ಉಳ್ಳಾಲ ಎಸ್ಐ ಬಳಿಕ ಎಎಸ್ಐ ಗೂ ಕೊರೋನಾ‌ ಪಾಸಿಟಿವ್

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.26, ಮೊನ್ನೆಯಷ್ಟೇ ಉಳ್ಳಾಲ ಠಾಣಾ ಪಿಎಸ್‍ಐ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇಂದು ಠಾಣಾ ಎ ಎಸ್ ಐ ಅವರಿಗೂ ಸೋಂಕು ಖಚಿತಪಟ್ಟಿದೆ. ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲದಲ್ಲಿ ಕಳೆದೊಂದು ವಾರದಿಂದ ಐವರಲ್ಲಿ ಸೋಂಕು ಪತ್ತೆಯಾದಂತಾಗಿದೆ. ಇವರಲ್ಲಿ 57ರ ಹರೆಯದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದೀಗ ಸೋಂಕು ದೃಢಪಟ್ಟ ಎ ಎಸ್ ಐ ಕಳೆದ ಕೆಲ ಸಮಯಗಳಿಂದ ಕರ್ನಾಟಕ-ಕೇರಳ ಗಡಿಭಾಗವಾದ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆನ್ನಲಾಗಿದೆ. […]

ಉಳ್ಳಾಲ ಎಸ್ಐ ಬಳಿಕ ಎಎಸ್ಐ ಗೂ ಕೊರೋನಾ‌ ಪಾಸಿಟಿವ್ Read More »

ಕರಾವಳಿ, ಕರ್ನಾಟಕ

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ್ ನಡೆಸಿರುವ ಹಿಂದಿ ಪರೀಕ್ಷೆಯಲ್ಲಿ ಶಕ್ತಿರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿತೇರ್ಗಡೆ

ಮಂಗಳೂರು 26. ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮದ್ರಾಸ್ ಫೆಬ್ರವರಿಯಲ್ಲಿ ನಡೆಸಿರುವ ಹಿಂದಿ ಪ್ರಾಥಮಿಕ ಮತ್ತು ಮಧ್ಯಮ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಗೌರವವನ್ನು ತಂದುಕೊಟ್ಟಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳು ಪ್ರಾಥಮಿಕ ಪರೀಕ್ಷೆಯನ್ನು ಬರೆದಿದ್ದು, ಅದರಲ್ಲಿ ಪ್ರತ್ಯುಷ್‍ದೇವ್‍ದಾರ್, ಸಾಯಿಸಮರ್ಥ ಮಲ್ಲೂರು, ಸಮ್ಯಖ್‍ ಚಡಗ, ಮತ್ತು ಶ್ರೇಯಸ್‍ ಯು. ಶೆಟ್ಟಿಇವರು ವಿಶೇಷ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ. 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ. ಮಧ್ಯಮ ಪರೀಕ್ಷೆಯಲ್ಲಿ

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ್ ನಡೆಸಿರುವ ಹಿಂದಿ ಪರೀಕ್ಷೆಯಲ್ಲಿ ಶಕ್ತಿರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿತೇರ್ಗಡೆ Read More »

ಕರಾವಳಿ, ಕರ್ನಾಟಕ

ಕಟೀಲು: ಮಹಿಳೆಯೋರ್ವರಿಗೆ ಕೊರೋನಾ ಪಾಸಿಟಿವ್..!! ➤ ಮನೆ ಸೀಲ್ ಡೌನ್!!

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.26, ಇಲ್ಲಿನ ಕ್ಲಿನಿಕ್ ಒಂದರಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಕಟೀಲು ಸಮೀಪದ ಮಹಿಳೆಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಇದರಿಂದ ಪರಿಸರದ ಜನರನ್ನು ಆತಂಕಕ್ಕೀಡು ಮಾಡಿದೆ. ಕಟೀಲು ಬಲ್ಲಣ ಮಾರಡ್ಕ ಎಂಬಲ್ಲಿನ 35 ವರ್ಷ ಪ್ರಾಯದ ಮಹಿಳೆಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ವೈದ್ಯರಲ್ಲಿ ಪಾಸಿಟಿವ್ ಕಂಡು ಬಂದ ಕಾರಣ ಅಲ್ಲಿನ ಸಿಬ್ಬಂದಿಯನ್ನು ತಪಾಸಣೆ ನಡೆಸಿದಾಗ ಮಹಿಳೆಯೋರ್ವರಲ್ಲಿ ಪಾಸಿಟಿವ್ ಕಂಡುಬಂದಿದೆ. ಮನೆಯಲ್ಲಿ ಒಟ್ಟು ಏಳು ಮಂದಿ ವಾಸಿಸುತ್ತಿದ್ದು, ಮನೆಯನ್ನೂ ಸೀಲ್ ಡೌನ್ ಮಾಡಿ ಮನೆಯಲ್ಲಿರುವವರನ್ನು

ಕಟೀಲು: ಮಹಿಳೆಯೋರ್ವರಿಗೆ ಕೊರೋನಾ ಪಾಸಿಟಿವ್..!! ➤ ಮನೆ ಸೀಲ್ ಡೌನ್!! Read More »

ಕರಾವಳಿ, ಕರ್ನಾಟಕ

ಇಂದಿನಿಂದ ಬಿ.ಸಿ.ರೋಡ್ – ಜಕ್ರಿಬೆಟ್ಟು ವಾಹನ ಸಂಚಾರ ನಿಷೇದ -ಡಿ ಸಿ ಆದೇಶ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ 26. ಬಿ.ಸಿ. ರೋಡ್ – ಜಕ್ರಿಬೆಟ್ಟು ಹೆದ್ದಾರಿಯ ಕಾಂಕ್ರೀಟಿಕರಣ ಕಾಮಗಾರಿಯನ್ನು ಪೂರ್ಣಗೊಳಿಸಲೆಂದು 23 ದಿನಗಳ ಕಾಲ ಅಂದರೆ ಇಂದಿನಿಂದ ಜು.28 ರ ವರೆಗೆ ಎಲ್ಲಾ ವಿಧದ ವಾಹನ ಸಂಚಾರ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ಸಿಂಧೂ.ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ.   ಸಂಚಾರ ನಿಷೇಧದ ಹಿನ್ನಲೆಯಲ್ಲಿ ಮಂಗಳೂರು – ಪುಂಜಾಲಕಟ್ಟೆ ಕಡೆ ಓಡಾಡುವ ಲಘು ವಾಹನಗಳಾದ ಕಾರು ಜೀಪು , ಮಿನಿ ವ್ಯಾನ್ ದ್ವಿಚಕ್ರವಾಹನ , ಅಂಬ್ಯುಲೆನ್ಸ್ ವಾಹನಗಳು ಬದಲಿ ರಸ್ತೆಯಾದ ಮಂಗಳೂರು, ಬಿ.ಸಿ ರೋಡು,

ಇಂದಿನಿಂದ ಬಿ.ಸಿ.ರೋಡ್ – ಜಕ್ರಿಬೆಟ್ಟು ವಾಹನ ಸಂಚಾರ ನಿಷೇದ -ಡಿ ಸಿ ಆದೇಶ Read More »

ಕರಾವಳಿ, ಕರ್ನಾಟಕ

ಕಟೀಲು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ➤ ಅಪಾಯದಿಂದ ಪಾರಾದ ಕುಟುಂಬ

(ನ್ಯೂಸ್ ಕಡಬ)newskadaba.com ಬಜ್ಪೆ, ಜೂ.26, ಕಟೀಲು ಸಮೀಪದ ಎಕ್ಕಾರು ಅರಸುಲೆ ಪದವು ಎಂಬಲ್ಲಿ ಚಲಿಸುತ್ತಿದ್ದ ಕಾರ್ ಶಾಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿಗೆ ತುತ್ತಾದ ಘಟನೆ ಇಂದು ನಡೆದಿದೆ. ಕಾರಿನಲ್ಲಿದ್ದವರು ಬೆಳ್ತಂಗಡಿ ಮೂಲದವರು ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರಿನಲ್ಲಿದ್ದವರು ಹೊರಗಡೆ ಬರುವಷ್ಟರಲ್ಲಿ ಬೆಂಕಿಯ ಜ್ವಾಲೆ ಇಡೀ ಕಾರನ್ನು ಆವರಿಸಿದ್ದು, ಜನವಸತಿ ಇಲ್ಲದ ಪ್ರದೇಶವಾದ್ದರಿಂದ ಯಾರೂ ಇರಲಿಲ್ಲ ಎನ್ನಲಾಗಿದೆ. ಬಳಿಕ ಸ್ಥಳೀಯ ನಿವಾಸಿ ಸ್ಟ್ಯಾನಿ ಪಿಂಟೋ ಎಂಬವರು ತಕ್ಷಣ ಕಾರ್ಯಪ್ರವೃತ್ತರಾಗಿ ಕಟೀಲು ಯತೀಶ್ ಶೆಟ್ಟಿಯವರ ನೀರಿನ

ಕಟೀಲು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ➤ ಅಪಾಯದಿಂದ ಪಾರಾದ ಕುಟುಂಬ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ ಘಟಕದಲ್ಲಿ ವನಮಹೋತ್ಸವ ➤ ಆಯುಷ್ ಇಲಾಖೆಯಿಂದ ಕೋವಿಡ್-19 ರೋಗ ನಿರೋಧಕ ಮಾತ್ರೆಗಳ ವಿತರಣೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.26. ದ.ಕ. ಜಿಲ್ಲಾ ಗೃಹರಕ್ಷಕ ದಳದ ಬಂಟ್ವಾಳ ಘಟಕದಲ್ಲಿ ವನಮಹೋತ್ಸವ ಆಚರಣೆ ಮತ್ತು ಆಯುಷ್ ಇಲಾಖೆಯಿಂದ ಕೋವಿಡ್-19 ರೋಗ ನಿರೋಧಕ ಮಾತ್ರೆಗಳನ್ನು ಶುಕ್ರವಾರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ ಚೂಂತಾರು ರವರು ಮಾತನಾಡಿ ಈ ಮಾತ್ರೆ ಕೊರೋನಾ ವೈರಸ್‍ನಿಂದ ನಮಗೆ ರಕ್ಷಣೆಯನ್ನು ನೀಡುವ ಉದ್ದೇಶದಿಂದ ಇದನ್ನು ವಿತರಿಸಲಾಗಿದೆ. ಗೃಹರಕ್ಷಕರೆಲ್ಲ ಕೊರೋನಾ ಮಹಾಮಾರಿಯಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಸಮಾಜವನ್ನು ರಕ್ಷಿಸುವ ಜವಾಬ್ದಾರಿಯ ಕರ್ತವ್ಯ

ಬಂಟ್ವಾಳ ಘಟಕದಲ್ಲಿ ವನಮಹೋತ್ಸವ ➤ ಆಯುಷ್ ಇಲಾಖೆಯಿಂದ ಕೋವಿಡ್-19 ರೋಗ ನಿರೋಧಕ ಮಾತ್ರೆಗಳ ವಿತರಣೆ Read More »

ಕರಾವಳಿ

ಸಂಪ್ಯ ನಿವಾಸಿಯೊಬ್ಬರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆ ➤ ಬನ್ನೂರಿನಲ್ಲಿ ಮನೆ ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಪುತ್ತೂರು,ಜೂ.26: ಬೆಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿರುವ ಸಂಪ್ಯ ಉದಯಗಿರಿ ನಿವಾಸಿಯೊಬ್ಬರಿಗೆ ಕೊರೋನಾ ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಇತ್ತ, ಪುತ್ತೂರಿನ ಬನ್ನೂರಿನ ಚೆಲುವಮ್ಮನ ಕಟ್ಟೆ ಎಂಬಲ್ಲಿರುವ ತನ್ನ ತಾಯಿ ಮನೆಗೆ ಬಂದಿದ್ದ ಕಂಬಳ ಬೆಟ್ಟು ನಿವಾಸಿಗೆ ಕೊರೋನಾ ದೃಢ ಪಟ್ಟ ಹಿನ್ನಲೆಯಲ್ಲಿ ಇದೀಗಾ ಬನ್ನೂರಿನ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಆರ್ಯಾಪು ಗರಾಮ ಮತ್ತು ಪುತ್ತೂರು ನಗರಸಭೆ ಗಡಿ ಭಾಗದಲ್ಲೇ ಕೊರೋನಾ ಅಟ್ಟಹಾಸ ಮರೆದಿದ್ದು, ಕೊರೊನಾ ದೃಢಪಟ್ಟ ವ್ಯಕ್ತಿ ನಗರಸಭೆ ವ್ಯಾಪ್ತಿಗೆ ಸೇರಿದವರಾಗಿದ್ದಾರೆ. ಇನ್ನು

ಸಂಪ್ಯ ನಿವಾಸಿಯೊಬ್ಬರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆ ➤ ಬನ್ನೂರಿನಲ್ಲಿ ಮನೆ ಸೀಲ್ ಡೌನ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಂಗಳೂರು: ಬೀದಿ ನಾಯಿಗಳಿಂದ ಜಿಂಕೆಗಳ ಹಿಂಡಿನ ಮೇಲೆ ದಾಳಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ 26. ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಬೀದಿನಾಯಿಗಳ ಹಿಂಡು ಜಿಂಕೆಗಳ ಮೇಲೆ ದಾಳಿ ಮಾಡಿದ ಪರಿಣಾಮ 10 ರಿಂದ 15ಕ್ಕೂ ಹೆಚ್ಚು ಜಿಂಕೆಗಳ ಮಾರಣಹೋಮ ನಡೆದಿದೆ.   ಉದ್ಯಾನವನದ ಬೇಲಿ ಹಾರಿ ಜಿಂಕೆಗಳ ಹಿಂಡಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಪರಿಣಾಮ 10 ರಿಂದ 15ಕ್ಕೂ ಹೆಚ್ಚು ಜಿಂಕೆಗಳು ಸಾವನ್ನಪ್ಪಿದ್ದು, ಇನ್ನು 5ಕ್ಕೂ ಹೆಚ್ಚಿನ ಜಿಂಕೆಗಳು ಗಂಭೀರವಾಗಿ ಗಾಯಗೊಂಡಿದೆ. ಬೀದಿ ನಾಯಿಗಳ ದಾಳಿಗೆ ಸಿಲುಕಿ ಇಷ್ಟೊಂದು ಪ್ರಮಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ನಿಸರ್ಗಧಾಮದಲ್ಲೇ ಜಿಂಕೆಗಳಿಗೆ

ಮಂಗಳೂರು: ಬೀದಿ ನಾಯಿಗಳಿಂದ ಜಿಂಕೆಗಳ ಹಿಂಡಿನ ಮೇಲೆ ದಾಳಿ Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಕಡಬ ತಾಲೂಕಿನ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 41 ಮತ್ತು 42 ರಂತೆ ಅವಧಿ ಪೂರ್ಣಗೊಳ್ಳಲಿರುವ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕಾತಿಗೊಳಿಸಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಆದೇಶ ಹೊರಡಿಸಿದ್ದಾರೆ. ಕಡಬ ತಾಲೂಕಿನ ಗೋಳಿತೊಟ್ಟು, ನೆಲ್ಯಾಡಿ, ಪೆರಾಬೆ, ಐತ್ತೂರು ಗ್ರಾ.ಪಂಗಳಿಗೆ ಪುತ್ತೂರಿನ ಪಶುವೈದ್ಯ ಆಸ್ಪತ್ರೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಬಿ ಗೌಡ, ಕೊಯಿಲ, ಕೊಣಾಜೆ, ರಾಮಕುಂಜ, ಆಲಂಕಾರು ಗ್ರಾ.ಪಂಗಳಿಗೆ ಕರ್ನಾಟಕ ಅರಣ್ಯ

ಕಡಬ ತಾಲೂಕಿನ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳ ನೇಮಕ Read More »

ಕರಾವಳಿ

?? Breaking News ದೇಶದಲ್ಲಿ 24 ಗಂಟೆಗಳಲ್ಲಿ 17,296 ಹೊಸ ಕೇಸು ➤ 4.90 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 15,301 ಮಂದಿ ಬಲಿ

(ನ್ಯೂಸ್ ಕಡಬ)newskadaba.com ನವದೆಹಲಿ, ಜೂ.26, ಶುಕ್ರವಾರ ದೇಶದಲ್ಲಿ ಕೊರೋನಾ ತನ್ನ ವ್ಯಾಪಕತೆಯನ್ನು ತೋರಿದ್ದು, ಒಂದೇ ದಿನ 407 ಜನರನ್ನು ಬಲಿಪಡೆದುಕೊಂಡಿದೆ. ಇದರೊಂದಿಗೆ ಈ ವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 15,301ಕ್ಕೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಸಾವು ದಾಖಲಾದ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಶುಕ್ರವಾರ ಮಹಾರಾಷ್ಟ್ರದಲ್ಲಿ 192, ದೆಹಲಿಯಲ್ಲಿ 64, ತಮಿಳುನಾಡು 45, ಗುಜರಾತ್ 18, ಉತ್ತರಪ್ರದೇಶದಲ್ಲಿ 15 ಮಂದಿ ಮಹಾಮಾರಿ ವೈರಸ್ ಗೆ ಬಲಿಯಾಗಿದ್ದಾರೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ

?? Breaking News ದೇಶದಲ್ಲಿ 24 ಗಂಟೆಗಳಲ್ಲಿ 17,296 ಹೊಸ ಕೇಸು ➤ 4.90 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 15,301 ಮಂದಿ ಬಲಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top