ಬೆಳ್ತಂಗಡಿ: ವಾಹನದ ಮುಂಭಾಗದ ಸೀಟ್ ನಲ್ಲಿ ಇಟ್ಟಿದ್ದ ಕ್ಯಾಶ್ ಬ್ಯಾಗ್ ಕಳವು

(ನ್ಯೂಸ್ ಕಡಬ) newskadaba.com, ಬೆಳ್ತಂಗಡಿ, ಡಿ.10   ತನ್ನ ವಾಹನದ ಮುಂಭಾಗದ ಸೀಟ್ ನಲ್ಲಿ ಇಟ್ಟಿದ್ದ ಕ್ಯಾಶ್ ಬ್ಯಾಗ್ ನಗದು ಸಮೇತ ಕಳವಾದ ಘಟನೆ ಬೆಳ್ತಂಗಡಿ ತಾಲೂಕು ನಾವೂರು ಪೇಟೆಯಲ್ಲಿ ಸೋಮವಾರದಂದು ನಡೆದಿದೆ. ಎನ್.ಎ.ಉಸ್ಮಾನ್ ರವರ 23,000/- ರೂ. ಬೆಳಿಗ್ಗೆ 09:00 ಗಂಟೆಯಿಂದ 10:00 ಗಂಟೆಯ ಮಧ್ಯದ ಅವಧಿಯಲ್ಲಿ ಕಳವು ಮಾಡಿರುವುದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ: ವಾಹನದ ಮುಂಭಾಗದ ಸೀಟ್ ನಲ್ಲಿ ಇಟ್ಟಿದ್ದ ಕ್ಯಾಶ್ ಬ್ಯಾಗ್ ಕಳವು Read More »

ಕರಾವಳಿ

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಜೀಪ್ ➤ ಮೆಸ್ಕಾಂ ಕಂಪನಿಗೆ ಸುಮಾರು 35,913/- ರೂಪಾಯಿ ನಷ್ಟ

(ನ್ಯೂಸ್ ಕಡಬ) newskadaba.com, ಬಂಟ್ವಾಳ, ಡಿ.10   ಜೀಪೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಜಖಂಗೊಂಡ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮೊಡಂಕಾಪು ಎಂಬಲ್ಲಿ ನಿನ್ನೆ ನಡೆದಿದೆ. ಇದರಿಂದಾಗಿ ಮೆಸ್ಕಾಂ ಕಂಪನಿಗೆ ಸುಮಾರು 35,913/- ರೂಪಾಯಿ ನಷ್ಟ ಸಂಭವಿಸಿರುವುದಾಗಿ ಮೆಸ್ಕಾಂ ಕಂಪನಿಯ ಸಹಾಯಕ ಇಂಜಿನಿಯರು ಜಿತೇಶ್ ಎಂಬವರು ಕಾನೂನು ಕ್ರಮಕ್ಕೆ ಕೋರಿಕೆ ಮಾಡಿಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಜೀಪ್ ➤ ಮೆಸ್ಕಾಂ ಕಂಪನಿಗೆ ಸುಮಾರು 35,913/- ರೂಪಾಯಿ ನಷ್ಟ Read More »

ಕರಾವಳಿ

ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.10   ಆಯುಕ್ತರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಯುವ ಕೇಂದ್ರ, ಬೆಂಗಳೂರು ಇವರ ಸುತ್ತೋಲೆಯಲ್ಲಿ 2019-20ನೇ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಬ್ಯಾಡ್ಮಿಂಟನ್ ಪಂದ್ಯಾವಳಿ ಡಿಸೆಂಬರ್ 27 ರಿಂದ ಜನವರಿ 2 ರವರೆಗೆ ಸಚಿವಾಲಯ ಜಿಮ್ಕಾನ್, ಸೆಕ್ಟರ್-21, ಗಾಂಧಿನಗರ, ಗುಜರಾತ್ ಇಲ್ಲಿ ನಡೆಯಲಿದೆ. ಈ ಸಂಬಂಧ ರಾಜ್ಯ ತಂಡವನ್ನು ಡಿಸೆಂಬರ್ 15 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಗೆ ಜಿಲ್ಲಾ ಮಟ್ಟದಿಂದ ನಾಗರಿಕ ಸೇವಾ

ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ Read More »

ಕರಾವಳಿ

ಡಿ.11 ರಿಂದ 13 ರವರೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಾತಿ ಅಭಿಯಾನ-2019-ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.10   ಮಂಗಳೂರು ಮಹಾನಗರಪಾಲಿಕೆಯ ಬಾಕಿ ಆಸ್ತಿ ತೆರಿಗೆಯನ್ನು ವಸೂಲಿ ಮಾಡುವ ಬಗ್ಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಾತಿ ಅಭಿಯಾನ-2019 ಕಾರ್ಯಕ್ರಮವನ್ನು ಡಿಸೆಂಬರ್ 11 ರಿಂದ 13 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಾಲ್ಯಪದವು ಶಾಲೆಯ ಬಳಿ ನಡೆಯಲಿದೆ. ಅನೇಕ ತೆರಿಗೆದಾರರು ಇನ್ನೂ ತೆರಿಗೆ ಪಾವತಿಸದೇ ಇರುವುದು ಕಂಡು ಬಂದಿರುವುದರಿಂದ, ಈ ಸ್ಥಳದಲ್ಲಿ ತೆರಿಗೆ ಪಾವತಿಸಲು ಅವಕಾಶವನ್ನು ಮಾಡಿಕೊಡಲಾಗುತ್ತದೆ. ತೆರಿಗೆಯನ್ನು ಪಾವತಿಸದೆ ಇರುವ ತೆರಿಗೆದಾರರು ತಮ್ಮ ಜಾಗ/ಕಟ್ಟಡಕ್ಕೆ

ಡಿ.11 ರಿಂದ 13 ರವರೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ವಸೂಲಾತಿ ಅಭಿಯಾನ-2019-ಕಾರ್ಯಕ್ರಮ Read More »

ಕರಾವಳಿ

ವಿಕಲಚೇತನರ ವಿಶೇಷ ಬಸ್ ಪಾಸ್- ನವೀಕರಣಕ್ಕೆ ಅರ್ಜಿ

  (ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.10   ಕರಾರಸಾ.ಸಂಸ್ಥೆಯು ವಿಕಲಚೇತನರ ಪ್ರಯಾಣಿಕರಿಗೆ ತಮ್ಮ ವಾಸಸ್ಥಳದಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ಬಸ್ಸು ಪಾಸುಗಳನ್ನು ವಿತರಿಸುತ್ತಿದ್ದು, 2019ನೇ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ಬಸ್ಸು ಪಾಸುಗಳ ಅವಧಿಯು ಡಿಸೆಂಬರ್ 31 ರಂದು ಮುಕ್ತಾಯಗೊಳ್ಳುತ್ತದೆ. 2020ನೇ ಸಾಲಿಗಾಗಿ ಈ ಬಸ್ಸು ಪಾಸುಗಳನ್ನು ಜನವರಿ 1, 2020 ರಿಂದ ನವೀಕರಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಹೊಸ ಪಾಸುಗಳನ್ನು ನೀಡಲಾಗುವುದು. ವಿಕಲಚೇತನರ ರಿಯಾಯಿತಿ ಬಸ್ಸು ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು

ವಿಕಲಚೇತನರ ವಿಶೇಷ ಬಸ್ ಪಾಸ್- ನವೀಕರಣಕ್ಕೆ ಅರ್ಜಿ Read More »

ಕರಾವಳಿ

ಬಂಟ್ವಾಳ: ಬಿಜೆಪಿ ಹಿರಿಯ ಮುಖಂಡ ಆನಂದ ನಿಧನ

ಬಂಟ್ವಾಳ, ಡಿ.10: ಬಿಜೆಪಿ ಬಂಟ್ವಾಳ ತಾಲೂಕಿನ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾರ್ಯಕರ್ತ ಜಿ.ಆನಂದ ಅನಾರೋಗ್ಯ ದಿಂದ ಇಂದು ಮುಂಜಾನೆ ನಿಧನರಾದರು. ಅವರು 2 ಬಾರಿ ಬಂಟ್ವಾಳ ಪುರಸಭಾ ಸದಸ್ಯ ರಾಗಿ, 2 ಬಾರಿ ಬಂಟ್ವಾಳ ಬಿಜೆಪಿ ಪಕ್ಷದ ಅಧ್ಯಕ್ಷರಾಗಿ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ 3 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸಂಸದ ರಾಜ್ಯಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌, ಡಾ. ಪ್ರಭಾಕರ್ ಭಟ್, ಬಿಜೆಪಿ ಅಧ್ಯಕ್ಷ

ಬಂಟ್ವಾಳ: ಬಿಜೆಪಿ ಹಿರಿಯ ಮುಖಂಡ ಆನಂದ ನಿಧನ Read More »

ಕರಾವಳಿ

ವಿಶೇಷ ಶಿಕ್ಷಕ ನೇಮಕಾತಿ-ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.10  2019-20ನೇ ಸಾಲಿಗೆ ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿಯಲ್ಲಿ ಜಿಲ್ಲೆಯಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ. ಪ್ರೌಢ ಹಾಗೂ ಪ್ರಾಥಮಿಕ ಹುದ್ದೆಗೆ ವಿಶೇಷ ಡಿ.ಇಡಿ/ವಿಶೇಷ ಬಿ.ಇಡಿ ವಿದ್ಯಾರ್ಹತೆ ಹಾಗೂ ಆರ್.ಸಿ.ಐ. ಪ್ರಮಾಣ ಪತ್ರ ಹೊಂದಿರುವ ಅರ್ಹ ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಮೂಲಕ ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ. ಸೂಕ್ತ ದಾಖಲೆಯೊಂದಿಗೆ ಸಮಗ್ರ ಶಿಕ್ಷಣ ಕರ್ನಾಟಕ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಕೊಟ್ಟಾರ, ಮಂಗಳೂರು, ಜಿಲ್ಲಾ ಕಚೇರಿಗೆ ಡಿಸೆಂಬರ್ 12ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ

ವಿಶೇಷ ಶಿಕ್ಷಕ ನೇಮಕಾತಿ-ಅರ್ಜಿ ಆಹ್ವಾನ Read More »

ಕರಾವಳಿ

ಮೆರವಣಿಗೆ ನಿರತ ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಲಾಠಿ ಜಾಚ್೯

ಹೊಸದಿಲ್ಲಿ, ಡಿ.10: ಹಾಸ್ಟೆಲ್  ಶುಲ್ಕ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಷ್ಟ್ರಪತಿ ಭವನಕ್ಕೆ ಮೆರವಣಿಗೆ ಸಾಗಲು ಯತ್ನಿಸಿದ್ದ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆ ನಡೆದಿದೆ. ವಿಶ್ವವಿದ್ಯಾಲಯ ಕ್ಯಾಂಪಸ್ ನ ಬಲಭಾಗದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮತ್ತು ಬ್ಯಾರಿಕೇಡ್ ಹಾಕಲಾಗಿತ್ತು. ಇದನ್ನು ಉಲ್ಲಂಘಿಸಿ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನಕ್ಕೆ ನಿನ್ನೆ ಮೆರವಣಿಗೆ ಹೊರಟಾಗ ಪೊಲೀಸರು ವಿದ್ಯಾರ್ಥಿಗಳನ್ನು ಬಿಕಜಿ ಕಾಮಾ ಪ್ಲೇಸ್ ಮೆಟ್ರೊ ನಿಲ್ದಾಣದಲ್ಲಿ ತಡೆದು ನಿಲ್ಲಿಸಿದರು. ಪೊಲೀಸರ ಸರ್ಪಗಾವಲು ಇದ್ದ

ಮೆರವಣಿಗೆ ನಿರತ ಜೆಎನ್ ಯು ವಿದ್ಯಾರ್ಥಿಗಳ ಮೇಲೆ ಲಾಠಿ ಜಾಚ್೯ Read More »

ರಾಷ್ಟ್ರೀಯ ನ್ಯೂಸ್

ಸಮ್ಯಕ್ತ್ ಜೈನ್ ಅವರ ಮಾರ್ದನಿ ಕವನಸಂಕಲನ ಬಿಡುಗಡೆ

(ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.10   ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಮ್ಯಕ್ತ್ ಹೆಚ್. ಜೈನ್ ಅವರ ಮಾರ್ದನಿ ಕವನಸಂಕಲನವನ್ನು ಪುತ್ತೂರಿನಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು. ಪುತ್ತೂರು ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿಥಿಗಳು ಕವನಸಂಕಲನವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಇದು ಸಮ್ಯಕ್ತ್  ಜೈನ್ ಅವರ  ಮೂರನೇ ಕವನಸಂಕಲನವಾಗಿದ್ದು, ಈ ಹಿಂದೆ ಅಂಕುರ ಹಾಗೂ ಮಂಜರಿ ಎಂಬ ಕೃತಿಯನ್ನು ರಚಿಸಿ ಬಿಡುಗಡೆಗೊಳಿಸಿದ್ದರು. ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಇವರು ನೂಜಿಬಾಳ್ತಿಲ

ಸಮ್ಯಕ್ತ್ ಜೈನ್ ಅವರ ಮಾರ್ದನಿ ಕವನಸಂಕಲನ ಬಿಡುಗಡೆ Read More »

ಕರಾವಳಿ

ಡಿ.15: ಮೀನಾಡಿ ಶಾಲೆಯಲ್ಲಿ ಪೂರ್ವಭಾವಿ ಸಭೆ

  (ನ್ಯೂಸ್ ಕಡಬ) newskadaba.com, ಕಲ್ಲುಗುಡ್ಡೆ, ಡಿ.10   ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಮೀನಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ. 15ರಂದು ಅಪರಾಹ್ನ ಪೂರ್ವಭಾವಿ ಸಭೆ ನಡೆಯಲಿದೆ. 1960ರಲ್ಲಿ ಪ್ರಾರಂಭಗೊಂಡ ಶಾಲೆ ಇದೀಗ 60ನೇ ವರ್ಷಾಚರಣೆ ಸಂಭ್ರಮದಲ್ಲಿದ್ದು, 60ನೇ ವರ್ಷಾರಣೆಯ ಬಗ್ಗೆ ಶಾಲಾ ಹಿರಿಯ ವಿದ್ಯಾರ್ಥಿಗಳು,, ವಿದ್ಯಾಭಿಮಾನಿಗಳು ಹಾಗೂ ಗ್ರಾಮಸ್ಥರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡುವಂತೆ ತಿಳಿಸಲಾಗಿದೆ. ಇದೇ ಸಂದರ್ಭದಲ್ಲಿ ಮಹೋತ್ಸವ ಸಮಿತಿ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ರಚನೆಯೂ

ಡಿ.15: ಮೀನಾಡಿ ಶಾಲೆಯಲ್ಲಿ ಪೂರ್ವಭಾವಿ ಸಭೆ Read More »

ಕರಾವಳಿ
Scroll to Top