ಸುಸಜ್ಜಿತ ವ್ಯವಸ್ಥೆಗಳೊಂದಿಗೆ CBSE ಶಿಕ್ಷಣದ ನೂತನ ವಿದ್ಯಾಸಂಸ್ಥೆ ಇದೀಗ ಬೆಳಂದೂರಿನಲ್ಲಿ ► ಎಲ್.ಕೆ.ಜಿ ಯಿಂದ ಏಳನೇ ತರಗತಿಯವರೆಗೆ ದಾಖಲಾತಿ ಆರಂಭ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.19. ಪುತ್ತೂರು ತಾಲೂಕಿನ ಬೆಳಂದೂರು ಎಂಬಲ್ಲಿ ನೂತನವಾಗಿ ಆರಂಭಗೊಂಡಿರುವ ಈಡನ್ ಗ್ಲೋಬಲ್ ಸ್ಕೂಲ್ ನಲ್ಲಿ ಎಲ್.ಕೆ.ಜಿ. ಯಿಂದ ಏಳನೇ ತರಗತಿವರೆಗೆ ದಾಖಲಾತಿ ಪ್ರಾರಂಭಗೊಂಡಿರುತ್ತದೆ. ಪ್ರಶಾಂತ ಹಾಗೂ ಸುಂದರ ವಾತಾವರಣದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣದ ಪರಿಕಲ್ಪನೆಯೊಂದಿಗೆ ವಿಶಾಲ ತಂತ್ರಜ್ಞಾನ ಆಧಾರಿತ ತರಗತಿ ಕೊಠಡಿಗಳನ್ನು ಸುಸಜ್ಜಿತಗೊಳಿಸಲಾಗಿದ್ದು, ಮಕ್ಕಳ ವಿಕಸನಕ್ಕೆ ಉತ್ತಮ ದೈಹಿಕ ಚಟುವಟಿಕೆ, ವಾಹನ ಸೌಲಭ್ಯ, ಭವಿಷ್ಯ ಆಧಾರಿತ ಆಧುನಿಕ ಶೈಕ್ಷಣಿಕ ಪದ್ದತಿಗಳನ್ನು ನೂತನ ವಿದ್ಯಾಸಂಸ್ಥೆಯು ಒಳಗೊಂಡಿದೆ. ಅಪ್ಲಿಕೇಶನ್ ಫಾರಂಗಳು ಶಾಲಾ ಕಛೇರಿಯಲ್ಲಿ ಲಭ್ಯವಿದ್ದು, […]

ಸುಸಜ್ಜಿತ ವ್ಯವಸ್ಥೆಗಳೊಂದಿಗೆ CBSE ಶಿಕ್ಷಣದ ನೂತನ ವಿದ್ಯಾಸಂಸ್ಥೆ ಇದೀಗ ಬೆಳಂದೂರಿನಲ್ಲಿ ► ಎಲ್.ಕೆ.ಜಿ ಯಿಂದ ಏಳನೇ ತರಗತಿಯವರೆಗೆ ದಾಖಲಾತಿ ಆರಂಭ Read More »

ಕರಾವಳಿ

ಇಂದು (ಮಾ.19) ರಾಜ್ಯದಲ್ಲಿ ಮೊದಲ ಬಾರಿಗೆ ಆನ್‍ಲೈನ್‍ನಲ್ಲಿ ಪ್ರಥಮ ಪಿಯು ಫಲಿತಾಂಶ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.19. ಪ್ರಸಕ್ತ ವರ್ಷದ ಪ್ರಥಮ ಪಿಯು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ಸ್ಪಷ್ಟತೆಯನ್ನು ತರುವ ದೃಷ್ಟಿಯಲ್ಲಿ ಕೇಂದ್ರಿಕೃತ ನಿಯಂತ್ರಣದೊಂದಿಗೆ ಸ್ವಯಂಚಾಲಿತವಾಗಿ ಫಲಿತಾಂಶವು ಮಾರ್ಚ್ 19 ಸೋಮವಾರದಂದು ಆನ್‍ಲೈನ್‍ನಲ್ಲಿ ಪ್ರಕಟವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಆರ್. ತಿಮ್ಮಯ್ಯ ತಿಳಿಸಿದ್ದಾರೆ. ಅವರು ಶನಿವಾರದಂದು ನಗರದ ಬಂಟ್ಸ್ ಹಾಸ್ಟೇಲ್‍ನ ಅಮೃತೋತ್ಸವ ಕಟ್ಟಡದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಪ್ರಥಮ ಪಿಯು ಫಲಿತಾಂಶಕ್ಕೆ ಸಂಬಂಧಪಟ್ಟ ಅಂಕಿ ಅಂಶಗಳು ಮತ್ತು ಅಗತ್ಯ ಅನುಬಂಧಗಳನ್ನು

ಇಂದು (ಮಾ.19) ರಾಜ್ಯದಲ್ಲಿ ಮೊದಲ ಬಾರಿಗೆ ಆನ್‍ಲೈನ್‍ನಲ್ಲಿ ಪ್ರಥಮ ಪಿಯು ಫಲಿತಾಂಶ Read More »

ಕರಾವಳಿ

ಬಿಸಿಲಿನ ಬೇಗೆ ಬತ್ತಿ ಹೋಗುತ್ತಿರುವ ಕೆರೆ, ಬಾವಿಗಳಲ್ಲಿನ ನೀರು ► ಕುಡಿಯುವ ನೀರಿಗಾಗಿ ಪರದಾಟ – ಟ್ಯಾಂಕರ್ ನಲ್ಲಿ ನೀರು ಸಾಗಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ.19. ಜಿಲ್ಲೆಯ ಕೆಲವೆಡೆಗಳಲ್ಲಿ ಭಾರೀ ಮಳೆ ಸುರಿದಿದ್ದರೂ ಕುಡಿಯುವ ನೀರಿಗೆ ಪರದಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದ್ದು, ಟ್ಯಾಂಕರ್‌ ನೀರು ಪೂರೈಕೆ ಆರಂಭಿಸಲಾಗಿದೆ. ಬಿಸಿಲಿನ ಬೇಗೆಗೆ ನೀರಿನ ಮೂಲ‌ ಬತ್ತಿ ಹೋಗಿದ್ದು, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿಗಾಗಿ ಪರದಾಟ ಶುರುವಾಗಿದೆ. ಸಾರ್ವಜನಿಕರು ನೀರಿನ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆಯುತ್ತಿದ್ದು, ಚುನಾವಣೆಯ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳೂ ಈ ಬಗ್ಗೆ ತ್ವರಿತಗತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಮಂಗಳೂರು ತಾಲೂಕಿನ 9 ಗ್ರಾಮಗಳಲ್ಲಿ ಈಗಾಗಲೇ ನೀರಿನ ಕೊರತೆ ತಲೆದೋರಿರುವ ಕಾರಣ

ಬಿಸಿಲಿನ ಬೇಗೆ ಬತ್ತಿ ಹೋಗುತ್ತಿರುವ ಕೆರೆ, ಬಾವಿಗಳಲ್ಲಿನ ನೀರು ► ಕುಡಿಯುವ ನೀರಿಗಾಗಿ ಪರದಾಟ – ಟ್ಯಾಂಕರ್ ನಲ್ಲಿ ನೀರು ಸಾಗಾಟ Read More »

ಕರಾವಳಿ

ಅಂಪಾರು: ಬೈಕ್‌ ಮರಕ್ಕೆ ಢಿಕ್ಕಿ ► ನಾಲ್ಕೂವರೆ ವರ್ಷದ ಬಾಲಕಿ ಮೃತ್ಯು, ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಕುಂದಾಪುರ, ಮಾ.18. ಬೈಕೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ಕೂವರೆ ವರ್ಷದ ಬಾಲಕಿ ಮೃತಪಟ್ಟು, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕುಂದಾಪುರದ ಶಂಕರನಾರಾಯಣದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮೃತ ಬಾಲಕಿಯನ್ನು ಶಂಕರನಾರಾಯಣ ಸಮೀಪದ ಅಂಪಾರು ನಿವಾಸಿ ವಾಸು ಎಂಬವರ ಪುತ್ರಿ ಸಿಂಚನ ಎಂದು ಗುರುತಿಸಲಾಗಿದೆ. ಕೃಷ್ಣ ಎಂಬಾತ ತನ್ನ ಸ್ನೇಹಿತ ವಾಸುರವರ ಪುತ್ರಿಯನ್ನು ಚಿಕಿತ್ಸೆಗಾಗಿ ಬೈಕಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಬಾಲಕಿ

ಅಂಪಾರು: ಬೈಕ್‌ ಮರಕ್ಕೆ ಢಿಕ್ಕಿ ► ನಾಲ್ಕೂವರೆ ವರ್ಷದ ಬಾಲಕಿ ಮೃತ್ಯು, ಸವಾರ ಗಂಭೀರ Read More »

ಕರ್ನಾಟಕ

ಕೊನೆಗೂ ಕೂಡಿಬಂತು ಕಡಬ ತಾಲೂಕಿಗೆ ‘ಉದ್ಘಾಟನಾ ಭಾಗ್ಯ’ ► ಮಾ. 22 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ನೂತನ ಕಡಬ ತಾಲೂಕು ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.18. ಜಿಲ್ಲಾ ಉಸ್ತವಾರಿ ಸಚಿವ ಬಿ.ರಮಾನಾಥ ರೈ ಅವರು ನೂತನ ಕಡಬ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲು ಮಾ. 22 ರಂದು ದಿನ ನಿಗದಿಯಾಗಿದ್ದು, ಕೊನೆಗೂ ತಾಲೂಕು ಅನುಷ್ಠಾನದ ಕುರಿತು ಕಡಬ ಪರಿಸರದ ಜನರ ಮನಸ್ಸಿನಲ್ಲಿ ಮೂಡಿದ್ದ ಆತಂಕಗಳು ದೂರವಾಗುವ ದಿನಗಳು ಹತ್ತಿರವಾಗಿದೆ. ಮಾರ್ಚ್ 18 ಭಾನುವಾರದಂದು ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಡಬ ತಾಲೂಕು ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಈ ಹಿಂದೆ ಪ್ರಕಟಿಸಲಾಗಿತ್ತು. ಆದರೆ ಇದೀಗ ಉದ್ಘಾಟನಾ

ಕೊನೆಗೂ ಕೂಡಿಬಂತು ಕಡಬ ತಾಲೂಕಿಗೆ ‘ಉದ್ಘಾಟನಾ ಭಾಗ್ಯ’ ► ಮಾ. 22 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ನೂತನ ಕಡಬ ತಾಲೂಕು ಉದ್ಘಾಟನೆ Read More »

ಕರಾವಳಿ

ಸಬಳೂರು: 34 ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣ ► ಸುಳ್ಯ ಶಾಸಕ ಅಂಗಾರರಿಂದ ಕಾಮಗಾರಿ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.18. ಕೊಯಿಲ ಗ್ರಾಮದ ಏಣಿತ್ತಡ್ಕ ಸಮೀಪದ ಸಬಳೂರು ಎಂಬಲ್ಲಿ ತೊಡಿಗೆ ಸುಳ್ಯ ಶಾಸಕರ ಅನುದಾನದಲ್ಲಿ ಸುಮಾರು 34 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಮತ್ತು ಸೇತುವೆಯ ಕಾಮಗಾರಿಯನ್ನು ಸುಳ್ಯ ಶಾಸಕ ಎಸ್.ಅಂಗಾರ ಭಾನುವಾರದಂದು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷˌ ವೆಂಕಟ್ ವಳಲಂಬೆ, ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಧರ್ಮಪಾಲ ರಾವ್ ಕಜೆ, ತಾ.ಪಂ. ಸದಸ್ಯರಾದ ತೇಜಶ್ವಿನಿ ಕಟ್ಟಪುಣಿ, ಜಯಂತಿˌ ರಾಮಕುಂಜ ಗ್ರಾ.ಪಂ ಅಧ್ಯಕ್ಷ ಪ್ರಶಾಂತ್ ಅರ್.ಕೆ., ಕೊಯಿಲ

ಸಬಳೂರು: 34 ಲಕ್ಷ ವೆಚ್ಚದ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣ ► ಸುಳ್ಯ ಶಾಸಕ ಅಂಗಾರರಿಂದ ಕಾಮಗಾರಿ ಪರಿಶೀಲನೆ Read More »

ಕರಾವಳಿ

ಆಳ್ವಾಸ್ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಾರ್ಡನ್ ರಿಂದ ಹಲ್ಲೆ ಆರೋಪ ► ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಮಾ.18. ಆಳ್ವಾಸ್ ಕಾಲೇಜಿನ ಹಾಸ್ಟೆಲಿನಲ್ಲಿದ್ದ ವಿದ್ಯಾರ್ಥಿಗಳಿಗೆ ಶನಿವಾರ ರಾತ್ರಿ ಕಾಲೇಜು ಸಿಬ್ಬಂದಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಭಾನುವಾರದಂದು ನಡೆದಿದೆ. ಕಾಲೇಜಿನ ಪುಷ್ಪಗಿರಿ ಹಾಸ್ಟೆಲಿನಲ್ಲಿದ್ದ ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಖುಷಿಯಿಂದ ಸಂಭ್ರಮ ಆಚರಿಸುತ್ತಿದ್ದರು ಎನ್ನಲಾಗಿದೆ. ಇದನ್ನು ವಿರೋಧಿಸಿ ವಾರ್ಡನ್ ರಾಜೇಶ್ ಹಾಗೂ ಸಿಬ್ಬಂದಿಗಳು ಹಲವು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಹಲ್ಲೆಯಿಂದ ಹಲವು ವಿದ್ಯಾರ್ಥಿಗಳ ಸೊಂಟ, ಬೆನ್ನು, ಕುತ್ತಿಗೆ, ಕೈಗೆ ಗಾಯಗಳಾಗಿವೆ. ಹಲ್ಲೆ ದೃಶ್ಯಗಳು

ಆಳ್ವಾಸ್ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಾರ್ಡನ್ ರಿಂದ ಹಲ್ಲೆ ಆರೋಪ ► ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ Read More »

ಕರಾವಳಿ

ನೂಜಿಬಾಳ್ತಿಲ ಕುಬುಲಾಡಿ ರಸ್ತೆಯ ಕಳಪೆ ಕಾಮಗಾರಿ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ► ಮರು ಡಾಮರೀಕರಣಗೊಳಿಸಿದ ಪಿಡಬ್ಲ್ಯೂಡಿ ಇಲಾಖೆ

(ನ್ಯೂಸ್ ಕಡಬ) newskadaba.com ಕಡಬ, ಮಾ.18. ನೂಜಿಬಾಳ್ತಿಲ ಗ್ರಾಮದ ಕುಬಲಾಡಿ ದಲಿತ ಕಾಲೋನಿಯಲ್ಲಿ 2017-18ನೇ ಸಾಲಿನಲ್ಲಿ ಮಾಡಿದ ರಸ್ತೆ ಡಾಮರೀಕರಣವು ಸಂಪೂರ್ಣ ಕೆಟ್ಟುಹೋಗಿದ್ದು ಕಳಪೆ ಕಾಮಗಾರಿ ಎಂದು ಕಾಲೋನಿ ನಿವಾಸಿಗಳು ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯು ರಸ್ತೆಯನ್ನು ಮರು ಡಾಮರೀಕರಣಗೊಳಿಸಿದ ಘಟನೆ ಶನಿವಾರದಂದು ನಡೆದಿದೆ. ಕಳೆದ ಮಾ.01 ರಂದು ದಲಿತ ಸಂಘರ್ಷ ಸಮಿತಿ ಕಡಬ ತಾಲೂಕು ಸಂಚಾಲಕ ವಸಂತ ಕುಬಲಾಡಿಯವರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿ ಪತ್ರಿಕಾಗೋಷ್ಟಿ ಕರೆದಿದ್ದರು. ಈ ಬಗ್ಗೆ ಗಮನ ಹರಿಸಿದ ಪಿಡಬ್ಲ್ಯುಡಿ ಇಲಾಖೆಯು

ನೂಜಿಬಾಳ್ತಿಲ ಕುಬುಲಾಡಿ ರಸ್ತೆಯ ಕಳಪೆ ಕಾಮಗಾರಿ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ► ಮರು ಡಾಮರೀಕರಣಗೊಳಿಸಿದ ಪಿಡಬ್ಲ್ಯೂಡಿ ಇಲಾಖೆ Read More »

ಕರಾವಳಿ

ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಇಬ್ರಾಹಿಂ ರಾಜ್ ಕಮಲ್, ಪ್ರ.ಕಾರ್ಯದರ್ಶಿಯಾಗಿ ಹಾಜಿ| ಮುಹಮ್ಮದ್ ರಫೀಕ್ ಆಯ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.18. ನೇರಳಕಟ್ಟೆ ಸಮೀಪದ ಕೊಡಾಜೆ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರಾಜ್ ಕಮಲ್‌ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಮುಹಮ್ಮದ್ ರಫೀಕ್ ಎಸ್.ಎಂ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ, ಕಾರ್ಯದರ್ಶಿಯಾಗಿ ಸಾಹುಲ್ ಹಮೀದ್ ಪರ್ಲೊಟ್ಟು, ಕೋಶಾಧಿಕಾರಿಯಾಗಿ ಪಿ.ಕೆ. ಅಬ್ಬಾಸ್ ಪರ್ಲೊಟ್ಟು ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಸ್.ಎಂ.ಮುಹಮ್ಮದ್ ಶಾಫಿ, ಹಮೀದ್ ಇನಾಮ್ ಮಾಣಿ, ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ಹಾಜಿ ಮುಹಮ್ಮದ್

ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಇಬ್ರಾಹಿಂ ರಾಜ್ ಕಮಲ್, ಪ್ರ.ಕಾರ್ಯದರ್ಶಿಯಾಗಿ ಹಾಜಿ| ಮುಹಮ್ಮದ್ ರಫೀಕ್ ಆಯ್ಕೆ Read More »

ಕರಾವಳಿ

ಸೀಮೆಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ ► ಬಿಟ್ಟಿ ಸೀಮೆಎಣ್ಣೆಗಾಗಿ ಬಕೆಟ್, ಕ್ಯಾನ್ ಹಿಡಿದು ಮುಗಿ ಬಿದ್ದ ಜನತೆ

(ನ್ಯೂಸ್ ಕಡಬ) newskadaba.com ಹಾಸನ, ಮಾ.18. ಸೀಮೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದುದರಿಂದ ರಸ್ತೆಯಲ್ಲಿ ಚೆಲ್ಲುತ್ತಿದ್ಧ ಸೀಮೆಎಣ್ಣೆಯನ್ನು ತುಂಬಿಸಿಕೊಳ್ಳಲು ಸಾರ್ವಜನಿಕರು ಹರಸಾಹಸಪಟ್ಟ ಘಟನೆ ಶನಿವಾರದಂದು ಹಾಸನದ ಅರಕಲಗೂಡು ಎಂಬಲ್ಲಿ ನಡೆದಿದೆ. ಪಡಿತರ ಅಂಗಡಿಗಳಿಗೆ ಸೀಮೆಎಣ್ಣೆ ಪೂರೈಸಲು ತೆರಳುತ್ತಿದ್ದ ಟ್ಯಾಂಕರ್‍ ಅರಕಲಗೂಡಿನ ಯಗಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ಟ್ಯಾಂಕರ್ ನಿಂದ ಹೊರ ಬರುತ್ತಿದ್ದ ಸೀಮೆಎಣ್ಣೆಯನ್ನು ಪಡೆಯಲು ಜನರು ಪಾತ್ರೆ, ಜಗ್ಗು, ಕ್ಯಾನ್, ಚೊಬ್ಬುಗಳಲ್ಲಿ ತುಂಬಿಕೊಂಡು ಬರುತ್ತಿದ್ದ ದೃಶ್ಯ

ಸೀಮೆಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ ► ಬಿಟ್ಟಿ ಸೀಮೆಎಣ್ಣೆಗಾಗಿ ಬಕೆಟ್, ಕ್ಯಾನ್ ಹಿಡಿದು ಮುಗಿ ಬಿದ್ದ ಜನತೆ Read More »

ಕರ್ನಾಟಕ
Scroll to Top