ಬಂಟ್ವಾಳ: ಇಂದಿರಾ ಕ್ಯಾಂಟೀನ್ ಉದ್ಘಾಟನೆ ► ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.09. ಬಂಟ್ವಾಳ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ಉಂಟಾಗಿದ್ದು, ಪೊಲೀಸರ ಸಕಾಲಿಕ ಕ್ರಮದಿಂದಾಗಿ ಹತೋಟಿಗೆ ಬಂದಿದೆ. ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬಾರದಂತೆ ಬಿಜೆಪಿ ಮುಖಂಡರು ತಹಶೀಲ್ದಾರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರೆನ್ನಲಾಗಿದ್ದು, ಇದನ್ನು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ. ಮಾಜಿ ಸಚಿವ ಬಿ.ರಮಾನಾಥ ರೈ […]

ಬಂಟ್ವಾಳ: ಇಂದಿರಾ ಕ್ಯಾಂಟೀನ್ ಉದ್ಘಾಟನೆ ► ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿ Read More »

ಕರ್ನಾಟಕ

ಬಲ್ಯ: ದೈವ ಚಾವಡಿಯ ತ್ರಿಶೂಲ ಕದ್ದು ರಸ್ತೆ ಬದಿಯಲ್ಲಿ ಹಾಕಿದ ಕಿಡಿಗೇಡಿಗಳು ► ತ್ರಿಶೂಲವನ್ನು ಸಂಬಂಧಿತರಿಗೆ ಹಸ್ತಾಂತರಿಸಿದ ಕಡಬ ಠಾಣಾ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಡಿ.09. ಇಲ್ಲಿಗೆ ಸಮೀಪದ ಬಲ್ಯ ಎಂಬಲ್ಲಿ ರಸ್ತೆ ಬದಿಯಲ್ಲಿ ಶನಿವಾರದಂದು ತ್ರಿಶೂಲವೊಂದು ಕಂಡುಬಂದಿದ್ದು, ಸ್ಥಳೀಯರೋರ್ವರು ಕಡಬ ಠಾಣೆಗೆ ಹಸ್ತಾಂತರಿಸಿದ್ದರು. ತ್ರಿಶೂಲ ಸಿಕ್ಕಿರುವ ಬಗ್ಗೆ ಕಡಬ ಠಾಣಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗರವರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದ್ದ ಹಿನ್ನೆಲೆಯಲ್ಲಿ ತ್ರಿಶೂಲವು ಇಲ್ಲಿಗೆ ಸಮೀಪದ ಬಲ್ಯ ಪಡ್ನೂರು ರಾಜನ್ ದೈವ ಚಾವಡಿಯ ಬಳಿಯಲ್ಲಿದ್ದ ಗುಳಿಗ ಕಟ್ಟೆಯದ್ದೆಂದು ತಿಳಿದು ಬಂದಿದ್ದು, ತ್ರಿಶೂಲವನ್ನು ಯಾರೋ ಕಿಡಿಗೇಡಿಗಳು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ

ಬಲ್ಯ: ದೈವ ಚಾವಡಿಯ ತ್ರಿಶೂಲ ಕದ್ದು ರಸ್ತೆ ಬದಿಯಲ್ಲಿ ಹಾಕಿದ ಕಿಡಿಗೇಡಿಗಳು ► ತ್ರಿಶೂಲವನ್ನು ಸಂಬಂಧಿತರಿಗೆ ಹಸ್ತಾಂತರಿಸಿದ ಕಡಬ ಠಾಣಾ ಪೊಲೀಸರು Read More »

ಕರಾವಳಿ

ಮಂಗಳೂರು: ಯುವತಿಯರನ್ನಿಟ್ಟು ಅನೈತಿಕ ಚಟುವಟಿಕೆ ► ಆರೋಪಿಯ ಬಂಧನ, ಮೂವರು ಯುವತಿಯರ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09. ನಗರದ ಹೊರವಲಯದ ಸುರತ್ಕಲ್ ಠಾಣಾ ವ್ಯಾಪ್ತಿಯ ಕಟ್ಟಡವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಅರಿತ ಸುರತ್ಕಲ್ ಪೊಲೀಸರ ತಂಡ ದಾಳಿ ನಡೆಸಿ ಓರ್ವನನ್ನು ವಾಹನ ಸಮೇತ ಬಂಧಿಸಿದ್ದು, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ. ಬಂಧಿತ ಆರೋಪಿಯನ್ನು ಪುನೀತ್ ಕುಮಾರ್ ಬಂಧಿತ ಎಂದು ಗುರುತಿಸಲಾಗಿದೆ. ಸುರತ್ಕಲ್ ಠಾಣಾ ವ್ಯಾಪ್ತಿಯ ಇಡ್ಯಾ ಗ್ರಾಮದ ಕಟ್ಟಡವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ

ಮಂಗಳೂರು: ಯುವತಿಯರನ್ನಿಟ್ಟು ಅನೈತಿಕ ಚಟುವಟಿಕೆ ► ಆರೋಪಿಯ ಬಂಧನ, ಮೂವರು ಯುವತಿಯರ ರಕ್ಷಣೆ Read More »

ಕರಾವಳಿ

►► ಉದ್ಯೋಗ ಮಾಹಿತಿ ‘ಕೌಶಲ್ಯ ಕರ್ನಾಟಕ’ ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ ► ಸ್ವಯಂ ಉದ್ಯೋಗ ಹೊಂದಲು ಸುವರ್ಣ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ‌‌.09. ಕ.ರ.ರ.ಸಾ.ಸಂಸ್ಥೆ, ಪ್ರಾದೇಶಿಕ ತರಬೇತಿ ಕೇಂದ್ರ, ಹಾಸನ ಇಲ್ಲಿ ಸರ್ಕಾರದ ಕೌಶಲ್ಯ ಕರ್ನಾಟಕ ಯೋಜನೆಯಡಿ ನಿರುದ್ಯೋಗಿ ಯುವಕ-ಯುವತಿಯವರಿಗೆ ಉಚಿತವಾಗಿ ಭಾರಿ ವಾಹನ, ಲಘುವಾಹನ ಹಾಗೂ ತಾಂತ್ರಿಕ ವೃತ್ತಿಗಳಲ್ಲಿ (ಆಟೋ, ವೆಲ್ಡರ್, ಆಟೋ, ಮೆಕ್ಯಾನಿಕ್, ಆಟೋ ಎಲೆಕ್ಟ್ರೀಷಿಯನ್, ಟೈರ್ ಫಿಟ್ಟರ್) ತರಬೇತಿ ನೀಡಿ ನಿರುದ್ಯೋಗಿಗಳಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ/ಅರೆ ಸರ್ಕಾರಿ/ಖಾಸಗಿ ಸಂಸ್ಥೆಗಳಲ್ಲಿ, ಸ್ವಯಂ ಉದ್ಯೋಗವನ್ನು ಹೊಂದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಅವಧಿಯಲ್ಲಿ ಉಚಿತ ಊಟೋಪಚಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಅಭ್ಯರ್ಥಿಗಳು

►► ಉದ್ಯೋಗ ಮಾಹಿತಿ ‘ಕೌಶಲ್ಯ ಕರ್ನಾಟಕ’ ನಿರುದ್ಯೋಗಿಗಳಿಗೆ ಉದ್ಯೋಗ ಯೋಜನೆ ► ಸ್ವಯಂ ಉದ್ಯೋಗ ಹೊಂದಲು ಸುವರ್ಣ ಅವಕಾಶ Read More »

ಉದ್ಯೋಗ, ಲೈಫ್‍ಸ್ಟೈಲ್

ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕುಟ್ರುಪಾಡಿ ಗ್ರಾಮ ಸಮಿತಿ ರಚನೆ ► ಅಧ್ಯಕ್ಷರಾಗಿ ಮೇದಪ್ಪ ಗೌಡ, ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆಯ ವಿಜಯ ಕುಮಾರ್

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕುಟ್ರುಪಾಡಿ ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು, ಅಧ್ಯಕ್ಷರಾಗಿ ಮೇದಪ್ಪ ಗೌಡ ನವದುರ್ಗ ಮತ್ತು ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರ ವಿಜಯಕುಮಾರ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರುಗಳಾಗಿ ಕುಂಞಪ್ಪ ಗೌಡ ಕೊಡೆಂಕಿರಿ, ಕುಶಾಲಪ್ಪ ಗೌಡ ಬಜೆತ್ತಡ್ಕ, ತಿಮ್ಮಪ್ಪ ಗೌಡ ಕೆಳಗಿನ ಮನೆ, ಮೋನಪ್ಪ ಗೌಡ ನಾಡೋಳಿ, ಉಪಾಧ್ಯಕ್ಷರುಗಳಾಗಿ ಆನಂದ ಗೌಡ ಉಳಪ್ಪು, ಪುಟ್ಟಣ್ಣ ಗೌಡ ಹೊಸ್ಮಠ, ಚಿದಾನಂದ ಕೊಡೆಂಕಿರಿ, ಗುಡ್ಡಪ್ಪ ಗೌಡ, ಖಜಾಂಜಿಯಾಗಿ

ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕುಟ್ರುಪಾಡಿ ಗ್ರಾಮ ಸಮಿತಿ ರಚನೆ ► ಅಧ್ಯಕ್ಷರಾಗಿ ಮೇದಪ್ಪ ಗೌಡ, ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆಯ ವಿಜಯ ಕುಮಾರ್ Read More »

ಕರಾವಳಿ

ನೆಟ್ಟಣ: ನಾಡಿಗೆ ಲಗ್ಗೆಯಿಟ್ಟ ಕಾಡಾನೆ ► ತೆಂಗಿನ ಮರ, ಮನೆಯ ತಡೆಗೋಡೆ ಧ್ವಂಸ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಳೆದ ಕೆಲವು ದಿನಗಳಿಂದ ನಾಡಿನಿಂದ ದೂರ ಉಳಿದಿದ್ದ ಕಾಡಾನೆಯು ಶುಕ್ರವಾರದಂದು ನಾಡಿಗೆ ಲಗ್ಗೆ ಇಟ್ಟಿದ್ದು, ನೆಟ್ಟಣ, ಬಿಳಿನೆಲೆ ಪರಿಸರ ನಿವಾಸಿಗಳು ಭಯಭೀತರಾಗಿದ್ದಾರೆ. ನೆಟ್ಟಣ ಪೇಟೆಯಲ್ಲಿನ ಅಬ್ದುಲ್ ರಹಿಮಾನ್ ಹಾಜಿ ಎಂಬವರ ಮನೆಯ ಪಕ್ಕದ ತೋಟದ ಬೇಲಿಯನ್ನು ಧ್ವಂಸಗೊಳಿಸಿರುವ ಕಾಡಾನೆಯು ತೆಂಗಿನ ಮರವನ್ನು ಹಾನಿಗೆಡವಿದೆ. ಇನ್ನೊಂದೆಡೆ ಬಿಳಿನೆಲೆಯಲ್ಲಿಯೂ ಕಾಡಾನೆಯ ಪುಂಡಾಟ ಜೋರಾಗಿದ್ದು, ಮನೆಯೊಂದರ ತಡೆಗೋಡೆಯನ್ನೇ ಪುಡಿಗಟ್ಟಿದೆ. ಬಿಳಿನೆಲೆ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ್ದು, ಶುಕ್ರವಾರ ರಾತ್ರಿ ವೇಳೆಗೆ ಪೋಷಕರೋರ್ವರು ಶಾಲೆಗೆ ತೆರಳಿ

ನೆಟ್ಟಣ: ನಾಡಿಗೆ ಲಗ್ಗೆಯಿಟ್ಟ ಕಾಡಾನೆ ► ತೆಂಗಿನ ಮರ, ಮನೆಯ ತಡೆಗೋಡೆ ಧ್ವಂಸ Read More »

ಕರಾವಳಿ

►► ಉದ್ಯೋಗ ಮಾಹಿತಿ: ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಾವಕಾಶಗಳು ► ಆಸಕ್ತರು ಕೂಡಲೇ ಸಂಪರ್ಕಿಸಿ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಕಡಬ ಪರಿಸರದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಾವಕಾಶಗಳಿದ್ದು, ಆಸಕ್ತರು ಸಂಪರ್ಕಿಸಬಹುದಾಗಿದೆ. ಕಡಬದ ಜನರಲ್ ಸ್ಟೋರ್ ವೊಂದರಲ್ಲಿ ಸೇಲ್ಸ್ ವಿಭಾಗಕ್ಕೆ ಪುರುಷ/ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕಂಪ್ಯೂಟರ್ ಸೇಲ್ಸ್ ಸಂಸ್ಥೆಯೊಂದಕ್ಕೆ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಪ್ರಿಂಟಿಂಗ್ ಪ್ರೆಸ್ ವೊಂದಕ್ಕೆ ಗ್ರಾಫಿಕ್ ಡಿಸೈನ್ ತಿಳಿದಿರುವ ಪುರುಷ/ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ. ‘ನುಡಿ’ ಕನ್ನಡ ಟೈಪಿಂಗ್ ತಿಳಿದಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಸ್ಟುಡಿಯೋ ವೊಂದಕ್ಕೆ ಫೋಟೋಗ್ರಫಿ ವಿಭಾಗದಲ್ಲಿ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಸ್ಟುಡಿಯೋ ವೊಂದಕ್ಕೆ ವೀಡಿಯೋ ಎಡಿಟಿಂಗ್

►► ಉದ್ಯೋಗ ಮಾಹಿತಿ: ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಾವಕಾಶಗಳು ► ಆಸಕ್ತರು ಕೂಡಲೇ ಸಂಪರ್ಕಿಸಿ Read More »

ಉದ್ಯೋಗ, ಲೈಫ್‍ಸ್ಟೈಲ್

ಮೂಡುಬಿದಿರೆ: ಪತ್ನಿಗೆ ಕತ್ತಿಯಿಂದ ಕಡಿದು ಬಾವಿಗೆ ಹಾರಿದ ಪತಿ ► ಮುಂದೇನಾಯಿತು ಗೊತ್ತೇ…?

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಡಿ.08. ಪತ್ನಿಗೆ ಕತ್ತಿಯಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯರು ರಕ್ಷಿಸಿದ ಘಟನೆ ಮೂಡುಬಿದಿರೆಯಲ್ಲಿ ಶುಕ್ರವಾರ ನಡೆದಿದೆ. ಹೊಟೇಲ್ ಉದ್ಯೋಗಿಯಾಗಿರುವ ಕುಪ್ಪೆಪದವು ನಿವಾಸಿ ರವಿರಾಜ್ ಶೆಟ್ಟಿ ಎಂಬವರಿಗೆ ಪಡುಮಾರ್ನಾಡು ನಿವಾಸಿ ಶಾಲಾ ಶಿಕ್ಷಕಿ ಸೌಮ್ಯ ಎಂಬಾಕೆಯ ಜೊತೆ ವಿವಾಹವಾಗಿದ್ದು, ಮದುವೆಯಾದ ಕೆಲವೇ ತಿಂಗಳಲ್ಲಿ ದಂಪತಿ ಮಧ್ಯೆ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಸೌಮ್ಯ ಪತಿಯಿಂದ ದೂರವಾಗಿ ತನ್ನ ತವರು ಮನೆಯಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ. ಇದರಿಂದ

ಮೂಡುಬಿದಿರೆ: ಪತ್ನಿಗೆ ಕತ್ತಿಯಿಂದ ಕಡಿದು ಬಾವಿಗೆ ಹಾರಿದ ಪತಿ ► ಮುಂದೇನಾಯಿತು ಗೊತ್ತೇ…? Read More »

ಕರ್ನಾಟಕ

ತೀರಾ ಹದಗೆಟ್ಟ ಮರ್ದಾಳ – ಕರ್ಮಾಯಿ ರಸ್ತೆ ಪರಿಶೀಲನೆ ► ಕಾಂಕ್ರಿಟೀಕರಣಕ್ಕೆ ಪಿಡಬ್ಲ್ಯುಡಿ ಅಧಿಕಾರಿಗಳಿಂದ ಅಂದಾಜುಪಟ್ಟಿ ತಯಾರಿ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರವರ ಸೂಚನೆ ಮೇರೆಗೆ ಮರ್ದಾಳದಿಂದ ಕರ್ಮಾಯಿಗೆ ಸಂಪರ್ಕ ಕಲ್ಪಿಸುವ 4.2 ಕಿ.ಮೀ.ರಸ್ತೆ ಕಾಂಕ್ರಿಟೀಕರಣಕ್ಕೆ ಸಂಬಂಧಿಸಿ ಕಡಬ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್‍ರವರ ನೇತೃತ್ವದಲ್ಲಿ ಕಡಬ ತಾಲೂಕು ಪಿಡಬ್ಲ್ಯೂಡಿ ಇಂಜಿನಿಯರ್ ಶ್ರೀಕಾಂತ್‍ರವರು ಸ್ಥಳ ಪರಿಶೀಲನೆ ನಡೆಸಿ ಅಂದಾಜುಪಟ್ಟಿ ತಯಾರಿಸಿದ್ದಾರೆ. ಸದ್ರಿ ರಸ್ತೆಯು ಕರ್ಮಾಯಿ ಸರಕಾರಿ ಹಿ.ಪ್ರಾ.ಶಾಲೆ, ಬಜಕರೆ ರೈಲ್ವೆ ನಿಲ್ದಾಣ, ಕರ್ಮಾಯಿ ಸೈಂಟ್ ಮೇರಿಸ್ ಚರ್ಚ್, ಗುಡ್‍ಶೆಫರ್ಡ್ ಪ್ರೌಢಶಾಲೆ, ಕರ್ಮಾಯಿ ಅಂಗನವಾಡಿ ಕೇಂದ್ರ, ಸೈಂಟ್

ತೀರಾ ಹದಗೆಟ್ಟ ಮರ್ದಾಳ – ಕರ್ಮಾಯಿ ರಸ್ತೆ ಪರಿಶೀಲನೆ ► ಕಾಂಕ್ರಿಟೀಕರಣಕ್ಕೆ ಪಿಡಬ್ಲ್ಯುಡಿ ಅಧಿಕಾರಿಗಳಿಂದ ಅಂದಾಜುಪಟ್ಟಿ ತಯಾರಿ Read More »

ಕರಾವಳಿ

ಇಂದು ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ – ನಿವೃತ್ತ ಶಿಕ್ಷಕರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ಸಂಜೆ ವಿದ್ಯಾಸಂಸ್ಥೆಯ ದಿ| ಫಾ| ಜೋಸ್ ವಾಳಕುಝಿ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾಂಶುಪಾಲ ಜಾರ್ಜ್ ಟಿ.ಎಸ್. ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಎಸ್.ಭಟ್‍ರವರು ತಿಳಿಸಿದ್ದಾರೆ. ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಐವನ್ ಡಿ.ಸೋಜ ಉದ್ಘಾಟಿಸಲಿದ್ದು, ಪುತ್ತೂರು  ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ| ಫಾ| ಡಾ| ಎಲ್ದೋ ಪುತ್ತನ್‍ಕಂಡತ್ತಿಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಇಂದು ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ – ನಿವೃತ್ತ ಶಿಕ್ಷಕರಿಗೆ ಸನ್ಮಾನ Read More »

ಕರಾವಳಿ
Scroll to Top