ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆಗೊಳಿಸಿದ ರಾಜ್ಯ ಸರಕಾರ ➤ ಸೆ. 7ರಿಂದ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನಿರ್ದೇಶನದಂತೆ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಂತೆ ಸೆಪ್ಟೆಂಬರ್ 30ರವರೆಗೂ ಶಾಲಾ-ಕಾಲೇಜುಗಳ ಪುನರಾರಂಭ ಇಲ್ಲ. ಸೆಪ್ಟೆಂಬರ್ 7ರಿಂದ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 30ರವರೆಗೆ ಶಾಲಾ ಕಾಲೇಜುಗಳ ಆರಂಭಕ್ಕೆ ಅವಕಾಶ ನೀಡಿಲ್ಲ. ಆನ್ ಲೈಕ್ […]

ಅನ್ ಲಾಕ್ 4.0 ಮಾರ್ಗಸೂಚಿ ಬಿಡುಗಡೆಗೊಳಿಸಿದ ರಾಜ್ಯ ಸರಕಾರ ➤ ಸೆ. 7ರಿಂದ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ Read More »

ಕರಾವಳಿ

ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಕೊರೊನಾ ಸೋಂಕಿಗೆ ಮೃತ್ಯು

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,. ಆ,31:  ದೇಶದಲ್ಲಿ ಕೊರೊನಾ ವೈರಸ್ ಅಬ್ಬರ ಮುಂದುವರೆದಿದ್ದು, ದೇಶದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್. ಪದ್ಮಾವತಿ (103) ಅವರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಎಸ್.ಪದ್ಮಾವತಿ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.     ಹನ್ನೊಂದು ದಿನಗಳ ಹಿಂದೆ ಕೋವಿಡ್-19 ಸೋಂಕು ಕಂಡುಬಂದ ಇವರನ್ನು ನ್ಯಾಷನಲ್ ಹಾರ್ಟ್ ಇನ್‌ಸ್ಟಿಟ್ಯೂಟ್ (ಎನ್‌ಎಚ್‌ಐ)ಗೆ ದಾಖಲಿಸಲಾಗಿತ್ತು. 1981ರಲ್ಲಿ ಈ ಸಂಸ್ಥೆಯನ್ನು

ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಕೊರೊನಾ ಸೋಂಕಿಗೆ ಮೃತ್ಯು Read More »

ಕರಾವಳಿ

ಪ್ಲಾಸ್ಮಾದಿಂದ ಕಾನ್‌ಸ್ಟೆಬಲ್‌ ಜೀವ ರಕ್ಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 33: ತೀವ್ರ ಅಸ್ವಸ್ಥಗೊಂಡಿದ್ದ ಇಲ್ಲಿನ ಕೊಣಾಜೆಯಲ್ಲಿ ನೆಲೆಸಿರುವ ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ (ಕೆಎಸ್‌ಆರ್‌ಪಿ) ಏಳನೇ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿರುವ ರವಿ ರೈ (51) ಅವರ ಜೀವವನ್ನು ರಕ್ಷಣೆ ಮಾಡಲು ಬೆಂಗಳೂರಿನಿಂದ ಮಂಗಳೂರಿಗೆ ರಾತ್ರೋರಾತ್ರಿ ಪ್ಲಾಸ್ಲಾ ತಂದು ಚಿಕಿತ್ಸೆ ನೀಡಿದ ಘಟನೆ ನಡೆದಿದೆ. ಮೂತ್ರಕೋಶದಲ್ಲಿ ಸಮಸ್ಯೆಯಿದ್ದ ರೈ ಅವರಿಗೆ ತೀವ್ರ ಜ್ವರವೂ ಇತ್ತು. ಅವರನ್ನು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಕೊರೊನಾ

ಪ್ಲಾಸ್ಮಾದಿಂದ ಕಾನ್‌ಸ್ಟೆಬಲ್‌ ಜೀವ ರಕ್ಷಣೆ Read More »

ಕರಾವಳಿ, ಕರ್ನಾಟಕ

ನಾಳೆಯಿಂದ ಪದವಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಪ್ರಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31. ನಾಳೆಯಿಂದ (ಸೆ.1) ರಾಜ್ಯದ ಪದವಿ ಕಾಲೇಜುಗಳಲ್ಲಿ ಆನ್ ಲೈನ್ ತರಗತಿಗಳು ಪ್ರಾರಂಭಗೊಳ್ಳಲಿದ್ದು, ಕೊರೋನಾ ಕಾಲದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಪದವಿ ಶೈಕ್ಷಣಿಕ ಚಟುವಟಿಕೆಗೆ ಚಾಲನೆ ನೀಡುತ್ತಿದೆ. ಸೆ. 1 ರಿಂದ ದ್ವಿತೀಯ, ತೃತೀಯ ಪದವಿ ತರಗತಿಗಳಿಗೆ ಆನ್ ಲೈನ್ ತರಗತಿಗಳನ್ನು ಆರಂಭಿಸಲಾಗುತ್ತದೆ. ಆ.1 ರಿಂದ ಎಲ್ಲಾ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರಬೇಕಿದೆ. ಸದ್ಯ ಆನ್ ಲೈನ್ ಪಾಠದ ಜೊತೆಗೆ ಆಡಳಿತಾತ್ಮಕ ಚಟುವಟಿಕೆಗೆ ಸೂಚನೆ ನೀಡಿದ ಸುಪ್ರೀಂಕೋರ್ಟ್  ಇನ್ನು

ನಾಳೆಯಿಂದ ಪದವಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ಪ್ರಾರಂಭ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಾಳೆಯಿಂದ ಪುನರಾರಂಭಗೊಳ್ಳಲಿದೆ ಕೆ.ಆರ್.ಮಾರುಕಟ್ಟೆ ➤ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವಂತೆ ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31. ಕೊರೊನಾ ವೈರಸ್ ಹಿನ್ನೆಲೆಯಿಂದಾಗಿ ಬಂದ್ ಆಗಿದ್ದ ಕೆ.ಆರ್. ಮಾರುಕಟ್ಟೆ ನಾಳೆಯಿಂದ ಪುನರಾರಂಭಗೊಳ್ಳಲಿದೆ. ಕೊರೊನಾದಿಂದಾಗಿ ನಾಲ್ಕೂವರೆ ತಿಂಗಳುಗಳ  ಬಳಿಕ ಕೆ.ಆರ್. ಮಾರ್ಕೆಟ್ ಪುನಾರಂಭಗೊಳ್ಳಲಿದ್ದು, ಮಾರುಕಟ್ಟೆಯ ವ್ಯಾಪ್ತಿಯ ಹಲವು ಭಾಗಗಳಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. ಇನ್ನು ಮಾರುಕಟ್ಟೆಗೆ ಆಗಮಿಸುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಬಾಕ್ಸ್ ಗಳನ್ನು ನಿರ್ಮಿಸಲಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದವರ ಮೇಲೆ ನಿಗಾ ಇಡಲು ಮಾರ್ಷಲ್ ಗಳ ನೇಮಕ ಮಾಡಲು ಬಿಬಿಎಂಪಿ ನಿರ್ಧರಿಸಿದೆ ಎನ್ನಲಾಗಿದೆ.

ನಾಳೆಯಿಂದ ಪುನರಾರಂಭಗೊಳ್ಳಲಿದೆ ಕೆ.ಆರ್.ಮಾರುಕಟ್ಟೆ ➤ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವಂತೆ ಸೂಚನೆ Read More »

ಕರಾವಳಿ

ಕುಕ್ಕೆ ಶ್ರಿ ಸುಬ್ರಹ್ಮಣ್ಯ ದೇವಸ್ಥಾನದ ಜಾಗವನ್ನು ಲೀಸ್ ಗೆ ಕೊಡದಂತೆ ಮನವಿ

(ನ್ಯೂಸ್ ಕಡಬ) newskadaba.com ಕುಕ್ಕೆ ಶ್ರೀ ಸುಬ್ರಹ್ಮಣ್ಯ. ಆ,31:  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ಭೂಮಿಯನ್ನು ಸಂಸ್ಥೆಗೆ ಅಥವಾ ಖಾಸಗಿಯವರಿಗೆ ಲೀಸ್ ಗೆ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿಮನವಿ ಸಲ್ಲಿಸಲಾಗಿದೆ.   ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕುಮಾರ್ ಕರಿಕಳ್ಳ ವಿರೋಧ ವ್ಯಕ್ತಪಡಿಸಿ ಇಂದು ದೇವಳದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ. ಎಚ್ ಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀನಾಥ್ ಭಟ್ ಪ್ರಶಾಂತ್ ಮಾಣಿಲ. ಗುರು ಪ್ರಸಾದ್ ಉಪಸ್ಥಿತರಿದ್ದರು.  

ಕುಕ್ಕೆ ಶ್ರಿ ಸುಬ್ರಹ್ಮಣ್ಯ ದೇವಸ್ಥಾನದ ಜಾಗವನ್ನು ಲೀಸ್ ಗೆ ಕೊಡದಂತೆ ಮನವಿ Read More »

ಕರ್ನಾಟಕ

ಹೆತ್ತವ್ವನ ಮೃತದೇಹವನ್ನು ಪುಟ್ ಪಾತ್ ನಲ್ಲಿ ಬಿಟ್ಟುಹೋದ ಪಾಪಿ ಮಗ..!

(ನ್ಯೂಸ್ ಕಡಬ) newskadaba.com ಹೈದ್ರಾಬಾದ್, ಆ. 31. ವೃದ್ಧ ತಾಯಿಯ ಮೃತದೇಹವನ್ನು ಮಗನೊಬ್ಬ ಪುಟ್ ಪಾತ್ ನಲ್ಲಿಯೇ ಬಿಟ್ಟು ಹೋದ ಘಟನೆ ಇಲ್ಲಿನ ಬಂಜಾರ ಹಿಲ್ ಪ್ರದೇಶದಲ್ಲಿ ನಡೆದಿದೆ. ಈ ಮಹಿಳೆ ಜ್ವರದಿಂದಾಗಿ ಮೃತಪಟ್ಟಿದ್ದು, ಬ್ಲಾಂಕೆಟ್ ವೊಂದರಲ್ಲಿ ಮೃತದೇಹವನ್ನು ಸುತ್ತಿದ ಮಗ  ಪುಟ್ ಪಾತ್ ನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ವಶಕ್ಕೆ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಅಪಾರ್ಟ್ ಮೆಂಟ್ ವೊಂದರ ಕಾಂಪ್ಲೆಕ್ಸ್ ನಲ್ಲಿ ವಾಚ್

ಹೆತ್ತವ್ವನ ಮೃತದೇಹವನ್ನು ಪುಟ್ ಪಾತ್ ನಲ್ಲಿ ಬಿಟ್ಟುಹೋದ ಪಾಪಿ ಮಗ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ ಮತ್ತು ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 21 ಕೊರೋನಾ ಪಾಸಿಟಿವ್‌ ದೃಢ

(ನ್ಯೂಸ್ ಕಡಬ) newskadaba.com ಕಡಬ , ಆ. 31: ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು ಒಟ್ಟು 21 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ. ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ 49 ವರ್ಷದ ಮಹಿಳೆಯಲ್ಲಿ ಕೊರೋನಾ ದೃಡಪಟ್ಟಿದೆ. ಪುತ್ತೂರು ತಾಲೂಕಿನ ಕಬಕ ಗ್ರಾಮದ 49 ವರ್ಷದ ಪುರುಷ, ಕೆಯ್ಯೂರು ಗ್ರಾಮದ 40 ವರ್ಷದ ಪುರುಷ, 34 ವರ್ಷದ ಮಹಿಳೆ, 52ವರ್ಷದ ಮಹಿಳೆ, 16 ವರ್ಷದ ಬಾಲಾಕಿ, 25 ವರ್ಷದ ಮಹಿಳೆ, 50 ವರ್ಷದ ಮಹಿಳೆ, 14 ವರ್ಷದ

ಕಡಬ ಮತ್ತು ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 21 ಕೊರೋನಾ ಪಾಸಿಟಿವ್‌ ದೃಢ Read More »

ಕರಾವಳಿ, ಕರ್ನಾಟಕ

ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ವಿಮಾನ ನಿಲ್ದಾಣದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕೇರಳ . ಆ,31:  ವಿದೇಶದಿಂದ ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ವಿಮಾನ ನಿಲ್ದಾಣದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಚೆರುಥೋನಿ ಮೂಲದ 28 ವರ್ಷದ ಲೀಜಾ ಜೋಸ್ ಮೃತ ವಿದ್ಯಾರ್ಥಿನಿ. ಲೀಸಾ ಕಳೆದ ನಾಲ್ಕು ವರ್ಷಗಳಿಂದ ದಕ್ಷಿಣ ಕೊರಿಯದ ಪುಸಾನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದರು.   ಕೇರಳಕ್ಕೆ ವಾಪಸ್ ಬರಲೆಂದು ಲೀಸಾ, ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದ ಲೀಸಾ ಏಕಾಏಕಿ ಕುಸಿದು

ರಾಜ್ಯಕ್ಕೆ ವಾಪಸ್ ಆಗುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ವಿಮಾನ ನಿಲ್ದಾಣದಲ್ಲೇ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ದಾನಿಗಳ ಸಹಾಯದಿಂದ ಚೇತರಿಸಿಕೊಂಡ ಬಡ ಜೀವ ➤ ಕೃತಜ್ಞತೆ ಸಲ್ಲಿಸಿದ ಹೆತ್ತಕರುಳು

(ನ್ಯೂಸ್ ಕಡಬ) newskadaba.com ಸುಳ್ಯ, ಆ. 31. ಮೆದುಳಿನ ಸಮಸ್ಯೆ ಬಾಧಿಸಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ತಾಲೂಕಿನ ಮುರುಳ್ಯ ಗ್ರಾಮದ ಪೊಳೆಂಜ ಪುಷ್ಪಾವತಿ ಎಂಬವರ ಮಗ ನವೀನ್ ಗೆ ಶೀಘ್ರವಾಗಿ ಚಿಕಿತ್ಸೆ ಒದಗಿಸುವ ಅಗತ್ಯವಿದ್ದುದ್ದರಿಂದ ಬಡತನದಲ್ಲಿದ್ದ ಇವರಿಗೆ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈ ಕಾರಣದಿಂದ ಜಾಲತಾಣಗಳಲ್ಲಿ ಚಿಕಿತ್ಸೆಗೆ “ಸಹಾಯ ಹಸ್ತ ” ದಾನಿಗಳು ನೆರವು ನೀಡುವಂತೆ ಮನವಿ ಮಾಡಲಾಗಿತ್ತು.‌ ಕೇವಲ ಹತ್ತು ದಿನಗಳ ಕಾಲಾವಧಿಯಲ್ಲಿ ಚಿಕಿತ್ಸೆಗೆ ಬೇಕಾದ ಹಣವು ತಾಯಿಯ ಖಾತೆಗೆ ಹರಿದು ಬಂದಿತ್ತು. ಸಹೃದಯಿ

ದಾನಿಗಳ ಸಹಾಯದಿಂದ ಚೇತರಿಸಿಕೊಂಡ ಬಡ ಜೀವ ➤ ಕೃತಜ್ಞತೆ ಸಲ್ಲಿಸಿದ ಹೆತ್ತಕರುಳು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top