ವೆನ್ಲಾಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ➤ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ಡಿಸಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.27.ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ತ್ವರಿತಗತಿಯಿಂದ ದುರಸ್ತಿ ಕಾಮಗಾರಿಯನ್ನು ಮಾಡಿ, ಒಂದು ವಾರದಲ್ಲಿ ವರದಿ ಸಲ್ಲಿಸಬೇಕು. ಕಾಮಗಾರಿ ಸಂದರ್ಭದಲ್ಲಿ ರೋಗಿಗಳಿಗೆ ಯಾವುದೇ ತೊಂದರೆ ಆಗದ ಹಾಗೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ, ಸರಕಾರಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಇದರ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆಯಿಂದಾಗಿ ಸಣ್ಣಪುಟ್ಟ ಹಾನಿಗೊಂಡಿರುವ ಆಸ್ಪತ್ರೆಯ ಕಟ್ಟಡದ ದುರಸ್ತಿ ಕಾಮಗಾರಿ ತುರ್ತಾಗಿ […]

ವೆನ್ಲಾಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ➤ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ಡಿಸಿ ಸೂಚನೆ Read More »

ಕರಾವಳಿ

ವ್ಯಕ್ತಿ ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.27.ಕೆಲಸಕ್ಕೆಂದು ಹೈದರಾಬಾದ್‍ಗೆ ಹೋದ ನಗರದ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೃಷ್ಣರಾಜ್  (45) ಕಾಣೆಯಾದ ವ್ಯಕ್ತಿ. ಇವರು 7 ತಿಂಗಳ ಹಿಂದೆ ಕೆಲಸಕ್ಕೆ ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ಹೈದರಾಬಾದ್‍ಗೆ ಹೋಗಿದ್ದರು. ನಂತರ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ಪತ್ನಿ ದೂರು ನೀಡಿದ್ದಾರೆ. ಇವರು ಬಿಳಿ ಮೈಬಣ್ಣ, ಸಪೂರ ಶರೀರ, ಎತ್ತರ 5.10 ಅಡಿ ಹೊಂದಿದ್ದು,ಕನ್ನಡ, ಹಿಂದಿ, ತುಳು, ಬ್ಯಾರಿ ಭಾಷೆ ಮಾತನಾಡಬಲ್ಲರು. ಧರಿಸಿದ್ದ

ವ್ಯಕ್ತಿ ಕಾಣೆಯಾಗಿದ್ದಾರೆ Read More »

ಕರಾವಳಿ

ದ.ಕ ಜಿಲ್ಲೆಯ ಆಯುಷ್ ವ್ಶೆದ್ಯರ ಸಮಾಜ ಸೇವಾ ಸಂಘಟನೆ ಆಯುಷ್ ಫೌಂಡೇಶನ್ ವತಿಯಿಂದ ➤ ಸನ್ಮಾನ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.27.ದಕ್ಷಿಣ ಕನ್ನಡ ಜಿಲ್ಲೆಯ ಆಯುಷ್ ವ್ಶೆದ್ಯರ ಸಮಾಜ ಸೇವಾ ಸಂಘಟನೆ ಆಯುಷ್ ಫೌಂಡೇಶನ್ ವತಿಯಿಂದ ಕೇಂದ್ರದ ಆಯುಷ್ ಮತ್ತು ರಕ್ಷಣಾ ಸಚಿವರಾದ ಶ್ರೀಪಾದ್ ಯಸ್ಕೋ ನಾಯಕ್‍ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆ ಪ್ರಯುಕ್ತ ಆಗಸ್ಟ್ 29 ರಂದು ಸಂಜೆ 4 ಗಂಟೆಗೆ ಜಿಲ್ಲಾ ವೆನ್ಲಾಕ್ ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಯುಷ್ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ ಡಾ ಆಶಾ ಜ್ಯೋತಿ ರೈ ಮಾಲಾಡಿ ವಹಿಸಲಿದ್ದಾರೆ.

ದ.ಕ ಜಿಲ್ಲೆಯ ಆಯುಷ್ ವ್ಶೆದ್ಯರ ಸಮಾಜ ಸೇವಾ ಸಂಘಟನೆ ಆಯುಷ್ ಫೌಂಡೇಶನ್ ವತಿಯಿಂದ ➤ ಸನ್ಮಾನ ಸಮಾರಂಭ Read More »

ಕರಾವಳಿ

ಜ್ಞಾನವೆಂಬ ಬೆಳಕಿನೆಡೆಗೆ ಸಾಗೋಣ ➤ ಡಾ. ದಯಾನಂದ ನಾಯ್ಕ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.27.ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕರ್ನಾಟಕ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಸಹಯೋಗದೊಂದಿಗೆ ‘ಅಂತಾರಾಷ್ಟ್ರೀಯ ಯುವ ದಿನಾಚರಣೆ’ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದ ಎನ್‍ಎಸ್‍ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಸಹಪ್ರಾಧ್ಯಾಪಕ ಡಾ. ದಯಾನಂದ ನಾಯ್ಕ್, ವಿದ್ಯಾರ್ಥಿಗಳು ಅಜ್ಞಾನವೆಂಬ ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ಸಾಗಬೇಕು. ಸೇವೆಯಲ್ಲೇ ಸಾರ್ಥಕತೆ ಬೆಳೆಸಿಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು, ಎಂದರು. ಮುಖ್ಯ ಅತಿಥಿ

ಜ್ಞಾನವೆಂಬ ಬೆಳಕಿನೆಡೆಗೆ ಸಾಗೋಣ ➤ ಡಾ. ದಯಾನಂದ ನಾಯ್ಕ್ Read More »

ಕರಾವಳಿ

ಬಂಟ್ವಾಳ : ಆಗಸ್ಟ್ 28 ರಂದು ತ್ರೈಮಾಸಿಕ ಕೆ.ಡಿ.ಪಿ ಸಮೀಕ್ಷಾ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.27. ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ, 2019-20ನೇ ಸಾಲಿನ ಬಂಟ್ವಾಳ ತಾಲೂಕು ಪಂಚಾಯತ್‍ನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಸಮೀಕ್ಷಾ ಸಭೆಯು ಇಂದು ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಆಗಸ್ಟ್ 28 ರಂದು ಬೆಳಿಗ್ಗೆ 10.30 ಗಂಟೆಗೆ ಮುಂದೂಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಬಂಟ್ವಾಳ ಇವರ ಪ್ರಕಟಣೆ ತಿಳಿಸಿದೆ.

ಬಂಟ್ವಾಳ : ಆಗಸ್ಟ್ 28 ರಂದು ತ್ರೈಮಾಸಿಕ ಕೆ.ಡಿ.ಪಿ ಸಮೀಕ್ಷಾ ಸಭೆ Read More »

ಕರಾವಳಿ

ಕೇವಲ 4999 ರೂ. ಪಾವತಿಸಿ, ಹೊಸ ಯಮಹಾ ದ್ವಿಚಕ್ರ ವಾಹನ ನಿಮ್ಮದಾಗಿಸಿ ➤ ಕಡಬದ ‘ಶ್ರೀ ಮೋಟಾರ್ಸ್’ ನಲ್ಲಿ ದ್ವಿಚಕ್ರ ವಾಹನಗಳಿಗೆ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಆ.24. ಬಹು ಬೇಡಿಕೆಯ ಯಮಹಾ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಯ ಅಧಿಕೃತ ಮಾರಾಟ ಹಾಗೂ ರಿಪೇರಿ ಕೇಂದ್ರ ಕಡಬದ ಪಂಜ ರಸ್ತೆಯ ಸರಸ್ವತೀ ಶಾಲೆಯ ಬಳಿ ಕಾರ್ಯಾಚರಿಸುತ್ತಿರುವ ‘ಶ್ರೀ ಮೋಟಾರ್ಸ್’ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದೆ. ಕೇವಲ 4999 ರೂ. ಗಳನ್ನು ಪಾವತಿಸುವ ಮೂಲಕ ತಮಗಿಷ್ಟವಾದ ಯಮಹಾ ಫ್ಯಾಸಿನೋ ದ್ವಿಚಕ್ರ ವಾಹನವನ್ನು ತಮ್ಮದಾಗಿಸಿ ಕೊಳ್ಳಬಹುದಾಗಿದೆ. 95 ಶೇಕಡದವರೆಗೆ ಅತೀ ಕಡಿಮೆ ಬೆಲೆಯಲ್ಲಿ ಮಾಸಿಕ ಕಂತು ಯೋಜನೆಯಡಿ

ಕೇವಲ 4999 ರೂ. ಪಾವತಿಸಿ, ಹೊಸ ಯಮಹಾ ದ್ವಿಚಕ್ರ ವಾಹನ ನಿಮ್ಮದಾಗಿಸಿ ➤ ಕಡಬದ ‘ಶ್ರೀ ಮೋಟಾರ್ಸ್’ ನಲ್ಲಿ ದ್ವಿಚಕ್ರ ವಾಹನಗಳಿಗೆ ವಿಶೇಷ ಆಫರ್ Read More »

ಕರಾವಳಿ

ಪ್ರೊ ಕಬಡ್ಡಿ: ಜೈಪುರ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಬೆಂಗಳೂರು ಬುಲ್ಸ್ ತಂಡ

(ನ್ಯೂಸ್ ಕಡಬ) newskadaba.com ನವದೆಹಲಿ, ಆಗಸ್ಟ್.26.ರವಿವಾರದ ಪ್ರೊ ಕಬಡ್ಡಿ ಕೂಟದ ಹೊಸದಿಲ್ಲಿ ಚರಣದಲ್ಲಿ ಜೈಪುರ ತಂಡ ಹಾಗೂ ಬೆಂಗಳೂರು ಬುಲ್ಸ್‌ ತಂಡ ಮುಖಾಮುಖೀಯಲ್ಲಿ ಬೆಂಗಳೂರು ಬುಲ್ಸ್‌ ತಂಡವು ಜೈಪುರ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ. 41-30 ಅಂಕಗಳಿಂದ ಜೈಪುರ ತಂಡವನ್ನು ಸೋಲಿಸಿದೆ. ಇದು ತವರಿನಲ್ಲಿ ಡೆಲ್ಲಿಗೆ ಒಲಿದ ಸತತ 2ನೇ ಗೆಲುವು. ಈ ಜಯದೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆಯಿತು (39). ಜೈಪುರ್‌ 2ನೇ ಸ್ಥಾನಕ್ಕೆ ಇಳಿಯಿತು (37). ಬೆಂಗಾಲ್‌ 3ನೇ (33), ಬೆಂಗಳೂರು 4ನೇ

ಪ್ರೊ ಕಬಡ್ಡಿ: ಜೈಪುರ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ ಬೆಂಗಳೂರು ಬುಲ್ಸ್ ತಂಡ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ಕೂಟಿ ಮತ್ತು ಬೈಕ್ ಢಿಕ್ಕಿ ➤ ಸ್ಕೂಟಿ ಸವಾರ ಸಾವು

(ನ್ಯೂಸ್ ಕಡಬ) newskadaba.com ಸುಳ್ಯ, ಆಗಸ್ಟ್.26.ಆ.24 ರಂದು ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆ- ಸವಣೂರು ರಸ್ತೆಯ ಮುಕ್ಕೂರು ಸನಿಹದ ಕನರ್ತಮಜಲು‌ ಬಳಿ ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಸ್ಕೂಟಿ ಸವಾರ ತೀವ್ರಗಾಯಗೊಂಡಿದ್ದು ಅವರನ್ನು ತಕ್ಷಣ ಆಸ್ಪತ್ರೆ ಗೆ ಕೊಂಡೊಯ್ಯಲಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.‌ಸ್ಕೂಟಿ ಇವರು ಪೆರುವಾಜೆ ಗ್ರಾಮದ ಅಡ್ಯತಕಂಡ ನಿವಾಸಿ ಪುರುಷೋತ್ತಮ ಗೌಡ ಅಡ್ಯತಕಂಡ (42)ವರ್ಷ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಸ್ಕೂಟಿ ಮತ್ತು ಬೈಕ್ ಢಿಕ್ಕಿ ➤ ಸ್ಕೂಟಿ ಸವಾರ ಸಾವು Read More »

ಕರಾವಳಿ

ಸುಳ್ಯದ ಹಿರಿಯ ಪತ್ರಕರ್ತ ವಿಧಿವಶ

(ನ್ಯೂಸ್ ಕಡಬ) newskadaba.com ಸುಳ್ಯ, ಆಗಸ್ಟ್.26.ಹಿರಿಯ ಪತ್ರಕರ್ತ ಚಂದ್ರೇಶ್ ಗೋರಡ್ಕ ರವಿವಾರ ದಂದು ನಿಧನರಾದರು.ಮೃತ ಚಂದ್ರೇಶ್ ಗೋರಡ್ಕರವರಿಗೆ 48 ವರ್ಷ. ಅವರು ಲಿವರ್ ಸಂಬಂಧಿ ಕಾಯಿಲೆಯಿಂದ ಅಸ್ವಸ್ಥರಾಗಿದ್ದರು. ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.ಅದರೆ ಮತ್ತೆ ಲಿವರ್ ಹಾಗೂ ಕಿಡ್ನಿ ವೈಫಲ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾರದ ಹಿಂದೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಪತ್ನಿ , ಇಬ್ಬರು ಪುತ್ರರನ್ನು ಅಗಲಿದ್ದಾರೆ.  

ಸುಳ್ಯದ ಹಿರಿಯ ಪತ್ರಕರ್ತ ವಿಧಿವಶ Read More »

ಕರಾವಳಿ

ನೂಜಿಬಾಳ್ತಿಲ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ

(ನ್ಯೂಸ್ ಕಡಬ) newskadaba.comಕಲ್ಲುಗುಡ್ಡೆ, ಆಗಸ್ಟ್.26.ನೂಜಿಬಾಳ್ತಿಲ ರೆಂಜಿಲಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 35ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ರವಿವಾರ ನೂಜಿಬಾಳ್ತಿಲ ಉ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಊರಿನ ಹಿರಿಯರಾದ ವೀರಮ್ಮ ಬದನಡ್ಕ ಉದ್ಘಾಟಿಸಿದರು. ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಜಯಂತ ಬರೆಮೇಲು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹರಿಶ್ಚಂದ್ರ ಕನ್ವರೆ, ನೂಜಿಬಾಳ್ತಿಲ ಶಾಲಾ ಮುಖ್ಯ ಶಿಕ್ಷಕ ಶ್ರೇಯಾನ್ಸ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ,

ನೂಜಿಬಾಳ್ತಿಲ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ Read More »

ಕರಾವಳಿ
Scroll to Top