ಕಡಬದ ಆಶಾ ಕಾರ್ಯಕರ್ತೆ ನಾಪತ್ತೆ ➤ ಕರುಳ ಕುಡಿಗಳ ಆಕ್ರಂದನ

(ನ್ಯೂಸ್ ಕಡಬ) newskadaba.com ಕಡಬ,ಜೂ.10: ಆಶಾ ಕಾರ್ಯಕರ್ತೆಯೋರ್ವರು ತನ್ನಿಬ್ಬರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ನಾಪತ್ತೆಯಾದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಆಶಾ ಕಾರ್ಯಕರ್ತೆ ಸೌಮ್ಯಾ ಸೋಮವಾರದಂದು ಮಂಗಳೂರು ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದು, ಆ ಬಳಿಕ ನಾಪತ್ತೆಯಾಗಿದ್ದಾರೆ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮನೆಮಂದಿಯನ್ನು ಆತಂಕಕ್ಕೆ ಒಳಪಡಿಸಿದೆ. ಇತ್ತ ತನ್ನಿಬ್ಬರು ಕರುಳ ಕುಡಿಗಳನ್ನು ಮನೆಯಲ್ಲೇ ಬಿಟ್ಟು ತೆರಳಿರುವ ಸೌಮ್ಯಾರ ಆಗಮನಕ್ಕಾಗಿ ಮಕ್ಕಳು ಕಾಯುತ್ತಿದ್ದಾರೆ. ಈ ಬಗ್ಗೆ ಆಕೆಯ […]

ಕಡಬದ ಆಶಾ ಕಾರ್ಯಕರ್ತೆ ನಾಪತ್ತೆ ➤ ಕರುಳ ಕುಡಿಗಳ ಆಕ್ರಂದನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕಾಫಿನಾಡಿಗೂ ಕಾಲಿಟ್ಟ ಮಿಡತೆಗಳು ➤ ಮಲೆನಾಡಿನ ಅಡಿಕೆ ಬೆಳೆಗಾರರು ಹೈರಾಣು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು,ಜೂ.10:  ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಮಿಡತೆಗಳು ಈಗ ಕಾಫಿನಾಡಿಗೂ ಕಾಲಿಟ್ಟಿದ್ದು, ಮಲೆನಾಡಿಗರು ಕಂಗಾಲಾಗಿದ್ದಾರೆ.. ಈಗಾಗಲೇ ಕಳೆದ ಎರಡು ದಶಕಗಳಿಂದ ಅಡಕೆಗೆ ಹಳದಿ ಎಲೆ ರೋಗ ತಗುಲಿದೆ. ಕಳೆದ ಎರಡು ವರ್ಷಗಳ ನಿರಂತರ ಭಾರೀ ಮಳೆಯಿಂದ ಅಡಕೆ ತೋಟಕ್ಕೆ ಕೊಳೆ ರೋಗ ಕೂಡ ಆವರಿಸಿತ್ತು. ತೋಟದಲ್ಲಿ ಎರಡು ಮೂರು ಅಡಿ ನೀರು ನಿಂತಿತ್ತು.   ಇದರಿಂದ ಮಲೆನಾಡಿಗರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದರು. ಹೀಗೆ ಹಲವು ಸಮಸ್ಯೆಗಳ ನಡುವೆ ಕೆಲವರು ಅಡಕೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದರು.

ಕಾಫಿನಾಡಿಗೂ ಕಾಲಿಟ್ಟ ಮಿಡತೆಗಳು ➤ ಮಲೆನಾಡಿನ ಅಡಿಕೆ ಬೆಳೆಗಾರರು ಹೈರಾಣು Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕೊರೊನಾಗೆ ಶಾಸಕ ಬಲಿ

(ನ್ಯೂಸ್ ಕಡಬ) newskadaba.com.ಚೆನ್ನೈ,ಜೂ.10: ಮಾರಕ ಕೊರೊನಾ ವೈರಸ್‍ಗೆ ತಮಿಳುನಾಡಿನ ಡಿಎಂಕೆ ಶಾಸಕ ಜೆ.ಅನ್ಬಳಗನ್ ಬಲಿಯಾಗಿದ್ದಾರೆ. ಕಳೆದ ಜೂನ್ 2 ರಂದು ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. 61 ವರ್ಷದ ಅನ್ಬಳಗನ್‍ಗೆ ಕೃತಕ ಉಸಿರಾಟದ ಹಾಗೂ ನಿರಂತರ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ಕೊರೊನಾಗೆ ಬಲಿಯಾದ ತಮಿಳುನಾಡಿನ ಮೊದಲ ರಾಜಕೀಯ ಮುಖಂಡ ಅನ್ಬಳಗನ್ ಅವರಾಗಿದ್ದಾರೆ. ಇವರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಇ. ಪಳನಿಸ್ವಾಮಿ,ಅನ್ಬಳಗನ್ ಕುಟುಂಬಕ್ಕೆ ಸಾಂತ್ವನ

ಕೊರೊನಾಗೆ ಶಾಸಕ ಬಲಿ Read More »

ಕರಾವಳಿ

ಜಮ್ಮು- ಕಾಶ್ಮೀರದಲ್ಲಿ ಮತ್ತೆ ಐವರು ಉಗ್ರರ ಹತ್ಯೆ

(ನ್ಯೂಸ್ ಕಡಬ) newskadaba.com ಶೋಪಿಯಾನ್ ,ಜೂ.10: ಕಳೆದ ಎರಡು ವಾರದಿಂದ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಉಗ್ರರನ್ನು ಹೊಡೆದುರುಳಿಸುತ್ತಿದ್ದು ಬುಧವಾರ ಮತ್ತೆ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸುಗೂ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನಾಪಡೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಐವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು ಕಳೆದ 72 ಗಂಟೆಗಳ ಅವಧಿಯಲ್ಲಿ ಇದು ಮೂರನೇ ಭಾರೀ ನಡೆದ ಕಾರ್ಯಾಚರಣೆ ಮಾಡಲಾಗಿದೆ. ಸೋಮವಾರ ಭದ್ರತಾ ಪಡೆಗಳು ಹಿಜ್ಬುಲ್ ಮುಜಾಹಿದ್ದಿನ್ಗೆ ಸೇರಿದ ನಾಲ್ವರು ಉಗ್ರರನ್ನು ಹಾಗೂ

ಜಮ್ಮು- ಕಾಶ್ಮೀರದಲ್ಲಿ ಮತ್ತೆ ಐವರು ಉಗ್ರರ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಕೇರಳ ಮಾಜಿ ರಣಜಿ ಕ್ರಿಕೆಟಿಗ ಸಾವು ➤ ಮಗ ಅಶ್ವಿನ್ ಬಂಧನ..!

(ನ್ಯೂಸ್ ಕಡಬ) newskadaba.com ತಿರುವನಂತಪುರಂ,ಜೂ.10: ಕೇರಳ ರಣಜಿ ಟ್ರೋಫಿಯ ಮಾಜಿ ಕ್ರಿಕೆಟಿಗ ಕೆ. ಜಯಮೋಹನ್ ಥಂಪಿ(64) ಇಲ್ಲಿನ ಮನಕ್ಕಾಡುವಿನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ತಂದೆಯನ್ನು ಹತ್ಯೆ ಮಾಡಿದ ಶಂಕೆಯಡಿ ಮಗ ಅಶ್ವಿನ್ ಥಂಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಕೆ. ಜಯಮೋಹನ್ 1982ರಿಂದ 84ರ ಅವಧಿಯಲ್ಲಿ ಕೇರಳ ಪರ 6 ರಣಜಿ ಪಂದ್ಯಗಳನ್ನು ಆಡಿದ್ದು,114 ರನ್ ಬಾರಿಸಿದ್ದರು. ಕೇರಳ ತಂಡದಲ್ಲಿ ಜಯಮೋಹನ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು.ಇದಾದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ತ್ರಾವಂಕೂರುವಿನಲ್ಲಿ

ಕೇರಳ ಮಾಜಿ ರಣಜಿ ಕ್ರಿಕೆಟಿಗ ಸಾವು ➤ ಮಗ ಅಶ್ವಿನ್ ಬಂಧನ..! Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬದಲ್ಲಿ ಪೇಟೆಯಲ್ಲಿ ಲೋಕಾಯ್ತುಕ ರೈಡ್ ➤ ಮಾಸ್ಕ್ ಹಾಕದವರಿಗೆ ಭರ್ಜರಿ ಕ್ಲಾಸ್

(ನ್ಯೂಸ್ ಕಡಬ) newskadaba.com ಕಡಬ ಜೂ.10:  ಕಡಬ ಪೇಟೆಯಲ್ಲಿ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳದ ಸಾರ್ವಜನಿಕರಿಗೆ ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ವಿಜಯ ಪ್ರಸಾದ್ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.   ಮಂಗಳವಾರದಂದು ಕಡಬ ಪೇಟೆಯಲ್ಲಿ ಅಧಿಕಾರಿಗಳ ಜತೆ ರೌಂಡ್ಸ್ ಮಾಡಿದ ಲೋಕಾಯುಕ್ತ ಡಿವೈಎಸ್ಪಿ, ಅಂಗಡಿ, ಹೋಟೆಲ್, ಬ್ಯಾಂಕ್, ಕಛೇರಿಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ ಇರುವವರಿಗೆ ಕ್ಲಾಸ್ ತೆಗೆದುಕೊಂಡರು. ಈ ಸಂದರ್ಭದಲ್ಲಿ ಲೋಕಾಯುಕ್ತ ಹೆಡ್ ಕಾನ್ಸ್‌ಟೇಬಲ್

ಕಡಬದಲ್ಲಿ ಪೇಟೆಯಲ್ಲಿ ಲೋಕಾಯ್ತುಕ ರೈಡ್ ➤ ಮಾಸ್ಕ್ ಹಾಕದವರಿಗೆ ಭರ್ಜರಿ ಕ್ಲಾಸ್ Read More »

ಕರಾವಳಿ, ಕರ್ನಾಟಕ

ಕುಕ್ಕೆ ಸುಬ್ರಮಣ್ಯದಲ್ಲಿ ಎರಡನೇ ದಿನ 2 ಸಾವಿರಕ್ಕೂ ಅಧಿಕ ಭಕ್ತರು

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ,ಜೂ.10: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ 2.194 ಮಂದಿ ದೇವರ ದರ್ಶನ ಮಾಡಿದ್ದಾರೆ. ಮಂಗಳವಾರವೂ ಕೊಲ್ಲೂರಿನ ಶ್ರೀ ಮೂಕಾಂಬಿಕಾ  ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು ಮೊದಲ ದಿನ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಗಳಲ್ಲಿ ಭಕ್ತ ಸಮೂಹ ಹೆಚ್ಚಾಗಿತ್ತು. ಆದರೆ ಮಂಗಳವಾರ ಈ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತು.ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಗಳಲ್ಲಿ ಎರಡನೇ ದಿನ ಆಗಮಿಸಿದ ಭಕ್ತರಲ್ಲಿ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಭಕ್ತರಿಗೆ ಥರ್ಮಲ್ ಟೆಸ್ಟ್ ಮಾಡಿಸಿಯೇ ಒಳಗೆ ಬಿಡಲಾಗುತ್ತಿತ್ತು. ಕೊರೋನಾ

ಕುಕ್ಕೆ ಸುಬ್ರಮಣ್ಯದಲ್ಲಿ ಎರಡನೇ ದಿನ 2 ಸಾವಿರಕ್ಕೂ ಅಧಿಕ ಭಕ್ತರು Read More »

ಕರಾವಳಿ, ಕರ್ನಾಟಕ

ಆರ್ಥಿಕ ಸಂಕಷ್ಟವೇ ಮುಳುವಾಯ್ತು ➤ ಬೋಟ್ ನಲ್ಲಿ ನೇಣು ಹಾಕಿಕೊಂಡ ಯುವಕ

(ನ್ಯೂಸ್ ಕಡಬ) newskadaba.com ಉಡುಪಿ ,ಜೂ.10:  ಕೊರೊನಾ ಮಹಾಮಾರಿ ವಕ್ಕರಿಸಿ, ಲಾಕ್ ಡೌನ್ ಆದಾಗ ಇಡೀ ದೇಶವೇ ಸ್ತಬ್ಧವಾಗಿತ್ತು. ಅಲ್ಲದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ದೇಶ ಬಡವಾಗಿದೆ. ಹಲವು ಕಂಪೆನಿಗಳು ಆರ್ಥಿಕ ಹೊಡೆತಕ್ಕೆ ತತ್ತರಿಸಿ ಶಾಶ್ವತವಾಗಿ ಬೀಗ ಜಡಿದವು. ಹಲವರು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದರು. ಇನ್ನೂ ಕೆಲವು ಕಂಪೆನಿಗಳು ಅರ್ಧ ಸಂಬಳ ನೀಡಿ ದುಡಿಸಿಕೊಳ್ಳುತ್ತಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ಕಂಗಾಲಾದ ಹಲವು ಯುವಜನತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೌದು.. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಇದೀಗ ಪ್ರತಿಭಾವಂತ ಯುವಕ

ಆರ್ಥಿಕ ಸಂಕಷ್ಟವೇ ಮುಳುವಾಯ್ತು ➤ ಬೋಟ್ ನಲ್ಲಿ ನೇಣು ಹಾಕಿಕೊಂಡ ಯುವಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಈಶ್ವರಮಂಗಲ ➤ 25 ಅಡಿ ಆಳಕ್ಕೆ ಉರುಳಿ ಮನೆಯ ಮೇಲೆ ಪಲ್ಟಿಯಾದ KSRTC ಬಸ್

(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.10: ಪುತ್ತೂರಿನಿಂದ ಈಶ್ವರಮಂಗಲ ಕಡೆ ಸಂಚರಿಸುತ್ತಿದ್ದ  KSRTC ಬಸ್ ಈಶ್ವರಮಂಗಲ ಸಮೀಪದ ಸಾಂತ್ಯ ಎಂಬಲ್ಲಿ ಪಲ್ಟಿಯಾಗಿ ಮನೆಯೊಂದರ ಮೇಲೆ ಬಿದ್ದ ಘಟನೆ ಇಂದು  ಬೆಳಿಗ್ಗೆ ನಡೆದಿದೆ.   ಪುತ್ತೂರಿನಿಂದ ಈಶ್ವರಮಂಗಲ ಕಡೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಧರೆಗುರುಳಿ 25 ಅಡಿ ಆಳದಲ್ಲಿರುವ ಮಂಜುನಾಥ ರೈ ಎಂಬವರ ಮನೆಯ ಬದಿಯ  ದನದ ಹಟ್ಟಿಯ ಮೇಲೆ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 21 ಜನ ಪ್ರಯಾಣಿಕರಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ಬಸ್ಸಿನ ಚಾಲಕ ಹಾಗೂ

ಈಶ್ವರಮಂಗಲ ➤ 25 ಅಡಿ ಆಳಕ್ಕೆ ಉರುಳಿ ಮನೆಯ ಮೇಲೆ ಪಲ್ಟಿಯಾದ KSRTC ಬಸ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಪತ್ತೆಯಾಗಿದ್ದ ಯುವಕ ಶಿವಮೊಗ್ಗದಲ್ಲಿ ಪತ್ತೆ ➤ನೇತ್ರಾವತಿ ಸೇತುವೆಯ ಬಳಿ ಬೈಕ್ ನಿಲ್ಲಿಸಿದ್ದೆ ತಪ್ಪಾಯಿತೇ?

(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.10:ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ಯುವಕನೋರ್ವ ನಾಪತ್ತೆಯಾಗಿದ್ದ ಆದರೆ ಇದೀಗ ಯವಕ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದು. ಶಿವಮೊಗ್ಗದಲ್ಲಿ ಇರುವುದಾಗಿ ಸ್ವತಃ ಪ್ರವೀಣ್ ಸಫಲ್ಯನೇ ತನ್ನ ಮನೆಯವರಿಗೆ ಮಾಹಿತಿ ನೀಡಿದ್ದಾನೆ. ಇದರಿಂದ ಆತಂಕಕ್ಕೆ ಕಾರಣವಾಗಿದ್ದ ಪ್ರಕರಣ ಇತ್ಯರ್ಥವಾಗಿದೆ. ಸದ್ಯ ಯುವಕ ಕ್ಷೇಮವಾಗಿದ್ದು ಮನೆಮಂದಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ನಾಪತ್ತೆಯಾಗಿದ್ದ ಯುವಕ ಶಿವಮೊಗ್ಗದಲ್ಲಿ ಪತ್ತೆ ➤ನೇತ್ರಾವತಿ ಸೇತುವೆಯ ಬಳಿ ಬೈಕ್ ನಿಲ್ಲಿಸಿದ್ದೆ ತಪ್ಪಾಯಿತೇ? Read More »

ಕರಾವಳಿ
Scroll to Top