ಕಾಸರಗೋಡು: ನೀರು ತುಂಬಿದ ಕೆಂಗಲ್ಲು ಕೋರೆಗೆ ಬಿದ್ದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ.13: ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ದಾರುಣ ಘಟನೆ ನೀಲೇಶ್ವರ ಬಂಗಳಂ ಎಂಬಲ್ಲಿ ನಡೆದಿದೆ. ಮೃತ ರಘುನಾಥ್ ( 55) ಎಂದು ಗುರುತಿಸಲಾಗಿದೆ.     ಕಳೆದ ದಿನ ಸಂಜೆ ಕೆಲಸ ಮುಗಿಸಿ ಮರಳುತ್ತಿದ್ದಾಗ ಮನೆ ಬಳಿ ನೀರು ತುಂಬಿದ ಕೆಂಗಲ್ಲು ಕೋರೆಗೆ ಬಿದ್ದಿದ್ದು ಇದನ್ನು ಗಮನಿಸಿದ್ದ ಪತ್ನಿ ಬೊಬ್ಬೆ ಹಾಕಿದ್ದಾರೆ. ಸ್ಥಳೀಯರು ಮೇಲಕ್ಕೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕೊರೊನಾ ತಪಾಸಣೆ ಬಳಿಕ ಮರಣೋತ್ತರ ಪರೀಕ್ಷೆ […]

ಕಾಸರಗೋಡು: ನೀರು ತುಂಬಿದ ಕೆಂಗಲ್ಲು ಕೋರೆಗೆ ಬಿದ್ದು ಕಾರ್ಮಿಕ ಮೃತ್ಯು Read More »

ಕರಾವಳಿ, ಕರ್ನಾಟಕ

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಗೆ ಶರಣಾದ ವಿವಾಹಿತೆ

(ನ್ಯೂಸ್ ಕಡಬ) newskadaba.com ಮಂಗಳೂರು , ಸೆ.13:  ವಿವಾಹಿತ ಯುವತಿಯೋರ್ವಳು ಡೆತ್‌ನೋಟ್ ಬರೆದಿಟ್ಟು, ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುರುಪುರದ ಭಜನಾ ಮಂದಿರ ಸಮೀಪದ ನಿವಾಸಿ, 28 ವರುಷ ಪ್ರಾಯದ ವಿವಾಹಿತೆ ಶಿಲ್ಪಾ  ಆತ್ಮಹತ್ಯೆಗೈದವರು.   ಈಕೆ ಬಜ್ಪೆ ಪೇಟೆಯ ಜ್ಯುವೆಲ್ಲರಿ ಅಂಗಡಿಯೊಂದರ ಮಾಲಕರೊಬ್ಬರ ಪುತ್ರಿ. ಇವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಊರಿಗೆ ಬಂದಿದ್ದ ಈಕೆ ‘ಮನೆಯಿಂದಲೇ ಕೆಲಸ’ ನಿರ್ವಹಿಸುತ್ತಿದ್ದರು. ಈಕೆಯ ಪತಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಈಕೆಗೆ 11 ತಿಂಗಳ ಮಗುವೊಂದಿದೆ ಎಂದು ತಿಳಿದುಬಂದಿದೆ.

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಗೆ ಶರಣಾದ ವಿವಾಹಿತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಾರೆ: ಅಂಗಡಿಗೆ ನುಗ್ಗಿ ನಗದು ಕಳ್ಳತನ ➤ ಆರೋಪಿ ಪೊಲೀಸ್‌ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.13: ಬೆಳ್ಳಾರೆ ಪೇಟೆಯಲ್ಲಿ ರಾತ್ರಿ ಅಂಗಡಿಗೆ ನುಗ್ಗಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ಳಾರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸೆ.10 ರಂದು ರಾತ್ರಿ ಬೆಳ್ಳಾರೆಯ ಮುಖ್ಯ ಪೇಟೆಯಲ್ಲಿರುವ ಮಾಸ್ಟರ್‌ ಪ್ಲಾನ್‌ ಮತ್ತು ಪ್ಲೈವುಡ್‌ ಅಂಗಡಿಗೆ ನುಗ್ಗಿದ ಕಳ್ಳ ರೂ.9500 ನಗದು ಕದ್ದು ಪರಾರಿಯಾಗಿದ್ದ ಈ ಬಗ್ಗೆ ಅಂಗಡಿ ಮಾಲಕರು ಪೊಲೀಸರಿಗೆ‌ ದೂರು ನೀಡಿದ್ದಾರೆ.   ದೂರು ದಾಖಲಿಸಿಕೊಂಡ ಪೊಲೀಸರು ಸೆ.11 ರಂದು ರಾತ್ರಿ ಕಳ್ಳತನ ಮಾಡಿದ ಆರೋಪಿಯನ್ನು ಪಂಜಿಗಾರಿನಲ್ಲಿ ಬಂಧಿಸುವಲ್ಲಿ

ಬೆಳ್ಳಾರೆ: ಅಂಗಡಿಗೆ ನುಗ್ಗಿ ನಗದು ಕಳ್ಳತನ ➤ ಆರೋಪಿ ಪೊಲೀಸ್‌ ವಶಕ್ಕೆ Read More »

ಕರಾವಳಿ, ಕರ್ನಾಟಕ

ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು..!!

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.13:  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಸ್ಟ್ 31 ರಂದು ಕೊರೊನಾ ವೈರಸ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು.     ಆದರೆ ಅಮಿತ್ ಷಾ ಅವರಲ್ಲಿ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲೇ ಉಳಿದರೆ ನಿರಂತರ ಚಿಕಿತ್ಸೆಗೆ ಸಹಾಯವಾಗಲಿದೆ

ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು..!! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಡಬ ಟೌನ್ ಜುಮಾ ಮಸೀದಿಯ ಅಧ್ಯಕ್ಷ ಎಸ್. ಅಬ್ದುಲ್ ಖಾದರ್ ಹಾಜಿ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.12. ಇಲ್ಲಿನ ಟೌನ್ ಜುಮಾ ಮಸೀದಿಯ ಅಧ್ಯಕ್ಷ, ಸಾಮಾಜಿಕ ಧುರೀಣ ಎಸ್. ಅಬ್ದುಲ್ ಖಾದರ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದೊಂದು ವಾರದಿಂದ ಬಾಧಿಸಿದ್ದ ಜ್ವರದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಹಲವು ಸಮಯಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದಲೂ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ನಿಧನರಾದರು. ಕಡಬ ಮಂಡಲ ಪಂಚಾಯತ್ ಸದಸ್ಯರಾಗಿದ್ದ ಅವರು, ವಿವಿಧ ಸಂಘ ಸಂಸ್ಥೆಗಳಲ್ಲಿ, ಸಾಮಾಜಿಕ ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ

ಕಡಬ ಟೌನ್ ಜುಮಾ ಮಸೀದಿಯ ಅಧ್ಯಕ್ಷ ಎಸ್. ಅಬ್ದುಲ್ ಖಾದರ್ ಹಾಜಿ ನಿಧನ Read More »

ಕರಾವಳಿ

ಉಪ್ಪಿನಂಗಡಿ: ಮಳೆಗೆ ಕುಸಿದಿದ್ದ ಕಂಪೌಂಡ್ ದುರಸ್ಥಿಗೊಳಿಸಿದ ಎಸ್ಕೆಎಸ್ಸೆಸ್ಸೆಫ್ ಆತೂರು ಕ್ಲಸ್ಟರ್ ವಿಖಾಯ ತಂಡ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 12. ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆದ್ರೋಡಿಯ ಮುಜೀಬ್ ಎಂಬವರ ಮನೆಯ ಕಂಪೌಂಡ್ ಕುಸಿತವಾಗಿದ್ದು, ಇದರ ದುರಸ್ಥಿ ಕಾರ್ಯವನ್ನು SKSSF ಉಪ್ಪಿನಂಗಡಿ ಶಾಖೆ ವಿಖಾಯ ಸದಸ್ಯರು ನೆರವೇರಿಸಿದರು. ಫಾರೂಕ್ ಝಿಂದಾಗಿ ಹಾಗು SKSSF ಆತೂರು ಕ್ಲಸ್ಟರ್ ವಿಖಾಯ ತಂಡದ ಸದಸ್ಯರಾದ ಆತೂರು ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮತ್ತು ವಿಖಾಯ ಸದಸ್ಯರಾದ ಝಕಾರಿಯಾ ಮುಸ್ಲಿಯಾರ್, ಆತೂರು ಕಸ್ಟರ್ ವಿಖಾಯ ಕನ್ವೀನರ್ ಝೈನ್ ಆತೂರು, ನೀರಾಜೆ ಶಾಖೆ ವಿಖಾಯ ಕನ್ವೀನರ್ ಆಝೀಝ್ ಪಾಲತ್ತಾಡಿ,

ಉಪ್ಪಿನಂಗಡಿ: ಮಳೆಗೆ ಕುಸಿದಿದ್ದ ಕಂಪೌಂಡ್ ದುರಸ್ಥಿಗೊಳಿಸಿದ ಎಸ್ಕೆಎಸ್ಸೆಸ್ಸೆಫ್ ಆತೂರು ಕ್ಲಸ್ಟರ್ ವಿಖಾಯ ತಂಡ Read More »

ಕರಾವಳಿ, ಕರ್ನಾಟಕ

ಸುನ್ನತ್ ಕೆರೆ: ನಾಳೆ (ಸೆ. 13) ರಂದು ಎಸ್ಡಿಪಿಐ ವತಿಯಿಂದ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಸುನ್ನತ್ ಕೆರೆ, ಸೆ. 12. ಎಸ್ಡಿಪಿಐ ಸುನ್ನತ್ ಕೆರೆ ಬ್ರಾಂಚ್ ವತಿಯಿಂದ ರಕ್ತದಾನ ಶಿಬಿರ ಮತ್ತು ಪಿ.ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ಹಾಗೂ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಯಾಕೂಬ್ ಕೊಯ್ಯುರುರವರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ ಸೆ. 13ರ ಆದಿತ್ಯವಾರದಂದು S.D.P.I ಬಸ್ಸು ತಂಗುದಾಣ ಸುನ್ನತ್ ಕೆರೆ ಬಳಿ ಬೆಳಿಗ್ಗೆ 10 ಗಂಟೆಯಿಂದ

ಸುನ್ನತ್ ಕೆರೆ: ನಾಳೆ (ಸೆ. 13) ರಂದು ಎಸ್ಡಿಪಿಐ ವತಿಯಿಂದ ರಕ್ತದಾನ ಶಿಬಿರ Read More »

ಕರಾವಳಿ, ಕರ್ನಾಟಕ

ವಿಟ್ಲ ಪೊಲೀಸರ ಮಿಂಚಿನ ಕಾರ್ಯಾಚರಣೆ ➤ ಮರಳು ಕೊರೆಯುವ ಯಂತ್ರ ಬೋಟು ವಶಕ್ಕೆ.

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 12. ಹೊಳೆಯಿಂದ ಮರಳು ಸಂಗ್ರಹಿಸಲು ಸಿದ್ದತೆ ನಡೆಸುತ್ತಿದ್ದ ಸ್ಥಳಕ್ಕೆ ವಿಟ್ಲ ಪ್ರಭಾರ ಎಸೈ ರಜೇಶ್ ಕೆ.ವಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಬೋಟು ಹಾಗೂ ಯಂತ್ರವನ್ನು ವಶಪಡಿಸಿಕೊಂಡ ಘಟನೆ ಕೊಳ್ನಾಡು ಗ್ರಾಸಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.     ಕೊಳ್ನಾಡು ಗ್ರಮದ ಕುಡ್ತಮುಗೇರು ಭಾಗದಲ್ಲಿ ಹಾದುಹೋಗುವ ಹೊಳೆಯಿಂದ ಕಳೆದ ಕೆಲವು ಸಮಯಗಳಿಂದ ಪಿಕಪ್ ಮೊದಲಾದ ವಾಹನಗಳ ಮೂಲಕ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದರು. ಇದೀಗ ಡ್ರಜ್ಜಿಂಗ್ ಮೆಷಿನ್ ಮೂಲಕ

ವಿಟ್ಲ ಪೊಲೀಸರ ಮಿಂಚಿನ ಕಾರ್ಯಾಚರಣೆ ➤ ಮರಳು ಕೊರೆಯುವ ಯಂತ್ರ ಬೋಟು ವಶಕ್ಕೆ. Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು, ಕಡಬ ಉಭಯ ತಾಲೂಕಿನಲ್ಲಿ ಇಂದು 59 ಮಂದಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಸೆ.12: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ 59 ಮಂದಿಗೆ ಕೊರೋನಾ ದೃಢಪಟ್ಟಿದೆ.     ಕಡಬ ತಾಲೂಕಿನ ಕಾಮಣದಲ್ಲಿ 29 ವರ್ಷ ಪ್ರಾಯದ ಯುವಕ, ಕೋಂಡಿಬಾಳದ 60 ವರ್ಷ ಪ್ರಾಯದ, 70 ವರ್ಷ ಪ್ರಾಯದ ವ್ಯಕ್ತಿ, ಕೊಲದ 45 ವರ್ಷ ಪ್ರಾಯದ ವಕ್ತಿ, 68 ವರ್ಷ ಪ್ರಾಯದ ಮಹಿಳೆ, ನೆಲ್ಯಾಡಿ 55 ವರ್ಷ ಪ್ರಾಯದ ವ್ಯಕ್ತಿ, 15 ವರ್ಷ ಪ್ರಾಯದ ಬಾಲಕ, 34 ವರ್ಷ ಪ್ರಾಯದ ವ್ಯಕ್ತಿ,

ಪುತ್ತೂರು, ಕಡಬ ಉಭಯ ತಾಲೂಕಿನಲ್ಲಿ ಇಂದು 59 ಮಂದಿಯಲ್ಲಿ ಕೊರೋನಾ ದೃಢ Read More »

ಕರಾವಳಿ

ಕಡಬ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಮರ್ಧಾಳದಲ್ಲಿ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಮರ್ದಾಳ, ಸೆ. 12. ಪಾಪ್ಯುಲರ್ ಫ್ರಂಟ್ ಬ್ಲಡ್ ಫೋರಮ್ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ಇಂದು ನಡೆಯಿತು. ಪ್ರಸ್ತುತ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ  ಸಮಾಜ ಸೇವೆಯ ಬಗ್ಗೆ ಪಾಪ್ಯುಲರ್ ಫ್ರಂಟ್ ಕಬಕ ವಲಯ ಅಧ್ಯಕ್ಷರಾದ ಉಸ್ಮಾನ್ ಎ.ಕೆ ಸವಿಸ್ತಾರವಾಗಿ ವಿವರಿಸಿದರು.   ರಕ್ತದಾನದ ಮಹತ್ವ ಮತ್ತು ಉಪಯೋಗದ ಬಗ್ಗೆ ಕಡಬ ಸಮುದಾಯ ಕೇಂದ್ರದ  ಅರೋಗ್ಯಾಧಿಕಾರಿ  ಸುಚಿತ್ರಾ ರಾವ್ ಅವರು  ಸಾಂದರ್ಭಿಕವಾಗಿ 

ಕಡಬ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಮರ್ಧಾಳದಲ್ಲಿ ರಕ್ತದಾನ ಶಿಬಿರ Read More »

ಕರಾವಳಿ, ಕರ್ನಾಟಕ
Scroll to Top