ಅಡೆಂಜ: ಶಾಲಾ ಸುವರ್ಣ ಮಹೋತ್ಸವ ಉದ್ಘಾಟನೆ► ರಾಷ್ಟ್ರ ನಿರ್ಮಾಣ, ರಕ್ಷಣೆಯ ಶಿಕ್ಷಣ ಅಗತ್ಯ – ನಳಿನ್ ಕುಮಾರ್ ಕಟೀಲ್
(ನ್ಯೂಸ್ ಕಡಬ) newskadaba.com.ಕಡಬ, ಡಿ.31. ಮಾನವೀಯತೆ, ಮೌಲ್ಯಾಧಾರಿತ ಮಹಾ ಶಿಕ್ಷಣದೊಂದಿಗೆ ರಾಷ್ಟ್ರ ನಿರ್ಮಾಣದ, ದೇಶ ರಕ್ಷಣೆಯ ಶಿಕ್ಷಣ ನಮಗೆ ಇಂದು ಅಗತ್ಯವಾಗಿದೆ ಎಂದು ಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರು ಡಿ.29ರಂದು ನೂಜಿಬಾಳ್ತಿಲ ಗ್ರಾಮದ ಅಡೆಂಜ ಕಿರಿಯ ಪ್ರಾಥಮಿಕ ಶಾಲಾ ಸುವರ್ಣ ಸಂಭ್ರಮ ಡಿಸೆಂಬರ್ 2018 ಕಾರ್ಯಕ್ರಮದಲ್ಲಿ ಶಾಲಾ ಕಂಪ್ಯೂಟರ್ ಹಾಗೂ ಗ್ರಂಥಾಲಯ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಶತಮಾನಗಳ ಶಾಲೆಗಳನ್ನು ಮೀರಿಸುವಂತಹ ಈ ಗ್ರಾಮೀಣ ಭಾಗದ ಕಿ.ಪ್ರಾ.ಶಾಲೆಯ ಕಾರ್ಯ ವೈಖರಿ ಶ್ಲಾಘನೀಯವಾಗಿದೆ. ಸಮಾಜದ ಜೊತೆ ಉತ್ತಮ […]








