►► ಪ್ರಕಟಣೆ ಸುಂಕದಕಟ್ಟೆ 72 ಕಾಲೋನಿಯಲ್ಲಿ ಮಹಿಳೆ ಮೃತಪಟ್ಟ ಹಿನ್ನೆಲೆ ► ನಾಳೆ (ನ.03) ನಡೆಯಬೇಕಿದ್ದ ಅತಿಥಿ ಸತ್ಕಾರ ಕಾರ್ಯಕ್ರಮ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಕಡಬ, ನ.02. ಇಲ್ಲಿನ ಐತ್ತೂರು ಗ್ರಾಮದ ಸುಂಕದಕಟ್ಟೆ 72 ಕಾಲೋನಿಯ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ನವೆಂಬರ್ 03 ಶನಿವಾರದಂದು ನಡೆಯಬೇಕಿದ್ದ ವಿವಾಹ ಕಾರ್ಯಕ್ರಮದ ಅತಿಥಿ ಸತ್ಕಾರವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಐತ್ತೂರು ಗ್ರಾಮದ ಸುಂಕದಕಟ್ಟೆ 72 ಕಾಲೋನಿ ನಿವಾಸಿ ಎಂ.ಹನುಮಂತನ್ ಎಂಬವರ ಪುತ್ರಿ ಎಚ್. ಸುಕನ್ಯಾ (MSW HR) ಎಂಬವರ ವಿವಾಹವು ಅಕ್ಟೋಬರ್ 28 ರಂದ ತಮಿಳುನಾಡಿನಲ್ಲಿ ನಡೆದಿದ್ದು, ಅತಿಥಿ ಸತ್ಕಾರ ಕಾರ್ಯಕ್ರಮವನ್ನು ನವೆಂಬರ್ 03 ರಂದು ಸುಂಕದಕಟ್ಟೆ 72 ಕಾಲೋನಿಯ ಮುತ್ತು ಮಾರಿಯಮ್ಮ […]

►► ಪ್ರಕಟಣೆ ಸುಂಕದಕಟ್ಟೆ 72 ಕಾಲೋನಿಯಲ್ಲಿ ಮಹಿಳೆ ಮೃತಪಟ್ಟ ಹಿನ್ನೆಲೆ ► ನಾಳೆ (ನ.03) ನಡೆಯಬೇಕಿದ್ದ ಅತಿಥಿ ಸತ್ಕಾರ ಕಾರ್ಯಕ್ರಮ ಮುಂದೂಡಿಕೆ Read More »

ಕರಾವಳಿ

ಕಾಣಿಯೂರು: ಕಾಲೇಜು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ

(ನ್ಯೂಸ್ ಕಡಬ) (newskadaba.com) ಬೆಳ್ಳಾರೆ, ನ.02. ಕಾಲೇಜು ವಿದ್ಯಾರ್ಥಿನಿಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಪಡ ಸಮೀಪದ ಪುಳಿತ್ತಡಿ ಎಂಬಲ್ಲಿ ಶುಕ್ರವಾರದಂದು ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಕೊಡಿಯಾಳ ಗ್ರಾಮದ ಕಲ್ಪಡ ದಿ. ನಾರಾಯಣ ಗೌಡರ ಪುತ್ರಿ ಯುಕ್ತಿ (17) ಎಂದು ಗುರುತಿಸಲಾಗಿದೆ. 9 ವರ್ಷಗಳ ಹಿಂದೆ ನಾರಾಯಣ ಗೌಡರು ಮೃತಪಟ್ಟ ಬಳಿಕ ಈಕೆ ದೊಡ್ಡಪ್ಪನ ಮನೆಯಲ್ಲಿದ್ದು, ಕಾಣಿಯೂರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರದಂದು ತೋಟದ ಕೆರೆಗೆ ಹಾರಿ

ಕಾಣಿಯೂರು: ಕಾಲೇಜು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ Read More »

ಕರಾವಳಿ

ಎಟಿಎಂ ಸಂಖ್ಯೆ ನೀಡಿ 50 ಸಾವಿರ ರೂ. ಕಳೆದುಕೊಂಡ ಕಡಬದ ಯುವಕ ► ಪೊಲೀಸ್ ದೂರು ನೀಡಲು ಸಿದ್ಧತೆ

(ನ್ಯೂಸ್ ಕಡಬ) newskadaba.com ಕಡಬ, ನ.02. ಎಟಿಎಂ ಕಾರ್ಡ್ ನಿಷ್ಕ್ರಿಯಗೊಂಡಿದೆ ಎಂದು ನಂಬಿಸಿ ಕಡಬದ ವ್ಯಕ್ತಿಯೋರ್ವರಿಂದ 49997 ರೂ.ಗಳನ್ನು ದೋಚಿರುವ ಘಟನೆ ಅಕ್ಟೋಬರ್ 29 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಡಬದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹಿಂದಿರುವ ಪಿಜಕ್ಕಳ ನಿವಾಸಿ ರವೀಂದ್ರ (ಹೆಸರು ಬದಲಾಯಿಸಲಾಗಿದೆ) ಎಂಬವರ ಮೊಬೈಲಿಗೆ ಅಕ್ಟೋಬರ್ 29 ರಿಂದ ಕರೆಯೊಂದು ಬಂದಿದ್ದು, ಹಿಂದಿಯಲ್ಲಿ ಮಾತು ಆರಂಭಿಸಿದ ಆ ವ್ಯಕ್ತಿಯು ನಿಮ್ಮ ಎಟಿಎಂ ಕಾರ್ಡ್ ನ ಅವಧಿ ಮುಗಿದಿರುವುದರಿಂದ ತಕ್ಷಣವೇ ಕಾರ್ಡ್

ಎಟಿಎಂ ಸಂಖ್ಯೆ ನೀಡಿ 50 ಸಾವಿರ ರೂ. ಕಳೆದುಕೊಂಡ ಕಡಬದ ಯುವಕ ► ಪೊಲೀಸ್ ದೂರು ನೀಡಲು ಸಿದ್ಧತೆ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿಯರು ಬಲಿಯಾಗುತ್ತಿದ್ದಾರೆಂಬ ಆರೋಪ ► ಎಸ್ಡಿಪಿಐ ವತಿಯಿಂದ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ನ.01. ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮುಸ್ಲಿಂ ಬಾಣಂತಿಯರು ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿ ಎಸ್ಡಿಪಿಐ ವತಿಯಿಂದ ಗುರುವಾರದಂದು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಕಳೆದ ಅಕ್ಟೋಬರ್ 21 ರಂದು ಪುತ್ತೂರು ತಾಲೂಕಿನ ತ್ಯಾಗರಾಜ ನಗರದ ಬಾಣಂತಿಯೋರ್ವರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದು, ಘಟನೆ ನಡೆದ ಹತ್ತು ದಿನಗಳಲ್ಲಿ ಇಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ಸಿಟಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ನಿರಂತರವಾಗಿ ಮುಸ್ಲಿಂ ಬಾಣಂತಿಯರು ಬಲಿಯಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ

ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿಯರು ಬಲಿಯಾಗುತ್ತಿದ್ದಾರೆಂಬ ಆರೋಪ ► ಎಸ್ಡಿಪಿಐ ವತಿಯಿಂದ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ Read More »

ಕರಾವಳಿ

ಸಕಲೇಶಪುರ: ರಸ್ತೆ ಅಪಘಾತದಲ್ಲಿ ಪುತ್ತೂರಿನ ಕಾಲೇಜು ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.01. ಸಕಲೇಶಪುರದಲ್ಲಿ ಬೈಕ್ ಅಪಘಾತ ಸಂಭವಿಸಿದ ಕಾರಣ ಪುತ್ತೂರಿನ ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ದಾರುಣ ಘಟನೆ ಗುರುವಾರದಂದು ನಡೆದಿದೆ. ಮೃತನನ್ನು ಪುತ್ತೂರು ವಿವೇಕಾನಂದ ಕಾಲೇಜಿನ ಕಾನೂನು ವಿದ್ಯಾರ್ಥಿ, ಕೊಯಿಲ ನಿವಾಸಿ ಪೂರಿಂಗ ಉದಯ ಭಟ್ ಎಂಬವರ ಪುತ್ರ ಉಜ್ವಲ್ ಎಂದು ಗುರುತಿಸಲಾಗಿದೆ. ಉಜ್ವಲ್ ಪ್ರಯಾಣಿಸುತ್ತಿದ್ದ ರಾಯಲ್ ಎನ್ ಫೀಲ್ಡ್ ಬುಲ್ಲೆಟ್ ಸಕಲೇಶಪುರದ ಕುಂಬಾರಕಟ್ಟೆ ಎಂಬಲ್ಲಿ ಅಪಘಾತವಾಗಿ ಈ ದುರ್ಘಟನೆ ಸಂಭವಿಸಿದೆ.

ಸಕಲೇಶಪುರ: ರಸ್ತೆ ಅಪಘಾತದಲ್ಲಿ ಪುತ್ತೂರಿನ ಕಾಲೇಜು ವಿದ್ಯಾರ್ಥಿ ಮೃತ್ಯು Read More »

ಕರ್ನಾಟಕ

ಕೋಡಿಂಬಾಳ: ಮನೆಯಲ್ಲಿ ಗಾಂಜಾ ಗಿಡ ಬೆಳೆದು ಹೂ ಒಣಗಿಸಿ ಮಾರಾಟ ► ಆರೋಪಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.01. ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು 225 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಲ್ಲದೆ, ತನ್ನ ಮನೆಯ ಹಿತ್ತಲಿನಲ್ಲಿ ಬೆಳೆಸಿದ್ದ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಕೊಡೆಂಕೀರಿ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಹಾರೀಸ್ ಎಂದು ಗುರುತಿಸಲಾಗಿದೆ. ಆರೋಪಿಯು ಬುಧವಾರದಂದು ನೆಲ್ಯಾಡಿಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಉಪ್ಪಿನಂಗಡಿ

ಕೋಡಿಂಬಾಳ: ಮನೆಯಲ್ಲಿ ಗಾಂಜಾ ಗಿಡ ಬೆಳೆದು ಹೂ ಒಣಗಿಸಿ ಮಾರಾಟ ► ಆರೋಪಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು Read More »

ಕರಾವಳಿ

ವಿಟ್ಲ: ಕಲ್ಲಿನ ಕೋರೆಗೆ ಉರುಳಿ ಬಿದ್ದ ಆಟೋ ರಿಕ್ಷಾ ► ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಅ.31. ಚಾಲಕನ ನಿಯಂತ್ರಣ ತಪ್ಪಿದ ಆಟೋ ರಿಕ್ಷಾವೊಂದು ಸುಮಾರು 40 ಅಡಿ ಆಳದ ಕಲ್ಲಿನ ಕೋರೆಗೆ ಉರುಳಿಬಿದ್ದ ಪರಿಣಾಮ ಚಾಲಕ ಗಂಭೀರ ಗಾಯಗೊಂಡ ಘಟನೆ ಬುಧವಾರದಂದು ವಿಟ್ಲ ಸಮೀಪದ ಉಕ್ಕುಡದಲ್ಲಿ ನಡೆದಿದೆ. ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ಸಮೀಪದ ದರ್ಬೆ ಎಂಬಲ್ಲಿ ಕಲ್ಲು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಆಳವಾದ ಹೊಂಡಕ್ಕೆ ರಿಕ್ಷಾ ಪಲ್ಟಿಯಾಗಿದೆ. ಘಟನೆಯಲ್ಲಿ ವಿಟ್ಲ ಕಸಬಾ ಗ್ರಾಮದ ಕಾಂತಡ್ಕ ನಿವಾಸಿ ಚಾಲಕ ಆಸಿಫ್ (27) ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ

ವಿಟ್ಲ: ಕಲ್ಲಿನ ಕೋರೆಗೆ ಉರುಳಿ ಬಿದ್ದ ಆಟೋ ರಿಕ್ಷಾ ► ಚಾಲಕ ಗಂಭೀರ Read More »

ಕರಾವಳಿ

ಕಡಬ: ಎರಡು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ► ಒಂದು ಟಿಪ್ಪರ್, ಮರಳುಗಾರಿಕಾ ದೋಣಿ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಅ.31. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಎರಡು ಕಡೆಗಳಿಗೆ ದಾಳಿ‌ ನಡೆಸಿರುವ ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಹಾಗೂ ಕಡಬ ಠಾಣಾ ಉಪ ನಿರೀಕ್ಷಕರು ಒಂದು ಟಿಪ್ಪರ್ ಹಾಗೂ ಒಂದು ಮರಳುಗಾರಿಕಾ ದೋಣಿಯನ್ನು ವಶಪಡಿಸಿಕೊಂಡಿದ್ದಾರೆ. ಕಡಬ ಠಾಣಾ ವ್ಯಾಪ್ತಿಯ 102 ನೆಕ್ಕಿಲಾಡಿ ಗ್ರಾಮದ ಮಾಯಿಪಾಜೆ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದಲ್ಲಿಗೆ ದಾಳಿ ನಡೆಸಿ ಮರಳು ತುಂಬಿಸಿಟ್ಟಿದ್ದ ಒಂದು ಟಿಪ್ಪರನ್ನು ವಶಪಡಿಸಿಕೊಂಡಿದ್ದಾರೆ. ಇನ್ನೊಂದೆಡೆ ನೂಜಿಬಾಳ್ತಿಲ ಗ್ರಾಮದ ಎಂಜಿರ ಎಂಬಲ್ಲಿ ದಾಳಿ ನಡೆಸಿರುವ ಪೊಲೀಸರು ಮರಳುಗಾರಿಕಾ ದೋಣಿ

ಕಡಬ: ಎರಡು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ► ಒಂದು ಟಿಪ್ಪರ್, ಮರಳುಗಾರಿಕಾ ದೋಣಿ ವಶಕ್ಕೆ Read More »

ಕರಾವಳಿ

ಬೆಳ್ತಂಗಡಿ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ► ಇತಿಹಾಸದಲ್ಲೇ ಪ್ರಥಮ ಬಾರಿ ಭರ್ಜರಿ ಜಯಭೇರಿ ಬಾರಿಸಿದ ಬಿಜೆಪಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.31. ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, 7 ಸ್ಥಾನಗಳಲ್ಲಿ ಜಯಭೇರಿ ಸಾಧಿಸುವ ಮ‌ೂಲಕ ಪ್ರಥಮ ಬಾರಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ಕಳೆದ ಅವಧಿಗಳಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷವು ಕೇವಲ 4 ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಅಧಿಕಾರವನ್ನು ಕಳೆದುಕೊಂಡಿದೆ 1ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ರಾಜಶ್ರೀ ವಿ. ರಮಣ್, 2ನೇ ವಾರ್ಡ್‌ನಲ್ಲಿ ಬಿಜೆಪಿಯ ಅಂಬರೀಶ್, 3 ನೇ ವಾರ್ಡ್‌ನಲ್ಲಿ ಬಿಜೆಪಿಯ ಶರತ್ ಕುಮಾರ್ ವಿಜೇರಾಗಿದ್ದಾರೆ. 4ನೇ ವಾರ್ಡ್‌ನಲ್ಲಿ ಬಿಜೆಪಿಯ

ಬೆಳ್ತಂಗಡಿ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ► ಇತಿಹಾಸದಲ್ಲೇ ಪ್ರಥಮ ಬಾರಿ ಭರ್ಜರಿ ಜಯಭೇರಿ ಬಾರಿಸಿದ ಬಿಜೆಪಿ Read More »

ಕರಾವಳಿ

ಸೆಕೆಂಡ್ ಹ್ಯಾಂಡ್ ಕಾರು ಖರೀದಿದಾರರಿಗೆ ಎಚ್ಚರ ► ಕಡಿಮೆ ಬೆಲೆಗೆ ಫಾರ್ಚುನರ್ ಕಾರನ್ನು ಖರೀದಿಸಲು ದೆಹಲಿಗೆ ತೆರಳಿದ ತಂಡಕ್ಕೆ ಕಾದಿತ್ತು ಶಾಕ್ ► ಲಕ್ಷಾಂತರ ರೂ. ಮೌಲ್ಯದ ಸ್ವತ್ತು ಕಳೆದುಕೊಂಡಿದ್ದಾದರೂ ಹೇಗೆ ಗೊತ್ತೇ..?

(ನ್ಯೂಸ್ ಕಡಬ) newskadaba.com ಹಾಸನ, ಅ.31. ದುಬಾರಿ ಬೆಲೆಯ ಫಾರ್ಚುನರ್‌ ಕಾರು ಅರ್ಧ ಬೆಲೆಗೆ ಸಿಗುತ್ತದೆ ಎಂದು ನಂಬಿದ ಬಾಡಿ ಬಿಲ್ಡರ್ ಗಳ ತಂಡವೊಂದು ನವದೆಹಲಿಗೆ ತೆರಳಿ ಅತ್ತ ಕಾರೂ ಇಲ್ಲದೆ, ಇತ್ತ ಹಣವೂ ಇಲ್ಲದೆ ದರೋಡೆಗೊಳಗಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಶ್ವೇಶ್ವರಯ್ಯ ಬಡಾವಣೆಯ ನಂದಕುಮಾರ್‌, ಅವರ ಪುತ್ರ ನೀಲ್‌ಕುಮಾರ್‌, ಮತ್ತು ಸೋದರಿ ಪುತ್ರ ವಿಕ್ರಂ ಎಂಬವರು ಫಾರ್ಚುನರ್ ಕಾರನ್ನು ಖರೀದಿಸಲೆಂದು ಆನ್‌ಲೈನ್‌ನಲ್ಲಿ ಹುಡುಕಾಡುತ್ತಿದ್ದಾಗ 7 ಲಕ್ಷ ರೂ.ಗಳಿಗೆ ಉತ್ತಮ ಗುಣಮಟ್ಟದ ಫಾರ್ಚುನರ್ ಕಾರಿನ ಜಾಹೀರಾತು

ಸೆಕೆಂಡ್ ಹ್ಯಾಂಡ್ ಕಾರು ಖರೀದಿದಾರರಿಗೆ ಎಚ್ಚರ ► ಕಡಿಮೆ ಬೆಲೆಗೆ ಫಾರ್ಚುನರ್ ಕಾರನ್ನು ಖರೀದಿಸಲು ದೆಹಲಿಗೆ ತೆರಳಿದ ತಂಡಕ್ಕೆ ಕಾದಿತ್ತು ಶಾಕ್ ► ಲಕ್ಷಾಂತರ ರೂ. ಮೌಲ್ಯದ ಸ್ವತ್ತು ಕಳೆದುಕೊಂಡಿದ್ದಾದರೂ ಹೇಗೆ ಗೊತ್ತೇ..? Read More »

ರಾಷ್ಟ್ರೀಯ ನ್ಯೂಸ್
Scroll to Top