ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರು ಭೀಕರ ಅಪಘಾತ

(ನ್ಯೂಸ್‌ ಕಡಬ) newskadaba.com,  ನ.29: ಬೆಂಗಳೂರಿನಿಂದ ಗುರುರಾಯರ ದರ್ಶನಕ್ಕೆಂದು ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಈ ದಾರುಣ ಘಟನೆ ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ಗ್ರಾಮದ ಕೋಟೆಕಲ್ ಬಳಿ ಜರುಗಿದೆ. ಮೃತರೆಲ್ಲಾ ಬೆಂಗಳೂರು ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ಗ್ರಾಮದ ಕೋಟೆಕಲ್ ಬಳಿ ಭೀಕರ ಅಪಘಾತ ಸಂಭವಿಸಿದೆ. ವಿಶಾಖಪಟ್ಟಣಂನಿಂದ ಆದೋನಿ ಕಡೆಗೆ ಹೊರಟಿದ್ದ ಫಾರ್ಚುನರ್ ಕಾರು ಹಾಗೂ ಬೆಂಗಳೂರಿನಿಂದ ಮಂತ್ರಾಲಯ ಕಡೆಗೆ […]

ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಕಾರು ಭೀಕರ ಅಪಘಾತ Read More »

ಕರ್ನಾಟಕ

ಕೆಂಪಳ್ಳ: ಸರಕು ಸಾಗಿಸುತ್ತಿದ್ದ ಟೆಂಪೋ ಪಲ್ಟಿ-ಚಾಲಕನಿಗೆ ಗಾಯ

(ನ್ಯೂಸ್‌ ಕಡಬ) newskadaba.com,  ನ.29: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಪರಿಸರದ ಕೆಂಪಳ್ಳ ಬಳಿ ಚಾಲಕನ ನಿಯಂತ್ರಣ ತಪ್ಪಿ ಸರಕು ಸಾಗಿಸುತ್ತಿದ್ದ ಟೆಂಪೊ ಪಲ್ಟಿಯಾಗಿ, ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ನಡೆದಿದೆ. ಈ ಅಪಘಾತದಲ್ಲಿ ಟೆಂಪೊ ಚಾಲಕ ಗಾಯಗೊಂಡಿದ್ದು, ಘಟನೆಯಲ್ಲಿ ಬಸ್ಸಿನ ಮುಂಭಾಗ ಜಖಂಗೊಂಡಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.  

ಕೆಂಪಳ್ಳ: ಸರಕು ಸಾಗಿಸುತ್ತಿದ್ದ ಟೆಂಪೋ ಪಲ್ಟಿ-ಚಾಲಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಫ್ ಸಿರಪ್ ಕಳ್ಳಸಾಗಣೆ: ಉತ್ತರ ಪ್ರದೇಶದಲ್ಲಿ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ನ.29: ವಾರಣಾಸಿಯಲ್ಲಿ ಕೋಡೀನ್ ಹೊಂದಿರುವ ಕಾಫ್ ಸಿರಪ್ (ಕೆಮ್ಮಿನ ಸಿರಪ್) ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕಳೆದ ನವೆಂಬರ್ 15ರಂದು ಕಾರ್ಯಾಚರಣೆ ವೇಳೆ 26 ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು. ಅದರ ಭಾಗವಾಗಿ ಕಾರ್ಯಾಚರಣೆ ಮುಂದುವರಿಸಿದ್ದು, 12 ಅನುಮಾನಾಸ್ಪದ ಕಂಪನಿಗಳು ಕಂಡುಬಂದಿದ್ದವು ಎಂದು ಇಲಾಖೆಯ ಇನ್ಸ್‌ಪೆಕ್ಟರ್ ಜನಬ್ ಅಲಿ ತಿಳಿಸಿದ್ದಾರೆ. “ಈ 12 ಅನುಮಾನಾಸ್ಪದ ಕಂಪನಿಗಳ ಕುರಿತು

ಕಾಫ್ ಸಿರಪ್ ಕಳ್ಳಸಾಗಣೆ: ಉತ್ತರ ಪ್ರದೇಶದಲ್ಲಿ 12 ಫಾರ್ಮಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲು Read More »

ಬ್ರೇಕಿಂಗ್ ನ್ಯೂಸ್

ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ : ಮೋದಿ

(ನ್ಯೂಸ್‌ ಕಡಬ) newskadaba.com,  ನ.28: ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರು ವುದು ನನಗೆ ಸಿಕ್ಕ ಪುಣ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಉಡುಪಿ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ

ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ : ಮೋದಿ Read More »

ಕರಾವಳಿ, ಕರ್ನಾಟಕ

ಮಂಗಳೂರಿನಿಂದ ಪ್ರಧಾನಿ ನಿರ್ಗಮನ

(ನ್ಯೂಸ್‌ ಕಡಬ) newskadaba.com,  ನ.28: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ನಿರ್ಗಮಿಸಿದರು. ಉಡುಪಿಯಲ್ಲಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಪ್ರಧಾನಿ ಅವರು, ಬಳಿಕ ವಾಯುಪಡೆ ವಿಮಾನದಲ್ಲಿ ಗೋವಾ ತೆರಳಿದರು. ವಿಮಾನ ನಿಲ್ದಾಣದಲ್ಲಿ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಮತ್ತಿತರರು ಉಪಸ್ಥಿತರಿದ್ದು, ಪ್ರಧಾನಿಗಳನ್ನು ಬೀಳ್ಕೊಟ್ಟರು.

ಮಂಗಳೂರಿನಿಂದ ಪ್ರಧಾನಿ ನಿರ್ಗಮನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದೆಹಲಿ – ವಾರಾಣಸಿ ಬಸ್ ಬೆಂಕಿಗಾಹುತಿ – ತಪ್ಪಿದ ದೊಡ್ಡ ದುರಂತ

(ನ್ಯೂಸ್‌ ಕಡಬ) newskadaba.com,  ನ.28: ಮೂವತ್ತರಿಂದ ನಲವತ್ತು ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ದೆಹಲಿ-ವಾರಾಣಸಿ ಸ್ಲೀಪರ್ ಬಸ್ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗದೆ ಭಾರಿ ದುರಂತವೊಂದು ತಪ್ಪಿದೆ ಎನ್ನಲಾಗಿದೆ. ಬಸ್ ವಾರಾಣಸಿಗೆ ಹೋಗುತ್ತಿತ್ತು, ಮೇಲಿನ ಡೆಕ್​ನಲ್ಲಿ ಇರಿಸಿಲಾಗಿದ್ದ ಸಾಮಾಗ್ರಿಗಳಿಂದ ಹಠಾತ್ ಹೊಗೆ ಬೆಂಕಿಗೆ ಕಾರಣವಾಗಿತ್ತು. ಬಸ್ ಚಾಲಕ ಮತ್ತು ನಿರ್ವಾಹಕ ಕೂಡಲೇ ಎಚ್ಚರಿಕೆ ನೀಡಿದ್ದರು. ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಲು ಪ್ರಯತ್ನಿಸಿದರು ಅಷ್ಟರಲ್ಲಾಗಲೇ ಬೆಂಕಿ ಹೊತ್ತಿಕೊಳ್ಳಲು ಶುರುವಾಗಿತ್ತು ಎನ್ನಲಾಗಿದೆ. ಬಸ್ಸಿನ ಮೇಲ್ಛಾವಣಿಯಲ್ಲಿದ್ದ ಭಾರವಾದ ಲಗೇಜಿನಲ್ಲಿ ಮೊದಲು ಬೆಂಕಿ

ದೆಹಲಿ – ವಾರಾಣಸಿ ಬಸ್ ಬೆಂಕಿಗಾಹುತಿ – ತಪ್ಪಿದ ದೊಡ್ಡ ದುರಂತ Read More »

ಬ್ರೇಕಿಂಗ್ ನ್ಯೂಸ್

ಡಿ. 4ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್

(ನ್ಯೂಸ್‌ ಕಡಬ) newskadaba.com,  ನ.28: ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಡಿಸೆಂಬರ್ 4 ಮತ್ತು 5ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಭೇಟಿಯ ಸಮಯದಲ್ಲಿ ಪುಟಿನ್ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಡಿಸೆಂಬರ್ 5ರಂದು ನಡೆಯುವ 23 ನೇ ಭಾರತ-ರಷ್ಯಾ ಸಮ್ಮೇಳನದಲ್ಲಿ ಮೋದಿ ಹಾಗೂ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಎರಡು ದೇಶಗಳ ಸಂಬಂಧಗಳು ಮತ್ತು ಜಾಗತಿಕ

ಡಿ. 4ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ : ಪ್ರಧಾನಿ ಪಠಿಸಿದ ಭಗವದ್ಗೀತೆ 15ನೇ ಅಧ್ಯಾಯ – ಮಹತ್ವದ ಸಂದೇಶ

(ನ್ಯೂಸ್‌ ಕಡಬ) newskadaba.com,  ನ.28: ಉಡುಪಿ ನಗರ ಇಂದು ಕೇಸರಿಮಯವಾಗಿದ್ದು, ಮಂತ್ರ ಗೀತಾಕಂಠಗಳ ಉದ್ಘಾರ ಬಹುವಾಗಿ ಕೇಳಿಬರುತ್ತಿತ್ತು. ವಿಶ್ವಗೀತಾ ಪಾರಾಯಣ ವೇದಿಕೆ ಬಳಿ ಭರ್ಜರಿ ಲಕ್ಷಕಂಠ ಭಗವದ್ಗೀತೆ ಪಠಣ ನಡೆಯಿತು, ಸಾವಿರಾರು ಭಕ್ತರು ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದರು. ಪ್ರಧಾನಿಯವರೊಂದಿಗೆ ಸ್ಥಳೀಯ ಬಿಜೆಪಿ ನಾಯಕರು ಕೂಡ ಭಾಗವಹಿಸಿದ್ದರು. ರೋಡ್ ಶೋ ಮುಗಿಸಿ ಶ್ರೀಕೃಷ್ಣದ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12.15ಕ್ಕೆ ವೇದಿಕೆಯ ಬಳಿ ಬಂದು ʻಪುರುಷೋತ್ತಮ ಯೋಗʼ ಎನ್ನುವ 15ನೇ ಅಧ್ಯಾಯದ ಶ್ಲೋಕ ಪಠಿಸಿದರು. ಈ

ಉಡುಪಿ : ಪ್ರಧಾನಿ ಪಠಿಸಿದ ಭಗವದ್ಗೀತೆ 15ನೇ ಅಧ್ಯಾಯ – ಮಹತ್ವದ ಸಂದೇಶ Read More »

ಕರಾವಳಿ

ದೇಶದ ಮೊದಲ ಖಾಸಗಿ ವಾಣಿಜ್ಯ ರಾಕೆಟ್ ವಿಕ್ರಂ–1 ಅನಾವರಣ

(ನ್ಯೂಸ್‌ ಕಡಬ) newskadaba.com,  ನ.28: ಹೈದರಾಬಾದ್ ಮೂಲದ ಸ್ಟಾರ್ಟ್‌ಅಪ್ ‘ಸ್ಕೈರೂಟ್ ಏರೋಸ್ಪೇಸ್’ ನಿರ್ಮಿಸಿರುವ ಭಾರತದ ಮೊದಲ ಖಾಸಗಿ ವಾಣಿಜ್ಯ ರಾಕೆಟ್‌ ವಿಕ್ರಂ–1 ಅನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ವರ್ಚುವಲ್ ರೀತಿಯಲ್ಲಿ ಅನಾವರಣಗೊಳಿಸಿದರು. ಜೊತೆಗೆ, ಸಂಸ್ಥೆಯ ನೂತನ ಮತ್ತು ಬೃಹತ್‌ ಕ್ಯಾಂಪಸ್‌ವನ್ನೂ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೊದಲ ಬಾರಿಗೆ ‘ಜೆನ್–ಝೀ’ ಎಂಬ ಪದವನ್ನು ಬಳಸುತ್ತಾ, ರಾಕೆಟ್ ನಿರ್ಮಾಣದಲ್ಲಿ ತೊಡಗಿದ್ದ ಯುವ ಇಂಜಿನಿಯರ್‌ಗಳು, ವಿನ್ಯಾಸಕರು ಮತ್ತು ವಿಜ್ಞಾನಿಗಳ ಸೃಜನಶೀಲತೆಯನ್ನು ಮೆಚ್ಚಿಕೊಂಡರು. “ಭಾರತದ ಜೆನ್–ಝೀ ಪೀಳಿಗೆಯವರು ಹೊಸತನಕ್ಕೆ ದಾರಿ

ದೇಶದ ಮೊದಲ ಖಾಸಗಿ ವಾಣಿಜ್ಯ ರಾಕೆಟ್ ವಿಕ್ರಂ–1 ಅನಾವರಣ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ : ಸ್ವರ್ಣಕವಚದ ಕನಕನಕಿಂಡಿಯಿಂದ ಪೊಡವಿಗೊಡೆಯನ ಕಣ್ತುಂಬಿಕೊಂಡ ಪ್ರಧಾನಿ ಮೋದಿ

(ನ್ಯೂಸ್‌ ಕಡಬ) newskadaba.com,  ನ.28: ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಪ್ರಸಿದ್ಧ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ. ಪ್ರಧಾನಿಯವರು ಮಠದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿಶೇಷವಾಗಿ ಸ್ವರ್ಣ ಲೇಪಿತ ಮಂಟಪದ ಉದ್ಘಾಟನೆ ಕೂಡ ನೆರವೇರಿಸಿದರು. ಉದ್ಘಾಟನೆಯ ಸಂದರ್ಭದಲ್ಲಿ ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು. ಮೋದಿಯವರು ನಂತರ ಮುಖ್ಯಪ್ರಾಣ ದೇವರ ಗರುಡ ದರ್ಶನ ಮತ್ತು ಮಠದ ವಿವಿಧ ಗುಡಿಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ

ಉಡುಪಿ : ಸ್ವರ್ಣಕವಚದ ಕನಕನಕಿಂಡಿಯಿಂದ ಪೊಡವಿಗೊಡೆಯನ ಕಣ್ತುಂಬಿಕೊಂಡ ಪ್ರಧಾನಿ ಮೋದಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
Scroll to Top