ಮಂಗಳೂರು :ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು. ಸೆ.04:  ಮಂಗಳೂರು ಬಂದರು ಠಾಣೆಯ ಪೊಲೀಸ್ ಸಿಬ್ಬಂದಿ ದಿನೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ದಿನೇಶ್(44) ಮೃತಪಟ್ಟ ಪೊಲೀಸ್ ಸಿಬ್ಬಂದಿ. ದಿನೇಶ್ ರವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಗುರುವಾರ ಬೆಳಗ್ಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ಧಾರೆ. ಎಂದು ಮೂಲಗಳು ತಿಳಿಸಿವೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಕರ್ತವ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಉತ್ತಮ ಸೇವಾ ದಾಖಲೆ ಹೊಂದಿದ್ದರು.

ಮಂಗಳೂರು :ಹೃದಯಾಘಾತದಿಂದ ಪೊಲೀಸ್ ಸಿಬ್ಬಂದಿ ನಿಧನ Read More »

ಕರಾವಳಿ

ಕಾಸರಗೋಡು: ಅಪಾರ್ಟ್‌ಮೆಂಟ್‌ನಲ್ಲಿ ಬಚ್ಚಿಟ್ಟ ಗಾಂಜಾ ವಶಕ್ಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 04: ಅಪಾರ್ಟ್ ಮೆಂಟ್‌‌ವೊಂದರಲ್ಲಿ ಬಚ್ಚಿಡಲಾಗಿದ್ದ ಸುಮಾರು 18. 5 ಕಿಲೋ ಗಾಂಜಾವನ್ನು ಕುಂಬಳೆ ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ.   ಆರೋಪಿ ಸಯ್ಯಿದ್ ಜಾಬಿರ್ (32) ಎಂಬಾತನನ್ನು ಬಂಧಿಸಿದ್ದಾರೆ. ವರ್ಕಾಡಿ ಮೊರತ್ತಣೆಯ ಮನೆಯೊಂದರಲ್ಲಿ ಗಾಂಜಾ ಬಚ್ಚಿಡಲಾಗಿತ್ತು. ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.  

ಕಾಸರಗೋಡು: ಅಪಾರ್ಟ್‌ಮೆಂಟ್‌ನಲ್ಲಿ ಬಚ್ಚಿಟ್ಟ ಗಾಂಜಾ ವಶಕ್ಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು-ಮಂಗಳೂರು ರೈಲು ಸೇವೆ ಮತ್ತೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 04: ಕರಾವಳಿ ವಿಭಾಗದಲ್ಲಿ ಮೂರು ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಿಭಾಗಕ್ಕೆ ರೈಲ್ವೆ ಮಂಡಳಿ ಅನುಮತಿ ನೀಡಿದ್ದು, ಇದರಲ್ಲಿ ಕಾರವಾರ-ಯಶವಂತ ಪುರ-ಕಾರವಾರ ರೈಲು ಕಾರ್ಯಾರಂಭಿಸಲಿದೆ.   ಸೆಪ್ಟೆಂಬರ್‌ 4ರ ಶುಕ್ರವಾರ ಸಂಜೆ 6.45ಕ್ಕೆ ನಂ.06585 ಯಶವಂತಪುರ ಹಾಗೂ ಕಾರವಾರ ನಡುವೆ ಕಾರ್ಯಾರಂಭಿಸಲಿದೆ. ಸೆಪ್ಟೆಂಬರ್‌ 5ರಂದು ಸಂಜೆ 6 ಗಂಟೆಗೆ ನಂ. 6595 ರೈಲು ಕಾರವಾರದಿಂದ ಹೊರಡಲಿದೆ. ಇನ್ನು ನಂ.16595/16596 ರೈಲುಗಳದ್ದೇ ವೇಳಾಪಟ್ಟಿ ಇವುಗಳಿಗೆ ಅನ್ವಯವಾಗಲಿದೆ. ಬೆಂಗಳೂರು-ಮಂಗಳೂರಿನ (06515) ನಡುವೆ

ಬೆಂಗಳೂರು-ಮಂಗಳೂರು ರೈಲು ಸೇವೆ ಮತ್ತೆ ಆರಂಭ Read More »

ಕರಾವಳಿ, ಕರ್ನಾಟಕ

ಪ್ರೇಮಿಯ ಜೊತೆ ಅಕ್ಕ ಪರಾರಿ ➤ ಆಘಾತದಿಂದ ತಂಗಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ. ಸೆ.04:   ಕಾರ್ಕಳದ ಮಾಳ ಗ್ರಾಮದಲ್ಲಿ ಅಕ್ಕ ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾಗಿದ್ದರಿಂದ ಆಘಾತಕ್ಕೊಳಗಾದ ತಂಗಿ ಮೃತಪಟ್ಟಿದ್ದಾಳೆ. ಯುವತಿ ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡು ದಿನಗಳಿಂದ ಆಕೆ ನಾಪತ್ತೆಯಾಗಿದ್ದು, ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ಕಳೆದ ದಿನ ತಂಗಿಯ ಮೊಬೈಲ್ ಗೆ ಕರೆ ಮಾಡಿದ ಅಕ್ಕ ಮನೆಯಲ್ಲಿ ನೋಡಿದ ಹುಡುಗನೊಂದಿಗೆ ಮದುವೆಯಾಗಲು ಇಷ್ಟವಿಲ್ಲದ ಕಾರಣ ಪ್ರೀತಿಸಿದ ಸಹೋದ್ಯೋಗಿ ಯುವಕನೊಂದಿಗೆ ಹೋಗಿದ್ದೇನೆ ಎಂದು ತಿಳಿಸಿದ್ದಾಳೆ. ಅಲ್ಲದೆ ಹುಡುಕುವ ಪ್ರಯತ್ನ ಮಾಡದಂತೆ ತಂಗಿಗೆ ತಿಳಿಸಿದ್ದಾಳೆ.

ಪ್ರೇಮಿಯ ಜೊತೆ ಅಕ್ಕ ಪರಾರಿ ➤ ಆಘಾತದಿಂದ ತಂಗಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಕೃತ ಮನಸ್ಸಿನ ಪುಸ್ತಕ ಮಾರಾಟಗಾರ ➤ 10ರ ಬಾಲೆ ಮೇಲೆ ಬಿತ್ತು ಆತನ ಕಣ್ಣು ..!

(ನ್ಯೂಸ್ ಕಡಬ) newskadaba.com ಬರೇಲಿ , ಸೆ.04:  ಸ್ಥಳೀಯ ಪುಸ್ತಕ ಮಾರಾಟಗಾರನೊಬ್ಬ ಪುಸ್ತಕ ಖರೀದಿಸಲು ಬಂದ 10 ವರ್ಷದ ಬಾಲಕಿಯ ಮೇಲೆ ದುಷ್ಕೃತ್ಯ ಎಸಗಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.   ಬಾಲಕಿ ನೋಟ್ ಬುಕ್ ಖರೀದಿಸಲು ಆರೋಪಿಯ ಅಂಗಡಿಗೆ ಹೋದಾಗ ಆತ ಆಕೆಯ ಮಾನಭಂಗ ಮಾಡಲು ಪ್ರಯತ್ನಿಸಿದ್ದಾನೆ. ಆಗ ಬಾಲಕಿ ಆತನಿಂದ ತಪ್ಪಿಸಿಕೊಂಡು ಬಂದು ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಬಾಲಕಿಯ ಪೋಷಕರು ಕಲಾನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ

ವಿಕೃತ ಮನಸ್ಸಿನ ಪುಸ್ತಕ ಮಾರಾಟಗಾರ ➤ 10ರ ಬಾಲೆ ಮೇಲೆ ಬಿತ್ತು ಆತನ ಕಣ್ಣು ..! Read More »

ಕ್ರೈಮ್ ನ್ಯೂಸ್

ಸಿಸಿಬಿ ಯಿಂದ ನಟಿ ರಾಗಿಣಿ ದ್ವಿವೇದಿ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು. ಸೆ.04:  ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಅವರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ಇಂದು ಬೆಳಗ್ಗೆ ಯಲಹಂಕದಲ್ಲಿರುವ ರಾಗಿಣಿ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಶ್ನೋತ್ತರದ ಬಳಿಕ ಸಿಸಿಬಿ ಅಧಿಕಾರಿಗಳು ರಾಗಿಣಿ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.   ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿನ್‌ಎ ನಟಿ ರಾಗಿಣಿ ದ್ವಿವೇದಿಯನ್ನು ವಿಚಾರಣೆಗೆ ಹಾಜರಾಗುವಂತೆ

ಸಿಸಿಬಿ ಯಿಂದ ನಟಿ ರಾಗಿಣಿ ದ್ವಿವೇದಿ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ: ಡ್ರಗ್ಸ್ ಜಾಲದ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಒತ್ತಾಯ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 03. ಜಿಲ್ಲೆಯಲ್ಲಿ ಮಾದಕ ದ್ರವ್ಯದ ಜಾಲಕ್ಕೆ ಕಡಿವಾಣ ಹಾಕಲು ಹಾಗೂ ಈ ಜಾಲದ ಮೂಲವನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ವತಿಯಿಂದ ಬೆಳ್ತಂಗಡಿ ಪೋಲಿಸ್ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್.ಪಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ಯಾಸೀನ್ ಬಂಗೇರಕಟ್ಟೆ, ಆರೀಫ್ ಲಾಯಿಲ ಮತ್ತು ಸಿದ್ದೀಕ್ ಬಂಗೇರಕಟ್ಟೆ ಉಪಸ್ಥಿತರಿದ್ದರು.

ಬೆಳ್ತಂಗಡಿ: ಡ್ರಗ್ಸ್ ಜಾಲದ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಒತ್ತಾಯ Read More »

ಕರಾವಳಿ, ಕರ್ನಾಟಕ

ನಾಳೆಯಿಂದ ಪಣೋಲಿಬೈಲಿನಲ್ಲಿ ಕೋಲ ಸೇವೆಗೆ ಅವಕಾಶ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 03. ಕೊರೋನಾ ಮಹಾಮಾರಿಯಿಂದ ಜನ ಸೇರಲು ಅವಕಾಶವಿರದ ಕಾರಣ ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುತಿದ್ದ ಸೇವೆಗಳನ್ನು ಲಾಕ್ ಡೌನ್ ಹಿನ್ನೆಲೆ ರದ್ದುಗೊಳಿಸಲಾಗಿತ್ತು. ಇದೀಗ ತಾಲೂಕಿನ ಪ್ರಸಿದ್ದ ಕಾರಣಿಕ ಕ್ಷೇತ್ರವಾಧ ಪಣೊಲಿಬೈಲಿನಲ್ಲಿ ನಾಳೆಯಿಂದ ಕೋಲ ಸೇವೆ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಶ್ರೀಕ್ಷೇತ್ರ ಪಣೋಲಿಬೈಲಿನಲ್ಲಿ ವಾರದ ಮೂರು ದಿನಗಳ ಕಾಲ ನಡೆಸಲಾಗುತ್ತಿದ್ದ ಅಗೇಲು ಸೇವೆ ಹಾಗೂ ಕೋಲ ಸೇವೆಯು ಸರಕಾರದ ನಿಯಮದಂತೆ ರದ್ದುಗೊಳಿಸಲಾಗಿತ್ತು, ಆದರೆ ಇದೀಗ ಸರಕಾರದ ಸೂಚನೆಯಂತೆ ನಾಳೆಯಿಂದ  (ಸೆ. 4)

ನಾಳೆಯಿಂದ ಪಣೋಲಿಬೈಲಿನಲ್ಲಿ ಕೋಲ ಸೇವೆಗೆ ಅವಕಾಶ Read More »

ಕರಾವಳಿ, ಕರ್ನಾಟಕ

ಪ್ರವಾಸೋದ್ಯಮ: ಉಚಿತ ಕೌಶಲ್ಯ ತರಬೇತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 03. ಕರ್ನಾಟಕ ಸರ್ಕಾರ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಯೋಜನೆಯಡಿಯಲ್ಲಿ, ಅಲ್ಪಾವಧಿ ಉಚಿತ ತರಬೇತಿಯನ್ನು ಅರ್ಹ ನಿರುದ್ಯೋಗಿ ಯುವಕ, ಯುವತಿಯರಿಗೆ  ಹೋಟೆಲ್ ಮ್ಯಾನೇಜ್‍ ಮೆಂಟ್ ಕ್ಷೇತ್ರದಲ್ಲಿ ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೋಟೆಲ್ ಮ್ಯಾನೇಜ್‍ ಮೆಂಟ್ ತರಬೇತಿ ಕ್ಷೇತ್ರಗಳ ವಿವರ ಇಂತಿವೆ- ಫುಡ್ ಪ್ರೊಡಕ್ಷನ್ ತರಬೇತಿ ಅವಧಿ – 18 ವಾರಗಳು, ಕನಿಷ್ಠ  ವಿದ್ಯಾರ್ಹತೆ – 8 ನೇ ತರಗತಿ ಉತ್ತೀರ್ಣ, ಸ್ಟೈಫಂಡ್ (ಷರತ್ತಿಗೊಳಪಟ್ಟು) –

ಪ್ರವಾಸೋದ್ಯಮ: ಉಚಿತ ಕೌಶಲ್ಯ ತರಬೇತಿ Read More »

ಕರಾವಳಿ, ಕರ್ನಾಟಕ

ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಜಮೀನಿನ ಸರ್ವೇ ➤ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 03. ಜಿಲ್ಲೆಯ ಪತ್ರಿಯೊಂದು ತಾಲೂಕಿನ ಗ್ರಾಮ ಪಂಚಾಯತ್‍ನಲ್ಲಿ ಇರುವ ಡಿ.ಸಿ. ಮನ್ನಾ ಜಮೀನಿನ ಬಗ್ಗೆ ಸಂಪೂರ್ಣವಾಗಿ ಸರ್ವೇ ನಡೆಸಿ ಅದರ ವರದಿಯನ್ನು ಆಯಾ ತಾಲೂಕಿನ ತಹಶೀಲ್ದಾರರು ಕಡ್ಡಾಯವಾಗಿ ನೀಡಬೇಕು. ಆಸ್ತಿಯನ್ನು ಹೊಂದಿರುವ ವ್ಯಕ್ತಿ ಹೆಚ್ಚುವರಿ ಆಸ್ತಿಗಾಗಿ ಡಿ.ಸಿ. ಮನ್ನಾ ಯೋಜನೆಯಡಿ ಭೂಮಿಯನ್ನು ಪಡೆಯಲು ಅರ್ಜಿ ಸಲ್ಲಿಸುವವರ ವಿರುದ್ಧ ಕ್ರಮ ಹಾಗೂ ಡಿ.ಸಿ. ಮನ್ನಾ ಜಮೀನಿನ ಭೂಮಿಯನ್ನು  ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.

ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಜಮೀನಿನ ಸರ್ವೇ ➤ ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ, ಕರ್ನಾಟಕ
Scroll to Top