ಕಡಬ: ವಿದ್ಯುತ್ ಸ್ಪರ್ಶಿಸಿ ಬೃಹತ್ ಆನೆ ಸಾವು

(ನ್ಯೂಸ್ ಕಡಬ) newskadaba.com ಕಡಬ, ಸೆ.01. ವಿದ್ಯುತ್ ಶಾಕ್ ತಗುಲಿ ಬೃಹತ್ ಗಾತ್ರದ ಆನೆಯೊಂದು ಸಾವನ್ನಪ್ಪಿದ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಪುತ್ತಿಲ ಎಂಬಲ್ಲಿ ನಡೆದಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ರವಾನಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಕಡಬ: ವಿದ್ಯುತ್ ಸ್ಪರ್ಶಿಸಿ ಬೃಹತ್ ಆನೆ ಸಾವು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ಅಂತರ್ ಜಿಲ್ಲಾ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 01. ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಫರಂಗಿಪೇಟೆಯ ಸೂಪರ್ ಮಾರ್ಕೆಟ್ ನಲ್ಲಿ ಆಗಸ್ಟ್ 25 ರ ರಾತ್ರಿಗೆ ಸುಮಾರು 25 ಸಾವಿರ ಮೌಲ್ಯದ ದಿನಸಿ ಸಾಮಾಗ್ರಿ ಹಾಗೂ ನಗದು ಕಳವು‌ ಮಾಡಿರುವ ಆರೋಪಿಯನ್ನು ಕೆಲವೇ ದಿನಗಳಲ್ಲಿ‌ ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕಿನ ಬೆಂಗ್ರೆ ಕಸಬ ನಿವಾಸಿಯಾದ ಮಹಮ್ಮದ್ ಅನ್ಸಾರ್ ಎಂದು ಗುರುತಿಸಲಾಗಿದೆ. ಈತನು ಈ ಹಿಂದೆ ಮಂಗಳೂರು ನಗರ ವ್ಯಾಪ್ತಿಯ ಪಾಂಡೇಶ್ವರ, ಬಂದರು,ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ

ಬಂಟ್ವಾಳ: ಅಂತರ್ ಜಿಲ್ಲಾ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಪ್ಪಿನಂಗಡಿ: ಕಾರು ಮತ್ತು ಬೈಕ್ ನಡುವೆ ಅಪಘಾತ ➤ ಬೈಕ್ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 01. ಇಲ್ಲಿನ ಹಿರೇಬಂಡಾಡಿ ಸಮೀಪ ಮುರದಮೇಲು ಎಂಬಲ್ಲಿ ಬೈಕೊಂದು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೋರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡವರನ್ನು ಕಡಬ ಗ್ರಾಮದ ಪಾಲೋಳಿಯ ಜನಾರ್ಧನ್ ಗೌಡ ಗಂಭೀರ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಜತೆಯಲ್ಲಿದ್ದ ಕಾರು ಚಾಲಕನ ಸಂಬಂಧಿ ಪುತ್ತೂರು ಆಸ್ಪತ್ರೆ ಗೆ ದಾಖಲಿಸಿ ಮಾನವೀಯತೆ ಮರೆದಿದ್ದಾರೆ. ಈತ ನಿನ್ನೆಯಷ್ಟೇ ಅಕ್ರಮ ಪಿಸ್ತೂಲ್ ಕೇಸ್ ವಿಚಾರಕ್ಕೆ ಸಂಬಂಧಿಸಿದ

ಉಪ್ಪಿನಂಗಡಿ: ಕಾರು ಮತ್ತು ಬೈಕ್ ನಡುವೆ ಅಪಘಾತ ➤ ಬೈಕ್ ಸವಾರ ಗಂಭೀರ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೋವಿಡ್ ಪರೀಕ್ಷೆಗೆ ದರ ನಿಗದಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31.  ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಕ್ಕೆ ಸರ್ಕಾರಿ ಆಸ್ಪತ್ರೆಗಳು ಆರ್‍.ಟಿ.ಪಿ.ಸಿ.ಆರ್ ಪರೀಕ್ಷೆಗೆ ಮಾದರಿಯನ್ನು ಕಳುಹಿಸಿದರೆ ಅದರ ಮೊತ್ತ ರೂ 1,500 ನಿಗದಿಯಾಗಿರುತ್ತದೆ. ಇದರಲ್ಲಿ ಸ್ಕ್ರೀನಿಂಗ್, ದೃಢೀಕರಣ ಪರೀಕ್ಷೆ  ಜೊತಗೆ ಪಿಪಿಇ ಕಿಟ್ ಮೊತ್ತವು ಒಳಗೊಂಡಿರುತ್ತದೆ. ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷೆಗೆ ಮೊತ್ತ ರೂ 2,500 ನಿಗದಿಯಾಗಿರುತ್ತದೆ. ಈ ಮೊತ್ತದಲ್ಲಿ ಪಿಪಿಇ ಕಿಟ್ ದರವೂ ಒಳಗೊಂಡಿರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

ಕೋವಿಡ್ ಪರೀಕ್ಷೆಗೆ ದರ ನಿಗದಿ Read More »

ಕರಾವಳಿ, ಕರ್ನಾಟಕ

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. 2019- 20ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಎಸ್.ಎಸ್.ಎಲ್.ಸಿ. ಮತ್ತು  ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಅರ್ಜಿ ಆಹ್ವಾನಿಸಲಾಗಿದೆ. ಕೋರ್ಸ್ ವಿವರ ಇಂತಿವೆ:- ಜೂನ್-ಜುಲೈ 2020 ನೇ ಮಾಹೆಯಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ.60 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರೂ. 7 ಸಾವಿರ, ಶೇ.75ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ Read More »

ಕರಾವಳಿ, ಕರ್ನಾಟಕ

ಮಂಗಳೂರು ವಿವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವೆಬಿನಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರಿಕ ಕಲಿಕೆ ನಮ್ಮ ಆಧುನಿಕ ಜೀವನದ ಭಾಗವಾಗಿವೆ. ಆದರೆ ಇವುಗಳ ಅಭಿವೃದ್ಧಿ ಸವಾಲಿನ ಕೆಲಸ ಎಂದು ನ್ಯೂಯಾರ್ಕ್‍ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ನ್ ಪ್ರತೀಕ್ ಇರ್ವತ್ತೂರು ಹೇಳಿದರು. ಶುಕ್ರವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗ ಮತ್ತು ಐ.ಕ್ಯೂ.ಎ.ಸಿನಲ್ಲಿ ನಡೆದ ಎಮರ್ಜಿಂಗ್ ಟ್ರೆಂಡ್ಸ್ ಇನ್ ಇಂಟಲಿಜೆಂಟ್ ಕಂಪ್ಯೂಟಿಂಗ್ ಆಂಡ್ ಇನ್ಫಾರ್ಮೆಟಿಕ್ಸ್ ಕುರಿತು ಅಂತಾರಾಷ್ಟ್ರೀಯ ವೆಬಿನಾರ್ ಸರಣಿಯ ಮೊದಲ ಕಂತಿನಲ್ಲಿ ವಿಶೇಷ ಉಪನ್ಯಾಸ ನೀಡಿ

ಮಂಗಳೂರು ವಿವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವೆಬಿನಾರ್ Read More »

ಕರಾವಳಿ, ಕರ್ನಾಟಕ

ಕೆಎಸ್ಆರ್ಟಿಸಿ ಉಚಿತ ಬಸ್ ಪಾಸ್ ➤ ಸೇವಾಸಿಂಧೂ ಮೂಲಕ ಅರ್ಜಿ ಕಡ್ಡಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 31. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 2020-21 ನೇ ಸಾಲಿನ ಸಕಾಲ ಸಂಬಂಧಿತ ಸೇವೆಗಳಾದ ವಿದ್ಯಾರ್ಥಿ ಉಚಿತ, ರಿಯಾಯಿತಿ ಬಸ್ ಪಾಸ್, ವಿಕಲಚೇತನರ ರಿಯಾಯಿತಿ ಬಸ್ ಪಾಸ್, ಅಂಧರ ಉಚಿತ ಬಸ್ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಬಸ್ ಪಾಸ್, ಪತ್ನಿ / ವಿಧವಾ ಪತ್ನಿಯರ ಉಚಿತ ಕೂಪನ್ ಹಾಗೂ ಅಪಘಾತ ಪರಿಹಾರ ನಿಧಿ ಸೇವಾಸಿಂಧೂ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬಹುದು.ಫಲಾನುಭವಿಗಳ ಬಸ್ ಪಾಸ್ ನವೀಕರಿಸಿಕೊಳ್ಳಲು ಅಥವಾ ಹೊಸ ಪಾಸುಗಳನ್ನು

ಕೆಎಸ್ಆರ್ಟಿಸಿ ಉಚಿತ ಬಸ್ ಪಾಸ್ ➤ ಸೇವಾಸಿಂಧೂ ಮೂಲಕ ಅರ್ಜಿ ಕಡ್ಡಾಯ Read More »

ಕರಾವಳಿ, ಕರ್ನಾಟಕ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ನವದೆಹಲಿ. ಆ,31:  ಶ್ವಾಸಕೋಶದ ಸೋಂಕಿನಿಂದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ  ಇದೀಗಾ ಕೊನೆಯುಸಿರೆಳೆದಿದ್ದಾರೆ.  ಪುತ್ರ ಅಭಿಜಿತ್ ಟ್ವೀಟ್ ತಿಳಿಸಿದ್ದಾರೆ.  ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ.     ಅವರ ಸ್ಥಿತಿ ದಿನ ಕಳೆದಂತೆ ಹದಗೆಡುತ್ತಿದೆ ಎಂದು ಸೇನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು . 84 ವರ್ಷದ ಪ್ರಣಬ್ ಮುಖರ್ಜಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಇತ್ತೀಚೆಗೆ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗಿತ್ತು. ಪ್ರಣಬ್ ಮುಖರ್ಜಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್ನಿಲ್ಲ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

(ನ್ಯೂಸ್ ಕಡಬ) newskadaba.com ನವದೆಹಲಿ. ಆ,31:  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ. ಕೊರೊನಾ ಸೋಂಕಿಗೀಡಾಗಿದ್ದ ಪ್ರಣಬ್ ಮುಖರ್ಜಿ ನಿಧನ. ಶ್ವಾಸಕೋಶದ ಸೋಂಕಿನಿಂದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ  ಇದೀಗಾ ಕೊನೆಯುಸಿರೆಳೆದಿದ್ದಾರೆ.  ಪುತ್ರ ಅಭಿಜಿತ್ ಟ್ವೀಟ್ ತಿಳಿಸಿದ್ದಾರೆ.  ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ.     ಅವರ ಸ್ಥಿತಿ ದಿನ ಕಳೆದಂತೆ ಹದಗೆಡುತ್ತಿದೆ ಎಂದು ಸೇನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು . 84 ವರ್ಷದ ಪ್ರಣಬ್ ಮುಖರ್ಜಿ ಅವರ ಮೆದುಳಿನಲ್ಲಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಡಿ.ಕೆ. ಶಿವಕುಮಾರ್ ಕೊರೋನಾದಿಂದ ಗುಣಮುಖ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31. ಕೊರೋನಾ ಸೋಂಕು ತಗುಲಿದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಡಿ.ಕೆ. ಶಿವಕುಮಾರ್ ಗುಣಮುಖರಾಗಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಆಗಸ್ಟ್ 25ರಂದು ಇವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಬಳಿಕ ಆಸ್ಪತ್ರೆಯಿಂದಲೇ ಪಕ್ಷದ ಮುಖಂಡರ ಜೊತೆ ಆನ್ ಲೈನ್ ಮೂಲಕ ಸಭೆ ನಡೆಸುತ್ತಿದ್ದರು. ಇದೀಗ ಡಿಸ್ ಚಾರ್ಜ್ ಆಗಿ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಡಿ.ಕೆ. ಶಿವಕುಮಾರ್ ಕೊರೋನಾದಿಂದ ಗುಣಮುಖ Read More »

ಕರಾವಳಿ
Scroll to Top