ಬೆಳ್ತಂಗಡಿ: ಪತ್ನಿಗೆ ಕೊರೋನಾ ದೃಢ ➤ ಆಸ್ಪತ್ರೆಯ ಗೇಟ್ ಮುರಿದು ತಾಯಿ-ಮಗುವನ್ನು ಕರೆದೊಯ್ದ ಪತಿರಾಯ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜು. 17, ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮಹಿಳೆಯೋರ್ವರಿಗೆ ಕೊರೊನಾ ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆ ಆಕೆಯ ಪತಿಯು ಆಸ್ಪತ್ರೆಯ ಗೇಟಿನ ಬೀಗ ಮುರಿದು ಒಳ ಪ್ರವೇಶಿಸಿ ಮಗು ಮತ್ತು ಬಾಣಂತಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ನಾವೂರು ಗ್ರಾಮದ ಮಹಿಳೆಯೋರ್ವರು ಬುಧವಾರ ಇಲ್ಲಿ ಹೆರಿಗೆಗಾಗಿ ದಾಖಲಾಗಿದ್ದರು. ಈ ಸಂದರ್ಭ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಬುಧವಾರ ರಾತ್ರಿಯೇ ಅವರಿಗೆ ಹೆರಿಗೆ ಆಗಿತ್ತು. ಗುರುವಾರ ಸಂಜೆ […]

ಬೆಳ್ತಂಗಡಿ: ಪತ್ನಿಗೆ ಕೊರೋನಾ ದೃಢ ➤ ಆಸ್ಪತ್ರೆಯ ಗೇಟ್ ಮುರಿದು ತಾಯಿ-ಮಗುವನ್ನು ಕರೆದೊಯ್ದ ಪತಿರಾಯ Read More »

ಕರಾವಳಿ, ಕರ್ನಾಟಕ

ಅಪಾಯಕಾರಿ ಮರಗಳನ್ನ ತೆರವುಗೊಳಿಸಿದ ಉತ್ಸಾಹಿ ಯುವಕರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಜು.17: ರಾಷ್ಟ್ರೀಯ ಹೆದ್ದಾರಿ 75ರ ಬೆಳ್ತಂಗಡಿ ತಾಲೂಕಿನ ಎಂಜಿರದಿಂದ ಅರಸಿನಮಕ್ಕಿ ಹೋಗುವ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ ಅಪಾಯದ ಅಂಚಿನಲ್ಲಿರುವ ಬೃಹದಾಕಾರದ ಮರವನ್ನು ರೆಖ್ಯಾದ ಗ್ರಾಮಸ್ಥರು, ಮೆಸ್ಕಾಂ ಸಿಬ್ಬಂದಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸೇರಿ ಗುರುವಾರದಂದು ತೆರವುಗೊಳಿಸಿದ್ದಾರೆ.     ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಅಶೋಕ್ ಸಹಾಯಕ ಅಧಿಕಾರಿ ರಾಜೇಶ್, ವಿದ್ಯುತ್ ಇಲಾಖೆಯ ಲೈನ್ ಮ್ಯಾನ್ ಕುಮಾರ್ ಸೇರಿದಂತೆ ಗ್ರಾಮದ ಹಲವು ಉತ್ಸಾಹಿ ಯುವಕರು ಸೇರಿಕೊಂಡು ಅಪಾಯದಅಂಚಿನಲ್ಲಿದ್ದ ಮರಗಳನ್ನ

ಅಪಾಯಕಾರಿ ಮರಗಳನ್ನ ತೆರವುಗೊಳಿಸಿದ ಉತ್ಸಾಹಿ ಯುವಕರು Read More »

ಕರಾವಳಿ, ಕರ್ನಾಟಕ

ಕಡಬಕ್ಕೆ ಮತ್ತೆ ಕೊರೋನಾಘಾತ‼️ ➤ ಹೋಂಗಾರ್ಡ್ ಸೇರಿದಂತೆ ಇಬ್ಬರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಜು.17. ಕೊರೋನಾ ಮಹಾಮಾರಿಯು ಗ್ರಾಮೀಣ ಭಾಗದಲ್ಲೂ ತನ್ನ ಅಟ್ಟಹಾಸವನ್ನು ಮುಂದುವರಿಸುತ್ತಲೇ ಇದ್ದು, ಕಡಬದಲ್ಲಿ ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕಡಬದ ಹೋಮ್ ಗಾರ್ಡ್ ಹಾಗೂ ನೆಟ್ಟಣದ ರೈಲ್ವೇ ಸಿಬಂದಿಗೆ ಸೋಂಕು ದೃಢಪಟ್ಟಿದೆ. ಗುರುವಾರದಂದು ಕಡಬ ಸಮೀಪದ ಕೋಡಿಂಬಾಳದ ಇಬ್ಬರಲ್ಲಿ ಕೊರೋನಾ ಪತ್ತೆಯಾಗಿತ್ತು. ಇದೀಗ ಮತ್ತೆ ಕೊರೋನಾ ಸೋಂಕು ಆವರಿಸಿದೆ.

ಕಡಬಕ್ಕೆ ಮತ್ತೆ ಕೊರೋನಾಘಾತ‼️ ➤ ಹೋಂಗಾರ್ಡ್ ಸೇರಿದಂತೆ ಇಬ್ಬರಿಗೆ ಕೊರೋನಾ ಪಾಸಿಟಿವ್ Read More »

ಬ್ರೇಕಿಂಗ್ ನ್ಯೂಸ್

ಅಕ್ರಮ ದನ ಸಾಗಾಟದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ,ಜು.17 : ಪಿಕಪ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು  ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸುಳ್ಯ ಪೊಲೀಸರು ದಾಳಿ ನಡೆಸಿ ಒರ್ವನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊಡಗು ನಿವಾಸಿ ಕರಿಕೆ ಮನೆಯ ಅಬ್ದುಲ್ ಫಾರೂಕ್ (45) ಎಂದು ಗುರುತಿಸಲಾಗಿದೆ. ಜುಲೈ 14 ರಂದು ಸುಳ್ಯ ಕಸಬಾ ಗ್ರಾಮದ ಜ್ಯೋತಿ ಸರ್ಕಲ್ ಎಂಬಲ್ಲಿ ಪಿಕಪ್ ವಾಹನದಲ್ಲಿ ಎರಡು ದನಗಳನ್ನು  ತೆಗೆದುಕೊಂಡು ಹೋಗುತ್ತಿದ್ದುದನ್ನು ಕಂಡು ಸುಳ್ಯ ಪೊಲೀಸ್ ಠಾಣೆ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ತಡೆಯಲು ಯತ್ನಿಸಿದ್ದರು. ಆದರೆ

ಅಕ್ರಮ ದನ ಸಾಗಾಟದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ➤ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೌಕ್ರಾಡಿಯ ಇಬ್ಬರಿಗೆ ಕೊರೋನಾ ಪಾಸಿಟಿವ್ ➤ ನೆಲ್ಯಾಡಿಯ ಖಾಸಗಿ ಆಸ್ಪತ್ರೆ ಸೀಲ್ ಡೌನ್..⁉️

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.17. ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕೌಕ್ರಾಡಿಯ ಇಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜ್ವರದ ಹಿನ್ನೆಲೆಯಲ್ಲಿ ನೆಲ್ಯಾಡಿಯ ಪ್ರಸಿದ್ಧ ಖಾಸಗಿ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದ್ದು, ಇವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು, ಪಾಸಿಟಿವ್ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನೆಲ್ಯಾಡಿಯ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡುವ ಬಗ್ಗೆ ಅಧಿಕಾರಿಗಳಿಂದ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕೌಕ್ರಾಡಿಯ ಇಬ್ಬರಿಗೆ ಕೊರೋನಾ ಪಾಸಿಟಿವ್ ➤ ನೆಲ್ಯಾಡಿಯ ಖಾಸಗಿ ಆಸ್ಪತ್ರೆ ಸೀಲ್ ಡೌನ್..⁉️ Read More »

ಬ್ರೇಕಿಂಗ್ ನ್ಯೂಸ್

ಸುಖಮಯ ದಾಂಪತ್ಯ ತಂತ್ರ ಮತ್ತು ದಿನ ಭವಿಷ್ಯ

ದಂಪತಿಗಳ ಸಮಸ್ಯೆಯನ್ನು ಬಗೆಹರಿಸಲು ಶುಕ್ರವಾರದ ದಿನದಂದು 5 ನಿಂಬೆಹಣ್ಣು, ಇಬ್ಬರ ಅನುಪಯುಕ್ತ ವಸ್ತು, ಹರಿಶಿಣ, ಕುಂಕುಮ, ಉತ್ತರಾಣಿ ಗಿಡ, ಬನ್ನಿ ಗಿಡ, ತುಳಸಿ ಗಿಡ, ಸ್ವಲ್ಪ ಪ್ರಮಾಣದಲ್ಲಿ ಹಾಕಿ ಬಿಳಿಯ ಬಟ್ಟೆಯಲ್ಲಿ ಮೂಟೆ ಕಟ್ಟಬೇಕು ಇದನ್ನು ಹರಿಯುವ ನೀರಿಗೆ ಬಿಡಿ ಇದರಿಂದ ದಾಂಪತ್ಯ ಜೀವನ ಸುಖಮಯವಾಗಿ ನಡೆಯುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ,

ಸುಖಮಯ ದಾಂಪತ್ಯ ತಂತ್ರ ಮತ್ತು ದಿನ ಭವಿಷ್ಯ Read More »

ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ನಾಳೆ ಶುಕ್ರವಾರ (ಜು.17) ಜುಮಾ ನಮಾಝ್ ಇರಲ್ಲ ➤ ಡಿ.ಸಿ ಆದೇಶ

(ನ್ಯೂಸ್ ಕಡಬ)newskadaba.com ಮಂಗಳೂರು: ಜು.16, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 17ರ ಶುಕ್ರವಾರದಂದು ಜುಮಾ ನಮಾಜ್ ರದ್ದುಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಜುಲೈ 17ರ ಶುಕ್ರವಾರದ ಜುಮಾ ನಮಾಝ್ ಸೇರಿದಂತೆ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿದ್ದು, ಜುಲೈ 22 ರವರೆಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ನಾಳೆ ಶುಕ್ರವಾರ (ಜು.17) ಜುಮಾ ನಮಾಝ್ ಇರಲ್ಲ ➤ ಡಿ.ಸಿ ಆದೇಶ Read More »

ಕರ್ನಾಟಕ

ಭಾರೀ ಮಳೆಗೆ ನಲುಗಿದ ಕರಾವಳಿ ➤ ಮಿತ್ತಕೋಡಿಯಲ್ಲಿ ಬೃಹತ್ ಗುಡ್ಡ ಕುಸಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.16. ದ.ಕ.ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಗರದ ಹೊರವಲಯದ ಮುಡಿಪು ಸಮೀಪದ ಮಿತ್ತಕೋಡಿ ಬಳಿ ಗುಡ್ಡ ಕುಸಿದು ಬಿದ್ದ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಕರಾವಳಿಯಲ್ಲಿ ಗುರುವಾರ ಮುಂಜಾನೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದು, ಸಂಜೆಯ ವೇಳೆಗೆ ಮಿತ್ತಕೋಡಿ ಪೆಟ್ರೋಲ್ ಪಂಪು ಹತ್ತಿರದ ಬೃಹತ್ ಗುಡ್ಡವು ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಿಂದ ಪೆಟ್ರೋಲ್ ಪಂಪ್ ಕಟ್ಟಡಕ್ಕೆ ಸ್ವಲ್ಪ ಹಾನಿಯಾಗಿದೆ. ಅಲ್ಲದೆ ಮಳೆ ಇನ್ನಷ್ಟು ಸುರಿದರೆ ಈ ಪ್ರದೇಶದ ಇನ್ನಷ್ಟು ಗುಡ್ಡ ಪ್ರದೇಶವು ಕುಸಿಯುವ

ಭಾರೀ ಮಳೆಗೆ ನಲುಗಿದ ಕರಾವಳಿ ➤ ಮಿತ್ತಕೋಡಿಯಲ್ಲಿ ಬೃಹತ್ ಗುಡ್ಡ ಕುಸಿತ Read More »

ಕರಾವಳಿ, ಕರ್ನಾಟಕ

ಪೊಲೀಸ್ ಸಿಬ್ಬಂದಿಗಳ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ➤ ಕಾನ್‍ಸ್ಟೇಬಲ್ ಮೃತ್ಯು

(ನ್ಯೂಸ್ ಕಡಬ) newskadaba.com.ಮಂಡ್ಯ,ಜು.16:  ಪೊಲೀಸ್ ಸಿಬ್ಬಂದಿ ಸಂಚರಿಸುತ್ತಿದ್ದ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಪೇದೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಎಎಸ್ಐ ಗಂಭೀರ ಗಾಯಗೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕು ತೊರೆಶೆಟ್ಟಹಳ್ಳಿ ಗ್ರಾಮದಲ್ಲಿ ಇಂದು ಈ ಅವಘಡ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಪೇದೆ ಅರುಣ್(26) ಮೃತರು. ಕೆಸ್ತೂರಿನ ಎಎಸ್ಐ ಬಾಲಯ್ಯ ಗಾಯಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ತೊಪ್ಪನಹಳ್ಳಿಯ ವ್ಯಕ್ತಿಗೆ ಅರುಣ್ ಗನ್‌ಮ್ಯಾನ್ ಆಗಿದ್ದರು. ಕಾರ್ಯನಿಮಿತ್ತ ತೊರೆಶೆಟ್ಟಹಳ್ಳಿಗೆ ಆಗಮಿಸಿದ್ದರು. ಈ ವೇಳೆ ಪೇದೆ ಸವಾರಿ ಮಾಡುತ್ತಿದ್ದ ಬೈಕ್​ ಮತ್ತು ಎಎಸ್​ಐ

ಪೊಲೀಸ್ ಸಿಬ್ಬಂದಿಗಳ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ➤ ಕಾನ್‍ಸ್ಟೇಬಲ್ ಮೃತ್ಯು Read More »

ಕರ್ನಾಟಕ

ಪುತ್ತೂರು: ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ)newskadaba.com ಪುತ್ತೂರು: ಜು.16, ವ್ಯಕ್ತಿಯೋರ್ವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಪಡುವನ್ನೂರು ಗ್ರಾಮದ ಕೆಲಂದೂರು ಎಂಬಲ್ಲಿ ಇಂದು ನಡೆದಿದೆ. ಮೃತರನ್ನು ಪಡುವನ್ನೂರು ಗ್ರಾಮದ ಕೆಲಂದೂರು ನಿವಾಸಿ ಗಣಪತಿ ಭಟ್ (58ವ) ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸ್ಥಳಕ್ಕೆ ಸಂಪ್ಯ ಎಸ್‌.ಐ. ಉದಯರವಿ ಹಾಗೂ ಈಶ್ವರಮಂಗಲ ಹೊರಠಾಣಾ ಸಿಬ್ಬಂದಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಪುತ್ತೂರು: ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top