ದಕ್ಷಿಣ ಕನ್ನಡದ ನಾಡ ಕಚೇರಿಗಳಲ್ಲಿ ಕೆಲಸ ಬಂದ್: ಸರ್ವರ್ ಸಮಸ್ಯೆಯಿಂದ ಕಂಗಾಲಾದ ನಾಗರಿಕರು

(ನ್ಯೂಸ್‌ ಕಡಬ) newskadaba.com, ಜು.28 ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ ಹಾಗೂ ಬೆಳ್ತಂಗಡಿ ಸೇರಿದಂತೆ ಹಲವು ನಾಡ ಕಚೇರಿಗಳಲ್ಲಿ ಕಳೆದ 10 ದಿನಗಳಿಂದ ನೆಟ್ವರ್ಕ್ ಮತ್ತು ಸರ್ವರ್ ಸಮಸ್ಯೆ ತೀವ್ರಗೊಂಡಿದ್ದು, ಸಾರ್ವಜನಿಕ ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ತಾಂತ್ರಿಕ ದೋಷದಿಂದಾಗಿ ಜಾತಿ, ಆದಾಯ, ನಿವಾಸ ಸೇರಿದಂತೆ ವಿವಿಧ ಅಗತ್ಯ ಪ್ರಮಾಣಪತ್ರಗಳ ವಿತರಣೆ ಸಂಪೂರ್ಣ ವಿಳಂಬವಾಗಿದೆ. ಸಾರ್ವಜನಿಕರು ಗಂಟೆಗಟ್ಟಲೆ ಸರದಿಯಲ್ಲಿ ಕಾದರೂ ಕೆಲಸವಾಗದೆ ಬರಿಗೈಯಲ್ಲಿ ಮನೆಗೆ ಹಿಂದಿರುಗುವಂತಾಗಿದೆ. ವಿದ್ಯಾರ್ಥಿವೇತನ, ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಹಾಗೂ […]

ದಕ್ಷಿಣ ಕನ್ನಡದ ನಾಡ ಕಚೇರಿಗಳಲ್ಲಿ ಕೆಲಸ ಬಂದ್: ಸರ್ವರ್ ಸಮಸ್ಯೆಯಿಂದ ಕಂಗಾಲಾದ ನಾಗರಿಕರು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರಿನ ಹಂಪನಕಟ್ಟೆಯಲ್ಲಿ ಭಾರೀ ಬೆಂಕಿ ಅವಘಡ: ಶೂ ಅಂಗಡಿ ಸಂಪೂರ್ಣ ಭಸ್ಮ!

(ನ್ಯೂಸ್‌ ಕಡಬ) newskadaba.com,  ಜು.28 ಮಂಗಳೂರು: ಮಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಹಂಪನಕಟ್ಟೆಯಲ್ಲಿರುವ ಶೂ ಅಂಗಡಿಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿ ಸಂಪೂರ್ಣ ಭಸ್ಮಗೊಂಡಿದೆ. ಬೆಂಕಿಯ ಕೆನ್ನಾಲಿಗೆ ತೀವ್ರವಾಗಿದ್ದರಿಂದ ಪಕ್ಕದಲ್ಲಿದ್ದ ಎರಡು ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ. ಘಟನೆಯಲ್ಲಿ ‘ಯುರೋಪ್’ ಹೆಸರಿನ ಪ್ರಸಿದ್ಧ ಶೂ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಸತತ ಪ್ರಯತ್ನ ನಡೆಸಿ ಬೆಂಕಿಯನ್ನು ಹತೋಟಿಗೆ ತರುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮೇಲ್ನೋಟಕ್ಕೆ ವಿದ್ಯುತ್

ಮಂಗಳೂರಿನ ಹಂಪನಕಟ್ಟೆಯಲ್ಲಿ ಭಾರೀ ಬೆಂಕಿ ಅವಘಡ: ಶೂ ಅಂಗಡಿ ಸಂಪೂರ್ಣ ಭಸ್ಮ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪತ್ನಿಯನ್ನು ಕೊಂದು ಅತ್ತೆ-ಮಾವನಿಗೆ ವೀಡಿಯೋ ಕಾಲ್ ಮಾಡಿದ ಪತಿ!

(ನ್ಯೂಸ್‌ ಕಡಬ) newskadaba.com,  ಜು.28 ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಪತ್ನಿಯನ್ನ ಹತ್ಯೆಗೈದು ಆಕೆ ಪ್ರಾಣಕ್ಕಾಗಿ ಒದ್ದಾಡುತ್ತಿದ್ದ ದೃಶ್ಯವನ್ನು ಅತ್ತೆ-ಮಾವನಿಗೆ ವೀಡಿಯೋ ಕಾಲ್ ಮೂಲಕ ತೋರಿಸಿದ ಕ್ರೂರ ಘಟನೆ ನಡೆದಿದೆ. ಮೃತ ಮಹಿಳೆಯನ್ನ ಭಾಗ್ಯಶ್ರೀ ಜಿಗಳೂರು (23) ಎಂದು ಗುರುತಿಸಲಾಗಿದೆ. ಅನೈತಿಕ ಸಂಬಂಧದ ಶಂಕೆಯಿಂದ ಗಂಡ ಪ್ರವೀಣ್ ಜಿಗಳೂರು ಎಂಬಾತ ಪತ್ನಿಯೊಂದಿಗೆ ಜಗಳವಾಡಿ, ಕಟ್ಟಿಗೆಯಿಂದ ಹಲ್ಲೆ ನಡೆಸಿ ನೇಣು ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆಯ ಬಳಿಕ ಆ

ಪತ್ನಿಯನ್ನು ಕೊಂದು ಅತ್ತೆ-ಮಾವನಿಗೆ ವೀಡಿಯೋ ಕಾಲ್ ಮಾಡಿದ ಪತಿ! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬ್ಯಾಂಕ್ ಆಫ್ ಬರೋಡಾ ಗ್ರಾಹಕರ ಗಮನಕ್ಕೆ: ನೆಟ್ ಬ್ಯಾಂಕಿಂಗ್, ‘bob World’ ಆಪ್ PIN ತಕ್ಷಣವೇ ಬದಲಾಯಿಸಿ!

(ನ್ಯೂಸ್‌ ಕಡಬ) newskadaba.com,  ಜು.28 : ಭಾರತದ 3ನೇ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಆದ ‘ಬ್ಯಾಂಕ್ ಆಫ್ ಬರೋಡಾ’ದ 1,000 GB (1 TB) ಸೂಕ್ಷ್ಮ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ.‘ಟ್ರಿಪಲ್ ಎಕ್ಸ್’ ಎಂಬ ಹ್ಯಾಕರ್ಸ್ ಗುಂಪು ಬ್ಯಾಂಕಿನ ಇಮೇಲ್ ವ್ಯವಸ್ಥೆಯಲ್ಲಿದ್ದ ಲೋಪವನ್ನು ಬಳಸಿಕೊಂಡು ಈ ದಾಳಿ ನಡೆಸಿದೆ. ಏನೆಲ್ಲಾ ಸೋರಿಕೆಯಾಗಿದೆ ಎನ್ನುವುದಾದರೆ ಗ್ರಾಹಕರ ಖಾಸಗಿ ವಿವರ 1 ರಿಂದ 3 ಲಕ್ಷ ಗ್ರಾಹಕರ ಅಪ್ಲಿಕೇಶನ್ ಫಾರ್ಮ್‌ಗಳು, ಫೋಟೋಗಳು, ಹೆಸರು, ಮೊಬೈಲ್ ಸಂಖ್ಯೆ ಹಾಗೂ ಆಧಾರ್

ಬ್ಯಾಂಕ್ ಆಫ್ ಬರೋಡಾ ಗ್ರಾಹಕರ ಗಮನಕ್ಕೆ: ನೆಟ್ ಬ್ಯಾಂಕಿಂಗ್, ‘bob World’ ಆಪ್ PIN ತಕ್ಷಣವೇ ಬದಲಾಯಿಸಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡು: ಮನೆ ಯಲ್ಲೇ ನೇಣು ಬಿಗಿದುಕೊಂಡು ನಿವೃತ್ತ ಎಸ್‌ಐ ಧನ್ ರಾಜ್ ಮೃತ್ಯು

(ನ್ಯೂಸ್‌ ಕಡಬ) newskadaba.com,  ಜು.28  ಕಾಸರಗೋಡು ಜಿಲ್ಲೆಯಲ್ಲಿ ಪೊಲೀಸ್ ವೃತ್ತಿಯಲ್ಲಿ ಹಲವಾರು ಪ್ರಮುಖ ಕ್ರಿಮಿನಲ್ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಧನ್ ರಾಜ್ (65) ಜುಲೈ 27 ರ ಸೋಮವಾರ  ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳು ಹಾಗೂ ಅಪರಾಧ ವಿಭಾಗದಲ್ಲಿ ದಕ್ಷ ಮತ್ತು ಚತುರ ತನಿಖಾ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಹಲವಾರು ಪ್ರಮುಖ ಕ್ರಿಮಿನಲ್ ಪ್ರಕರಣಗಳನ್ನು ಭೇದಿಸಿದ್ದರು. ನಿವೃತ್ತಿಯ ನಂತರ ಚೆರ್ಕಳದ ಖಾಸಗಿ

ಕಾಸರಗೋಡು: ಮನೆ ಯಲ್ಲೇ ನೇಣು ಬಿಗಿದುಕೊಂಡು ನಿವೃತ್ತ ಎಸ್‌ಐ ಧನ್ ರಾಜ್ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸುಳ್ಯ ತಾಲೂಕಿನಲ್ಲಿ ಮುಂದುವರಿದ ಕಾಡಾನೆ ಭೀತಿ: ಅರಣ್ಯ ಇಲಾಖೆಯ ಕ್ರಮಕ್ಕೆ ಒತ್ತಾಯ

(ನ್ಯೂಸ್‌ ಕಡಬ) newskadaba.com,  ಜು.28  ಸುಳ್ಯ: ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ರೈತರ ತೋಟಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿರುವುದರಿಂದ ರೈತರು ತೀವ್ರ ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಇಂದು ಮುಂಜಾನೆ ರೈತರ ತೋಟಗಳಿಗೆ ದಾಳಿ ಇಟ್ಟ ಕಾಡಾನೆಗಳ ಹಿಂಡು, ಅಪಾರ ಪ್ರಮಾಣದ ಬಾಳೆ ಹಾಗೂ ತೆಂಗಿನ ಮರಗಳನ್ನು ಧ್ವಂಸಗೊಳಿಸಿವೆ. ಈಗಾಗಲೇ ಅಡಿಕೆ ಎಲೆ ಚುಕ್ಕಿ ಮತ್ತು ಹಳದಿ ರೋಗದಿಂದ ಕಂಗೆಟ್ಟಿದ್ದ ತಾಲೂಕಿನ ರೈತರಿಗೆ, ಕಾಡಾನೆಗಳ ಸರಣಿ ಉಪಟಳ ಗಾಯದ ಮೇಲೆ ಬರೆ ಎಳೆದಂತಾಗಿದೆ. ಶೀಘ್ರವೇ

ಸುಳ್ಯ ತಾಲೂಕಿನಲ್ಲಿ ಮುಂದುವರಿದ ಕಾಡಾನೆ ಭೀತಿ: ಅರಣ್ಯ ಇಲಾಖೆಯ ಕ್ರಮಕ್ಕೆ ಒತ್ತಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನಿಂದ ಖಾದಿ ವಸ್ತ್ರಗಳ ವಿಶೇಷ ರಿಯಾಯಿತಿ ಮಾರಾಟ

(ನ್ಯೂಸ್ ಕಡಬ) newskadaba.com ಜು. 27. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ದಕ್ಷಿಣ ಕನ್ನಡ ಇದರ ವತಿಯಿಂದ ಜುಲೈ 28ರಿಂದ ಆಗಸ್ಟ್ 1ರ ವರೆಗೆ ನಗರದ ಮಿನಿ ವಿಧಾನಸೌಧದ ಆವರಣದಲ್ಲಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕರಾವಳಿ ಸಭಾಂಗಣದಲ್ಲಿ ಖಾದಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನದಲ್ಲಿ ಸರಕಾರಿ ನೌಕರರ ದೈನಂದಿನ ಬಳಕೆಯ ಉಡುಪುಗಳು, ಗೃಹೋಪಯೋಗಿ ಉತ್ಪನ್ನಗಳು ಮತ್ತು ಆಯ್ದ ಗುಣಮಟ್ಟದ ಖಾದಿ ಸಾಮಗ್ರಿಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ

ಇಂದಿನಿಂದ ಖಾದಿ ವಸ್ತ್ರಗಳ ವಿಶೇಷ ರಿಯಾಯಿತಿ ಮಾರಾಟ Read More »

ಕರಾವಳಿ

ಜುಲೈ 29ರಂದು ಜಿಲ್ಲಾಡಳಿತ ವತಿಯಿಂದ ಹಡಪದ ಅಪ್ಪಣ್ಣ ಜಯಂತಿ

(ನ್ಯೂಸ್ ಕಡಬ) newskadaba.com ಜು. 27. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದೊಂದಿಗೆ ಹಡಪದ ಅಪ್ಪಣ್ಣ ಜಯಂತಿ ಜುಲೈ 29 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಉರ್ವಾಸ್ಟೋರ್ ತುಳುಭವನದಲ್ಲಿ ನಡೆಯಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದಿರೆ ಆಳ್ವಾಸ್ ಕಾಲೇಜು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರೀಶ್ ಟಿ.ಜಿ ಅವರು ಜಯಂತಿ ಸಂದೇಶವನ್ನು

ಜುಲೈ 29ರಂದು ಜಿಲ್ಲಾಡಳಿತ ವತಿಯಿಂದ ಹಡಪದ ಅಪ್ಪಣ್ಣ ಜಯಂತಿ Read More »

ಕರಾವಳಿ

ಅಲ್ಪಸಂಖ್ಯಾತರ ವಿದೇಶಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜು. 27. ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ  ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಓದುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾರ್ಥಿವೇತನಕ್ಕೆ ಆನ್‍ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31 ಕೊನೆಯ ದಿನ. ಸೇವಾಸಿಂಧು https://sevasindhuservices.karnataka.gov.in/ ಆನ್‍ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯ ನಂ-16ಸಿ, ಮೌಲಾನಾ ಅಬ್ದುಲ್ ಕಲಾಂ ಅಜಾದ್ ಭವನ, ಮಿಲ್ಲರ್ ಟ್ಯಾಂಕ್‍ ಬೆಡ್ ರಸ್ತೆ,

ಅಲ್ಪಸಂಖ್ಯಾತರ ವಿದೇಶಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ Read More »

ಕರ್ನಾಟಕ

ಅತಿಥಿ ಉಪನ್ಯಾಸಕರ ಹುದ್ದೆ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಜು. 27. 2026-27ನೇ ಶೈಕ್ಷಣಿಕ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ವಿಷಯಗಳ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಸೋಶಿಯಲ್ ವರ್ಕ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಜಿಯೋಗ್ರಫಿ, ಲೈಬ್ರೆರಿ ಆ್ಯಂಡ್ ಇನ್ಫಾರ್ಮೇಶನ್ ಸೈನ್ಸ್, ಬಯೋಕೆಮಿಸ್ಟ್ರಿ, ಮೆಡಿಕಲ್ ಫಿಸಿಕ್ಸ್, ಫಿಸಿಕ್ಸ್, ಕೆಮಿಸ್ಟ್ರಿ, ಎನ್ವಿರಾನ್ಮೆಂಟ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಮೆಟೀರಿಯಲ್ ಸೈನ್ಸ್/ ಪಿ.ಜಿ ಡಿಪ್ಲೊಮಾ ಇನ್ ಮೆಟೀರಿಯಲ್ ಸೈನ್ಸ್, ಬಾಟನಿ, ಪ್ರಾಣಿಶಾಸ್ತ್ರ, ಸೈಬರ್ ಸೆಕ್ಯೂರಿಟಿ, ಫುಡ್ ಸೈನ್ಸ್

ಅತಿಥಿ ಉಪನ್ಯಾಸಕರ ಹುದ್ದೆ: ಅರ್ಜಿ ಆಹ್ವಾನ Read More »

ಕರ್ನಾಟಕ
Scroll to Top