ಮಕ್ಕಳ ದಿನಾಚರಣೆಯಂದು ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಪೆನ್ ವಿತರಣೆ : ಯಶ್ಪಾಲ್ ಸುವರ್ಣ

(ನ್ಯೂಸ್‌ ಕಡಬ) newskadaba.com,  ನ.13 ಭಾರತ ದೇಶದ ಮುಂದಿನ ಭವಿಷ್ಯವನ್ನು ರೂಪಿಸಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಉಡುಗೊರೆಯಾಗಿ ಪ್ರತಿ ವರ್ಷದಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ಸುಮಾರು 20,000 ವಿದ್ಯಾರ್ಥಿಗಳಿಗೆ ರೂ. 15 ಲಕ್ಷ ವೆಚ್ಚದಲ್ಲಿ ಪೆನ್ ವಿತರಣೆ ಮಾಡುವುದಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ. ಉಡುಪಿ ಜಿಲ್ಲೆ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ […]

ಮಕ್ಕಳ ದಿನಾಚರಣೆಯಂದು ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಪೆನ್ ವಿತರಣೆ : ಯಶ್ಪಾಲ್ ಸುವರ್ಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ | ಕುತ್ತೂರು ಮನೆಗಳ್ಳತನ ಪ್ರಕರಣ: ಆರೋಪಿ ‘ಇತ್ತೆ ಬರ್ಪೆ ಅಬೂಬಕ‌ರ್’ ಬಂಧನ

(ನ್ಯೂಸ್‌ ಕಡಬ) newskadaba.com,  ನ.13 ಬೆಳ್ತಂಗಡಿ: ಕುತ್ತೂರಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣದ ಆರೋಪಿಯೊಬ್ಬನನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಇತ್ತೆ ಬರ್ಪೆ ಅಬೂಬಕರ್(71) ಬಂಧಿತ ಆರೋಪಿ.ನಾರವಿ ಗ್ರಾಮದ ಕುತ್ತೂರಿನ ಮಂಜು ಶ್ರೀ ನಗರದ ಶಿಕ್ಷಕ ಅವಿನಾಶ್ ಎಂಬವರ ಮನೆಯಲ್ಲಿ ಅ.2 ರಿಂದ ಅ.6ರ ನಡುವೆ ಮನೆಯಲ್ಲಿ ಯಾರು ಇಲ್ಲದ ವೇಳೆ 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ವೇಣೂರು ಪೊಲೀಸ್‌ ಠಾಣೆಗೆ ಸಬ್ ಇನ್ಸೆಕ್ಟರ್ ಓಮನ ಮತ್ತು

ಬೆಳ್ತಂಗಡಿ | ಕುತ್ತೂರು ಮನೆಗಳ್ಳತನ ಪ್ರಕರಣ: ಆರೋಪಿ ‘ಇತ್ತೆ ಬರ್ಪೆ ಅಬೂಬಕ‌ರ್’ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದ 4 ರೈಲು ನಿಲ್ದಾಣಗಳ ಹೆಸರು ಬದಲಿಸುವಂತೆ ಕೇಂದ್ರ ಗೃಹ ಇಲಾಖೆಗೆ ಎಂ.ಬಿ ಪಾಟೀಲ್ ಶಿಫಾರಸು

(ನ್ಯೂಸ್‌ ಕಡಬ) newskadaba.com,  ನ.13: ರಾಜ್ಯದ ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿರುವ ರೈಲು ನಿಲ್ದಾಣಗಳನ್ನು ಸ್ಥಳೀಯ ಸಾಂಸ್ಕೃತಿಕ ಮಹತ್ತ್ವಕ್ಕೆ ಪೂರಕವಾಗಿ ಬದಲಿಸಿ, ಹೊಸ ನಾಮಕರಣ ಮಾಡಬೇಕೆಂದು ಸಚಿವ ಎಂ.ಬಿ ಪಾಟೀಲ್ ಅವರು ಶಿಫಾರಸು ಮಾಡಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ರೈಲು ನಿಲ್ದಾಣ, ಬೆಳಗಾವಿ ನಿಲ್ದಾಣಕ್ಕೆ ಶ್ರೀ ಬಸವ ಮಹಾಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಚನ್ನಬಸವ ಪಟ್ಟದ್ದೇವರು ಮತ್ತು ಸೂರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ

ರಾಜ್ಯದ 4 ರೈಲು ನಿಲ್ದಾಣಗಳ ಹೆಸರು ಬದಲಿಸುವಂತೆ ಕೇಂದ್ರ ಗೃಹ ಇಲಾಖೆಗೆ ಎಂ.ಬಿ ಪಾಟೀಲ್ ಶಿಫಾರಸು Read More »

ಕರ್ನಾಟಕ

ದೆಹಲಿ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಸಾವು, ಮೃತರ ಸಂಖ್ಯೆ 13ಕ್ಕೆ ಏರಿಕೆ

(ನ್ಯೂಸ್‌ ಕಡಬ) newskadaba.com,  ನ.13: ದೆಹಲಿ ಕಾರ್‌ ಬಾಂಬ್‌ ಸ್ಫೋಟಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಕೆಂಪು ಕೋಟೆ ಬಳಿ ನಡೆದ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಇಲ್ಲಿನ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಸಾವನ್ನಪ್ಪಿದವರ ಸಂಖ್ಯೆ 13 ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಬಿಲಾಲ್‌ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು.ದೆಹಲಿ ಪೊಲೀಸರ ಪ್ರಕಾರ, ಬಿಲಾಲ್‌ ಸಾವಿನ ಬಗ್ಗೆ ಇಂದು ಮುಂಜಾನೆ ಆಸ್ಪತ್ರೆಯಿಂದ ಮಾಹಿತಿ ಬಂದಿದೆ. ಮರಣೋತ್ತರ ಪರೀಕ್ಷೆಯನ್ನು ಮಧ್ಯಾಹ್ನದ ನಂತರ ನಡೆಸಲಾಗುವುದು ಎಂದು ಅಧಿಕಾರಿಗಳು

ದೆಹಲಿ ಸ್ಫೋಟದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಸಾವು, ಮೃತರ ಸಂಖ್ಯೆ 13ಕ್ಕೆ ಏರಿಕೆ Read More »

ರಾಷ್ಟ್ರೀಯ ನ್ಯೂಸ್

ಮತ್ತೆ ಏರಿಕೆಯಾದ ಚಿನ್ನ,ಬೆಳ್ಳಿ ಬೆಲೆ

(ನ್ಯೂಸ್‌ ಕಡಬ) newskadaba.com,  ನ.13 ಬೆಂಗಳೂರು: ಬೆಳ್ಳಿ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಇಂದು ಒಂದೇ ದಿನಕ್ಕೆ 10 ರೂ ಜಿಗಿತ ಕಂಡಿದೆ. ನಿನ್ನೆ ಇದರ ಬೆಲೆ 2 ರೂ ಹೆಚ್ಚಿತ್ತು. ಚಿನ್ನದ ಬೆಲೆಯೂ (gold rate) ಕೂಡ ಏರಿಕೆಯ ಹಾದಿಗೆ ಮರಳಿದೆ. ಗುರುವಾರ ಚಿನ್ನದ ಬೆಲೆಯಲ್ಲಿ 210 ರೂಗಳಷ್ಟು ಹೆಚ್ಚಳ ಆಗಿದೆ. ಆಭರಣ ಚಿನ್ನದ ಬೆಲೆ 11,700 ರೂ ಗಡಿದಾಟಿದೆ. ಅಪರಂಜಿ ಚಿನ್ನ 12,800 ರೂ ಗಡಿ ಸಮೀಪಕ್ಕೆ ಹೋಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22

ಮತ್ತೆ ಏರಿಕೆಯಾದ ಚಿನ್ನ,ಬೆಳ್ಳಿ ಬೆಲೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

3,800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಬರೆದ ಬಹುಬಾಷಾ ಗಾಯಕಿ ಪಲಕ್ ಮುಚ್ಚಲ್

(ನ್ಯೂಸ್‌ ಕಡಬ) newskadaba.com,  ನ.13: ಬಹುಬಾಷಾ ಗಾಯಕಿ ಪಲಕ್ ಮುಚ್ಚಲ್ ಕೇವಲ ಹಾಡಿನಿಂದ ಮಾತ್ರವಲ್ಲದೇ ತಮ್ಮ ಜನಪರ ಕಾರ್ಯಗಳಿಂದಲೂ ಜನರ ಮನಸ್ಸು ಗೆದ್ದಿದ್ದಾರೆ. ಅವರು ಈವರೆಗೆ ಸುಮಾರು 3,800 ಬಡಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ‘ಪಲಕ್ ಪಲಾಶ್ ಚಾರಿಟೆಬಲ್ ಫೌಂಡೇಶನ್’ ಮೂಲಕ ಪಲಕ್ ಮುಚ್ಚಲ್ ಅವರು ಸಾವಿರ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿದ್ದಾರೆ. ಭಾರತದ ಹಾಗೂ ವಿದೇಶದಲ್ಲಿ ಇರುವ ಬಡ ಮಕ್ಕಳ ಹಾರ್ಟ್ ಸರ್ಜಿರಿಗೆ ಅವರು ನೆರವಾಗಿದ್ದಾರೆ.

3,800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಬರೆದ ಬಹುಬಾಷಾ ಗಾಯಕಿ ಪಲಕ್ ಮುಚ್ಚಲ್ Read More »

ಆರೋಗ್ಯ ಮಾಹಿತಿ

ಪಿಎಂಶ್ರೀ ಯೋಜನೆಯ ಅನುಷ್ಠಾನ ತಾತ್ಕಾಲಿಕ ಸ್ಥಗಿತ

(ನ್ಯೂಸ್‌ ಕಡಬ) newskadaba.com,  ನ.13 ಕೊಚ್ಚಿ : ಕೇರಳ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಪ್ರಧಾನಮಂತ್ರಿ ಶಾಲಾ ಉದಯೋನ್ಮುಖ ಭಾರತ ಯೋಜನೆಯ ಅನುಷ್ಠಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರವು ತಿಳಿಸಿದೆ.ಈ ನಿರ್ಧಾರವನ್ನು ಕ್ಯಾಬಿನೆಟ್ ಉಪಸಮಿತಿಯು ಒಪ್ಪಂದವನ್ನು ಪರಿಶೀಲಿಸುವವರೆಗೆ ಜಾರಿಯಲ್ಲಿಡಲಾಗುತ್ತದೆ. ಈ ವಿಷಯವನ್ನು ಸಾಮಾನ್ಯ ಶಿಕ್ಷಣ ಕಾರ್ಯದರ್ಶಿ ಕೆ. ವಾಸುಕಿ ಅವರು ಬುಧವಾರ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ. ರಾಜ್ಯದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು, ಕ್ಯಾಬಿನೆಟ್ ನಿರ್ಧಾರದ ಕಾನೂನು ಪರಿಣಾಮಗಳನ್ನು ಪರಿಶೀಲಿಸಲು ರಾಜ್ಯದ ಅಡ್ವೊಕೇಟ್ ಜನರಲ್ ಅವರೊಂದಿಗೆ

ಪಿಎಂಶ್ರೀ ಯೋಜನೆಯ ಅನುಷ್ಠಾನ ತಾತ್ಕಾಲಿಕ ಸ್ಥಗಿತ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೆಹಲಿ ಕೆಂಪು ಕೋಟೆ ಬಳಿ ಬಾಂಬ್ ಸ್ಫೋಟಿಸಿದ್ದು ಉಮರ್- ಡಿಎನ್ಎ ಪರೀಕ್ಷೆಯಲ್ಲಿ ದೃಢ

(ನ್ಯೂಸ್‌ ಕಡಬ) newskadaba.com,  ನ.13: ದೆಹಲಿಯ ಕೆಂಪು ಕೋಟೆ ಬಳಿ ನ.10ರಂದು ಕಾರ್ ಬಾಂಬ್ ಸ್ಫೋಟ ಮಾಡಿದ್ದು ಡಾ. ಉಮರ್ ಎನ್ನುವುದು ಅಧಿಕೃತವಾಗಿ ದೃಢಡಪಟ್ಟಿದೆ. ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಉಮರ್ ಎಂದು ತನಿಖಾಧಿಕಾರಿಗಳು ಮೊದಲೇ ಶಂಕಿಸಿದ್ದರು. ಹೀಗಿದ್ದರೂ ಮುಂದೆ ಚಾರ್ಜ್ಶೀಟ್ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯ ಇತ್ತು. ಹೀಗಾಗಿ ಪುಲ್ವಾಮಾದಲ್ಲಿರುವ ಉಮರ್ ತಾಯಿಯ ಡಿಎನ್‌ಎ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು. ಸ್ಫೋಟದ ಬಳಿಕ ಉಮರ್ ಕಾಲು ಸ್ಟೀರಿಂಗ್ ವೀಲ್ ಮತ್ತು

ದೆಹಲಿ ಕೆಂಪು ಕೋಟೆ ಬಳಿ ಬಾಂಬ್ ಸ್ಫೋಟಿಸಿದ್ದು ಉಮರ್- ಡಿಎನ್ಎ ಪರೀಕ್ಷೆಯಲ್ಲಿ ದೃಢ Read More »

ಅಂತರ್ರಾಷ್ಟ್ರೀಯ ನ್ಯೂಸ್

ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ 12 ದಿನ ವೇತನ ಸಹಿತ ಮುಟ್ಟಿನ ರಜೆ: ರಾಜ್ಯ ಸರ್ಕಾರ ಆದೇಶ

(ನ್ಯೂಸ್‌ ಕಡಬ) newskadaba.com,  ನ.13 ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ 1 ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗಾರ್‌ ಕಾರ್ಮಿಕರ ಕಾಯ್ದೆ, ಮೋಟಾರು ಸಾರಿಗೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳೂ ಸೇರಿದಂತೆ ಎಲ್ಲ ವಲಯಗಳಲ್ಲಿ

ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ 12 ದಿನ ವೇತನ ಸಹಿತ ಮುಟ್ಟಿನ ರಜೆ: ರಾಜ್ಯ ಸರ್ಕಾರ ಆದೇಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಸ್ಲಾಮಾಬಾದ್: ಆತ್ಮಾಹುತಿ ಬಾಂಬ್ ದಾಳಿಯನ್ನು ಒಪ್ಪಿಕೊಂಡ ಪಾಕ್ ತಾಲಿಬಾನ್- ಮತ್ತಷ್ಟು ದಾಳಿಗಳ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com,  ನ.13: ಇಸ್ಲಾಮಾಬಾದ್​​ನಲ್ಲಿ ಕನಿಷ್ಠ 12 ಜನರ ಸಾವಿಗೆ ಕಾರಣವಾದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಪಾಕಿಸ್ತಾನಿ ತಾಲಿಬಾನ್ ಹೊತ್ತಿದೆ. ಮತ್ತಷ್ಟು ದಾಳಿಗಳನ್ನು ನಡೆಸುವ ಎಚ್ಚರಿಕೆಯನ್ನೂ ನೀಡಿದೆ. ಇದು ದೇಶದ ರಾಜಧಾನಿಯ ಮೇಲೆ ಉಗ್ರಗಾಮಿ ಗುಂಪು ನಡೆಸಿದ ದಾಳಿಯಾಗಿದೆ. ಪಾಕಿಸ್ತಾನದ ಇಸ್ಲಾಮಿಕ್ ಅಲ್ಲದ ಕಾನೂನುಗಳ ಅಡಿಯಲ್ಲಿ ತೀರ್ಪುಗಳನ್ನು ಜಾರಿಗೊಳಿಸಿದ ನ್ಯಾಯಮೂರ್ತಿಗಳು, ವಕೀಲರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಲಾಗಿತ್ತು. ಇಸ್ಲಾಮಾಬಾದ್‌ನಲ್ಲಿ ನ್ಯಾಯಾಲಯದ ಮೇಲೆ ದಾಳಿ ಮಾಡಲಾಗಿತ್ತು. ಎಲ್ಲರೂ ಗಾಬರಿಯಿಂದ ಒಳಗೆ ಓಡಲು ಪ್ರಾರಂಭಿಸಿದರು. ಮುಂಭಾಗದ ಗೇಟ್‌ನಲ್ಲಿ ಕನಿಷ್ಠ ಐದು

ಇಸ್ಲಾಮಾಬಾದ್: ಆತ್ಮಾಹುತಿ ಬಾಂಬ್ ದಾಳಿಯನ್ನು ಒಪ್ಪಿಕೊಂಡ ಪಾಕ್ ತಾಲಿಬಾನ್- ಮತ್ತಷ್ಟು ದಾಳಿಗಳ ಎಚ್ಚರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top