ವೈದ್ಯರು, ನರ್ಸ್ ಸೇರಿದಂತೆ 14 ಮಂದಿಗೆ ಕೊರೊನಾ ಅಜ್ಜರಕಾಡು ಆಸ್ಪತ್ರೆ 2ದಿನ ಸೀಲ್ ಡೌನ್

(ನ್ಯೂಸ್ ಕಡಬ) newskadaba.com. ಉಡುಪಿ,ಜು.16: ಕೊರೊನಾ ಬಾಧೆಯಿಂದಾಗಿ ಈಗಾಗಲೇ ಹಲವು ಭಾಗಗಳಲ್ಲಿ ಆಸ್ಪತ್ರೆ, ಮನೆ, ಪೊಲೀಸ್ ಸ್ಟೇಷನ್,ಬ್ಯಾಂಕ್, ಅಂಗಡಿ ಮುಂಗಟ್ಟು ಸೀಲ್ ಡೌನ್ ಆಗಿತ್ತು ಇದೀಗ ಅಂತದ್ದೆ ಇನ್ನೊಂದು ಪ್ರಕರಣ ಉಡುಪಿಯಲ್ಲಿ ವರದಿಯಾಗಿದೆ. ಗ್ಯಾಂಗ್ರಿನ್‌‌ ಸಮಸ್ಯೆಯಿಂದ ದಾಖಲಾಗಿದ್ದ ರೋಗಿಯಿಂದ ಕೊರೊನಾ ಹರಡಿದೆ ಎಂದು ಶಂಕಿಸಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಜ್ವರ ಕಾಣಿಸಿಕೊಂಡಿದ್ದು, ಗಂಟಲ ದ್ರವ ಪರೀಕ್ಷೆಯ ಬಳಿಕ ರೋಗಿಗೆ ಕೊರೊನಾ ದೃಢಪಟ್ಟಿತ್ತು, ಈತನ ವಾರ್ಡ್‌‌ನಲ್ಲಿದ್ದ 9 ರೋಗಿಗಳಿಗೂ ಕೊರೊನಾ ಸೋಂಕು ತಗುಲಿದೆ. ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಇಬ್ಬರು […]

ವೈದ್ಯರು, ನರ್ಸ್ ಸೇರಿದಂತೆ 14 ಮಂದಿಗೆ ಕೊರೊನಾ ಅಜ್ಜರಕಾಡು ಆಸ್ಪತ್ರೆ 2ದಿನ ಸೀಲ್ ಡೌನ್ Read More »

ಕರ್ನಾಟಕ

ದೇವಾಲಯಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು ➤ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್

(ನ್ಯೂಸ್ ಕಡಬ)newskadaba.com ಮಂಗಳೂರು: ಜು.16, ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಮತ್ತು ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿತ್ಯ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಹೇಳಿದ್ದಾರೆ. ತಮ್ಮ ಕಛೇರಿಯಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯಗಳ ಆಭರಣಗಳ ರಕ್ಷಣೆ ಹಾಗೂ ಮೌಲ್ಯಮಾಪನ ಮಾಡುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಮುಖ್ಯವಾಗಿ ಎ ಮತ್ತು ಬಿ ವರ್ಗಕ್ಕೆ ಸೇರಿದ ದೇವಾಲಯಗಳಲ್ಲಿ ಪೊಲೀಸ್‌

ದೇವಾಲಯಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿ ಅಳವಡಿಸಬೇಕು ➤ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ Read More »

ಕರಾವಳಿ, ಕರ್ನಾಟಕ

ಎಎಸ್ಐ ಸೇರಿದಂತೆ ಮೂವರಿಗೆ ಕೊರೋನಾ ದೃಢ ➤ ಬೈಂದೂರು ಠಾಣೆ ಎರಡನೇ ಬಾರಿಗೆ ಸೀಲ್ ಡೌನ್

(ನ್ಯೂಸ್ ಕಡಬ)newskadaba. com ಬೈಂದೂರು: ಜು.16, ಉಡುಪಿ ಜಿಲ್ಲೆಯ ಪೊಲೀಸರಿಗೆ ಕೋವಿಡ್ ಕಾಟ ಹೆಚ್ಚಾಗುತ್ತಿದ್ದು, ಇದೀಗ ಬೈಂದೂರು ಪೊಲೀಸ್ ಠಾಣೆಯ ಎಎಸ್ಐ ಮತ್ತಿಬ್ಬರು ಸಿಬ್ಬಂದಿಗಳಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಈ ಕಾರಣದಿಂದ ಎರಡನೇ ಬಾರಿಗೆ ಬೈಂದೂರು ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಬೈಂದೂರು ಠಾಣೆಯ ಎಎಸ್ಐ, ಓರ್ವ ಮಹಿಳಾ ಮತ್ತು ಓರ್ವ ಪುರುಷ ಸಿಬ್ಬಂದಿಗೆ ಕೋವಿಡ್-19 ದೃಢವಾಗಿದೆ. ಈ ಹಿನ್ನೆಲೆ ಕುಂದಾಪುರ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

ಎಎಸ್ಐ ಸೇರಿದಂತೆ ಮೂವರಿಗೆ ಕೊರೋನಾ ದೃಢ ➤ ಬೈಂದೂರು ಠಾಣೆ ಎರಡನೇ ಬಾರಿಗೆ ಸೀಲ್ ಡೌನ್ Read More »

ಕರಾವಳಿ, ಕರ್ನಾಟಕ

ಕುಖ್ಯಾತ ದರೋಡೆಕೋರನ ಬಂಧಿಸಿದ ಪಣಂಬೂರು ಪೊಲೀಸರು

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.16: ದರೋಡೆ, ಹಲ್ಲೆ, ಅಪಘಾತ ಸಹಿತ ಹತ್ತಕ್ಕೂ ಅಧಿಕ ಅಪರಾಧ ಪ್ರಕರಣದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಕುಖ್ಯಾತ ದರೋಡೆಕೋರ ಶಮ್ಮಿ ಯಾನೇ ಶಮೀರ್ ಕಾಟಿಪಳ್ಳ (30)ನನ್ನು ಬೆಳ್ಳಿಯಪ್ಪ ನೇತೃತ್ವದ ಪಣಂಬೂರು ರೌಡಿ ನಿಗ್ರಹದಳ ಹಾಗೂ ಪಣಂಬೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತ ಪಣಂಬೂರು ಬಂದರು ವ್ಯಾಪ್ತಿಯಲ್ಲಿ ಬರುವ ಲಾರಿ ಚಾಲಕರಿಗೆ ಹಲ್ಲೆಗೈದು ದರೋಡೆ ಮಾಡಿ ಪರಾರಿಯಾಗುತ್ತಿದ್ದ. ಈ ಹಿಂದೆ ಎಎಸ್ಐ ಒಬ್ಬರಿಗೆ ರಾಡ್ ನಿಂದ ಮಾರಣಾಂತಿಕ ಹಲ್ಲೆಗೈದಿದ್ದ. ಬೆಂಜನ ಪದವಿನಲ್ಲಿ ದ್ವಿಚಕ್ರ ವಾಹನಕ್ಕೆ ತನ್ನ ವಾಹನ

ಕುಖ್ಯಾತ ದರೋಡೆಕೋರನ ಬಂಧಿಸಿದ ಪಣಂಬೂರು ಪೊಲೀಸರು Read More »

ಕರ್ನಾಟಕ

ಗುಡಿಸಲಲ್ಲಿ ವಾಸವಿದ್ದ ಕುಟುಂಬಕ್ಕೆ ಸುಸಜ್ಜಿತ ಮನೆ ಹಸ್ತಾಂತರ ➤ ವೀರಕೇಸರಿ ಮತ್ತು ಸ್ಪಂದನ ಸೇವಾ ಸಂಘದಿಂದ ಮನೆ ನಿರ್ಮಾಣ

(ನ್ಯೂಸ್ ಕಡಬ) newskadaba.com ಪಟ್ರಮೆ ,ಜು.16: ವೀರಕೇಸರಿ ಸಂಘಟನೆ ಅನಾರು, ಪಟ್ರಮೆ ಹಾಗೂ ಸ್ಪಂದನ ಸೇವಾ ಸಂಘ ಬೆಳ್ತಂಗಡಿ ಹಾಗೂ ಊರಿನ ಸಹೃದಯಿಗಳ ಸಹಾಯದಿಂದ ಜೋಪಡಿಯಲ್ಲಿ ವಾಸಿಸುತ್ತಿದ್ದ ಕುಟುಂಬವೊಂದಕ್ಕೆ, 2 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಟ್ಟ ಪ್ರಶಂಶನೀಯ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಮೈಕೆ ಎಂಬಲ್ಲಿ ನಡೆದಿದೆ.   ಕಳೆದ ಹಲವಾರು ವರ್ಷಗಳಿಂದ ಗಿರಿಜ ಎಂಬುವರು ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲದೆ ನಿರ್ಗತಿಕರಂತೆ ಗುಡಿಸಲಲ್ಲಿ ವಾಸಮಾಡುತ್ತಿದ್ದರು. ಇವರ ಕಷ್ಟವನ್ನು ಗಮನಿಸಿದ ವೀರಕೇಸರಿ ಸಂಘಟನೆ ಹಾಗೂ

ಗುಡಿಸಲಲ್ಲಿ ವಾಸವಿದ್ದ ಕುಟುಂಬಕ್ಕೆ ಸುಸಜ್ಜಿತ ಮನೆ ಹಸ್ತಾಂತರ ➤ ವೀರಕೇಸರಿ ಮತ್ತು ಸ್ಪಂದನ ಸೇವಾ ಸಂಘದಿಂದ ಮನೆ ನಿರ್ಮಾಣ Read More »

ಕರಾವಳಿ, ಕರ್ನಾಟಕ

ಕರಾವಳಿ ಮತ್ತೆ ವರುಣನ ಆರ್ಭಟ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.16: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗಿನಿಂದ ರಾತ್ರಿವರೆಗೂ ನಿರಂತರವಾಗಿ ಮಳೆ ಸುರಿದಿದೆ. ಕೆಲವೆಡೆ ಸಾಧಾರಣ, ಕೆಲವೆಡೆ ಉತ್ತಮ ಮಳೆಯಾಗಿದೆ. ಕಳೆದೆರಡು ದಿನಗಳಿಂದ ಮಳೆ ಸ್ವಲ್ಪ ಚುರುಕುಗೊಂಡಿದ್ದು, ಹವಾಮಾನ ಇಲಾಖೆಯೂ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ ಕೆಲವು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಬೆಳಗ್ಗಿನಿಂದ ಸಾಯಂಕಾಲವರೆಗೆ ಕಡಬ, ಮರ್ಧಾಳ, ಬಿಳಿನೆಲೆ, ಕಾಣಿಯೂರು ನೂಜಿಬಾಳ್ತಿಲದಲ್ಲಿ ಉತ್ತಮ ಮಳೆ ಸುರಿದಿದೆ. ಮಳೆಯೊಂದಿಗೆ ಹಗುರವಾಗಿ ಗಾಳಿಯೂ ಬೀಸುತ್ತಿದೆ. ಸಮುದ್ರದಿಂದಲೂ ತೀರಕ್ಕೆ ಗಂಟೆಗೆ 45-55 ಕಿ.ಮೀ.

ಕರಾವಳಿ ಮತ್ತೆ ವರುಣನ ಆರ್ಭಟ Read More »

ಕರಾವಳಿ

ಸಹೋದರನಿಗೆ ಕೊರೋನಾ ದೃಢ ➤ ಗಂಗೂಲಿಗೆ ಹೋಂ ಕ್ವಾರಂಟೈನ್

(ನ್ಯೂಸ್ ಕಡಬ)newskadaba.com ಕೋಲ್ಕತ್ತಾ: ಜು.16, ಸೌರವ್ ರ ಹಿರಿಯ ಸಹೋದರ ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸ್ನೇಹಷೀಶ್ ಗಂಗೂಲಿಗೆ ಕೋವಿಡ್-19 ಸೋಂಕು ದೃಢವಾದ ಹಿನ್ನಲೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಬಂಗಾಳದ ಮಾಜಿ ರಣಜಿ ಆಟಗಾರರಾಗಿದ್ದ ಸ್ನೇಹಷೀಶ್ ಗಂಗೂಲಿ ಅವರಿಗರ ಕೋವಿಡ್-19 ದೃಢಪಟ್ಟಿದ್ದು, ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಇದೀಗ ಕೋವಿಡ್ ಸೋಂಕು ದೃಢವಾಗಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ಸಹೋದರನಿಗೆ ಕೊರೋನಾ ದೃಢ ➤ ಗಂಗೂಲಿಗೆ ಹೋಂ ಕ್ವಾರಂಟೈನ್ Read More »

ಕರಾವಳಿ

ಕಡಬ ತಾಲೂಕಿನಲ್ಲಿ ಲಾಕ್‍ಡೌನ್ ಗೆ ವ್ಯಾಪಕ ಬೆಂಬಲ ವ್ಯಕ್ತ

(ನ್ಯೂಸ್ ಕಡಬ) newskadaba.com ಕಡಬ,ಜು.16: ಮಾನವ ಸಂಕುಲಕ್ಕೆ ಮೃತ್ಯುವಾಗಿ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ತನ್ನ ವರಸೆಯನ್ನೆ  ಬದಲಾಯಿಸುತ್ತಿದೆ. ಮಿತಿ ಮೀರಿ ಹಬ್ಬುತ್ತಿರುವ ಕೊರೋನಾ ಸೊಂಕಿನಿಂದಾಗಿ, ರಾಜ್ಯ ಸರ್ಕಾರ ಮುಂದಿನ 7 ದಿನಗಳ ಕಾಲ ಲಾಕ್ ಡೌನ್ ಆದೇಶ ಹೊರಡಿಸಿದೆ. ಲಾಕ್ ಡೌನ್ ನ ಮೊದಲ ದಿನವಾದ ಇಂದು ಕಡಬ ತಾಲೂಕು ವ್ಯಾಪ್ತಿಯಲ್ಲಿ ಹಾಲು, ಮೆಡಿಕಲ್ , ಆಸ್ಪತ್ರೆ, ತರಕಾರಿ, ಅಗತ್ಯ ವಸ್ತುಗಳ ಅಂಗಡಿಗಳು, ಪತ್ರಿಕೆ ಬಿಟ್ಟು ಉಳಿದೆಲ್ಲಾ ವ್ಯವಹಾರದ ಅಂಗಡಿಗಳು ಸ್ಥಗಿತಗೊಂಡಿತ್ತು.

ಕಡಬ ತಾಲೂಕಿನಲ್ಲಿ ಲಾಕ್‍ಡೌನ್ ಗೆ ವ್ಯಾಪಕ ಬೆಂಬಲ ವ್ಯಕ್ತ Read More »

ಕರಾವಳಿ, ಕರ್ನಾಟಕ

ಕಡಬ: ಕುದ್ಮಾರಿನ ಯುವಕನಲ್ಲಿ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ)newskadaba.com ಕಡಬ, ಜು.15, ದಿನದಿಂದ ದಿನಕ್ಕೆ ತನ್ನ ಶೌರ್ಯವನ್ನು ತೋರುತ್ತಿರುವ ಕೊರೋನಾ ಇದೀಗ ತಾಲೂಕಿನ ಕುದ್ಮಾರು ಗ್ರಾಮದ ಯುವಕನೋರ್ವನಲ್ಲಿ ದೃಢಪಟ್ಟಿದೆ. ಮಂಗಳೂರಿನ ಪಾಸ್ಟ್ ಫುಡ್ ತಯಾರಿಕಾ ಸಂಸ್ಥಯೊಂದರಲ್ಲಿ ಕರ್ತವ್ಯದಲ್ಲಿದ್ದ ಈತ ಅನಾರೋಗ್ಯ ನಿಮಿತ್ತ ಊರಿಗೆ ಬಂದಿದ್ದು, ಕಾಣಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇವರ ಗಂಟಲ ದ್ರವ ಸಂಗ್ರಹಿಸಿ ಕೊರೋನಾ ಪರೀಕ್ಷೆಗೆ ಕಳುಹಿಸಿದ್ದು, ಇದೀಗ ವರದಿಯು ಪಾಸಿಟಿವ್ ಬಂದಿದೆ. ಯುವಕನನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಈತನ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಕಡಬ: ಕುದ್ಮಾರಿನ ಯುವಕನಲ್ಲಿ ಕೊರೋನಾ ಪಾಸಿಟಿವ್ Read More »

ಕರಾವಳಿ, ಕರ್ನಾಟಕ

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು ವಿಧಿವಶ

(ನ್ಯೂಸ್ ಕಡಬ) newskadaba.com ಬಳ್ಳಾರಿ ,ಜು.16:  ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು(81) ವಿಧಿವಶರಾಗಿದ್ದಾರೆ. ಸ್ವಗ್ರಾಮ ಬಳ್ಳಾರಿಯಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ.   ರಂಗಭೂಮಿ ಚರಿತ್ರೆಯಲ್ಲಿ ಅರ್ಧ ಶತಮಾನ ಕಳೆದವರು. ತಮ್ಮ 27ನೇ ವಯಸ್ಸಿಗೆ ರಂಗಪ್ರವೇಶಿಸಿದ್ದ ಇವರು, ಕುಂತಿ, ಗಾಂಧಾರಿ, ದ್ರೌಪದಿ, ಉತ್ತರೆ, ಸೀತೆ ಪಾತ್ರಗಳ ಮೂಲಕ ಜನಮಾನಸದಲ್ಲಿ ಅಚ್ಚೊತ್ತಿದ್ದ ಕಲಾವಿದೆ. ಬಳ್ಳಾರಿ ಸುಭದ್ರಮ್ಮ ಅಂತಲೇ ಖ್ಯಾತಿ ಗಳಿಸಿದ್ದ ರಂಗಕರ್ಮಿ. ಎರಡು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಿಗೆ ಬಣ್ಣ ಹಚ್ಚಿದ್ದ ಸುಭದ್ರಮ್ಮನವರು. ರಾಜ್ಯೋತ್ಸವ ಪ್ರಶಸ್ತಿ,

ಹಿರಿಯ ರಂಗಭೂಮಿ ಕಲಾವಿದೆ ನಾಡೋಜ ಸುಭದ್ರಮ್ಮ ಮನ್ಸೂರು ವಿಧಿವಶ Read More »

ಕರಾವಳಿ, ಕರ್ನಾಟಕ
Scroll to Top