ರಕ್ತದ ಕ್ಯಾನ್ಸರ್ ಗೆ ತುತ್ತಾಗಿರುವ ಪೂಜಾಶ್ರೀಗೆ ಧನ ಸಹಾಯ ► ನೊಂದವರಿಗೆ ಬೆಳಕಾಗುತ್ತಿರುವ ಬೆಳ್ಳಾರೆಯ ಜ್ಞಾನದೀಪ
(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಎ.22. ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ) ಗೆ ತುತ್ತಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಹೊಪ್ಪಾಳೆ ನಿವಾಸಿ ಪೂಜಾಶ್ರೀಗೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ಸಂಸ್ಥೆಯು ಸಹಾಯ ಧನ ನೀಡಿ ನೆರವಾಗಿದೆ. ಸುಬ್ರಹ್ಮಣ್ಯ ಎಸ್.ಎಸ್.ಪಿ.ಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಪೂಜಾಶ್ರೀ ಕೆಲವು ಸಮಯಗಳ ಹಿಂದೆ ರಕ್ತದ ಕ್ಯಾನ್ಸರ್ ಗೆ ತುತ್ತಾಗಿ ಇದೀಗ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೂಲಿ ಕೆಲಸ ಮಾಡಿ […]









