ಮರ್ಧಾಳ: ಜೀಪ್ ಬೈಕ್ ಢಿಕ್ಕಿ ► ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಜೀಪು ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಗುರುವಾರದಂದು ಮರ್ಧಾಳದಲ್ಲಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಸುಂಕದಕಟ್ಟೆ ಮೂಜೂರು ನಿವಾಸಿ ತುಕಾರಾಮ್ ಎಂದು ಗುರುತಿಸಲಾಗಿದೆ. ಕಡಬ ಕೇವಳ ನಿವಾಸಿಯೋರ್ವರು ಚಲಾಯಿಸುತ್ತಿದ್ದ ಜೀಪ್ ಹಾಗೂ ಬೈಕ್‌ ನಡುವೆ ಢಿಕ್ಕಿ ಸಂಭವಿಸಿದೆ. ಗಾಯಾಳುವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ‌ನೆಲ್ಯಾಡಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮರ್ಧಾಳ: ಜೀಪ್ ಬೈಕ್ ಢಿಕ್ಕಿ ► ಸವಾರನಿಗೆ ಗಾಯ Read More »

ಕರಾವಳಿ

ಚಿಗುರು ಮೀಸೆಯ ಯುವಕನ ದುರಾಸೆಗೆ ಬಲಿಯಾಯಿತು ಬಡಜೀವ ► ಬಯಲಾಯಿತು ಪಂಬೆತ್ತಾಡಿ ಕೃಷಿಕನ ಕೊಲೆ‌ ಆರೋಪಿ ಬಿಚ್ಚಿಟ್ಟ ರಹಸ್ಯ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.11. ನಾಲ್ಕು ದಿನಗಳ ಹಿಂದೆ ತನ್ನ ಮನೆಯಲ್ಲೇ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪಂಬೆತ್ತಾಡಿ ಗ್ರಾಮದ ಕಲ್ಚಾರು ಸುಬ್ರಹ್ಮಣ್ಯ ಭಟ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣಕ್ಕೆ ತೆರೆ ಎಳೆದಿದ್ದಾರೆ. ಸೆಪ್ಟೆಂಬರ್ 08 ರಂದು ಸುಬ್ರಹ್ಮಣ್ಯ ಭಟ್ ರವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಅವರ ಮನೆಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಪ್ರಕರಣದ ಆರೋಪಿ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪಡ ನಿವಾಸಿ ಶೀನಪ್ಪ ಗೌಡ ಎಂಬವರ

ಚಿಗುರು ಮೀಸೆಯ ಯುವಕನ ದುರಾಸೆಗೆ ಬಲಿಯಾಯಿತು ಬಡಜೀವ ► ಬಯಲಾಯಿತು ಪಂಬೆತ್ತಾಡಿ ಕೃಷಿಕನ ಕೊಲೆ‌ ಆರೋಪಿ ಬಿಚ್ಚಿಟ್ಟ ರಹಸ್ಯ Read More »

ಕರಾವಳಿ

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ

ಮೂಡುಬಿದಿರೆ, ಸೆ.12. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆಯಲ್ಲಿ ಬುಧವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಬೆಂಗಳೂರಿನ ವಿನುತಾ(18) ಎಂದು ಗುರುತಿಸಲಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ವಿನುತಾ ಬುಧವಾರದಂದು ಹಾಸ್ಟೆಲ್ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌ ಎನ್ನಲಾಗಿದೆ. ಸ್ಥಳಕ್ಕೆ ಮೂಡುಬಿದಿರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಡಬಿದಿರೆ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ Read More »

ಕರಾವಳಿ

ಮುಕ್ಕೂರಿನಲ್ಲಿ 9 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ

ಪರಂಪರೆ,ಪರಿಸರ,ಪರಿಶ್ರಮ ಪ್ರಜ್ಞೆ ಸಂಘಟನೆ ಜೀವಾಳ : ನಾಯರ್‌ಕೆರೆ ಮುಕ್ಕೂರು : ಹಿರಿಯರು ತೋರಿಸಿದ ಪರಂಪರೆ ಪ್ರಜ್ಞೆ, ಪ್ರಕೃತಿ ಸಹಜ ಮೌಲ್ಯಗಳನ್ನು ಬೆಳೆಸುವ ಪರಿಸರ ಪ್ರಜ್ಞೆ, ಎಲ್ಲರನ್ನು ಒಗ್ಗೂಡಿಸಿ ಊರನ್ನು ಬೆಳಗಿಸುವ ಪರಿಶ್ರಮ ಪ್ರಜ್ಞೆ. ಈ ಮೂರನ್ನು ಹೊಂದಿರುವ ಸಂಘಟನೆ ಚಿರಾಯಿಯಾಗುತ್ತದೆ ಎಂದು ಪತ್ರಕರ್ತ, ಸಂಪನ್ಮೂಲ ವಕ್ತಿ ದುರ್ಗಾಕುಮಾರ್ ನಾಯರ್‌ಕೆರೆ ಹೇಳಿದರು. ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಮುಕ್ಕೂರು ಶಾಲಾ ವಠಾರದಲ್ಲಿ ನಡೆದ ೯ ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಮ್ಮಾನ ನೆರವೇರಿಸಿ

ಮುಕ್ಕೂರಿನಲ್ಲಿ 9 ನೇ ವರ್ಷದ ಗಣೇಶೋತ್ಸವ ಕ್ರೀಡಾಕೂಟ Read More »

ಕರಾವಳಿ

►► ಕವರ್ ಸ್ಟೋರಿ ► ಸವಣೂರಿನಿಂದ ಪ್ರತ್ಯೇಕವಾಗಲಿದೆಯೇ ಪಾಲ್ತಾಡಿ ಗ್ರಾಮ..!! ► ಈಡೇರುವುದೇ ಪಾಲ್ತಾಡಿ ಪ್ರತ್ಯೇಕ ಗ್ರಾಮ ಪಂಚಾಯತ್ ನ ಬೇಡಿಕೆ..??

ಸವಣೂರು, ಸೆ.13. ಸವಣೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿರುವ ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾ.ಪಂ.ಮಾಡಬೇಕೆಂಬ ಬೇಡಿಕೆ ಈ ಬಾರಿಯಾದರೂ ಈಡೇರುತ್ತಾ ಎಂಬ ಆಶಾ ಭಾವನೆ ಗ್ರಾಮಸ್ಥರದ್ದು. ಕಳೆದ ಬಾರಿ ಗ್ರಾಮ ಪಂಚಾಯತ್ ಪುನರ್ವಿಂಗಡನೆ ಸಮಯದಲ್ಲಿಯೇ ಈ ಕುರಿತು ಗ್ರಾಮಸ್ಥರಿಂದ ಬೇಡಿಕೆ ವ್ಯಕ್ತವಾಗಿತ್ತು.ಬಳಿಕ ಗ್ರಾಮಸ್ಥರಿಂದ ಕಂದಾಯ ಇಲಾಖೆಯ ಸಚಿವರಿಗೆ, ಗ್ರಾ.ಪಂ.ಪುನರ್ವಿಂಗಡನಾ ಸಮಿತಿಗೆ, ಇಲಾಖೆಯ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದರು. ಆದರೆ ಪ್ರತ್ಯೇಕ ಗ್ರಾ.ಪಂ.ಕನಸು ಕನಸಾಗಿಯೇ ಉಳಿಯಿತು. ಪಾಲ್ತಾಡಿ ಗ್ರಾಮದ ಒಟ್ಟು ವಿಸ್ತೀರ್ಣ ೨೬೬೮.೧೦ ಎಕ್ರೆ ಆಗಿದ್ದು ,ಒಟ್ಟು ೫೮೦ ಕುಟುಂಬಗಳನ್ನು ಹೊಂದಿದ್ದು

►► ಕವರ್ ಸ್ಟೋರಿ ► ಸವಣೂರಿನಿಂದ ಪ್ರತ್ಯೇಕವಾಗಲಿದೆಯೇ ಪಾಲ್ತಾಡಿ ಗ್ರಾಮ..!! ► ಈಡೇರುವುದೇ ಪಾಲ್ತಾಡಿ ಪ್ರತ್ಯೇಕ ಗ್ರಾಮ ಪಂಚಾಯತ್ ನ ಬೇಡಿಕೆ..?? Read More »

ಕರಾವಳಿ

ಕೇಂದ್ರ ಸರಕಾರದ ಚಿಂತನೆಗೆ ಯುವ ಸಂಸ್ಥೆಗಳ ಸಾಥ್

ಬೃಂದಾ ಪಿ.ಮುಕ್ಕೂರು,ವಿವೇಕಾನಂದ ಕಾಲೇಜು ಪುತ್ತೂರು ಯುವಶಕ್ತಿ ದೇಶದ ಅಮೂಲ್ಯ ಸಂಪತ್ತು, ಶಕ್ತಿ. ೧೬ ರಿಂದ ೩೫ ವರ್ಷದೊಳಗಿನ ಪ್ರಾಯ ಅತ್ಯಂತ ಹುರುಪಿನ, ಉತ್ಸಾಹದ, ಸಾಽಸುವ ಛಲ ಹೊಂದಿರುವ ವಯಸ್ಸು. ಈ ವಯಸ್ಸಿನ ಯುವಕರು ಪರಸ್ಪರ ಸಂಘಟಿತರಾಗಿ ಯುವಕ-ಯುವತಿ ಮಂಡಲಗಳ ಮೂಲಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನಿಸ್ವಾರ್ಥವಾಗಿ ಶ್ರಮಿಸುತ್ತಿರುವುದು ಉತ್ತಮ ವಿಚಾರ. ಯುವಕ ಯುವತಿ ಮಂಡಲಗಳು ಬಲಿಷ್ಠವಾಗಿದ್ದಲ್ಲಿ ಸಮಾಜ ಸುಸ್ಥಿತಿಯಲ್ಲಿರಲಿದೆ. ಸಮಾಜದ ಅಭಿವೃದ್ಧಿ, ಬದಲಾವಣೆಯಲ್ಲಿ ಇಂತಹ ಸಂಘಟನೆಗಳ ಪಾತ್ರ ಮಹತ್ವವಾದುದು, ಅವಿಸ್ಮರಣೀಯವಾದುದು.  

ಕೇಂದ್ರ ಸರಕಾರದ ಚಿಂತನೆಗೆ ಯುವ ಸಂಸ್ಥೆಗಳ ಸಾಥ್ Read More »

ಕರಾವಳಿ

ಸವಣೂರು ವಿದ್ಯಾರಶ್ಮಿ ಪ್ರ.ದ.ಕಾಲೇಜು : ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿಲ್ಲಿ  ಕಂಪ್ಯೂಟರ್ ಲ್ಯಾಬ್‌ನಉದ್ಘಾಟನೆ ನಡೆಯಿತು. ಸಂಸ್ಥೆಯ ಸಂಚಾಲಕರಾದ  ಕೆ. ಸೀತಾರಾಮ ರೈ ಸವಣೂರು ಪ್ಯೂಟರ್ ಲ್ಯಾಬ್ ನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿ ಎನ್.ಸುಂದರ ರೈ ಮತ್ತು ಉದ್ಯಮಿ ಜೆರಿ ಪಿಂಟೋ ರವರು ಕಂಪ್ಯೂಟರ್, ಉದ್ಯಮಿ  ವಿಕ್ರಮ್ ಶೆಟ್ಟಿ ಯವರು ಪ್ರಾಜೆಕ್ಟರ್ ನ್ನು ಸಂಸ್ಥೆಗೆ ಕೊಡುಗೆಯಾಗಿ ನೀಡಿದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಽಕಾರಿ  ಆಶ್ವಿನ್. ಎಲ್ ಶೆಟ್ಟಿ , ಮಂಗಳೂರು ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ

ಸವಣೂರು ವಿದ್ಯಾರಶ್ಮಿ ಪ್ರ.ದ.ಕಾಲೇಜು : ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ Read More »

ಕರಾವಳಿ

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೀತ ಸಂಗೀತ

ಸವಣೂರು: ಇಲ್ಲಿನ  ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ  ಗೀತಸಂಗೀತ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪೆರ್ನಾಜೆ ಸೀತಾರಾಘವ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಆರ್.ಗೋಪಾಲಕೃಷ್ಣ  ಅವರು, ಶಾಸ್ತ್ರೀಯ ಸಂಗೀತ, ಭಾವಗೀತ, ಜನಪದಗೀತೆ ಹಾಗೂ ಸುಗಮ ಸಂಗೀತವನ್ನು ಹಾಡಿದರು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ    ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಽಕಾರಿ ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿಶೆಟ್ಟಿ,

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೀತ ಸಂಗೀತ Read More »

ಕರಾವಳಿ

ಅಂಕತ್ತಡ್ಕ:ಶಾಲಾಭಿವೃದ್ಧಿ ಸಮಿತಿ ಸಭೆ,ನೂತನ ಸಮಿತಿ ರಚನೆ

ಸವಣೂರು : ಗ್ರಾ.ಪಂ.ವ್ಯಾಪ್ತಿಯ  ಅಂಕತ್ತಡ್ಕ ಹಿ.ಪ್ರಾ.ಶಾಲಾಭಿವೃದ್ಧಿ  ಸಮಿತಿಯ ಸಭೆಯು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ,ಉಪಾಧ್ಯಕ್ಷರಾಗಿ  ಶಹನಾಝ್ ಬಾನು , ಸದಸ್ಯರಾಗಿ ಬಾಬು,ಚಿತ್ರಾವತಿ ಕೆ.ಎಂ,ಕುಸುಮಾ,ಸುಂದರಿ,ಗೀತಾ ಕೆ,ನಾರಾಯಣ ಪೂಜಾರಿ,ಎ.ಎಸ್.ರಝಾಕ್,ಲಲಿತಾ,ವಸಂತಿ,ರೇಷ್ಮಾ,ಶಬೀನಾ ಬಾನು,ಲತಾ.ಬಿ.ಕೆ,ನಳಿನಿ ರೈ,ಸುಮಲತಾ,ಕಿಟ್ಟಣ್ಣ ರೈ,ವಿಶ್ವನಾಥ  ಇವರನ್ನು ಆಯ್ಕೆ ಮಾಡಲಾಯಿತು. ನಾಮ ನಿರ್ದೇಶನ ಸದಸ್ಯರಾಗಿ ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್, ,ಶಿಕ್ಷಕ ಪ್ರತಿನಿಽಯಾಗಿ ಸಂದ್ಯಾ ಜಿ.ಕೆ,ವಿದ್ಯಾರ್ಥಿ ಪ್ರತಿನಿಽಯಾಗಿ ಆಯಿಷತುಲ್ ಫಾಯಿಝಾ,ಪದನಿಮಿತ್ತ ಸದಸ್ಯರಾಗಿ ಆರೋಗ್ಯ ಕಾರ್ಯಕರ್ತೆ ವಾಗೀಶ್ವರಿ, ಅಂಗನವಾಡಿ ಕಾರ್ಯಕರ್ತೆ ಪ್ರೇಮ,ಕಾರ್ಯದರ್ಶಿಯಾಗಿ ಶಾಲಾ ಮುಖ್ಯಗುರು ಶಾರದಾ ಆಯ್ಕೆಯಾದರು.  

ಅಂಕತ್ತಡ್ಕ:ಶಾಲಾಭಿವೃದ್ಧಿ ಸಮಿತಿ ಸಭೆ,ನೂತನ ಸಮಿತಿ ರಚನೆ Read More »

ಕರಾವಳಿ

ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ- ಬೆಳ್ಳಾರೆ ಪಿಎಸೈ ಈರಯ್ಯ

ಸವಣೂರು :ಗಣೇಶೋತ್ಸವಗಳ ಮೆರವಣಿಗೆಯಲ್ಲಿ  ಡಿ.ಜೆ.ಸೌಂಡ್ಸ್‌ಗೆ ಅವಕಾಶವಿಲ್ಲ.ಈ ನಿಟ್ಟಿನಲ್ಲಿ ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಿ ,ಕಾನೂನು ಪಾಲನೆಗೆ ಸಹರಿಸಬೇಕು ಎಂದು ಬೆಳ್ಳಾರೆ ಠಾಣಾ ಉಪನಿರೀಕ್ಷಕ ಡಿ.ಎನ್ ಈರಯ್ಯ ಹೇಳಿದರು. ಅವರು  ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ನಡೆದ  ವಿವಿಧ ಕಡೆಗಳ ಗಣೇಶೋತ್ಸವ ಸಮಿತಿಗಳ ಪದಾಽಕಾರಿಗಳ ಹಾಗೂ ಸಾರ್ವಜನಿಕರ ಶಾಂತಿ ಸಭೆಯಲ್ಲಿ ಹೇಳಿದರು. ಕಾರ್ಯಕ್ರಮಗಳಲ್ಲಿ  ಅನ್ಯಧರ್ಮದ ವ್ಯಕ್ತಿಗಳಿ,ಧರ್ಮಕ್ಕೆ  ನೋವು ತರುವಂತಹ ಕೆಲಸ ಮಾಡಬೇಡಿ. ಶಾಂತಿ,ಸಂಯಮ,ಮಾನವೀಯತೆಯನ್ನು ಮೈಗೂಡಿಸಿಕೊಂಡು .ಶಾಂತಿಸುವ್ಯವಸ್ಥೆ ಕಾಪಾಡಲು  ಇಲಾಖೆಯೊಂದಿಗೆ ಕೈಜೋಡಿಸಬೇಕು. ಇಲಾಖೆಯ ಮೇಲೆ ಸಾರ್ವಜನಿಕರ ನಂಬಿಕೆ ಹಾಗೂ ಸಹಕಾರ ಬೇಕು ಎಂದರು.

ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ಇಲ್ಲ- ಬೆಳ್ಳಾರೆ ಪಿಎಸೈ ಈರಯ್ಯ Read More »

ಕರಾವಳಿ
Scroll to Top