ಸರಕಾರಿ ನಿವೃತ್ತ ಗ್ರೂಪ್ ‘ಡಿ’ ನೌಕರರ ಸಭೆ

  (ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ಸರಕಾರಿ ನಿವೃತ್ತ ಗ್ರೂಫ್ ‘ಡಿ’ ನೌಕರರ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ಡಿಸೆಂಬರ್ 14 ರಂದು ಬೆಳಿಗ್ಗೆ 10.30 ಗಂಟೆಗೆ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಡಿ ಗ್ರೂಪ್ ಸಂಘದ ಜಿಲ್ಲಾಧ್ಯಕ್ಷೆ ಶೋಭಾ ಶೆಟ್ಟಿ, ದ.ಕ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಕೆ ಕೃಷ್ಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಎಲ್ಲಾ ನಿವೃತ್ತ ಡಿ ಗ್ರೂಪ್ ನೌಕರರು ಸಭೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಸರಕಾರಿ ನಿವೃತ್ತ ಗ್ರೂಪ್ ‘ಡಿ’ ನೌಕರರ ಸಭೆ Read More »

ಕರಾವಳಿ

ಮಂಗಳೂರು ವಿ.ವಿ 38ನೇ ವಾರ್ಷಿಕ ಘಟಿಕೋತ್ಸವ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ಮಂಗಳೂರು ವಿಶ್ವ ವಿದ್ಯಾನಿಲಯದ 38ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು 2020ನೇ ಜನವರಿ ತಿಂಗಳಿನಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ. ಮಂಗಳೂರು ವಿವಿ ಯ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ 2019ನೇ ಅಕ್ಟೋಬರ್ 31 ರ ಒಳಗೆ ವಿವಿಧ ಪದವಿಗಳನ್ನು ಪಡೆಯಲು ಅರ್ಹರಾದ ಅಭ್ಯರ್ಥಿಗಳು ಈ ಘಟಿಕೋತ್ಸವದಂದು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಎಲ್ಲಾ ಸ್ನಾತ್ತಕೋತ್ತರ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು, ಡಾಕ್ಟರೇಟ್ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು, ಸ್ನಾತ್ತಕೋತ್ತರ ಮತ್ತು

ಮಂಗಳೂರು ವಿ.ವಿ 38ನೇ ವಾರ್ಷಿಕ ಘಟಿಕೋತ್ಸವ Read More »

ಕರಾವಳಿ

ಉಡುಪಿ: ಯುವ ಉದ್ಯಮಿ ಆತ್ಮಹತ್ಯೆ

ಉಡುಪಿ, ಡಿ.13: ಯುವ ಉದ್ಯಮಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ನಡೆದಿದೆ. ಆತ್ಯಹತ್ಯೆ ಮಾಡಿಕೊಂಡವರನ್ನು ಬೀಡಿನಗುಡ್ಡೆಯ ಹಂಸರಾಜ್ ನಾಯಕ್(35) ಎಂದು ಗುರುತಿಸಲಾಗಿದೆ. ಇವರು ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಪೈಂಟ್ ಫ್ಯಾಕ್ಟರಿಯ ಪಾಲುದಾರರಾಗಿದ್ದು, ಇದರಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ: ಯುವ ಉದ್ಯಮಿ ಆತ್ಮಹತ್ಯೆ Read More »

ಕರಾವಳಿ

ಇಂದು ನಗರಪಾಲಿಕೆ ಅಧಿಕಾರಿಗಳೊಂದಿಗೆ ಮಕ್ಕಳ ಸಂವಾದ  ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13  ಮಕ್ಕಳು ಸಮುದಾಯದ ಆಸ್ತಿ, ಯಾವುದೇ ಕಾರಣಕ್ಕೂ ಮಕ್ಕಳು ಯಾವುದೇ ತೊಂದರೆಗಳಿಗೆ ಈಡಾಗದಂತೆ ಸ್ವಚ್ಚಂದವಾಗಿ, ಆನಂದದಿಂದ, ಎಂತಹದೇ ಭಯ, ಕೊರತೆ ಇಲ್ಲದೇ ಬದುಕಿ ಬೆಳೆಯಬೇಕಾಗುತ್ತದೆ. ಅಂತಹ ವಾತಾವರಣವನ್ನು ಸೃಷ್ಠಿಸುವುದು ಆಯಾ ದೇಶದ ರಾಜ್ಯದ, ಪಂಚಾಯತಿ, ಸಮುದಾಯ ಮತ್ತು ಪ್ರತಿ ಕುಟುಂಬಗಳ ಜವಾಬ್ದಾರಿ. ಈ ನಿಟ್ಟಿನಲ್ಲಿ ಮಕ್ಕಳ ಬದುಕು, ರಕ್ಷಣೆ, ವಿಕಾಸ, ಭಾಗವಹಿಸುವಿಕೆಯ ವಿಚಾರಗಳನ್ನು ನಮ್ಮ ದೇಶದಲ್ಲಿ ಜಾರಿಗೊಳಿಸುತ್ತೇವೆ ಎಂದು ಹೇಳಿ ಭಾರತ ಸರ್ಕಾರ 1992 ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ

ಇಂದು ನಗರಪಾಲಿಕೆ ಅಧಿಕಾರಿಗಳೊಂದಿಗೆ ಮಕ್ಕಳ ಸಂವಾದ  ಕಾರ್ಯಕ್ರಮ Read More »

ಕರಾವಳಿ

ಮಂಗಳೂರು: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 13: ರೈಲು ಢಿಕ್ಕಿ ಹೊಡೆದು, ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತೊಕ್ಕೊಟ್ಟು ಕಾಪಿಕಾಡ್ ನಲ್ಲಿ ನಡೆದಿದೆ.   ಮೃತರನ್ನು  ಕಾಪಿಕಾಡು ನಿವಾಸಿ ರತನ್ ಕುಮಾರ್ (40) ಎಂದು ಗುರುತಿಸಲಾಗಿದೆ. ಅವರು ನಗರದಲ್ಲಿ 42 ನಂಬರ್ ನ ಬಸ್ಸಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು  ಎಂದು ತಿಳಿದುಬಂದಿದೆ. ಸ್ಥಳಕ್ಕೆ ರೈಲ್ವೇ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಮಂಗಳೂರು: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು Read More »

ಕರಾವಳಿ

ಸುಳ್ಯ – ಹೊಸ ಸೇತುವೆ ನಿರ್ಮಾಣ, ರಸ್ತೆ ಸಂಚಾರದಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ಸುಳ್ಯ ತಾಲೂಕಿನ ಅಲೆಟ್ಟಿ, ಕೊಲ್ಚಾರು, ಕಣಕ್ಕೂರು, ಬಂದ್ಯಡ್ಕ ರಸ್ತೆ ಕಿ.ಮೀ 2.60 ರಲ್ಲಿ ಹಳೆಯ ಸೇತುವೆಯನ್ನು ಕೆಡವಿ ಅದೇ ಸ್ಥಳದಲ್ಲಿ 10 ಮೀಟರ್ ಅಗಲಕ್ಕೆ ಹೊಸ ಸೇತುವೆ ನಿರ್ಮಿಸಬೇಕಾಗಿರುತ್ತದೆ.  ಇದರಿಂದಾಗಿ ಹಾಲಿ ಸೇತುವೆಯ ಎರಡೂ ಬದಿ ತೆಂಗು ಅಡಿಕೆ ತೋಟವಿದ್ದು, ಬದಲೀ ರಸ್ತೆ ನಿರ್ಮಿಸಲು ಅವಕಾಶ ಇರುವುದಿಲ್ಲ. ಆದ್ದರಿಂದ ಹಳೆಯ ಸೇತುವೆಯನ್ನು ಕೆಡವಿ ನೂತನ ಸೇತುವೆ ನಿರ್ಮಿಸಲು  ಡಿಸೆಂಬರ್ 18 ರಿಂದ 31 ರವರೆಗೆ ಈ ಭಾಗದ ರಸ್ತೆಯಲ್ಲಿ ಸಂಚಾರವನ್ನು

ಸುಳ್ಯ – ಹೊಸ ಸೇತುವೆ ನಿರ್ಮಾಣ, ರಸ್ತೆ ಸಂಚಾರದಲ್ಲಿ ಬದಲಾವಣೆ Read More »

ಕರಾವಳಿ

ಅಂಗನವಾಡಿಗಳಿಗೆ ಅಕ್ಕಿ,ಗೋಧಿ ಸಾಗಾಣಿಕೆ- ಟೆಂಡರ್ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ವಿಟ್ಲ ಶಿಶು ಅಭಿವೃದ್ಧಿ ಯೋಜನೆಗೆ 2019-20 ನೇ ಸಾಲಿನಲ್ಲಿ ಭಾರತೀಯ ಆಹಾರ ನಿಗಮದ ಗೋದಾಮುಗಳಿಂದ ಪಡಿತರ ಅಕ್ಕಿ-ಗೋಧಿ  ಸಾಗಾಣಿಕೆ ಬಗ್ಗೆ ಟೆಂಡರ್ ಪ್ರಕಟಣೆ ಹೊರಡಿಸಲಾಗಿದ್ದು, ಟೆಂಡರ್ ಅರ್ಜಿ ಪಡೆದುಕೊಳ್ಳಲು ಕೊನೆಯ ದಿನ ಡಿಸೆಂಬರ್ 18. ಟೆಂಡರ್ ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 24. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೂರವಾಣಿ ಸಂಖ್ಯೆ : 08255-238080 ನ್ನು ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ

ಅಂಗನವಾಡಿಗಳಿಗೆ ಅಕ್ಕಿ,ಗೋಧಿ ಸಾಗಾಣಿಕೆ- ಟೆಂಡರ್ ಅರ್ಜಿ ಆಹ್ವಾನ Read More »

ಕರಾವಳಿ

ಹೊಸಬೆಟ್ಟು ಗ್ರಾ.ಪಂ.-ವಾರ್ಡು ಸಭೆ ಮತ್ತು ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13  ಮೂಡಬಿದಿರೆ ತಾಲೂಕು ಹೊಸಬೆಟ್ಟು ಗ್ರಾಮ ಪಂಚಾಯತ್  ವ್ಯಾಪ್ತಿಯ 2019-20ನೇ ಸಾಲಿನ ದ್ವಿತೀಯ ಹಂತದ ವಾರ್ಡು ಸಭೆ ವಿವರ : ಪುಚ್ಚಮೊಗರು ವಾರ್ಡು -2 ರ ಸಭೆ ಡಿಸೆಂಬರ್ 17 ರಂದು ಬೆಳಿಗ್ಗೆ 10.30 ಗಂಟೆಗೆ ನಿತ್ಯಾನಂದ ಅನುದಾನಿತ ಹಿ.ಪ್ರಾ. ಶಾಲೆ, ಬಾವದಬೈಲು ಪುಚ್ಚಮೊಗರಿನಲ್ಲಿ ನಡೆಯಲಿದೆ. ಪುಚ್ಚಮೊಗರು ವಾರ್ಡು -1 ರ ಸಭೆ ಮಧ್ಯಾಹ್ನ 12 ಗಂಟೆಗೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ, ಶಾಂತಿರಾಜ ಕಾಲೊನಿ ಪುಚ್ಚಮೊಗರಿನಲ್ಲಿ ನಡೆಯಲಿದೆ.  ಹೊಸಬೆಟ್ಟು ವಾರ್ಡು

ಹೊಸಬೆಟ್ಟು ಗ್ರಾ.ಪಂ.-ವಾರ್ಡು ಸಭೆ ಮತ್ತು ಗ್ರಾಮ ಸಭೆ Read More »

ಕರಾವಳಿ

ನಾಗರಿಕರಿಗೊಂದು ಸವಾಲು – ಜಿಲ್ಲಾ ಮಟ್ಟದ ಕಾರ್ಯಕ್ರಮ 

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಡೆಂಗ್ಯೂ ಹಾಗೂ ಚಿಕುಂಗುನ್ಯ ನಿಯಂತ್ರಣದ ಬಗ್ಗೆ ಅತೀ ಅವಶ್ಯಕ ಕ್ರಮಗಳಾದ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ಗುರುತಿಸುವಿಕೆ , ನಾಶಪಡಿಸುವಿಕೆ ಮತ್ತು ಸಾರ್ವಜನಿಕರಿಗೆ ಆರೋಗ್ಯ ಮಾಹಿತಿ ಶಿಕ್ಷಣ  ನೀಡುವ ಬಗ್ಗೆ ಕರ್ನಾಟಕ ರಾಜ್ಯಾದ್ಯಂತ  ‘ನಾಗರಿಕರಿಗೊಂದು ಸವಾಲು’ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಧೂಮಾವತಿ ಪ್ರೆಂಡ್ಸ್ ಕ್ಲಬ್ ಹೊಯಿಗೆ ಬಜಾರ್

ನಾಗರಿಕರಿಗೊಂದು ಸವಾಲು – ಜಿಲ್ಲಾ ಮಟ್ಟದ ಕಾರ್ಯಕ್ರಮ  Read More »

ಕರಾವಳಿ

ಟಿವಿ ವಾಹಿನಿಗಳ ಕಾರ್ಯಕ್ರಮಗಳ ಕುರಿತ ದೂರು :  ಸಹಾಯವಾಣಿ ಸ್ಥಾಪನೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13   ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೇಬಲ್ ಟಿವಿ ಮತ್ತು ಉಪಗ್ರಹ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ದೂರುಗಳನ್ನು ಸಲ್ಲಿಸಲು 24×7 ಸಾರ್ವಜನಿಕ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಕೇಬಲ್ ಸೇವೆಯಲ್ಲಿ ಪ್ರಸಾರವಾಗುವ ಯಾವುದೇ ಕಾರ್ಯಕ್ರಮ ಸದಭಿರುಚಿ ಅಥವಾ ಸಭ್ಯತೆಯ ವಿರುದ್ಧ, ಮಿತ್ರ ರಾಷ್ಟ್ರಗಳ ಟೀಕೆ, ಧರ್ಮ, ಸಮುದಾಯ ಅಥವಾ ಧಾರ್ಮಿಕ ಸಮೂಹಗಳನ್ನು ನಿಂದಿಸುವ ಮಾತುಗಳು, ದೃಶ್ಯಗಳು ಅಥವಾ ಕೋಮುವಾದಿ ಭಾವನೆಗಳನ್ನು ಉತ್ತೇಜಿಸುವುದು, ಯಾವುದೇ ಅಸಹ್ಯಕರ, ಮಾನನಷ್ಟ ಮಾಡುವಂತ ಉದ್ದೇಶಪೂರ್ವಕ,

ಟಿವಿ ವಾಹಿನಿಗಳ ಕಾರ್ಯಕ್ರಮಗಳ ಕುರಿತ ದೂರು :  ಸಹಾಯವಾಣಿ ಸ್ಥಾಪನೆ Read More »

ಕರಾವಳಿ
Scroll to Top