ಆಸ್ಟ್ರೇಲಿಯಾ ಎದುರು ಟಾಸ್ ಸೋತ ಭಾರತ ತಂಡ ಮೊದಲ ಬ್ಯಾಟಿಂಗ್!

(ನ್ಯೂಸ್‌ ಕಡಬ) newskadaba.com,  ನ.06:   ಇಲ್ಲಿನ ಕ್ಯಾರೆರಾ ಓವಲ್‌ ಕ್ರೀಡಾಂಗಣದಲ್ಲಿನಡೆಯುತ್ತಿರುವ ನಾಲ್ಕನೇ ಟಿ20ಐ ಪಂದ್ಯದಲ್ಲಿ(IND vs AUS) ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್‌ ಮಾರ್ಷ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಭಾರತ ತಂಡವನ್ನು (India) ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಲಾಗಿದೆ. ಆ ಮೂಲಕ ಪ್ರವಾಸಿ ತಂಡವನ್ನು ಕಡಿಮೆ ಮೊತ್ತಕ್ಕೆ ಆಲ್‌ಔಟ್‌ ಮಾಡಲು ಆತಿಥೇಯ ತಂಡದ ನಾಯಕ ಯೋಜನೆ ರೂಪಿಸಿದ್ದಾರೆ. ಭಾರತ […]

ಆಸ್ಟ್ರೇಲಿಯಾ ಎದುರು ಟಾಸ್ ಸೋತ ಭಾರತ ತಂಡ ಮೊದಲ ಬ್ಯಾಟಿಂಗ್! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್

ನಂದಿನಿ ತುಪ್ಪ ದರ ಹೆಚ್ಚಳ

(ನ್ಯೂಸ್‌ ಕಡಬ) newskadaba.com,  ನ.06 ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲ ಜಿಎಸ್ ಟಿ ಬೆಲೆ ಇಳಿಕೆಯ ಬೆನ್ನಲ್ಲೇ ನಂದಿನಿ ತುಪ್ಪದ ಬೆಲೆಯನ್ನು 610 ರೂಪಾಯಿಗಳಿಂದ 700ರೂಪಾಯಿಗೆ ಹೆಚ್ಚಳ ಮಾಡಿದೆ. ಈ ನಿರ್ಧಾರವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಹಾಲು ಉತ್ಪಾದಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ನಂದಿನಿ ತುಪ್ಪದ ಬೆಲೆ ಏಕೆ ಏಕಾಏಕಿ 90 ರೂಪಾಯಿ ಹೆಚ್ಚಾಗಿದೆ ಎಂದು ಇಂದು ಮಾಧ್ಯಮ ಪ್ರತಿನಿಧಿಗಳು ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದರು. ಅದಕ್ಕೆ

ನಂದಿನಿ ತುಪ್ಪ ದರ ಹೆಚ್ಚಳ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನಲ್ಲಿ ಬೆಂಕಿ ಅನಾಹುತ

(ನ್ಯೂಸ್‌ ಕಡಬ) newskadaba.com,  ನ.06 ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನ ಖ್ಯಾತಿಗೆ ಕಳಂಕ ತರುವ ಮತ್ತೊಂದು ಪ್ರಯತ್ನ ನಡೆದಿದೆ. ತಾಜ್‌ನ ಮುಖ್ಯ ಗುಮ್ಮಟದಿಂದ ಕಪ್ಪು ಹೊಗೆ ಮತ್ತು ಜ್ವಾಲೆಗಳು ಮೇಲೇರುತ್ತಿರುವುದನ್ನು ತೋರಿಸುವ 33 ಸೆಕೆಂಡುಗಳ ವೀಡಿಯೊ ವೈರಲ್ ಆಗುತ್ತಿದೆ. ಈ Al- ರಚಿತ ವೀಡಿಯೊವನ್ನು ಆಸ್ಟ್ರೇಲಿಯಾದ ನಟ ಆಡ್ರಿಯನ್ ಜೀ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಆದರೆ ಈಗ ಅದನ್ನು ವಿರೂಪಗೊಳಿಸಿ ಹಲವಾರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಸೆಪ್ಟೆಂಬರ್ 29 ರಂದು

ಉತ್ತರ ಪ್ರದೇಶದ ಆಗ್ರಾದಲ್ಲಿರುವ ವಿಶ್ವ ಪರಂಪರೆಯ ಸ್ಮಾರಕವಾದ ತಾಜ್ ಮಹಲ್‌ನಲ್ಲಿ ಬೆಂಕಿ ಅನಾಹುತ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಂಗಳೂರು : ಮಗಳೊಂದಿಗೆ ಆತ್ಮಹತ್ಯೆಗೆ ಯತ್ನ ಪ್ರಕರಣ – ಇನ್ನುಮುಂದೆ ಅಜ್ಜನ ಆರೈಕೆಯಲ್ಲಿರಲಿದೆ ಮಗು

(ನ್ಯೂಸ್‌ ಕಡಬ) newskadaba.com,  ನ.06 ಮಂಗಳೂರು: ತನ್ನ ಚಿಕ್ಕ ಮಗಳೊಂದಿಗೆ ಸಮುದ್ರಕ್ಕೆ ಹಾರಿ, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಮಗುವನ್ನು ಆಕೆಯ ಅಜ್ಜನಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯೊಂದಿಗಿನ ಜಗಳದಿಂದಾಗಿ ಆ ವ್ಯಕ್ತಿ ತನ್ನ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ವರದಿಯಾಗಿದೆ. ಪೊಲೀಸರು ಕ್ಷಿಪ್ರವಾಗಿ ಕ್ರಮ ಕೈಗೊಂಡು ಸಕಾಲದಲ್ಲಿ ಇಬ್ಬರನ್ನೂ ರಕ್ಷಿಸುವಲ್ಲಿ ಯಶಸ್ವಿಯಾದರು….ಗಂಡ –ಹೆಂಡತಿಯ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಗಳು ನಡೆದವು, ಆದರೆ ಹೆಂಡತಿ ರಾಜಿ ಮಾಡಿಕೊಳ್ಳಲು ನಿರಾಕರಿಸಿ ವಿಚ್ಛೇದನಕ್ಕೆ ಒತ್ತಾಯಿಸಿದಳು. ನ್ಯಾಯಾಲಯದ

ಮಂಗಳೂರು : ಮಗಳೊಂದಿಗೆ ಆತ್ಮಹತ್ಯೆಗೆ ಯತ್ನ ಪ್ರಕರಣ – ಇನ್ನುಮುಂದೆ ಅಜ್ಜನ ಆರೈಕೆಯಲ್ಲಿರಲಿದೆ ಮಗು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆನ್ ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಗೆ 9.2 ಲಕ್ಷ ರೂ. ವಂಚನೆ..!

(ನ್ಯೂಸ್‌ ಕಡಬ) newskadaba.com,  ನ.06:   ಬೈಲಹೊಂಗಲದ ನಿವಾಸಿಯೊಬ್ಬರು ಆನ್‌ಲೈನ್ ಹೂಡಿಕೆ ವಂಚನೆಗೆ ಬಲಿಯಾಗಿದ್ದು, 9,23,948 ರೂ.ಗಳನ್ನು ಕಳೆದುಕೊಂಡಿದ್ದಾರೆ. ಬೈಲಹೊಂಗಲದ ನಿವಾಸಿ ಪ್ರವೀಣ್ ಅನಂತ್ ರೇಣಿಕೆ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ‘ಓರಿಯೊನೆಕ್ಸ್ ಮಾರ್ಕೆಟ್ಸ್’ ಎಂಬ ನಕಲಿ ಕಂಪನಿಯ ಮೂಲಕ ಹೆಚ್ಚಿನ ಲಾಭದ ಭರವಸೆ ನೀಡಿ ವಂಚಿಸಲಾಗಿದ್ದು, ಈ ಸಂಬಂಧ ಬೆಳಗಾವಿಯ ಜಿಲ್ಲಾ ಸೈಬರ್ ಆರ್ಥಿಕ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಕ್ಟೋಬರ್ 13 ರಂದು, ಪ್ರವೀಣ್ ಅನಂತ್ ರೇಣಿಕೆ ಅವರ ಬ್ಯಾಂಕ್ ಖಾತೆಗೆ ಲಿಂಕ್

ಆನ್ ಲೈನ್ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಗೆ 9.2 ಲಕ್ಷ ರೂ. ವಂಚನೆ..! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ವಿಧಿವಶ

(ನ್ಯೂಸ್‌ ಕಡಬ) newskadaba.com,  ನ.06 ಬೆಂಗಳೂರು: ಕನ್ನಡದ ಖ್ಯಾತ ಖಳನಟ ಹರೀಶ್ ರಾಯ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ನಿಧನ ಹೊಂದಿದ್ದಾರೆ. ‘ಓಂ’, ‘ನಲ್ಲ’, ‘ಕೆಜಿಎಫ್’, ‘ಕೆಜಿಎಫ್ 2’ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ತಮ್ಮ ಶಕ್ತಿಶಾಲಿ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು, ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್ ನೊಂದಿಗೆ ಹೋರಾಟ ನಡೆಸುತ್ತಿದ್ದರು. ಹರೀಶ್ ರಾಯ್ ಅವರ ಆರೋಗ್ಯ ಕಳೆದ ತಿಂಗಳುಗಳಿಂದ ಹದಗೆಡುತ್ತಲೇ ಇತ್ತು. ಹೊಟ್ಟೆ ಉಬ್ಬರಗೊಂಡು ದೇಹ ಕೃಷಗೊಂಡಿದ್ದ ಅವರು ಗುರುತೇ

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ವಿಧಿವಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ಸಾವಿರಾರು ರೂ. ವಂಚನೆ

(ನ್ಯೂಸ್‌ ಕಡಬ) newskadaba.com,  ನ.06:   ರಾಜ್ಯದ ಪ್ರಸಿದ್ಧ ಹಾಗೂ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ಸೈಬರ್ ಕಳ್ಳರು ನಕಲಿ ವೆಬ್‌ಸೈಟ್ ತೆರೆದು ಭಕ್ತರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಭಕ್ತರು ದೇವಾಲಯದ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಲು ಬಳಸುವ ಅಧಿಕೃತ ವೆಬ್‌ಸೈಟ್‌ಗೆ ಹೋಲಿಕೆಯ ನಕಲಿ ಸೈಟ್ ತೆರೆಯಲ್ಪಟ್ಟಿದ್ದು, ಮುಂಗಡ ಬುಕಿಂಗ್ ಹೆಸರಿನಲ್ಲಿ ಹಣ ಕಸಿಕೊಳ್ಳಲಾಗುತ್ತಿದೆ. “ಕರ್ನಾಟಕ ಟೆಂಪಲ್ ಅಕಮಡೇಶನ್” ಎಂಬ ಹೆಸರಿನಲ್ಲಿ ಸೈಬರ್ ಅಪರಾಧಿಗಳು ನಕಲಿ ವೆಬ್‌ಸೈಟ್ ನಿರ್ಮಿಸಿದ್ದು, ಅದರಲ್ಲಿ QR

ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ಸಾವಿರಾರು ರೂ. ವಂಚನೆ Read More »

ಕರಾವಳಿ

ಬೆಳ್ಳಾರೆ ಸಮೀಪದ ಹುಡುಗ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ

(ನ್ಯೂಸ್‌ ಕಡಬ) newskadaba.com,  ನ.06 ಸುಳ್ಯ: ಬೆಳ್ಳಾರೆ ಸಮೀಪದ ಪೆರುವಾಜೆ ಎಂಬಲ್ಲಿ 17 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನ. 5ರಂದು ರಾತ್ರಿ ವರದಿಯಾಗಿದೆ. ಈತನು ಬೆಳ್ಳಾರೆಯ ದೀಪಕ್ ಕೋಲ್ಡ್ ಹೌಸ್ ನಲ್ಲಿ ಕೆಲಸಕ್ಕಿದ್ದನು..ಈ ಹುಡುಗನನ್ನು ಗಗನ್ ಎಂದು ಗುರುತಿಸಲಾಗಿದೆ, ಪೆರುವಾಜೆಯಲ್ಲಿರುವ ಬಾಡಿಗೆ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. . ಮೂಲತಃ ಕಳೆಂಜದವರಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಯುವಕ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.  

ಬೆಳ್ಳಾರೆ ಸಮೀಪದ ಹುಡುಗ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯ ಸರ್ಕಾರದ ಆದೇಶಕ್ಕೆ ಮತ್ತೆ ಹಿನ್ನಡೆ; ಅರ್ಜಿ ವಜಾಗೊಳಿಸಿದ ನ್ಯಾಯಾಲಯ

(ನ್ಯೂಸ್‌ ಕಡಬ) newskadaba.com,  ನ.06:   ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಪಡೆಯಬೇಕೆಂಬ ಆದೇಶಕ್ಕೆ ನೀಡಲಾಗಿದ್ದ ತಡೆಯನ್ನು ರಾಜ್ಯ ಸರ್ಕಾರ ಮೇಲ್ಮನವಿ ಅರ್ಜಿಯನ್ನು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ನ್ಯಾ.ನಾಗಪ್ರಸನ್ನ ಅವರ ನೀಡಿದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿಯನ್ನು ಸಲ್ಲಿಕೆ ಮಾಡಿತ್ತು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ.ಎಸ್.​ಜಿ.ಪಂಡಿತ್​ ಹಾಗೂ ನ್ಯಾ.ಗೀತಾ ಕೆ.ಬಿ ಅವರ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ತಡೆಯಾಜ್ಞೆ ತೆರವಿಗೆ ಏಕಸದಸ್ಯ ಪೀಠದಲ್ಲಿ ಮನವಿ ಸಲ್ಲಿಸಲು ವಿಭಾಗೀಯ ಪೀಠ ಅವಕಾಶ

ರಾಜ್ಯ ಸರ್ಕಾರದ ಆದೇಶಕ್ಕೆ ಮತ್ತೆ ಹಿನ್ನಡೆ; ಅರ್ಜಿ ವಜಾಗೊಳಿಸಿದ ನ್ಯಾಯಾಲಯ Read More »

ಕರ್ನಾಟಕ

ಬರೋಬ್ಬರಿ 150 ಕಡೆ ಕಳ್ಳತನ, ಐದು ಜಿಲ್ಲೆ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕಳ್ಳತನ ಬಂಧನ

(ನ್ಯೂಸ್‌ ಕಡಬ) newskadaba.com,  ನ.06:   ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ನಟೋರಿಯಸ್ ಕಳ್ಳನನ್ನ ವಿದ್ಯಾರಣ್ಯಪುರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಸೈಯ್ಯದ್ ಅಸ್ಲಾಂ ಪಾಷಾ, ಬಂಧಿತ ಆರೋಪಿ. ಇದುವರೆಗೂ ಕಳ್ಳತನದ ಕೆರಿಯರ್‌ನಲ್ಲಿ 150 ಕಳ್ಳತನ ಕೇಸ್‌ಗಳಲ್ಲಿ ಆರೋಪಿ. ಕಳ್ಳತನದ ತಂತ್ರಗಳು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಹಗಲಲ್ಲಿ ಐಷಾರಾಮಿಗಳ ಮನೆಗಳ ರೆಕ್ಕಿ, ಕತ್ತಲಲ್ಲಿ ಕೈಚಳ: ಆರೋಪಿ ವೃತ್ತಿಪರ ಖತರ್ನಾಕ್ ಕಳ್ಳನಾಗಿದ್ದು ಹಗಲೆಲ್ಲ ಐಷಾರಾಮಿ ಮನೆಗಳನ್ನ ರೆಕ್ಕಿ ಮಾಡುತ್ತಿದ್ದ. ರಾತ್ರಿಯಾಗುತ್ತಿದ್ದಂತೆ ಕೈಚಳಕ ತೋರಿಸುತ್ತಿದ್ದ

ಬರೋಬ್ಬರಿ 150 ಕಡೆ ಕಳ್ಳತನ, ಐದು ಜಿಲ್ಲೆ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕಳ್ಳತನ ಬಂಧನ Read More »

ಕರಾವಳಿ
Scroll to Top