ಗಂಡಿಬಾಗಿಲು ಶಾಲೆಯಲ್ಲಿ ಮೆಟ್ರಿಕ್ ಮೇಳ

(ನ್ಯೂಸ್ ಕಡಬ) newskadaba.com ಕಡಬ, ಜ.28. ಉಪ್ಪಿನಂಗಡಿ: ಗಂಡಿಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಆರ್ಥಿಕ ವಹಿವಾಟು ಮತ್ತು ದಿನನಿತ್ಯದ ವ್ಯವಹಾರ ತಿಳಿಯಪಡಿಸುವ ಸಲುವಾಗಿ ಜ. 24ರಂದು ಮೆಟ್ರಿಕ್ ಮೇಳವನ್ನು ಆಯೋಜಿಸಲಾಯಿತು. ರಾಮಕುಂಜ ಸಮೂಹ ಸಂಪನ್ಮೂಲ ಕೇಂದ್ರದ ಪ್ರಭಾರ ಸಮೂಹ ಸಂಪನ್ಮೂಲ ವ್ಯಕಿ ಮಹೇಶ್ ಮೆಟ್ರಿಕ್ ಮೇಳ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದಲ್ ರಶೀದ್ ಹಾಜಿ ಬಡ್ಡಮೆ, ಸದಸ್ಯ ಬಾಬು ಅಗರಿ, ವಿದ್ಯಾರ್ಥಿ ಪೋಷಕರು ಮೇಳದಲ್ಲಿ ಭಾಗವಹಿಸಿದರು.ವಿದ್ಯಾರ್ಥಿಗಳು ಸುಮಾರು 15 […]

ಗಂಡಿಬಾಗಿಲು ಶಾಲೆಯಲ್ಲಿ ಮೆಟ್ರಿಕ್ ಮೇಳ Read More »

ಕರಾವಳಿ

ನಾಳೆಯಿಂದ ಕಡಬದಲ್ಲಿ 1326 ನೇ ಮದ್ಯವರ್ಜನ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ, ಜ.28. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಡಬ-ಬಿಳಿನೆಲೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ 1326 ನೇ ಮದ್ಯವರ್ಜನ ಶಿಬಿರ ಜನವರಿ 29 ರಿಂದ ಫೆ 05 ರ ತನಕ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.   ಜ. 29 ನೇ ಮಂಗಳವಾರ ಶಿಬಿರವನ್ನು ನಿವೃತ್ತ ಮುಖ್ಯಶಿಕ್ಷಕ

ನಾಳೆಯಿಂದ ಕಡಬದಲ್ಲಿ 1326 ನೇ ಮದ್ಯವರ್ಜನ ಶಿಬಿರ Read More »

ಕರಾವಳಿ

ಅಂತರ್ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ► ಮರ್ಧಾಳದ ಯಾನ್ವಿತಾ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಜ.28. ಅಂತರ್ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಡಬದ ಕುವರಿಯೋರ್ವಳು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾಳೆ. ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ, ಮಂಜುನಾಥ್ ಗೌಡ ಕೋಲಂತ್ತಾಡಿ ಮತ್ತು ಪದ್ಮಾ ದಂಪತಿಯ ಪುತ್ರಿ ಯಾನ್ವಿತಾ ಯಂ.ಕೆ. ಕೇರಳ ರಾಜ್ಯದ ಕುಂಬ್ಳೆಯಲ್ಲಿ ನಡೆದ ಅಂತರ್ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಫೈಟಿಂಗ್ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾಳೆ. ಸತತ ಆರು ಸ್ಪರ್ಧೆಗಳ ಪೈಕಿ ಐದರಲ್ಲಿ ಪ್ರಥಮ ಹಾಗೂ ಒಂದರಲ್ಲಿ

ಅಂತರ್ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ► ಮರ್ಧಾಳದ ಯಾನ್ವಿತಾ ಪ್ರಥಮ Read More »

ರಾಷ್ಟ್ರೀಯ ನ್ಯೂಸ್

ಕೋಚಕಟ್ಟೆ: ವಿದ್ಯುತ್ ಪರಿವರ್ತಕ ಉದ್ಘಾಟನೆ

(ನ್ಯೂಸ್ ಕಡಬ) newskadaba.com.ಕಡಬ,ಜ.26. ಕಡಬ ಮೆಸ್ಕಾಂ ವಿಭಾಗದ ಆಲಂಕಾರು ಶಾಖೆಯ ಪೆರಾಬೆ ಗ್ರಾಮದ ಕೊಚಕಟ್ಠೆ ಎಂಬಲ್ಲಿ ನೂತನವಾಗಿ ಅಳವಡಿಸಲಾದ ವಿದ್ಯುತ್ ಪರಿವರ್ತಕದ ಉದ್ಘಾಟನಾ ಸಮಾರಂಭ  ನಡೆಯಿತು.  ಪೆರಾಬೆ ಗ್ರಾ.ಪಂ.ಉಪಾಧ್ಯಕ್ಷ ಜನಾರ್ದನ ಶೆಟ್ಟಿ ಸುರುಳಿ ಉದ್ಘಾಟಿಸಿದರು. ಬಳಿಕ ಪೆರಾಬೆ ಗ್ರಾ.ಪಂ.ಸಭಾಂಗಣದಲ್ಲಿ ಗ್ರಾ.ಪಂ.ಸದಸ್ಯೆ ಅಮೃತ ರೈಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮೆಸ್ಕಾಂ ಕಡಬ ವಿಭಾಗದ ಸಹಾಯಕ ಇಂಜಿನಿಯರ್ ಸಜಿಕುಮಾರ್‍ರವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.    ಪೆರಾಬೆ ಗ್ರಾ.ಪಂ.ಸದಸ್ಯೆ ಬೇಬಿ.ಸಿ.ಪಾಟಾಲಿ, ಮೆಸ್ಕಾಂ ಆಲಂಕಾರು ಶಾಖಾಧಿಕಾರಿ ಗೌತಮ್ ಎಸ್., ಪ್ರಭಾರ ಪಿಡಿಒ ಲಲಿತಾ ಜಿ.ಡಿ.,ಯವರು

ಕೋಚಕಟ್ಟೆ: ವಿದ್ಯುತ್ ಪರಿವರ್ತಕ ಉದ್ಘಾಟನೆ Read More »

ಕರಾವಳಿ

ಬಂಟ್ವಾಳ: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಜ.26.ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು  ಅರಣ್ಯಇಲಾಖೆಯವರು ಬಂಟ್ವಾಳ ಸಮೀಪದ ಮೆಲ್ಕಾರ್ ಎಂಬಲ್ಲಿ ವಶಪಡಿಸಿಕೊಂಡ ಘಟನೆ ನಡೆದಿದೆ.ಸಕಲೇಶಪುರದಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಲಾರಿಯಲ್ಲಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖಾ ಸಿಬ್ಬಂದಿ ಗಳು ಮೆಲ್ಕಾರ್ ಎಂಬಲ್ಲಿ ದಾಳಿ ನಡೆಸಿದಾಗ ಲಾರಿ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಲಾರಿ ಸಹಿತ ಮರದ ದಿಮ್ಮಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.   ಉಪ ಅರಣ್ಯ ಸಂರಕ್ಷಣಾ ಧಿಕಾರಿ ಡಾ.

ಬಂಟ್ವಾಳ: ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು Read More »

ಕರಾವಳಿ

ಗೃಹರಕ್ಷಕ ದಳ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

(ನ್ಯೂಸ್ ಕಡಬ) newskadaba.com.ಕಡಬ,ಜ.26.ದಿನಾಂಕ 26.01.2019ನೇ ಶನಿವಾರ ದಂದು ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳ ಕಛೇರಿಯಲ್ಲಿ ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ನಡೆಸಲಾಯಿತು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಲೀ ಮೋಹನ್ ಚೂಂತಾರುರವರು ಧ್ವಜಾರೋಹಣ ಮಾಡಿ ಮಾತನಾಡಿ ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವವಾಗಿದ್ದು, ರಾಜ್ಯಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಸರಿಯಾಗಿ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಲು ಸಾಧ್ಯ, ಗೃಹರಕ್ಷಕರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ಗೌರವಿಸಬೇಕು ಹಾಗಾದಲ್ಲಿ ಸುಂದರ ಸಧೃಢ ರಾಷ್ಟ್ರ ನಿರ್ಮಾಣ ಸಾಧ್ಯ

ಗೃಹರಕ್ಷಕ ದಳ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ Read More »

ಕರಾವಳಿ

ಧರ್ಮಸ್ಥಳ: ಫೆ.9ರಿಂದ 18ರವರೆಗೆ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ

(ನ್ಯೂಸ್ ಕಡಬ) newskadaba.com.ಕಡಬ,ಜ.26.ಶ್ರೀ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿ ಚತುರ್ಥ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಇನ್ನು 14 ದಿನಗಳಷ್ಟೇ ಬಾಕಿ. ವೈಭವಪೂರ್ಣ ಮಹಾಮಜ್ಜನ ವೀಕ್ಷಿಸಲು ಲಕ್ಷಾಂತರ ಭಕ್ತರು ಕಾತರರಾಗಿದ್ದು, ಬಾಹುಬಲಿ ಬೆಟ್ಟದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಆಚಾರ್ಯ ವರ್ಧಮಾನ ಸಾಗರ್‌ಜಿ ಮಹಾರಾಜ್ ಮತ್ತು ಆಚಾರ್ಯ ಪುಷ್ಪದಂತ ಸಾಗರ್‌ಜಿ ಮಹಾರಾಜ್, ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ಮಾರ್ಗದರ್ಶನ ಹಾಗೂ ಕಾರ್ಕಳ ದಾನ ಶಾಲಾ ಮಠದ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ಫೆ.9ರಿಂದ 18ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಪೂರ್ವತಯಾರಿಯ ಪ್ರಮುಖ

ಧರ್ಮಸ್ಥಳ: ಫೆ.9ರಿಂದ 18ರವರೆಗೆ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ Read More »

ಕರಾವಳಿ

 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

(ನ್ಯೂಸ್ ಕಡಬ) newskadaba.com.ಕಡಬ,ಜ.26. ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಸಡಕ್ ಸುರಕ್ಷಾ-ಜೀವನ ರಕ್ಷಾ ಎಂಬ ಧ್ಯೇಯದೊಂದಿಗೆ ಫೆಬ್ರವರಿ 4 ರಿಂದ 10 ರವರೆಗೆ ಏರ್ಪಡಿಸಲಾಗುವುದು. ಈ ಸಂದರ್ಭದಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತೆ,  ವಾಹನ ಚಾಲನೆ ರಸ್ತೆ ನಿಯಮಗಳು ವಾಹನ ಚಲಾವಣೆ ಸಮಯದಲ್ಲಿ ಸೀಟ್‍ಬೆಲ್ಟ್ ಹಾಗೂ  ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮಟ್ ಧರಿಸುವ ಅಗತ್ಯತೆ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್

 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ Read More »

ಕರಾವಳಿ

ಕಡಬ : ಸರಸ್ವತೀ ವಿದ್ಯಾಲಯ 70ನೇ ಗಣರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com.ಕಡಬ,ಜ.26.ದಿನಾಂಕ 26.01.2019ನೇ ಶನಿವಾರದಂದು ಸರಸ್ವತೀ ವಿದ್ಯಾಲಯದಲ್ಲಿ ಎಲ್ಲಾ ಸಮೂಹ ಸಂಸ್ಥೆಗಳು ಸೇರಿ 70ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅಥಿತಿಯಾಗಿ ಶ್ರೀ ಕುಂಞಣ್ಣ ಕುದ್ರಡ್ಕ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಇವರು ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವದ ಶುಭಾಶಯ ಹಾಗೂ ಸಂವಿಧಾನಕ್ಕೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರು ಶ್ರೀ ವೆಂಕಟರಮಣ ರಾವ್ , ಪ್ರಾಥಮಿಕ ವಿಭಾಗದ ಮುಖ್ಯಗುರುಗಳು ಶ್ರೀ ಮಾಧವ ಕೆ, ಪ್ರೌಢ ವಿಭಾಗದ ಮುಖ್ಯಸ್ಥೆ ಶ್ರೀಮತಿ ಶೈಲಶ್ರೀ, ಕಾಲೇಜು

ಕಡಬ : ಸರಸ್ವತೀ ವಿದ್ಯಾಲಯ 70ನೇ ಗಣರಾಜ್ಯೋತ್ಸವ ಆಚರಣೆ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ವಾರ್ಷಿಕ ಜಾತ್ರೆ-ನೇಮೋತ್ಸವ

(ನ್ಯೂಸ್ ಕಡಬ) newskadaba.com.ಕಡಬ,ಜ.26.ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ದೈವಗಳ ನೇಮೋತ್ಸವ ಜ.23 ಮತ್ತು 24ರಂದು ನಡೆಯಿತು.ಜ.23ರಂದು ರಾತ್ರಿ ಕಲೆಂಬಿತ್ತಾಯ, ಕಲ್ಲುರ್ಟಿ, ಅಂಗಣ ಪಂಜುರ್ಲಿ ದೈವಗಳ ನೇಮ ನಡೆಯಿತು. ಜ.24ರಂದು ಬೆಳಿಗ್ಗೆ ಶಿರಾಡಿ, ರುದ್ರಚಾಮುಂಡಿ, ಗಿಳಿರಾಮ, ಗುಳಿಗ ದೈವಗಳ ನೇಮ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರುಗಳು, ಉತ್ಸವ ಸಮಿತಿ, ಶ್ರೀ ರಾಮಕುಂಜೇಶ್ವರ ಟ್ರಸ್ಟ್‍ನ ಪದಾಧಿಕಾರಿಗಳು, ಸದಸ್ಯರು, ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡರು.  

ಶ್ರೀ ರಾಮಕುಂಜೇಶ್ವರ ವಾರ್ಷಿಕ ಜಾತ್ರೆ-ನೇಮೋತ್ಸವ Read More »

ಕರಾವಳಿ
Scroll to Top