ದೆಹಲಿ ಕಾರು ಸ್ಫೋಟದ ರೂವಾರಿ ಉಮರ್ ಮನೆ ಧ್ವಂಸಗೊಳಿಸಿದ ಭದ್ರತಾ ಪಡೆ

(ನ್ಯೂಸ್‌ ಕಡಬ) newskadaba.com,  ನ.14:   ದೆಹಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ್ದ ಕಾರು ಸ್ಫೋಟದ ರೂವಾರಿ ಉಮರ್ ಎಂದು ತನಿಖೆ ವೇಳೆ ತಿಳಿದುಬಂದಿದ್ದು, ಅದರ ಬೆನ್ನಲ್ಲೇ ಭದ್ರತಾ ಪಡೆಗಳು ಶುಕ್ರವಾರ ಉಗ್ರನ ಮನೆಯನ್ನು ಧ್ವಂಸಗೊಳಿಸಿವೆ. ದೆಹಲಿ ಸ್ಫೋಟದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಉಗ್ರರ ಹಿಂದಿನ ರಹಸ್ಯ ಒಂದೊಂದಾಗಿಯೇ ಹೊರಬರುತ್ತಿದೆ. ಡಾ.ಉಮರ್ ನಬಿ ತಾಯಿಯ ಡಿಎನ್‌ಎ ಪರೀಕ್ಷೆ ಮಾಡಿದಾಗ, ಸ್ಫೋಟದ ವೇಳೆ ಕಾರಿನಲ್ಲಿ ಸಿಕ್ಕಿದ್ದ ಶವದ ಡಿಎನ್‌ಎಗೆ ಹೊಂದಾಣಿಕೆಯಾಗಿದೆ. ಇದರಿಂದ ಸ್ಫೋಟದ ಪ್ರಮುಖ ರೂವಾರಿ ಡಾ.ಉಮರ್ ನಬಿ ಎಂಬುದು ಬೆಳಕಿಗೆ […]

ದೆಹಲಿ ಕಾರು ಸ್ಫೋಟದ ರೂವಾರಿ ಉಮರ್ ಮನೆ ಧ್ವಂಸಗೊಳಿಸಿದ ಭದ್ರತಾ ಪಡೆ Read More »

ಬ್ರೇಕಿಂಗ್ ನ್ಯೂಸ್

ಇಂದು ಬಿಹಾರ ಚುನಾವನಾ ಪಲಿತಾಂಶ ಪ್ರಕಟ

(ನ್ಯೂಸ್‌ ಕಡಬ) newskadaba.com,  ನ.14:   ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ನಿತೀಶ್ ಕುಮಾರ್ ದಾಖಲೆಯ ಐದನೇ ಅವಧಿಗೆ ಗೆಲ್ಲುತ್ತಾರೋ ಅಥವಾ ತೇಜಸ್ವಿ ಯಾದವ್ ವಿರೋಧ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೋ ಎಂಬುದನ್ನು ರಾಜ್ಯದ ಜನತೆ ನಿರ್ಧರಿಸುತ್ತಾರೆ. ಮೊನ್ನೆ ನವೆಂಬರ್ 6 ಮತ್ತು 11 ರಂದು ನಡೆದ 243 ಸದಸ್ಯ ಬಲದ ವಿಧಾನಸಭೆಗೆ ನಡೆದ ಎರಡು ಹಂತದ ಚುನಾವಣೆಯಲ್ಲಿ ಬಿಹಾರವು ಐತಿಹಾಸಿಕ 67.13% ಮತದಾನ ದಾಖಲಿಸಿದೆ, ಈ ಬಾರಿ

ಇಂದು ಬಿಹಾರ ಚುನಾವನಾ ಪಲಿತಾಂಶ ಪ್ರಕಟ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಮೂಡಬಿದರೆಯಲ್ಲಿ ನಡೆದ ಕೊಲೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ

(ನ್ಯೂಸ್‌ ಕಡಬ) newskadaba.com,  ನ.14:  ಮೂಡಬಿದಿರೆಯ ಕಾಲೇಜೊಂದರಲ್ಲಿ ಕ್ಯಾಂಟೀನ್‌ ಕೆಲಸ ಮಾಡುತ್ತಿದ್ದ ಚೇತನ್‌ ಎಂಬವರನ್ನು ಕೊಲೆ ಮಾಡಿದ ಆರೋಪಿ ಚಿದಾನಂದ ಪರಶು ನಾಯ್ಕನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಮಂಗಳೂರಿನ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ ಈ ತೀರ್ಪು ನೀಡಿದೆ. ಮೂಡಬಿದಿರೆಯ ಕಾಲೇಜೊಂದರ ಕ್ಯಾಂಟೀನ್‌ನಲ್ಲಿ ಜೊತೆಗೆ ಕೆಲಸ ಮಾಡಿಕೊಂಡಿರುವ ಚೇತನ್ (22) ಮತ್ತು ಚಿದಾನಂದ ಎಂಬವರಿಗೆ ಗೆ ಕ್ಯಾಂಟೀನ್ ನಲ್ಲಿ ಕೆಲಸದ ವಿಚಾರದಲ್ಲಿ ಮತ್ತು ವೈಯುಕ್ತಿಕ ವಿಚಾರದಲ್ಲಿ ಪರಸ್ಪರ ತಕರಾರು ನಡೆದಿತ್ತು. ಆರೋಪಿ

ಮಂಗಳೂರು: ಮೂಡಬಿದರೆಯಲ್ಲಿ ನಡೆದ ಕೊಲೆ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ Read More »

ಕರಾವಳಿ, ಕರ್ನಾಟಕ

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಗೆಲುವು

(ನ್ಯೂಸ್‌ ಕಡಬ) newskadaba.com,  ನ.13:  ಕರ್ನಾಟಕ ಮತ್ತು ತಮಿಳು ನಾಡು ಮಧ್ಯೆ ಕಾವೇರಿ ನೀರು ಹಂಚಿಕೆಯ ಮೇಕೆದಾಟು ಯೋಜನೆ ವಿವಾದದಲ್ಲಿ ಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ನೀರಿನ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಉದ್ದೇಶಕ್ಕಾಗಿ ರಚಿಸಲಾದ ತಜ್ಞರ ಸಮಿತಿ ನಿರ್ವಹಿಸುವುದು ಉತ್ತಮ ಎಂದು ಪುನರುಚ್ಚರಿಸಿದೆ. ಕರ್ನಾಟಕದ ಮೇಕೆದಾಟು ಅಣೆಕಟ್ಟಿನ ವಿವರವಾದ ಯೋಜನಾ ವರದಿ (DPR) ನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಇತ್ತೀಚೆಗೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಅನುಮೋದನೆಗಳು ನ್ಯಾಯಾಂಗದಿಂದ ಬರಬೇಕಿರುವುದು ಅಲ್ಲ. ಕಾವೇರಿ

ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ಗೆಲುವು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

3 ಚಿನ್ನ, 2 ಬೆಳ್ಳಿ ಗೆದ್ದ ಭಾರತ

(ನ್ಯೂಸ್‌ ಕಡಬ) newskadaba.com,  ನ.13:  ಏಷ್ಯನ್ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಕಾಂಪೌಂಡ್ ವಿಭಾಗದಲ್ಲಿ ತನ್ನ ಪ್ರಬಲ ಪ್ರದರ್ಶನವನ್ನು ಮುಂದುವರಿಸಿದ್ದು, ಗುರುವಾರ ಮೂರು ಚಿನ್ನ ಮತ್ತು ಎರಡು ಬೆಳ್ಳಿ ಪದಕಗಳನ್ನು ಗೆದ್ದಿದೆ. ಮಹಿಳೆಯರ ವಿಭಾಗದಲ್ಲಿ ದೀಪ್ಶಿಕಾ, ಜ್ಯೋತಿ ಸುರೇಖಾ ವೆನ್ನಂ ಮತ್ತು ಪ್ರತೀಕಾ ಪ್ರದೀಪ್ ಅವರಿದ್ದ ಕಾಂಪೌಂಡ್‌ ತಂಡ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 236-234 ಅಂತರದ ಜಯ ಸಾಧಿಸಿ ಚಿನ್ನಕ್ಕೆ ಗುರಿಯಿಟ್ಟಿತು. ಸೆಮಿಫೈನಲ್‌ನಲ್ಲಿ 234– 227 ರಿಂದ ಆತಿಥೇಯ ಬಾಂಗ್ಲಾದೇಶ ತಂಡವನ್ನು ಸೋಲಿಸಿತ್ತು. ಫೈನಲ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ

3 ಚಿನ್ನ, 2 ಬೆಳ್ಳಿ ಗೆದ್ದ ಭಾರತ Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

KGF, ಕಾಂತಾರ ಯಶಸ್ಸು, ಇದೀಗ ಕ್ರೀಡಾ ಲೋಕಕ್ಕೂ ‘ಹೊಂಬಾಳೆ’ ಎಂಟ್ರಿ, RCB ಖರೀದಿಗೆ ಮುಂದು!

(ನ್ಯೂಸ್‌ ಕಡಬ) newskadaba.com,  ನ.13:  ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳ ಮೂಲಕ ಪ್ರಪಂಚದಾದ್ಯಂತ ಕನ್ನಡ ಚಿತ್ರರಂಗದ ಹಿರಿಮೆಯನ್ನು ಹೆಚ್ಚಿಸಿದ ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ‘ಫಿಲಂಸ್ ಈಗ ಕ್ರೀಡಾ ಲೋಕ ಪ್ರವೇಶಿಸಲು ಸಜ್ಜಾಗಿದೆ. ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯನ್ನು ಖರೀದಿಸುವ ಮಾತುಗಳು ಕೇಳಿಬರುತ್ತಿವೆ. ಮಾರುಕಟ್ಟೆಯಲ್ಲಿ 2 ಬಿಲಿಯನ್ ಮೌಲ್ಯ ಹೊಂದಿರುವ RCB ಮೂಲಗಳ ಪ್ರಕಾರ ಸದ್ಯದ ಮಾರುಕಟ್ಟೆಯಲ್ಲಿ ಬರೊಬ್ಬರಿ 2 ಬಿಲಿಯನ್ ಮೌಲ್ಯ ಹೊಂದಿರುವ

KGF, ಕಾಂತಾರ ಯಶಸ್ಸು, ಇದೀಗ ಕ್ರೀಡಾ ಲೋಕಕ್ಕೂ ‘ಹೊಂಬಾಳೆ’ ಎಂಟ್ರಿ, RCB ಖರೀದಿಗೆ ಮುಂದು! Read More »

ಕರ್ನಾಟಕ, ಸಿನಿಮಾ

ಬಾಂಬ್ ಸ್ಫೋಟ: ‘ಮನ ಬಂದಂತೆ ಕಾಂಗ್ರೆಸ್ಸಿಗರ ಮಾತು’- ವಿಜಯೇಂದ್ರ ಟೀಕೆ

(ನ್ಯೂಸ್‌ ಕಡಬ) newskadaba.com,  ನ.13:  ಬಾಂಬ್ ಸ್ಫೋಟದಂಥ ಸಂದಿಗ್ಧ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಒಂದೇ ಧ್ವನಿಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಉಗ್ರಗಾಮಿ ಸಂಘಟನೆಗಳು ಇಷ್ಟು ಕೆಟ್ಟದಾಗಿ ನಡೆದುಕೊಳ್ಳಬೇಕಾದರೆ, ನಾವೆಲ್ಲರೂ ಭಾರತೀಯರು ಎಂಬ ಮನೋಭಾವದಿಂದ ದ್ವಂದ್ವ ಹೇಳಿಕೆ ನೀಡದೇ ದೇಶದ ಪರವಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಬೇಕಿರುವುದು ಆದ್ಯತೆ ಆಗಬೇಕಿತ್ತು. ರಾಹುಲ್ ಗಾಂಧಿಯವರು ವಿಪಕ್ಷ ನಾಯಕರಾಗಿದ್ದರೂ ದೆಹಲಿಯ ಈ ಭಯೋತ್ಪಾದಕರ ದಾಳಿ

ಬಾಂಬ್ ಸ್ಫೋಟ: ‘ಮನ ಬಂದಂತೆ ಕಾಂಗ್ರೆಸ್ಸಿಗರ ಮಾತು’- ವಿಜಯೇಂದ್ರ ಟೀಕೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

32 ವಾಹನ ಬಳಸಿ 4 ನಗರಗಳಲ್ಲಿ ಏಕಕಾಲದಲ್ಲಿ ಸರಣಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರರು!

(ನ್ಯೂಸ್‌ ಕಡಬ) newskadaba.com,  ನ.13:  ಬಂಧನಕ್ಕೆ ಒಳಗಾದ ಉಗ್ರರು ಸುಮಾರು 32 ಹಳೆಯ ವಾಹನಗಳನ್ನು ಬಳಸಿ ದೇಶದ 4 ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಏಕಕಾಲದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಬಂಧಿತರನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ದೆಹಲಿಯ ಹಲವು ಕಡೆ, ಅಯೋಧ್ಯೆ, ವಾರಾಣಸಿ ದೇವಸ್ಥಾನ ಸೇರಿದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ದೇಶದ ಹಲವು ಜಾಗಗಳಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಐ20 ಕಾರು ಸ್ಫೋಟದಲ್ಲಿ ಕೆಣಪು ಕೋಟೆ

32 ವಾಹನ ಬಳಸಿ 4 ನಗರಗಳಲ್ಲಿ ಏಕಕಾಲದಲ್ಲಿ ಸರಣಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಉಗ್ರರು! Read More »

ರಾಷ್ಟ್ರೀಯ ನ್ಯೂಸ್

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ NITಯಿಂದ ಉಚಿತ ಗೇಟ್ ತರಬೇತಿ

(ನ್ಯೂಸ್‌ ಕಡಬ) newskadaba.com,  ನ.13 ವಾರಂಗಲ್ : ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಒಂದು ಪ್ರಮುಖ ಉಪಕ್ರಮವನ್ನು ಪ್ರಾರಂಭಿಸಿದೆ. ಈ ಸಂಸ್ಥೆಯು ಈಗ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ .ಗೇಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಮಾರ್ಗದರ್ಶನ ನೀಡುವುದು ಈ ತರಬೇತಿಯ ಉದ್ದೇಶವಾಗಿದೆ. ಈ ಎಂಟು ವಾರಗಳ ತರಬೇತಿ ಕಾರ್ಯಕ್ರಮವು ನವೆಂಬರ್ 17 ರಂದು ಪ್ರಾರಂಭವಾಗುತ್ತದೆ ಮತ್ತು ಜನವರಿ 9 ರವರೆಗೆ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು ಅಧಿಕೃತ NIT ವಾರಂಗಲ್ ವೆಬ್‌ಸೈಟ್‌ಗೆ

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ NITಯಿಂದ ಉಚಿತ ಗೇಟ್ ತರಬೇತಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಚೀನಾ: ಸುಮಾರು 1,500 ವರ್ಷಗಳಷ್ಟು ಹಳೆಯ ದೇವಾಲಯದಲ್ಲಿ ಭಾರಿ ಬೆಂಕಿ

(ನ್ಯೂಸ್‌ ಕಡಬ) newskadaba.com,  ನ.13:  ಚೀನಾದ ಜಿಯಾಂಗ್ಸು ಪ್ರಾಂತ್ಯದ ಜಾಂಗ್ಜಿಯಾಗ್ಯಾಂಗ್‌ನಲ್ಲಿರುವ 1,500 ವರ್ಷಗಳಷ್ಟು ಹಳೆಯದಾದ ಯೋಂಗ್‌ಕಿಂಗ್ ದೇವಾಲಯದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಶತಮಾನಗಳಷ್ಟು ಹಳೆಯದಾದ ಬೌದ್ಧ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾದ ಈ ಪ್ರಾಚೀನ ದೇವಾಲಯದ, ಸಂಕೀರ್ಣದೊಳಗಿನ ಬಹುಮಹಡಿ ಮಂಟಪಗಳು ಸುಟ್ಟುಹೋಗಿವೆ. ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರಲಾಗಿದ್ದು, ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ತುರ್ತು

ಚೀನಾ: ಸುಮಾರು 1,500 ವರ್ಷಗಳಷ್ಟು ಹಳೆಯ ದೇವಾಲಯದಲ್ಲಿ ಭಾರಿ ಬೆಂಕಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top