ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ಬಂದ್

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.10:  ಚಾರ್ಮಾಡಿ ಘಾಟಿ ರಸ್ತೆ ಮಳೆಗಾಲದ ಸಂದರ್ಭ ಅಪಾಯವಿರುವುದರಿಂದ ರಸ್ತೆಯಲ್ಲಿ ಸಂಜೆ 7ರಿಂದ ಬೆಳಗ್ಗೆ 7ರ ತನಕ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಡಾ| ಗೌತಮ್‌ ಬಗಾದಿ ಆದೇಶ ಹೊರಡಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾನಿಗೀಡಾಗಿತ್ತು. ಕಳೆದ ವರ್ಷ ತಾತ್ಕಾಲಿಕ ಕಾಮಗಾರಿ ನಡೆಸಿ ಬೇಸಗೆಯಲ್ಲಿ ಲಘು ವಾಹನಗಳಿಗೆ ಮಾತ್ರ ಕಲ್ಪಿಸಿಕೊಡಲಾಗಿತ್ತು. ಈ ಬಾರಿಯೂ ಅಲ್ಲಲ್ಲಿ ಮಣ್ಣು ಕುಸಿಯಲು ಪ್ರಾರಂಭವಾಗಿರುದರಿಂದಾಗಿ ರಾತ್ರಿ ಸಂಚಾರ ಸೂಕ್ತವಲ್ಲ ಮುಂದಿನ ಆದೇಶದ‌ವರೆಗೂ ಈ […]

ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ಸಂಚಾರ ಬಂದ್ Read More »

ಕರ್ನಾಟಕ

ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಪೊಲೀಸರ ಗುಂಡೇಟಿಗೆ ಬಲಿ

(ನ್ಯೂಸ್ ಕಡಬ) newskadaba.com ನವದೆಹಲಿ,ಜು.10:  8 ಮಂದಿ ಪೊಲೀಸರ ಹತ್ಯೆಕೋರ, ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಪೊಲೀಸ್​ ಕಾರು ಇಂದು ಬೆಳಗ್ಗೆ ಕಾನ್ಪುರದ ಬಳಿ ಪಲ್ಟಿಯಾಗಿತ್ತು.   ಬಂಧಿತ ಆರೋಪಿ ವಿಕಾಸ್​ ದುಬೆಯನ್ನು ಮಧ್ಯ ಪ್ರದೇಶದ ಉಜ್ಜಯಿನಿಯಿಂದ ಉತ್ತರ ಪ್ರದೇಶದ ಶಿವ್ಲಿಗೆ ಕರೆದೊಯ್ಯಲಾಗುತ್ತಿತ್ತು. ಕಾನ್ಪುರದ ಸಮೀಪ ಟೋಲ್​ ಪ್ಲಾಜಾ ಕ್ರಾಸ್​ ಮಾಡಿದ ಬಳಿಕ ಕಾರು ಪಲ್ಟಿಯಾಗಿತ್ತು ಎಂದು ತಿಳಿದು ಬಂದಿದೆ. ಈ ವೇಳೆ ವಿಕಾಸ್​ ದುಬೆ ಪೊಲೀಸರ ಬಳಿ ಇದ್ದ ಗನ್​ ಕಿತ್ತುಕೊಂಡು,ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.

ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಪೊಲೀಸರ ಗುಂಡೇಟಿಗೆ ಬಲಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೊರೊನಾಗೆ 35 ವರ್ಷದ ಯುವಕ ಬಲಿ ➤ 31ಕ್ಕೆ ಏರಿದ ಸಾವಿನ ಸಂಖ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು,ಜು.10:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾದಿಂದ ಮತ್ತೊಂದು ಬಲಿಯಾಗಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.ಕೊರೊನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರು ಹೊರವಲಯದ ಹೊಸಬೆಟ್ಟು ನಿವಾಸಿ 35 ವರ್ಷದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುರುವಾರದಂದು 167 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಪ್ರಾಥಮಿಕ ಸಂಪರ್ಕದಿಂದಲೇ 64 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಗುರುವಾರದಂದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1709ಕ್ಕೆ ಏರಿಕೆಯಾಗಿತ್ತು.  

ಕೊರೊನಾಗೆ 35 ವರ್ಷದ ಯುವಕ ಬಲಿ ➤ 31ಕ್ಕೆ ಏರಿದ ಸಾವಿನ ಸಂಖ್ಯೆ Read More »

ಕರಾವಳಿ, ಕರ್ನಾಟಕ

ದಿನ ಭವಿಷ್ಯ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ. ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ 9945410150 ಮೇಷ ರಾಶಿ ಜಾಮೀನು

ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ದ.ಕ ಇಂದು 168 ಮಂದಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ)newskadaba.com ಮಂಗಳೂರು, ಜು.9, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 168 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಸೋಂಕಿತರ ಪ್ರಾಥಮಿಕ ಸಂಪರ್ಕ, ದುಬೈ, ಮಹಾರಾಷ್ಟ್ರ ಮೂಲದಿಂದ ಸೋಂಕು ಹರಡಿದ್ದು ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ನಾಗಾಲೋಟದಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತಿದ್ದು ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ದ.ಕ ಇಂದು 168 ಮಂದಿಗೆ ಕೊರೋನಾ ಪಾಸಿಟಿವ್ Read More »

ಕರಾವಳಿ, ಕರ್ನಾಟಕ

ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ

(ನ್ಯೂಸ್ ಕಡಬ)newskadaba.com ಮಂಗಳೂರು: ಜು.9, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು ಇಂದು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 48 ವರ್ಷದ ಬೋಳೂರು ನಿವಾಸಿ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.      

ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಪತ್ತು ನಿರ್ವಹಣೆಗೆ ಸಿದ್ದತೆ ಅಗತ್ಯ ➤ ಶ್ರೀ ಗೋಪಾಲ್ ಲಾಲ್ ಮೀನಾ

(ನ್ಯೂಸ್ ಕಡಬ)newskadaba.com ಜು.9, ನಗರದ ಮೇರಿಹಿಲ್‍ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳದ ಕಛೇರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇದರ ವಿಜಯವಾಡ ಘಟಕದ ಮುಖ್ಯ ಕಮಾಡೆಂಟ್ ಶ್ರೀ ಗೋಪಾಲ್‍ ಲಾಲ್ ಮೀನಾ ಭೇಟಿ ನೀಡಿದರು.   ಅವರು ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಪ್ರಾಕೃತಿಕ ತೊಂದರೆಗಳು ಮತ್ತು ವಿಪತ್ತು ನಿರ್ವಹಣೆ ವಿಚಾರವಾಗಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಜಿಲ್ಲಾ ಪೌರರಕ್ಷಣಾ ತಂಡದ ಮುಖ್ಯಪಾಲಕರಾದ ಡಾ|| ಮುರಲೀಮೋಹನ ಚೂಂತಾರು ಅವರೊಂದಿಗೆ ವಿಚಾರ ವಿನಿಮಯ ಮಾಡಿದರು. ನಂತರ ಗೃಹರಕ್ಷಕ ದಳದ ವಿಪತ್ತು

ವಿಪತ್ತು ನಿರ್ವಹಣೆಗೆ ಸಿದ್ದತೆ ಅಗತ್ಯ ➤ ಶ್ರೀ ಗೋಪಾಲ್ ಲಾಲ್ ಮೀನಾ Read More »

ಕರಾವಳಿ, ಕರ್ನಾಟಕ

?? ?ig Breaking News ಕರ್ತವ್ಯನಿರತ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ➤ ವ್ಯಕ್ತಿ ಪರಾರಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜು.9, ಕರ್ತವ್ಯ ನಿರತರಾಗಿದ್ದ ಆಶಾ ಕಾರ್ಯಕರ್ತೆಯೋರ್ವರಿಗೆ ವ್ಯಕ್ತಿಯೋರ್ವ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಕುಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಮುಂಡೊಟ್ಟುವಿನಲ್ಲಿ ಗುರುವಾರ ಸಂಭವಿಸಿದೆ. ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಮತಾ ಗಟ್ಟಿ ಅವರಿಗೆ ಇಲ್ಲಿಯ ಮಜಲು ನಿವಾಸಿ ಕಾಂತಪ್ಪ ಪೂಜಾರಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಬೆಳಗ್ಗೆ ಸುಮಾರು 10 ಗಂಟೆಗೆ ಮಮತಾ ರವರು ಕರ್ತವ್ಯದಲ್ಲಿರುವಾಗ ದೊಣ್ಣೆಯಿಂದ ಏಕಾ ಏಕಿ ಹಲ್ಲೆ ನಡೆಸಿದ್ದು, ತಲೆಗೆ

?? ?ig Breaking News ಕರ್ತವ್ಯನಿರತ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ➤ ವ್ಯಕ್ತಿ ಪರಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಹೆದ್ದಾರಿ-73ರ ಬಳಿ ರಸ್ತೆಗೆ ಉರುಳಿದ ಮರ ➤ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ: ಜು.9, ರಾಷ್ಟ್ರೀಯ ಹೆದ್ದಾರಿ 73 ಮಂಗಳೂರು- ಚಿಕ್ಕಮಗಳೂರು ರಸ್ತೆಯ ಮುಂಡಾಜೆ ಸೋಮಂತಡ್ಕ ಸಮೀಪದ ಅಂಬಡ್ತ್ಯಾರು ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು,ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇಂದು ಮುಂಜಾನೆ ಸುಮಾರಿಗೆ 6.45ರ ಸುಮಾರಿಗೆ ಬೃಹದಾಕಾರದ ಮರ ರಸ್ತೆಗೆ ಉರುಳಿ ಬಿದ್ದಿದೆ. ಹಾಗಾಗಿ ಕೆಲವು ವಾಹನಗಳು ಬದಲಿ ಮಾರ್ಗದಲ್ಲಿ ಸಂಚಾರ ಮುಂದುವರಿಸಿದವು. ಮರ ರಸ್ತೆಗೆ ಉರುಳಿರುವುದರಿಂದ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಇದೇ ರಸ್ತೆಯ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರ್ಕಳ‌ ಶಾಸಕ ಸುನೀಲ್ ಕುಮಾರ್ ಕೂಡಾ

ಬೆಳ್ತಂಗಡಿ: ಹೆದ್ದಾರಿ-73ರ ಬಳಿ ರಸ್ತೆಗೆ ಉರುಳಿದ ಮರ ➤ ಸಂಚಾರ ಅಸ್ತವ್ಯಸ್ತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಬಾವಿಗೆ ಬಿದ್ದ ಜಿಂಕೆ

(ನ್ಯೂಸ್ ಕಡಬ)newskadaba.com ಕಾವು: ಜು.9, ಮಾಡ್ನೂರು ಗ್ರಾಮದ ಕಾವು ಮದ್ಲ ಸಮೀಪದಲ್ಲಿ ಖಾಸಗಿ ಬಾವಿಯೊಂದಕ್ಕೆ ಜಿಂಕೆಯೊಂದು ಬಿದ್ದ ಘಟನೆ ತಿಳಿದು ಬಂದಿದೆ. ಮಳೆಗಾಲವಾದುದರಿಂದ ಬಾವಿಯಲ್ಲಿ ನೀರು ತುಂಬಿದ್ದು, ಜಿಂಕೆ ನೀರಿನಲ್ಲಿ ಒದ್ದಾಡುತ್ತಿದೆ. ವಿಷಯ ತಿಳಿದ ಮನೆಯವರು ಈಗಾಗಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಜಿಂಕೆಯನ್ನು ಮೇಲಕ್ಕೆತ್ತುವ ಕಾರ್ಯ ಮುಂದುವರಿದಿದೆ.

ಪುತ್ತೂರು: ಬಾವಿಗೆ ಬಿದ್ದ ಜಿಂಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top