Crime

LPG ಗ್ಯಾಸ್ ಗೀಸರ್ ಸೋರಿಕೆ; ಇಬ್ಬರು ಸಹೋದರಿಯರು ಸಾವು

(ನ್ಯೂಸ್‌ ಕಡಬ) newskadaba.com,  ಅ..24:  ಗ್ಯಾಸ್ ಗೀಸರ್ ನಿಂದ ಎಲ್ ಪಿಜಿ ಸೋರಿಕೆಯಾಗಿ ಇಬ್ಬರು ಸಹೋದರಿಯರು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಗುಲ್ಫಾಮ್ (23) ಮತ್ತು ಆಕೆಯ ಸಹೋದರಿ ಸಿಮ್ರಾನ್ ತಾಜ್ (20) ಎಲ್ ಪಿಜಿ ಅನಿಲ ಸೇವಿಸಿ ಸ್ನಾನಗೃಹದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿರಿಯಾಪಟ್ಟಣದ ಜೋನಿಗೇರಿ ಬೀದಿಯಲ್ಲಿ ಅಲ್ತಾಫ್ ಪಾಷಾ ಮತ್ತು ಅವರ ಕುಟುಂದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಗುರುವಾರ ರಾತ್ರಿ ಸುಮಾರು 7ರ ಸಮಯದಲ್ಲಿ ಸಹೋದರಿಯರು ಒಟ್ಟಿಗೆ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ […]

LPG ಗ್ಯಾಸ್ ಗೀಸರ್ ಸೋರಿಕೆ; ಇಬ್ಬರು ಸಹೋದರಿಯರು ಸಾವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಹುಟ್ಟುಹಬ್ಬದ ದಿನವೇ ಯುವಕ ಸಾವು, ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

(ನ್ಯೂಸ್‌ ಕಡಬ) newskadaba.com,  ಅ.25 ಕೊಪ್ಪಳ– ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಹುಟ್ಟುಹಬ್ಬದ ದಿನವೇ ಮೃತಪಟ್ಟಿದ್ದು, ಪೋಷಕರು ಕೇಕ್‌ ಕತ್ತರಿಸಿ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಕನಕಗಿರಿ ಮೂಲದ ಆರ್ಯನ್‌ (22) ಮೃತಪಟ್ಟ ಯುವಕ. ಕಳೆದ 15 ದಿನಗಳ ಹಿಂದೆ ಹಾಸನ ಸಮೀಪ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಆರ್ಯನ್‌ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹುಟ್ಟುಹಬ್ಬದ ದಿನವಾದ ನಿನ್ನೆ ಆರ್ಯನ್‌ ಮೃತಪಟ್ಟಿದ್ದಾನೆ. ಪೋಷಕರು ದುಃಖದ ನಡುವೆಯೇ ಮಗನ ಕೈ

ಹುಟ್ಟುಹಬ್ಬದ ದಿನವೇ ಯುವಕ ಸಾವು, ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಜ್ಪೆ: ಮನೆಯ ಬೀಗ ಮುರಿದು ಕಳವಿಗೆ ಯತ್ನ

(ನ್ಯೂಸ್‌ ಕಡಬ) newskadaba.com,  ಅ.25 ಬಜ್ಪೆ: ಪೆರ್ಮುದೆ ಬಂಡಸಾಲೆಯ ಬಳಿಯ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯೆಲ್ಲ ಜಾಲಾಡಿ ಬರಿಗೈಯಲ್ಲಿ ಮರಳಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಶಿಕ್ಷಕಿ ಶೋಭಾ ಬ್ರಿಟೋ ಅವರು ಅ.22ರಂದು ತಾಯಿಯ ಮನೆಗೆ ತೆರಳಿದ್ದಾಗ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಕಳ್ಳರು ರಾತ್ರಿ 10ರಿಂದ 11ರ ವರೆಗೆ ಮನೆಯಲ್ಲಿದ್ದುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎಂದು ತಿಳಿದುಬಂದಿದೆ. ಅ.23ರಂದು ರಾತ್ರಿ ಅಲ್ಲಿಯೇ ಸಮೀಪದ ಗುಜರಿ ಅಂಗಡಿಯ ಶಟರ್‌ ಮುರಿಯಲು ಕೂಡ ಯತ್ನಿಸಲಾಗಿದೆ.

ಬಜ್ಪೆ: ಮನೆಯ ಬೀಗ ಮುರಿದು ಕಳವಿಗೆ ಯತ್ನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

2025-26ರಲ್ಲಿ ಭಾರತದ ಆರ್ಥಿಕತೆ 6.6% ದರದಲ್ಲಿ ಬೆಳೆಯಲಿದೆ – ಐಎಮ್ಎಫ್ ವರದಿ

(ನ್ಯೂಸ್‌ ಕಡಬ) newskadaba.com,  ಅ..24:  ಅಂತರರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆ ಮಾಡಿದ ವಿಶ್ವ ಆರ್ಥಿಕ ದೃಷ್ಟಿಕೋನ ವರದಿಯ ಪ್ರಕಾರ, ಭಾರತವು 2025-26ರಲ್ಲಿ 6.6% ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಇದು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ “ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ಆರ್ಥಿಕತೆ”ಗಳಲ್ಲಿ ಪ್ರಮುಖ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಐಎಂಎಫ್ ಪ್ರಕಾರ, ಈ ಬಲವಾದ ಬೆಳವಣಿಗೆಗೆ ಮೊದಲ ತ್ರೈಮಾಸಿಕದ ಆರ್ಥಿಕ ಸಾಧನೆ ಮತ್ತು ಆಂತರಿಕ ಬೇಡಿಕೆಯ ಸ್ಥಿರತೆ ಪ್ರಮುಖ ಕಾರಣವಾಗಿದೆ. ಅಮೆರಿಕದ ಸುಂಕ ಹೆಚ್ಚಳದ ಪರಿಣಾಮಗಳು ಭಾರತದ ಬೆಳವಣಿಗೆಯ ಮೇಲೆ

2025-26ರಲ್ಲಿ ಭಾರತದ ಆರ್ಥಿಕತೆ 6.6% ದರದಲ್ಲಿ ಬೆಳೆಯಲಿದೆ – ಐಎಮ್ಎಫ್ ವರದಿ Read More »

ಬ್ರೇಕಿಂಗ್ ನ್ಯೂಸ್

ಈರುಳ್ಳಿ ಬೆಲೆ ಕುಸಿತ: PDPS ಅಡಿ ಖರೀದಿಗೆ ಸರ್ಕಾರ ಯತ್ನ

(ನ್ಯೂಸ್‌ ಕಡಬ) newskadaba.com,  ಅ..24 : ಈರುಳ್ಳಿ ಬೆಲೆ ಕುಸಿತದ ಕಾರಣ ಪಿಡಿಪಿಎಸ್‌ (ಪ್ರೈಸ್‌ ಡಿಫಿಷಿಯನ್ಸಿ ಪ್ರೊಕ್ಯುರ್‌ಮೆಂಟ್ ಸ್ಕೀಮ್) ಅಡಿ ಈರುಳ್ಳಿ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಸಚಿವ ಶಿವಾನಂದ ಪಾಟೀಲ್ ಅವರು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಬೆಳೆ ಹಾನಿಯಾಗಿದ್ದು, ಈರುಳ್ಳಿ ಬೆಲೆ ಕುಸಿತವಾಗಿದೆ. ಹೀಗಾಗಿ, ಪಿಡಿಪಿಎಸ್ ಅಡಿಯಲ್ಲಿ ಬೆಳೆಗಳ ಖರೀದಿಸಲು ಕೇಂದ್ರಕ್ಕೆ ಪತ್ರ ಬರೆಯುತ್ತೇವೆಂದು ಹೇಳಿದ್ದಾರೆ. ವಿಜಯಪುರ, ಚಿತ್ರದುರ್ಗ, ವಿಜಯನಗರ, ಬೆಳಗಾವಿ, ಧಾರವಾಡ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ

ಈರುಳ್ಳಿ ಬೆಲೆ ಕುಸಿತ: PDPS ಅಡಿ ಖರೀದಿಗೆ ಸರ್ಕಾರ ಯತ್ನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನವದೆಹಲಿ: ನೀರಿನಲ್ಲಿ ಶವ ದಹನ – ಇದು ಪರಿಸರ ಸ್ನೇಹಿ ಅಂತ್ಯಕ್ರಿಯೆ!

(ನ್ಯೂಸ್‌ ಕಡಬ) newskadaba.com,  ಅ.25 ನವದೆಹಲಿ:ಶತಮಾನಗಳ ಹಿಂದಿನಿಂದಲೂ ಮನುಷ್ಯರ ಅಂತ್ಯಕ್ರಿಯೆ ಸಾಂಪ್ರದಾಯಿಕವಾಗಿ ಶವದ ದಹನ ಅಥವಾ ಸಮಾಧಿ ಮೂಲಕ ನೆರವೇರುತ್ತಿತ್ತು. ಹಿಂದೆ ಅಗ್ನಿಯ ಸಹಾಯದಿಂದ ದೇಹವನ್ನು ಸುಡುವುದು ಸಾಮಾನ್ಯವಾಗಿದ್ದರೆ, ಈಗ ವಿದ್ಯುತ್ ಬಳಸಿ ಪ್ರಕ್ರಿಯೆ ನಡೆಯುತ್ತಿದೆ. ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯ ಮತ್ತು ಪರಿಸರ ಸ್ನೇಹಿ ಪರ್ಯಾಯಗಳ ಬಗ್ಗೆ ಹೆಚ್ಚುತ್ತಿರುವ ಜನರ ಚಿಂತನೆಯಿಂದ, ಅಂತ್ಯಕ್ರಿಯೆಯ ಸಂಪ್ರದಾಯವೂ ಬದಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ದೇಹವನ್ನು ಕೇವಲ ನೀರು ಮತ್ತು ಕ್ಷಾರ (ಪೋಟ್ಯಾಸಿಯಮ್ ಹೈಡ್ರಾಕ್ಸೈಡ್) ಮಿಶ್ರಣ ಬಳಸಿ ಕರಗಿಸಲಾಗುತ್ತದೆ. ದೇಹವನ್ನು ಶೇಕಡಾ

ನವದೆಹಲಿ: ನೀರಿನಲ್ಲಿ ಶವ ದಹನ – ಇದು ಪರಿಸರ ಸ್ನೇಹಿ ಅಂತ್ಯಕ್ರಿಯೆ! Read More »

ಕರಾವಳಿ

ಹಾಸನಾಂಬ ಹುಂಡಿ ಎಣಿಕೆ ಮುಕ್ತಾಯ-ಹುಂಡಿಗೆ ಹರಿದು ಬಂದ ಕೋಟಿ ಕೋಟಿ ಕಾಣಿಕೆ

(ನ್ಯೂಸ್‌ ಕಡಬ) newskadaba.com,  ಅ..24 : ಶ್ರೀ ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು 3,68,12,275 ರೂ. ಸಂಗ್ರಹವಾಗಿದೆ ಎಂದು ದೇಗುಲ ಆಡಳಿತಾಧಿಕಾರಿ ಮಾರುತಿ ತಿಳಿಸಿದರು. ನಗರದ ತೇರಾಪಂಥ್‌ ಸಮುದಾಯ ಭವನದಲ್ಲಿ ನಿನ್ನೆ ಹುಂಡಿ ಎಣಿಕೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಟಿಕೆಟ್‌ ಹಾಗೂ ಲಾಡು ಮಾರಾಟದಿಂದ 21,91,75,052ರೂ. ಹಾಗೂ ಹುಂಡಿಯಿಂದ 3,68,12,275 ರೂ. ಸೇರಿದಂತೆ ಒಟ್ಟು 25,59,87,327 ರೂ.ಹಣ ಸಂಗ್ರಹವಾಗಿದೆ ಎಂದರು. ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾಮಹೋತ್ಸವದಲ್ಲಿಯೇ ಇದು ದಾಖಲೆ

ಹಾಸನಾಂಬ ಹುಂಡಿ ಎಣಿಕೆ ಮುಕ್ತಾಯ-ಹುಂಡಿಗೆ ಹರಿದು ಬಂದ ಕೋಟಿ ಕೋಟಿ ಕಾಣಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡಿಜಿಟಲ್ ಅರೆಸ್ಟ್ ಕರೆ: ೪೨ ಲಕ್ಷ ರು. ಕಳಕೊಂಡ ಮಹಿಳೆ

(ನ್ಯೂಸ್‌ ಕಡಬ) newskadaba.com,  ಅ.25 ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ಕರೆ ಮಾಡಿ ೪೨,೦೦,೧೫೦ ರು. ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರುದಾರ ಮಹಿಳೆಗೆ ಅ.೭ರಂದು ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿ ಮುಂಬಯಿ ಕೊಲಾಬ ಪೊಲೀಸ್ ಠಾಣೆಯಿಂದ ಕರೆ ಮಾಡುವುದಾಗಿ ತಿಳಿಸಿದ್ದಾನೆ. ನಿಮ್ಮ ಹೆಸರಿನಲ್ಲಿ ಐಡಿ ಕಾರ್ಡ್ನಲ್ಲಿ ಸಿಮ್ ಖರೀದಿಸಿ ಅದರಿಂದ ವಂಚನೆಯ ಕರೆ ಸಾರ್ವಜನಿಕರಿಗೆ ಅನುಮಾನಾಸ್ಪದ ಲಿಂಕ್ ಗಳನ್ನು ಕಳುಹಿಸಲಾಗಿದೆ. ಕೂಡಲೇ ಮುಂಬಯಿಗೆ

ಡಿಜಿಟಲ್ ಅರೆಸ್ಟ್ ಕರೆ: ೪೨ ಲಕ್ಷ ರು. ಕಳಕೊಂಡ ಮಹಿಳೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗ್ಯಾಸ್ ಗೀಸರ್ನಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ಸಹೋದರಿಯರ ದುರ್ಮರಣ

(ನ್ಯೂಸ್‌ ಕಡಬ) newskadaba.com,  ಅ..24 : ಗ್ಯಾಸ್‌‍ ಗೀಸರ್‌ನಲ್ಲಿ ಅನಿಲ ಸೋರಿಕೆಯಾಗಿ ಉಸಿರುಗಟ್ಟಿ ಕುಟುಂಬದ ಇಬ್ಬರು ಸಹೋದರಿಯರು ಮೃತಪಟ್ಟಿರುವ ಘಟನೆ ಜರುಗಿದೆ.ಪಿರಿಯಾಪಟ್ಟಣದ ಬೆಟ್ಟದಪುರದ ನಿವಾಸಿಯಾದ ಅಲ್ತಾಫ್ ಪಾಷಾ ಅವರ ಎರಡನೇ ಮಗಳು ಗುಲ್ಪಮ್‌ ತಾಜ್‌‍(23) ಮತ್ತು ನಾಲ್ಕನೇ ಮಗಳಾದ ಸಿವ್ರಾನ್‌ ತಾಜ್‌‍(21) ಸಾವನ್ನಪ್ಪಿರುವ ನತದೃಷ್ಟರಾಗಿದ್ದಾರೆ. ಬೆಟ್ಟದಪುರದಿಂದ ಪಿರಿಯಾಪಟ್ಟಣದ ಜೋನಿಗೆರಿ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ಅಲ್ತ್‌ಾ ಪಾಷಾ ಕುಟುಂಬದವರು ವಾಸ ಮಾಡುತ್ತಿದ್ದಾರೆ. ಮೊನ್ನೆ ರಾತ್ರಿ 7 ಗಂಟೆ ಸುಮಾರಿನಲ್ಲಿ ಇಬ್ಬರು ಸಹೋದರಿಯರು ಸ್ನಾನದ ಮನೆಗೆ ಏಕಕಾಲಕ್ಕೆ ತೆರಳಿದ್ದರು. ಆ

ಗ್ಯಾಸ್ ಗೀಸರ್ನಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ಸಹೋದರಿಯರ ದುರ್ಮರಣ Read More »

ಕರ್ನಾಟಕ

ಬೆಂಗಳೂರು: ಎಲೆಕ್ಟ್ರಿಕ್‌ ಬಸ್‌ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ -ರಾಮಲಿಂಗಾರೆಡ್ಡಿ

(ನ್ಯೂಸ್‌ ಕಡಬ) newskadaba.com,  ಅ.25 ಬೆಂಗಳೂರು : ಎಲೆಕ್ಟ್ರಿಕ್‌ ಬಸ್‌ ಚಾಲಕರ ನಡವಳಿಕೆಯಿಂದ ಬಿಎಂಟಿಸಿ ಸೇವೆಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿವರಿಸಿ ಇವಿ ಬಸ್‌ಗಳಿಗೆ ಖಾಸಗಿ ಚಾಲಕರನ್ನು ನೇಮಿಸುವ ವ್ಯವಸ್ಥೆ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಿರ್ಧರಿಸಿದ್ದಾರೆ. ವೇತನ, ಭತ್ಯೆ ಹೆಚ್ಚಳ, ಬೋನಸ್‌ ನೀಡುವುದು ಸೇರಿದಂತೆ ವಿವಿಧ ಕಾರಣ ನೀಡಿ ಖಾಸಗಿ ಸಂಸ್ಥೆಯಿಂದ ನೇಮಕವಾಗಿರುವ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರು ಕಳೆದ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದ ಎರಡು

ಬೆಂಗಳೂರು: ಎಲೆಕ್ಟ್ರಿಕ್‌ ಬಸ್‌ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ -ರಾಮಲಿಂಗಾರೆಡ್ಡಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top