುಮಾರಧಾರಾ ನದಿ ಪರಿಸರಕ್ಕೆ ತೆರಳಿದ್ದು ಮೊಟ್ಟೆ ಬೇಯಿಸಿ ತಿಂದು ಬರುವುದೆಂದು ತೀರ್ಮಾನಿಸಿದ್ದೆವು. ಅಲ್ಲಿನ ಸ್ಥಳೀಯರಲ್ಲಿ ಕೆಲವು ಮಾಹಿತಿಯನ್ನು

ಶಿವರಾತ್ರಿಯಂದು ಕುಮಾರಧಾರಾ ನದಿಯಲ್ಲಿ ಸ್ನಾನಕ್ಕಿಳಿದ ಬಾಲಕರ ರಕ್ಷಣೆಯ ವಿಚಾರ ► ಕೆಲವರು ಪ್ರಚಾರ ಗಿಟ್ಟಿಸಲು ವದಂತಿ ಹಬ್ಬಿಸಿದ್ದಾರೆ: ಬಾಲಕರಿಂದ ಸ್ಪಷ್ಟನೆ Read More »

ಕರಾವಳಿ

ಗೋಳಿತ್ತಡಿ – ಏಣಿತ್ತಡ್ಕ ರಸ್ತೆ ಕಾಮಗಾರಿಯ ಅವ್ಯವಸ್ಥೆ ► ಸಾರ್ವಜನಿಕರಿಂದ ಪ್ರತಿಭಟನೆಗೆ ಸಿದ್ಧತೆ

(ನ್ಯೂಸ್ ಕಡಬ) newskadaba.com ಕಡಬ, ಫೆ.18. ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿಯಿಂದ ಕೊಯಿಲ ಗ್ರಾಮದ ಏಣಿತಡ್ಕಕ್ಕೆ ಸಾಗುವ ರಸ್ತೆಯಲ್ಲಿ ಗೋಳಿತ್ತಡಿಯಿಂದ ನೆಲ್ಯೊಟ್ಟು ತನಕ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದ್ದು ಅಸಮರ್ಪಕ ನಿರ್ವಹಣೆಯಿಂದಾಗಿ ಸಾರ್ವಜನಿಕರು ದಿನಾ ಪರದಾಡುವಂತಾಗಿ ಅಕ್ರೋಶ ವ್ಯಕ್ತಪಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು, ಜಲ್ಲಿ ಹಾಕಿ ವಾಹನ ಸಂಚಾರ ಸೇರಿದಂತೆ ರಸ್ತೆ ಬದಿಯಿಂದ ನಡೆದಾಡುವ ಜನತೆ ತಮ್ಮ ಜೀವ ಕ್ಯಯಲ್ಲಿ  ಹಿಡಿದು ಹೋಗುವಂತಾಗಿದೆ. ರಾಜ್ಯ ಸರಕಾರದ ಸುಮಾರು 49. ಲಕ್ಷ ರೂ

ಗೋಳಿತ್ತಡಿ – ಏಣಿತ್ತಡ್ಕ ರಸ್ತೆ ಕಾಮಗಾರಿಯ ಅವ್ಯವಸ್ಥೆ ► ಸಾರ್ವಜನಿಕರಿಂದ ಪ್ರತಿಭಟನೆಗೆ ಸಿದ್ಧತೆ Read More »

ಕರಾವಳಿ

ನಾಳೆಯಿಂದ (ಫೆ.18 ರಿಂದ 22) ನೆಕ್ಕಿತ್ತಡ್ಕ ಮಖಾಂ ಉರೂಸ್

(ನ್ಯೂಸ್ ಕಡಬ) newskadaba.com ಕಡಬ, ಫೆ.17. ಮರ್ಧಾಳ ತಖ್ವಿಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧೀನದಲ್ಲಿರುವ ವತಿಯಿಂದ ನೆಕ್ಕಿತ್ತಡ್ಕ ಮಖಾಂ ಉರೂಸ್ ಸಮಾರಂಭವು 2018 ಫೆಬ್ರವರಿ 18 ಭಾನುವಾರದಂದು ಆರಂಭಗೊಂಡು ಫೆಬ್ರವರಿ 22 ಗುರುವಾರದವರೆಗೆ ನಡೆಯಲಿದೆ. ಫೆ.18ರಂದು ನೆಕ್ಕಿತ್ತಡ್ಕ ಉರೂಸ್ ಸಮಿತಿ ಅಧ್ಯಕ್ಷ ಜನಾಬ್ ಅಬ್ದುಲ್ ರಹಿಮಾನ್ ಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮರ್ಧಾಳ ಜೆ.ಎಂ ಅಧ್ಯಕ್ಷ ಸಯ್ಯೀದ್ ಕೆ.ಎಸ್ ಹಮೀದ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಗೇರುಕಟ್ಟೆಯ ಅಸ್ಸಯ್ಯದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ದುಃಅ ಆಶೀರ್ವಚನ ನೀಡಲಿದ್ದಾರೆ. ಮರ್ಧಾಳ

ನಾಳೆಯಿಂದ (ಫೆ.18 ರಿಂದ 22) ನೆಕ್ಕಿತ್ತಡ್ಕ ಮಖಾಂ ಉರೂಸ್ Read More »

ಕರಾವಳಿ
Scroll to Top