ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ *➤ ‘ನನ್ನನ್ನು ಹುಡುಕಬೇಡಿ, ಹುಡುಕಿದರೆ ಜೀವಂತ ಇರುವುದಿಲ್ಲ’ ಚೀಟಿ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.09. ಕೆಲಸಕ್ಕೆಂದು ತೆರಳಿದ ಯುವಕನೋರ್ವ ಮನೆಗೆ ಹಿಂತಿರುಗದೆ ನಾಪತ್ತೆಯಾಗಿರುವ ಘಟನೆ ಠಾಣಾ ವ್ಯಾಪ್ತಿಯ ಬಲ್ಯದಿಂದ ವರದಿಯಾಗಿದೆ. ಬಲ್ಯ ಗ್ರಾಮದ ದೇರಾಜೆ ಎಂಬಲ್ಲಿರುವ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ದೇರಾಜೆ ನಿವಾಸಿ ಚಂದ್ರಶೇಖರ್(23) ಎಂಬಾತ ಸೆಪ್ಟೆಂಬರ್ 04 ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದ್ದು, ಆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿದೆ. ಮೊಬೈಲನ್ನು ಮನೆಯಲ್ಲೇ ಬಿಟ್ಟು ಬೈಕಿನಲ್ಲಿ ತೆರಳಿದ್ದು, ನನ್ನನ್ನು ಹುಡುಕಬೇಡಿ ಹುಡುಕಿದರೆ ಜೀವಂತವಾಗಿ ಇರುವುದಿಲ್ಲ ಎಂದು ಮೊಬೈಲ್‌ ಕೆಳಗಡೆ ಚೀಟಿ ಬರೆದಿಟ್ಟು ನಾಪತ್ತೆಯಾಗಿರುವುದಾಗಿ ಆತನ […]

ಕಡಬ: ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ *➤ ‘ನನ್ನನ್ನು ಹುಡುಕಬೇಡಿ, ಹುಡುಕಿದರೆ ಜೀವಂತ ಇರುವುದಿಲ್ಲ’ ಚೀಟಿ ಪತ್ತೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ, ಪುತ್ತೂರು ಉಭಯ ತಾಲೂಕುಗಳಲ್ಲಿ ಇಂದು 35 ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಸೆ. 08. ಆರೋಗ್ಯ ಇಲಾಖಾ ವರದಿಯಂತೆ ಇಂದು ಕಡಬ ಮತ್ತು ಪುತ್ತೂರು ಉಭಯ ತಾಲೂಕುಗಳಲ್ಲಿ ಒಟ್ಟು 35 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ. ಕಡಬ ತಾಲೂಕಿನ ಕಾಣಿಯೂರಿನಲ್ಲಿ 24 ವರ್ಷದ ಯುವಕ, 10 ವರ್ಷದ ಬಾಲಕ, ಕೊಯಿಲದ 28 ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ.

ಕಡಬ, ಪುತ್ತೂರು ಉಭಯ ತಾಲೂಕುಗಳಲ್ಲಿ ಇಂದು 35 ಕೊರೋನಾ ಪಾಸಿಟಿವ್ Read More »

ಕರಾವಳಿ, ಕರ್ನಾಟಕ

ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶ..!!

(ನ್ಯೂಸ್ ಕಡಬ) newskadaba.com ಹೈದರಬಾದ್  ,ಸೆ.08:  ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶರಾಗಿದ್ದಾರೆ. ಅವರು ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾದರು.   ಬಾತ್ ರೂಮ್ ನಲ್ಲಿ ಕುಸಿದು ಬಿದ್ದ ಅವರನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟರು. ಲಾಕ್ ಡೌನ್ ನಿಂದ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ಅವರು ಗುಂಟೂರಿನಲ್ಲಿ ಇದ್ದರು.ಸಮರಸಿಂಹ ರೆಡ್ಡಿ, ಪ್ರೇಮಿಚುಕುಂಡಮ್ ರಾ, ನರಸಿಂಹ ನಾಯ್ಡು, ನೂವೊಸ್ತಾನಂತೆ ನೇನೊದ್ದಂತನಾ, ಜುಲಾಯಿ, ರೆಡಿ, ಕಿಕ್,

ಟಾಲಿವುಡ್ ನ ಹಿರಿಯ ನಟ ಜಯಪ್ರಕಾಶ್ ರೆಡ್ಡಿ ವಿಧಿವಶ..!! Read More »

ರಾಷ್ಟ್ರೀಯ ನ್ಯೂಸ್

ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು ,ಸೆ.08: ಸ್ಯಾಂಡಲ್ ವುಡ್ ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ (60) ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.   ಶ್ರೀಮಂಜುನಾಥ, ಸೂಪರ್, ಬುದ್ಧಿವಂತ ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸಿದ್ದರಾಜ್ ಕಲ್ಯಾಣಕರ್, ಅವರು ಯಾರೇ ನೀ ಅಭಿಮಾನಿ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು. ನಿನ್ನೆಯಷ್ಟೇ 60 ನೇ ಜನ್ಮದಿನವನ್ನು ಪ್ರೇಮಲೋಕ ಧಾರವಾಹಿ ಸೆಟ್ ನಲ್ಲಿ ಆಚರಿಸಿಕೊಂಡಿದ್ದ ಅವರು, ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.  

ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ ಇನ್ನಿಲ್ಲ Read More »

ಕರ್ನಾಟಕ

ತಾಯಿ – ಮಗಳ ಹತ್ಯೆಗೆ ಯತ್ನ ➤ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬರ್ಬರ ದೃಶ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು ,ಸೆ.07:  ತಾಯಿ-ಮಗಳನ್ನು ಹತ್ಯೆ ಮಾಡಲು ಯತ್ನಿಸಿದ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್​ 4ರಂದು ಸಂಜೆ 7.40ರ ಹೊತ್ತಿಗೆ ಘಟನೆ ನಡೆದಿದೆ. ತಾಯಿ ದೀಪಾ ಶ್ರೀಕುಮಾರ್ ಮತ್ತು ಮಗಳು ಹಿಷಿತಾ ದ್ವಿಚಕ್ರವಾಹನದಲ್ಲಿ ವಿದ್ಯಾಪೀಠ ರಸ್ತೆಯಲ್ಲಿ ತೆರಳುತ್ತಿದ್ದರು.     ಇನ್ನೊಂದು ಬೈಕ್​​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದೀಪಾ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ತಡೆಯಲು ಹೋದ ಹಿಷಿತಾ ಮೇಲೆ ಕೂಡ ದಾಳಿ ಮಾಡಿದ್ದಾರೆ. ಅಷ್ಟರಲ್ಲಿ ಸಾರ್ವಜನಿಕರು ಸೇರಿದ್ದರಿಂದ ಕೂಡಲೇ ಅಲ್ಲಿಂದ

ತಾಯಿ – ಮಗಳ ಹತ್ಯೆಗೆ ಯತ್ನ ➤ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬರ್ಬರ ದೃಶ್ಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ➤ ಸಿಸಿಬಿಯಿಂದ ನಟಿ ಸಂಜನಾ ಮನೆ ಮೇಲೆ ದಾಳಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 08. ಸ್ಯಾಂಡಲ್‌ವುಡ್‌ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಿಗ್ಗೆ ನಟಿ ಸಂಜನಾ ಮನೆ ಮೇಲೆ ಸಿಸಿಬಿ ಪೋಲಿಸರು ದಾಳಿ ನಡೆಸಿದ್ದಾರೆ. ಇಂದಿರಾನಗರದಲ್ಲಿರುವ ನಟಿ ಸಂಜನಾ ಮನೆ ಮೇಲೆ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ಮೂರು ವಾಹನಗಳಲ್ಲಿ ಬಂದ 10ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಜನಾ ಅವರ ಮೊಬೈಲ್‌ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರು, ಬಿ.ಎಂ.ಡಬ್ಲ್ಯೂ ಕಾರನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾತೆ. ಕಾರು ಅರ್ಚನಾ ಗರ್ಲಾನಿ ಅವರ ಹೆಸರಿನಲ್ಲಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ➤ ಸಿಸಿಬಿಯಿಂದ ನಟಿ ಸಂಜನಾ ಮನೆ ಮೇಲೆ ದಾಳಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜೇಸಿಐ ನೆಲ್ಯಾಡಿ ವತಿಯಿಂದ ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಶಗ್ರಿತ್ತಾಯರಿಗೆ ಗೌರವಾರ್ಪಣೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ. 06. ಶಿಕ್ಷಕ ದಿನಾಚರಣೆ ಪ್ರಯುಕ್ತ ಜೇಸಿಐ ನೆಲ್ಯಾಡಿ ಘಟಕದ ವತಿಯಿಂದ ನೆಲ್ಯಾಡಿ ಪಡುಬೆಟ್ಟಿನ ನಿವೃತ್ತ ಶಿಕ್ಷಕ, ಸಾಹಿತ್ಯ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯರನ್ನು ಅವರ ನಿವಾಸದಲ್ಲಿ ಗೌರವಾರ್ಪಣೆ ಮಾಡಿ ಸನ್ಮಾನಿಸಲಾಯಿತು.   ಈ ಸಂದರ್ಭದಲ್ಲಿ ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲಾ ಕನ್ನಡ ಶಿಕ್ಷಕರಾದ ವಿ.ಆರ್. ಹೆಗಡೆ, ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ತಾ.ಪಂ. ಸದಸ್ಯೆ ಉಷಾ ಅಂಚನ್ ಉಪಸ್ಥಿತರಿದ್ದರು. ಜೇಸಿಐ ನೆಲ್ಯಾಡಿ ಘಟಕಾಧ್ಯಕ್ಷ ಶಿವಪ್ರಸಾದ್ ರವರು ಅಧ್ಯಕ್ಷತೆ

ಜೇಸಿಐ ನೆಲ್ಯಾಡಿ ವತಿಯಿಂದ ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಶಗ್ರಿತ್ತಾಯರಿಗೆ ಗೌರವಾರ್ಪಣೆ Read More »

ಕರಾವಳಿ, ಕರ್ನಾಟಕ

ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಎಚ್.ವಿ. ಶಿವಾನಂದ ಶೇಟ್ ವಿಧಿವಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ  ಶ್ರೀ ವಾಸುದೇವ ಎಸ್ ಶೇಟ್ ಹೊನ್ನಾವರ ಹಾಗೂ ಶ್ರೀಮತಿ ಕಾಮಾಕ್ಷಿ ವಾಸುದೇವ ಶೇಟ್ ದಂಪತಿಗಳ ಪುತ್ರ ಎಚ್.ವಿ. ಶಿವಾನಂದ ಶೇಟ್ (60) ಇವರು ಅಲ್ಪಕಾಲದ ಅಸೌಖ್ಯದಿಂದ ಶಿವಮೊಗ್ಗದಲ್ಲಿ ದೈವಾದೀನರಾಗಿದ್ದಾರೆ.  ಶ್ರೀಯುತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. 1960 ರಲ್ಲಿ ಹೊನ್ನಾವರದಲ್ಲಿ ಜನಿಸಿದ ಇವರು, ತದನಂತರ ತಮ್ಮ ವಿದ್ಯಾಭ್ಯಾಸ ಪಿ.ಯು.ಸಿ ಮುಗಿಸಿದ ನಂತರ ಸತತ 30 ವರ್ಷಗಳಿಂದ

ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಎಚ್.ವಿ. ಶಿವಾನಂದ ಶೇಟ್ ವಿಧಿವಶ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಾರೆ: ಅಪಾಯವನ್ನು ಆಹ್ವಾನಿಸುತ್ತಿರುವ ವಿದ್ಯುತ್ ಕಂಬ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ. 06. ಇಲ್ಲಿನ ದರ್ಖಾಸ್ತು ಎಂಬಲ್ಲಿ ಕಲ್ಲೋಣಿಯ ಮದ್ರಸದ ಸಮೀಪ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬವೊಂದು ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿದೆ. ಈ ಕಂಬದಲ್ಲಿ ಮೈನ್ ಲೈನ್ ಸೇರಿದಂತೆ ಹಲವು ವಿದ್ಯುತ್ ಲೈನ್ ಗಳು ಹಾದುಹೋಗಿದೆ. ಅಲ್ಲದೇ ಕಂಬದ ಮಧ್ಯದಲ್ಲಿ ಬಿರುಕು ಬಿಟ್ಟಿದ್ದರಿಂದ ಒಳಗಿನಿಂದ ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ. ಕಂಬದ ಮಧ್ಯದಲ್ಲಿ ತುಂಡಾದ ಹಾಗೆ ಕಾಣುತ್ತಿದ್ದು, ಕಂಬದ ಹತ್ತಿರವೇ ಒಂದು ಮಾವಿನ ಮರವೂ ಇದ್ದುದ್ದರಿಂದ ಭಾರೀ ಗಾಳಿಗೆ ಮುರಿದು ಬೀಳುವ ಸಾಧ್ಯತೆ

ಬೆಳ್ಳಾರೆ: ಅಪಾಯವನ್ನು ಆಹ್ವಾನಿಸುತ್ತಿರುವ ವಿದ್ಯುತ್ ಕಂಬ Read More »

ಕರಾವಳಿ, ಕರ್ನಾಟಕ

ಕಾರುಗಳ ನಡುವೆ ಢಿಕ್ಕಿ ➤ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಅರಂತೋಡು, ಸೆ. 06. ಎರಡು ಕಾರುಗಳ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿದ ಘಟನೆ ಇಲ್ಲಿನ ಉದಯನಗರ ತಿರುವಿನಲ್ಲಿ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರು ಮತ್ತು ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಐಕಾನ್ ಕಾರಿನ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿದ ಪರಿಣಾಮ ಐಕಾನ್ ಕಾರು ಚಾಲಕನಿಗೆ ಗಾಯಗಳಾಗಿದ್ದು, ಗಾಯಾಳುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾರುಗಳ ನಡುವೆ ಢಿಕ್ಕಿ ➤ ಚಾಲಕನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top