ಅಕ್ರಮ‌ ಗಾಂಜಾ ಮಾರಾಟ ಯತ್ನ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.01. ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಉಳ್ಳಾಲ ಪೊಲೀಸರು 1 ಕೆಜಿ 50 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕಾಸರಗೋಡಿನ ಉಪ್ಪಳ‌ ಕುಂಟುಪುಣಿ ನಿವಾಸಿ ಎ.ಕೆ.ಮಹಮ್ಮದ್ ಎಂಬವರ ಪುತ್ರ ಅಬೂಬಕ್ಕರ್ ಸಿದ್ದಿಕ್ (32) ಎಂದು ಗುರುತಿಸಲಾಗಿದೆ. ಈತ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿಯಲ್ಲಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆರ್ ಮತ್ತು ಉಪ ನಿರೀಕ್ಷಕರಾದ […]

ಅಕ್ರಮ‌ ಗಾಂಜಾ ಮಾರಾಟ ಯತ್ನ ► ಆರೋಪಿಯ ಬಂಧನ Read More »

ಕರಾವಳಿ

ಕಡಬ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.01. ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಗುರುವಾರದಂದು ಕುಂತೂರಿನಿಂದ ವರದಿಯಾಗಿದೆ. ಐತ್ತೂರು ಗ್ರಾಮದ ಮಾಯಿಪತ್ತೆಪಾಲು ನಿವಾಸಿ ಹುಕ್ರಪ್ಪ ಗೌಡ ಎಂಬವರ ಪುತ್ರಿ ಯಶೋಧಾ(37) ಎಂಬಾಕೆಯನ್ನು ಕುಂತೂರು ಗ್ರಾಮದ ಬಾಚಡ್ಕ‌ ಎಂಬಲ್ಲಿಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಗುರುವಾರದಂದು ಆಕೆಯ ಮನೆಯವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕುಂತೂರಿನ ಮನೆಗೆ ತೆರಳಿದ ಆಕೆಯ ಹೆತ್ತವರಿಗೆ ಬೀಗ ಹಾಕಿರುವುದು ಕಂಡುಬಂದಿದ್ದು, ಬಳಿಕ ಆಕೆ ಕೆಲಸ ನಿರ್ವಹಿಸುತ್ತಿದ್ದ

ಕಡಬ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ Read More »

ಕರಾವಳಿ

ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಆಯ್ಕೆಯಾದ ಮಿಥಿನ್ ಗೆ ಹುಟ್ಟೂರ ಅಭಿನಂದನೆ ► ತೆರೆದ ವಾಹನದಲ್ಲಿ ಕಡಬ ಪೇಟೆಯಾದ್ಯಂತ ಮೆರವಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಜೂ.01. ಮುಂಬರುವ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಪರ ಆಡಲು ಆಯ್ಕೆಯಾದ ಕಡಬದ ಯುವಕನಿಗೆ ಜನಪ್ರಿಯ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಹಾಗೂ ಊರಿನ ಕಬಡ್ಡಿ ಅಭಿಮಾನಿಗಳ ವತಿಯಿಂದ ಅಭಿನಂದನಾ ಮೆರವಣಿಗೆಯು ಕಡಬ ಪೇಟೆಯಲ್ಲಿ ಶುಕ್ರವಾರ ಸಂಜೆ‌ ನಡೆಯಿತು. ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಅನ್ನಯ್ಯ – ಪ್ರೇಮ ದಂಪತಿಯ ಪುತ್ರ ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿ ಮಿಥಿನ್ ಕುಮಾರ್ ಪ್ರೋ ಕಬಡ್ಡಿ 2018 ರಲ್ಲಿ

ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಆಯ್ಕೆಯಾದ ಮಿಥಿನ್ ಗೆ ಹುಟ್ಟೂರ ಅಭಿನಂದನೆ ► ತೆರೆದ ವಾಹನದಲ್ಲಿ ಕಡಬ ಪೇಟೆಯಾದ್ಯಂತ ಮೆರವಣಿಗೆ Read More »

ಕರಾವಳಿ

ಐವರ್ನಾಡು: ರಿಕ್ಷಾ ಪಲ್ಟಿ ► ಚಾಲಕ ಸೇರಿ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ‌ಜೂ.01. ಚಾಲಕನ ನಿಯಂತ್ರಣ ತಪ್ಪಿದ ಆಟೋರಿಕ್ಷಾವೊಂದು ಪಲ್ಟಿಯಾದ ಪರಿಣಾಮ ಚಾಲಕ ಹಾಗೂ ಪ್ರಯಾಣಿಕ ಮಹಿಳೆಯೋರ್ವರು ಗಾಯಗೊಂಡ ಘಟನೆ ಸುಳ್ಯ – ಬೆಳ್ಳಾರೆ ರಸ್ತೆಯ ಐವರ್ನಾಡಿನಲ್ಲಿ‌ ಶುಕ್ರವಾರದಂದು ನಡೆದಿದೆ. ಬೆಳ್ಳಾರೆಯಿಂದ ಜಾಲ್ಸೂರು ಕಡೆಗೆ ತೆರಳುತ್ತಿದ್ದ ಆಟೋರಿಕ್ಷಾ ಐವರ್ನಾಡಿನ ಮರುವತ್ತಡ್ಕ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಯಲ್ಲಿ ಬಿದ್ದಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಜಾಲ್ಸೂರು ನಿವಾಸಿ ಮಣಿ ಹಾಗೂ ಪ್ರಯಾಣಿಕ ಮಹಿಳೆ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐವರ್ನಾಡು: ರಿಕ್ಷಾ ಪಲ್ಟಿ ► ಚಾಲಕ ಸೇರಿ ಇಬ್ಬರಿಗೆ ಗಾಯ Read More »

ಕರಾವಳಿ

ಸಿಇಟಿ ಫಲಿತಾಂಶ ಪ್ರಕಟ ► ಇಂಜಿನಿಯರಿಂಗ್ ನಲ್ಲಿ ಮಂಗಳೂರಿನ ನಾರಾಯಣ ಪೈಗೆ ದ್ವಿತೀಯ ರ‌್ಯಾಂಕ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.01. ಕರ್ನಾಟಕ ಸಿಇಟಿ ಫಲಿತಾಂಶವನ್ನು ಇಂದು ಮಧ್ಯಾಹ್ನ 1 ಗಂಟೆಗೆ  ಪ್ರಕಟಿಸಲಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಕೃತವಾಗಿ ಫಲಿತಾಂಶವನ್ನು ವೆಬ್‌ಸೈಟ್ ಗಳಲ್ಲಿ 3 ಗಂಟೆಗೆ ಪ್ರಕಟಿಸಲಿದೆ. ಇಂಜಿನೀಯರಿಂಗ್ ವಿಭಾಗದಲ್ಲಿ ವಿಜಯಪುರದ ಎಕ್ಸಲೆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಪ್ರಥಮ ರ‌್ಯಾಂಕ್ ಪಡೆದುಕೊಂಡಿದ್ದು,   ದಕ್ಷಿಣ ಕನ್ನಡ ಜಿಲ್ಲೆಯ ಶಾರದಾ ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ವಿದ್ಯಾರ್ಥಿ ನಾರಾಯಣ ಪೈ ದ್ವಿತೀಯ ರ‌್ಯಾಂಕ್ ಪಡೆದಿದ್ದಾರೆ. ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು

ಸಿಇಟಿ ಫಲಿತಾಂಶ ಪ್ರಕಟ ► ಇಂಜಿನಿಯರಿಂಗ್ ನಲ್ಲಿ ಮಂಗಳೂರಿನ ನಾರಾಯಣ ಪೈಗೆ ದ್ವಿತೀಯ ರ‌್ಯಾಂಕ್ Read More »

ಕರ್ನಾಟಕ

ಚರ್ಚ್ ದಾಳಿ ಎಂಬ ಸುಳ್ಳು ಸುದ್ದಿಯನ್ನು ಹರಡಿದ ಆರೋಪ ► ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.01. ಮಂಗಳೂರಲ್ಲಿ ಚರ್ಚ್ ದಾಳಿಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಮಂಗಳೂರು ಸೆಂಟ್ರಲ್ ಉಪ ವಿಭಾಗದ ಎಸಿಪಿಯವರು ಗುರುವಾರದಂದು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ನಿವಾಸಿಗಳಾದ ಸುನಿಲ್ ವೇಗಸ್ ಹಾಗೂ ಸಚಿತ್ ಪಿ.ಪಿ ಎಂದು ಗುರುತಿಸಲಾಗಿದೆ. ಇವರು ಚರ್ಚ್ ದಾಳಿಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಕೋಮು ಪ್ರಚೋದನಕಾರಿಯಾಗಿ ವರ್ತಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಮಂಗಳೂರು ಸೆಂಟ್ರಲ್ ಉಪ

ಚರ್ಚ್ ದಾಳಿ ಎಂಬ ಸುಳ್ಳು ಸುದ್ದಿಯನ್ನು ಹರಡಿದ ಆರೋಪ ► ಇಬ್ಬರ ಬಂಧನ Read More »

ಕರಾವಳಿ

ಸುಳ್ಯದ ನ್ಯಾಯವಾದಿ ಬಿ.ಎಸ್.ಶರೀಫ್ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.01. ನ್ಯಾಯವಾದಿ, ಸುಳ್ಯ ನಗರ ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಸ್.ಶರೀಫ್ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ರಂಝಾನ್ ಸಮಯವಾದುದರಿಂದ ಬೆಳಿಗ್ಗೆ 4.30 ರ ನಂತರ ತನ್ನ ಅರಂಬೂರಿನಲ್ಲಿರುವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 8 ಗಂಟೆಯ ಕೃತ್ಯವು ಮನೆಯವರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಿಯರ್ ಉದ್ಯಮ ನಡೆಸುತ್ತಿದ್ದ ಶರೀಫ್ ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ

ಸುಳ್ಯದ ನ್ಯಾಯವಾದಿ ಬಿ.ಎಸ್.ಶರೀಫ್ ಆತ್ಮಹತ್ಯೆಗೆ ಶರಣು Read More »

ಕರಾವಳಿ

ಇಂದು ಸಿಇಟಿ ಫಲಿತಾಂಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.01. ಕರ್ನಾಟಕ ಸಿಇಟಿ ಫಲಿತಾಂಶವು ಇಂದು ಮಧ್ಯಾಹ್ನ 1 ಗಂಟೆಗೆ ಪ್ರಕಟವಾಗಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಕೃತವಾಗಿ ಫಲಿತಾಂಶವನ್ನು ವೆಬ್‌ಸೈಟ್ ಗಳಲ್ಲಿ 3 ಗಂಟೆ ಪ್ರಕಟಿಸಲಿದೆ. ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಪ್ರಿಲ್ ತಿಂಗಳಿನಲ್ಲಿ 2018ನೆ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿತ್ತು. ಒಟ್ಟು 1,98,639 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಇಂದು ಸಿಇಟಿ ಫಲಿತಾಂಶ Read More »

ಕರ್ನಾಟಕ

ಹೀರೋ ಅಧಿಕೃತ ಮಾರಾಟ ಸಂಸ್ಥೆ ಕೀರ್ತಿ ಮೋಟಾರ್ ರವರ ಸಹಸಂಸ್ಥೆ ► ಕೀರ್ತಿ ಸರ್ವೀಸಸ್ ಇಂದು (ಜೂ.01) ಕುಕ್ಕೇ ಸುಬ್ರಹ್ಮಣ್ಯದಲ್ಲಿ ಶುಭಾರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.01. ಹೀರೋ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟ ಸಂಸ್ಥೆಯಾದ ಕೀರ್ತಿ ಮೋಟಾರ್ ರವರ ಸಹ ಸಂಸ್ಥೆ ಹೀರೋ ಸರ್ವೀಸಸ್ ಇಂದು ಕುಕ್ಕೇ ಸುಬ್ರಹ್ಮಣ್ಯದಲ್ಲಿ ಶುಭಾರಂಭಗೊಳ್ಳಲಿದೆ. ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಆದಿ ಸುಬ್ರಹ್ಮಣ್ಯ ರಸ್ತೆಯ ನಾಗಹಿತ್ಲುವಿನಲ್ಲಿ ಜೂನ್ 01 ಶುಕ್ರವಾರದಂದು ಪೂರ್ವಾಹ್ನ 11 ಗಂಟೆಗೆ ನೂತನ ಸಂಸ್ಥೆಯು ಆರಂಭಗೊಳ್ಳಲಿದೆ. ಎಲ್ಲಾ ಹೀರೋ ದ್ವಿಚಕ್ರ ವಾಹನಗಳ ಪ್ರದರ್ಶನ, ಮಾರಾಟ ಮತ್ತು

ಹೀರೋ ಅಧಿಕೃತ ಮಾರಾಟ ಸಂಸ್ಥೆ ಕೀರ್ತಿ ಮೋಟಾರ್ ರವರ ಸಹಸಂಸ್ಥೆ ► ಕೀರ್ತಿ ಸರ್ವೀಸಸ್ ಇಂದು (ಜೂ.01) ಕುಕ್ಕೇ ಸುಬ್ರಹ್ಮಣ್ಯದಲ್ಲಿ ಶುಭಾರಂಭ Read More »

ಕರಾವಳಿ

ಅಂತರ್ ರಾಜ್ಯ ಬೈಕ್‌ ಕಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು ► 17 ಬೈಕ್ ಗಳೊಂದಿಗೆ ಎಂಟು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.01. ಐಷಾರಾಮಿ ಬದುಕಿಗಾಗಿ ಬೈಕ್ ಗಳನ್ನು ಕಳ್ಳತನ ಪ್ರಕರಣವನ್ನು ಭೇದಿಸಿರುವ ಮಂಗಳೂರು ಕೇಂದ್ರ ಉಪ ವಿಭಾಗದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಗುರುವಾರದಂದು ನಡೆದಿದೆ. ಬಂಧಿತ ಆರೋಪಿಗಳನ್ನು ಕೇರಳದ ಅರ್ಜುನ್ ಕೆ.ಬಿ, ರೋಬಿನ್ ಬೇಬಿ ಹಾಗೂ ಟಿಜೋ ಜೋಸೆಪ್ ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ರಾಯಲ್ ಎನ್ ಫೀಲ್ಡ್ ಬುಲೇಟ್, ಕೆಟಿಎಮ್, ಯಮಹಾ ಆರ್15,

ಅಂತರ್ ರಾಜ್ಯ ಬೈಕ್‌ ಕಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು ► 17 ಬೈಕ್ ಗಳೊಂದಿಗೆ ಎಂಟು ಮಂದಿಯ ಬಂಧನ Read More »

ಕರಾವಳಿ
Scroll to Top