ಜೂನ್ 3 ರಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ಎಂದಿನಂತೆ ತೆರೆದಿರುತ್ತವೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.1.ಜೂನ್ 3 ರಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ವಿಭಾಗಗಳು,ಸಾರ್ವಜನಿಕರ ವೀಕ್ಷಣೆಗೆಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ.   ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ತಾರಾಲಯ, ಲೇಕ್ ಗಾರ್ಡನ್ ಮತ್ತು ಸಂಸ್ಕೃತಿ ಗ್ರಾಮ ಸಾರ್ವಜನಿಕರ ವೀಕ್ಷಣೆಗೆ ಇತರೆ ಎಲ್ಲಾ ದಿನಗಳಂತೆ ತೆರೆದಿರುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಇವರ ಪ್ರಕಟಣೆ ತಿಳಿಸಿದೆ.

ಜೂನ್ 3 ರಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವು ಎಂದಿನಂತೆ ತೆರೆದಿರುತ್ತವೆ. Read More »

ಕರಾವಳಿ

ಪುರಸಭಾ ಸದಸ್ಯೆಯಾಗಿ ಆಯ್ಕೆಯಾದ ಕಾಲೇಜು ವಿದ್ಯಾರ್ಥಿನಿ ➤ ಅಂತಿಮ ಬಿಎ ಓದುತ್ತಲೇ ಚುನಾವಣೆಗೆ ಸ್ಪರ್ಧಿಸಿ ಗೆಲುವು

(ನ್ಯೂಸ್ ಕಡಬ) newskadaba.com ಮಾಲೂರು, ಜೂ.01. ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ತನ್ನ ಪ್ರತಿಸ್ಪರ್ಧಿ ವಿರುದ್ಧ ಭಾರೀ ಮತಗಳ ಅಂತರದಿಂದ ಗೆಲ್ಲುವ ಮೂಲಕ ಸದಸ್ಯೆಯಾಗಿ ಆಯ್ಕೆಯಾಗಿದ್ದಾಳೆ. ಮಾಲೂರು ಪಟ್ಟಣದ 27ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿನಿ ಸುಮಿತ್ರಾ ಪಿ.(19) ಜಯ​ಗ​ಳಿ​ಸಿದಾಕೆ. ತನ್ನ ತಂದೆ ಪಚ್ಚಪ್ಪ ಪ್ರತಿನಿಧಿಸುತ್ತಿದ್ದ ವಾರ್ಡ್‌ನಲ್ಲಿ ಈ ಬಾರಿ ಅದೃಷ್ಟ ಪರೀಕ್ಷೆಗಿಳಿದ ಸುಮಿತ್ರಾ ಎದುರಾಳಿ ಗಾಯತ್ರಿ ಸಂದೀಪ್‌ ಎಂಬ​ವ​ರ​ನ್ನು

ಪುರಸಭಾ ಸದಸ್ಯೆಯಾಗಿ ಆಯ್ಕೆಯಾದ ಕಾಲೇಜು ವಿದ್ಯಾರ್ಥಿನಿ ➤ ಅಂತಿಮ ಬಿಎ ಓದುತ್ತಲೇ ಚುನಾವಣೆಗೆ ಸ್ಪರ್ಧಿಸಿ ಗೆಲುವು Read More »

ಕರ್ನಾಟಕ

ಇನ್ಮುಂದೆ ಸರ್ಕಾರಿ ಶಾಲೆಗಳು ಹತ್ತಿರವಿದ್ದಲ್ಲಿ ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಪ್ರವೇಶವಿಲ್ಲ..!! ➤ ಆಂಗ್ಲ ಮಾಧ್ಯಮ ಶಾಲೆಗಳಲ್ಲಿನ ಉಚಿತ ಶಿಕ್ಷಣಕ್ಕೆ ಹೈಕೋರ್ಟ್ ಬ್ರೇಕ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.01. ಖಾಸಗಿ ಶಾಲೆಗಳಿಗೆ ನೀಡುವ ಹಣವನ್ನು ಸರಕಾರಿ ಶಾಲೆಗಳಿಗೆ ನೀಡಿದರೆ ಗುಣಮಟ್ಟದ ಶಿಕ್ಷಣ ಹಾಗೂ ಮೂಲಸೌಕರ್ಯವನ್ನು ನೀಡುವ ಉದ್ದೇಶದಿಂದ ರಾಜ್ಯ ಸರಕಾರವು ಪ್ರಸಕ್ತ ವರ್ಷದಿಂದ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಗೆ ತಂದಿರುವ ತಿದ್ದುಪಡಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಸರಕಾರಿ ಶಾಲೆಗಳನ್ನು ಉಳಿಸುವುದಕ್ಕಾಗಿ ರಾಜ್ಯ ಸರ್ಕಾರವು 2019ರ ಜನವರಿ 30ರಂದು ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದು ಆರ್‌ಟಿಇ ಅಡಿ ಪ್ರವೇಶ ಬಯಸುವವರ ಒಂದು ಕಿಮೀ ವ್ಯಾಪ್ತಿಯಲ್ಲಿ

ಇನ್ಮುಂದೆ ಸರ್ಕಾರಿ ಶಾಲೆಗಳು ಹತ್ತಿರವಿದ್ದಲ್ಲಿ ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಪ್ರವೇಶವಿಲ್ಲ..!! ➤ ಆಂಗ್ಲ ಮಾಧ್ಯಮ ಶಾಲೆಗಳಲ್ಲಿನ ಉಚಿತ ಶಿಕ್ಷಣಕ್ಕೆ ಹೈಕೋರ್ಟ್ ಬ್ರೇಕ್ Read More »

ಕರ್ನಾಟಕ

ಕಡಬದ ‘ಡ್ರೆಸ್ ಕೋಡ್’ನಲ್ಲಿ ಪೆರ್ನಾಳ್ ಹಬ್ಬಕ್ಕೆ ಸಂಭ್ರಮಕ್ಕೆ ಸಿದ್ಧತೆ ➤ ಪುರುಷರ ಸಿದ್ಧ ಉಡುಪುಗಳ ಅಪೂರ್ವ ಸಂಗ್ರಹದೊಂದಿಗೆ ವಿಶೇಷ ರಿಯಾಯಿತಿ

(ನ್ಯೂಸ್ ಕಡಬ) newskadaba.com ಕಡಬ, ಮೇ.31. ಮುಸಲ್ಮಾನರ ಪವಿತ್ರ ತಿಂಗಳಾದ ರಂಝಾನ್ ಕೊನೆಗೊಳ್ಳುತ್ತಿದ್ದಂತೆ ಈದ್ – ಉಲ್ – ಫಿತರ್ ಹಬ್ಬಕ್ಕೆ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಶ್ರೀ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿರುವ ಪುರುಷರ ಸಿದ್ಧ ಉಡುಪುಗಳ ಮಳಿಗೆ ‘ಡ್ರೆಸ್ ಕೋಡ್’ ನಲ್ಲಿ ವಿನೂತನ ಮಾದರಿಯ ಬಟ್ಟೆ ಬರೆಗಳ ಅಪಾರ ಸಂಗ್ರಹವಿದೆ. ಪುರುಷರ ನೂತನ ವಿನ್ಯಾಸದ, ಅತ್ಯಾಧುನಿಕ ಶೈಲಿಯ ಜೀನ್ಸ್, ಫಾರ್ಮಲ್ಸ್, ಹಾಗೂ ಕ್ಯಾಶುವಲ್ಸ್ ಮಾದರಿಯ ಪ್ಯಾಂಟ್ಸ್, ಶರ್ಟ್ಸ್, ಟಿ – ಶರ್ಟ್ಸ್ ಮೊದಲಾದ ಸಿದ್ಧ

ಕಡಬದ ‘ಡ್ರೆಸ್ ಕೋಡ್’ನಲ್ಲಿ ಪೆರ್ನಾಳ್ ಹಬ್ಬಕ್ಕೆ ಸಂಭ್ರಮಕ್ಕೆ ಸಿದ್ಧತೆ ➤ ಪುರುಷರ ಸಿದ್ಧ ಉಡುಪುಗಳ ಅಪೂರ್ವ ಸಂಗ್ರಹದೊಂದಿಗೆ ವಿಶೇಷ ರಿಯಾಯಿತಿ Read More »

ಕರಾವಳಿ

ಕಡಬ: ಸುಸಜ್ಜಿತ ಇಲೆಕ್ಟ್ರಾನಿಕ್ ಮಳಿಗೆ ‘ನ್ಯೂ ಅಶ್ವಿನಿ ಟ್ರೇಡರ್ಸ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮೇ.31. ಸುಮಾರು ಎರಡು ದಶಕಗಳಿಂದ ಉಪ್ಪಿನಂಗಡಿಯಲ್ಲಿ ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಗ್ರಾಹಕರ ಜನಮನ್ನಣೆಯನ್ನು ಗಳಿಸಿ ತೃಪ್ತಿದಾಯಕ ಸೇವೆಯನ್ನು ನೀಡುತ್ತಾ ಬಂದಿರುವ ‘ನ್ಯೂ ಅಶ್ವಿನ್ ಟ್ರೇಡರ್ಸ್’ ಸಂಸ್ಥೆಯ ನೂತನ ಸುಸಜ್ಜಿತ ಎಲೆಕ್ಟ್ರಾನಿಕ್ ಮಳಿಗೆಯು ಕಡಬದ ಅನುಗ್ರಹ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಶುಕ್ರವಾರದಂದು ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಉಪ್ಪಿನಂಗಡಿಯ ಅಶ್ವಿನಿ ಹೋಮ್ ಅಪ್ಲಯನ್ಸ್ ಮಾಲಕರಾದ ಶ್ರೀಮತಿ ಮತ್ತು ಶ್ರೀ ಪ್ರಕಾಶ್ ಬಿ. ದ್ವೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಕಡಬ ಒಕ್ಕಲಿಗ ಗೌಡ ಸೇವಾ ಸಂಘದ

ಕಡಬ: ಸುಸಜ್ಜಿತ ಇಲೆಕ್ಟ್ರಾನಿಕ್ ಮಳಿಗೆ ‘ನ್ಯೂ ಅಶ್ವಿನಿ ಟ್ರೇಡರ್ಸ್’ ಶುಭಾರಂಭ Read More »

ಕರಾವಳಿ

ಮೇ 31 – ವಿಶ್ವ ತಂಬಾಕು ರಹಿತ ದಿನ ಡಾ| ಮುರಲಿ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ: ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುತ್ತಿದೆ. ಈ ದಿನದಂದು ತಂಬಾಕಿನ ಎಲ್ಲಾ ರೀತಿಯ ಉತ್ಪನ್ನಗಳಿಂದ 24 ಗಂಟೆಗಳ ಕಾಲ ದೂರವಿದ್ದು, ತಂಬಾಕಿನ ಉತ್ಪನ್ನಗಳ ಬಳಕೆಯಿಂದ ಉಂಟಾಗುವ ತೊಂದರೆಗಳನ್ನು ಮತ್ತು ದುಷ್ಪರಿಣಾಮಗಳನ್ನು ಜನರಿಗೆ ಬೊಟ್ಟು ಮಾಡಿ ತೋರಿಸುವ ಕಾರ್ಯವನ್ನು ಜಗತ್ತಿನಾದ್ಯಂತ ಮಾಡಲಾಗುತ್ತಿದೆ. 1987 ರಿಂದ ಈ ಆಚರಣೆಯನ್ನು ವಿಶ್ವದಾದ್ಯಾಂತ ಜಾರಿಗೆ ತಂದಿತು. 1987 ರಲ್ಲಿ ಏಪ್ರಿಲ್ 7 ರಂದು ವಿಶ್ವ ತಂಬಾಕು ರಹಿತ ದಿನವೆಂದು

ಮೇ 31 – ವಿಶ್ವ ತಂಬಾಕು ರಹಿತ ದಿನ ಡಾ| ಮುರಲಿ ಮೋಹನ್ ಚೂಂತಾರು Read More »

ವಿಶೇಷ ಲೇಖನಗಳು

32ನೇ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರ

  (ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30. 32ನೇ ರಾಜ್ಯ ಮಟ್ಟದ ವಿಜ್ಞಾನ ಲೇಖಕರ ಶಿಬಿರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ 32ನೇ ರಾಜ್ಯ ಮಟ್ಟದ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರವನ್ನು ಜೂನ್ 21 ರಿಂದ 24 ರವರೆಗೆ ಬೆಂಗಳೂರಿನ ಎಚ್.ಕೆ.ಇ.ಎಸ್ ಶ್ರೀ ವೀರೇಂದ್ರ ಪಾಟೀಲ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ತು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

32ನೇ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರ Read More »

ಕರಾವಳಿ

ಉಜಿರೆ ರುಡ್‍ಸೆಟ್‍ನಲ್ಲಿ ಎಸ್.ಡಿ.ಎಮ್ ಶಾಲಾ ಶಿಕ್ಷಕರಿಗೆ ಒಂದು ದಿನದ ಸಬಲೀಕರಣ ಮಾಹಿತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30.ಶಾಲೆಗಳು ಪ್ರಾರಂಭವಾಗುವ ಮೊದಲು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲಾ ಎಲ್ಲಾ ಶಿಕ್ಷಕರಿಗೆ ಒಂದು ದಿನದ ಸಬಲೀಕರಣ ಕಾರ್ಯಗಾರವನ್ನು ಉಜಿರೆ ರುಡ್‍ಸೆಟ್‍ನಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರದ್ಧಾ ಅಮಿತ್ ರವರು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬುವವನೇ ನಿಜವಾದ ಶಿಕ್ಷಕ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಗಾರದಲ್ಲಿ ಶಿಕ್ಷಕರಿಗೆ ಮಂಜುಗಡ್ಡೆ ಕರಗಿಸುವ ಆಟ, ಮಾನವೀಯ ಸಂಬಂಧಗಳ ಕುರಿತು ತರಬೇತಿ ಹಾಗೂ ಶಿಕ್ಷಕ ಮತ್ತು ಮಕ್ಕಳ ಸಂಬಂಧದ ಕುರಿತು ವಿಶೇಷ ಉಪನ್ಯಾಸವನ್ನು

ಉಜಿರೆ ರುಡ್‍ಸೆಟ್‍ನಲ್ಲಿ ಎಸ್.ಡಿ.ಎಮ್ ಶಾಲಾ ಶಿಕ್ಷಕರಿಗೆ ಒಂದು ದಿನದ ಸಬಲೀಕರಣ ಮಾಹಿತಿ ಕಾರ್ಯಗಾರ Read More »

ಕರಾವಳಿ

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟಗಳಿಗೆ ವಿಶೇಷ ಸೂಚನೆ ➤ ಶೈಕ್ಷಣಿಕ ಶುಲ್ಕ ಮರುಪಾವತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

  (ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟಗಳ ಶೈಕ್ಷಣಿಕ ಶುಲ್ಕವನ್ನು ಮರುಪಾವತಿಸುವ ಯೋಜನೆಯನ್ನು ಅನುಷ್ಟಾನಗೊಳಿಸಲು ಅರ್ಹ ಕ್ರೀಡಾಪಟುಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2018ನೇ ಸಾಲಿನ ಶೈಕ್ಷಣಿಕ ಶುಲ್ಕ ಮರುಪಾವತಿಗಾಗಿ ಅರ್ಹ ಕ್ರೀಡಾಪಟುಗಳು http://serviceonline.gov.in/karnataka ಮೂಲಕ ಅರ್ಜಿಗಳನ್ನು ಜೂನ್ 30ರ ಒಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ ಡಿ’ಸೋಜ, ಉಪನಿರ್ದೇಶಕರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು (ದೂ.0824-2451264) ಇವರನ್ನು ಸಂಪರ್ಕಿಸಬಹುದಾಗಿದೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟಗಳಿಗೆ ವಿಶೇಷ ಸೂಚನೆ ➤ ಶೈಕ್ಷಣಿಕ ಶುಲ್ಕ ಮರುಪಾವತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ Read More »

ಕರಾವಳಿ

2019-20ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪದವಿಗೆ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30.ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು ಈ ಸಂಸ್ಥೆಗೆ ಸಂಬಂಧಿಸಿದಂತೆ 2019-20ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಅರ್ಜಿಗಳನ್ನು ಕೊಡುವ ಹಾಗೂ ಸ್ವೀಕರಿಸುವ ದಿನಾಂಕವನ್ನು 30-05-2019ರ ಸಂಜೆ 5.30ರ ವರೆಗೆ ವಿಸ್ತರಿಸಲಾಗಿದೆ. ಹಾಗೂ ಪ್ರವೇಶಾವಧಿಯನ್ನು ಪುನಃ ವಿಸ್ತರಿಸಲಾಗುವುದಿಲ್ಲ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ತರಲಾಗಿದೆ ಹೆಚ್ಚಿನ ಮಾಹಿತಿಗಾಗಿ www.dte.kar.nic.inಅಥವಾ www.kea.kar.nic.in ವೆಬ್ ಸೈಟ್‍ಗಳನ್ನು ನೋಡಬಹುದು. ಹೆಚ್ಚಿನ ವಿವರಗಳಿಗೆ ಕಚೇರಿಯ ದೂರವಾಣಿ ಸಂಖ್ಯೆ 0824-2211636ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

2019-20ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪದವಿಗೆ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಣೆ Read More »

ಕರಾವಳಿ
Scroll to Top