ಕಡಬ ಮೂಲದ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ *➤ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತುರ್ತು ಹಣದ ಬೇಡಿಕೆಯಿಟ್ಟ ವಂಚಕರು ➤ ಅಶೋಕ್ ಎಂಬವರ ಸಮಯಪ್ರಜ್ಞೆಯಿಂದ ವಂಚನಾ ಜಾಲ ಬೆಳಕಿಗೆ

(ನ್ಯೂಸ್ ಕಡಬ) newskadaba.com ಕಡಬ, ಸೆ.17. ಪೊಲೀಸ್ ಅಧಿಕಾರಿಯೋರ್ವರ ಹೆಸರಿನಲ್ಲಿ‌ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಕಡಬದ ವ್ಯಕ್ತಿಗೆ ಸಂದೇಶ ರವಾನಿಸಿ ಹಣದ ಅವಶ್ಯಕತೆ ತೋಡಿಕೊಂಡ ಘಟನೆ ಸೆಪ್ಟೆಂಬರ್ 17 ರಂದು ಬೆಳಗ್ಗೆ ನಡೆದಿದೆ‌. ಕಡಬದ ಕೋಡಿಬೈಲು ನಿವಾಸಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಸುರೇಶ್ ಕುಮಾರ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಕಡಬದ ಅಶೋಕ್ ಎಂಬವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿತ್ತು. ನಂತರ ಮೆಸೆಂಜರ್ ಮೂಲಕ 30 ಸಾವಿರ ತುರ್ತು ಹಣದ […]

ಕಡಬ ಮೂಲದ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ *➤ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ತುರ್ತು ಹಣದ ಬೇಡಿಕೆಯಿಟ್ಟ ವಂಚಕರು ➤ ಅಶೋಕ್ ಎಂಬವರ ಸಮಯಪ್ರಜ್ಞೆಯಿಂದ ವಂಚನಾ ಜಾಲ ಬೆಳಕಿಗೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಂಗಾತಿಯ ಪ್ರೇಮ ವಶ ಮತ್ತು ದಿನ ಭವಿಷ್ಯವನ್ನು ನೋಡಿ

ಶುದ್ಧ ಗೋರಂಜನ ಹಾಗೂ ಹಳ್ಳದ ಮಣ್ಣನ್ನು ತೆಗೆದುಕೊಂಡು ಅದನ್ನು ಹದವಾಗಿ ಮಿಶ್ರಣ ಮಾಡುತ್ತಾ “ಓಂ ಕಾಂ ಮಾಲಿನೀ ತಃ ತಃ ಸ್ವಾಹ” ಈ ಮಂತ್ರವನ್ನು ಸಾವಿರದ ಎಂಟು ಬಾರಿ ಜಪಿಸತಕ್ಕದ್ದು ನಂತರ ಇದನ್ನು ಹಣೆಗೆ ಹಚ್ಚಿಕೊಳ್ಳಿ. ಇದರಿಂದ ಇಷ್ಟದ ಸಂಗಾತಿ ನಿಮಗೆ ವಶವಾಗಲು ಸಾಧ್ಯವಾಗುತ್ತದೆ. ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ,

ಸಂಗಾತಿಯ ಪ್ರೇಮ ವಶ ಮತ್ತು ದಿನ ಭವಿಷ್ಯವನ್ನು ನೋಡಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ಭವಿಷ್ಯ, ಲೈಫ್‍ಸ್ಟೈಲ್, ವಿಶೇಷ ಲೇಖನಗಳು

ಪುತ್ತೂರು: ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾಗಿ ಎಂ. ಗೋಪಾಲ ನಾಯ್ಕ್ ನೇಮಕ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 16. ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಎರಡು ವರ್ಷಗಳಿಂದ ವೃತ್ತ ನಿರೀಕ್ಷರಾಗಿದ್ದ ತಿಮ್ಮಪ್ಪ ನಾಯ್ಕ್ ರವರನ್ನು ಸರಕಾರ ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ ಎಂ. ಗೋಪಾಲ ನಾಯ್ಕ್ ಎಂಬವರನ್ನು ನಿಯೋಜಿಸಿದೆ.   ನಕ್ಸಲ್‌ ನಿಗ್ರಹ ಪಡೆಯಲ್ಲಿ ಇನ್ಸ್‌ ಪೆಕ್ಟರ್‌ ಆಗಿದ್ದ ತಿಮ್ಮಪ್ಪ ನಾಯ್ಕ ರವರು ಪುತ್ತೂರು ನಗರ ಠಾಣಾ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಮಂಗಳೂರು ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ ಗೋಪಾಲ ನಾಯ್ಕ್‌ ರವರನ್ನು

ಪುತ್ತೂರು: ನಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಾಗಿ ಎಂ. ಗೋಪಾಲ ನಾಯ್ಕ್ ನೇಮಕ Read More »

ಕರಾವಳಿ

ಹಾಡುಹಗಲೇ ಅಂಗಡಿಗೆ ನುಗ್ಗಿ ನಗದು ದೋಚಿದ ಪ್ರಕರಣ ➤ 48 ಗಂಟೆಯೊಳಗೆ ಹಣದ ಜೊತೆ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 16.ರಬ್ಬರ್ ಅಂಗಡಿಯೊಂದರ ಡ್ರಾವರ್ ನಿಂದ ಒಂದು ಲಕ್ಷ ರೂಪಾಯಿ ಕಳವುಗೈದ ಪ್ರಕರಣವನ್ನು ಕೇವಲ 48 ಗಂಟೆಯಲ್ಲಿ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಅಂಬೊಟ್ಟು ಮನೆ ನೇಜಿಕಾರು ನಿವಾಸಿ ಮೊಹಮ್ಮದ್ ಶಾಫಿ ಎಂದು ಗುರುತಿಸಲಾಗಿದೆ. ಕಳವುಗೈದ ಆರೋಪಿ ಪರಾರಿಯಾಗಿದ್ದು, ಈತನನ್ನು ಬಂಧಿಸಿ ಕಳವುಗೆಯ್ಯಲಾದ ಒಂದು ಲಕ್ಷ ರೂಪಾಯಿ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 60,000/- ರೂಪಾಯಿ ಮೌಲ್ಯದ KA21 U 6006 ನೇ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

ಹಾಡುಹಗಲೇ ಅಂಗಡಿಗೆ ನುಗ್ಗಿ ನಗದು ದೋಚಿದ ಪ್ರಕರಣ ➤ 48 ಗಂಟೆಯೊಳಗೆ ಹಣದ ಜೊತೆ ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅರಂತೋಡು- ಅಂಗಡಿಮಜಲು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 16. ಅರಂತೋಡು ಗ್ರಾಮದ ಅಂಗಡಿಮಜಲು ರಸ್ತೆಯ ಕಾಂಕ್ರೀಟೀಕರಣಕ್ಕೆ ಸುಳ್ಯ ಶಾಸಕಾಭಿವೃಧ್ದಿ 20 ಲಕ್ಷ ರೂಪಾಯಿ ಅನುದಾನದಲ್ಲಿ ಅರಂತೋಡು ಅಂಗಡಿಮಜಲು ರಸ್ತೆಗೆ ಕಾಂಕ್ರೀಟೀಕರಣದ ಶಿಲಾನ್ಯಾಸ ಕಾರ್ಯಕ್ರಮವು ಸೆ.16 ರಂದು ನಡೆಯಿತು. ಸುಳ್ಯ ಶಾಸಕ ಎಸ್. ಅಂಗಾರ ಶಿಲಾನ್ಯಾಸ ನೇರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ಅರಂತೋಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕೊಡೆಂಕೇರಿ, ಅರಂತೋಡು ಗ್ರಾಮ

ಅರಂತೋಡು- ಅಂಗಡಿಮಜಲು ರಸ್ತೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಐರಾವತ ➤ ಫೋಮ್ ಶೀಟ್ ಬಳಸಿ ತಯಾರಿಸಿದ ಬಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 16. ಕಲಾವಿದನೋರ್ವ ಫೋಮ್ ಶೀಟ್ ನಿಂದ ತಯಾರಿಸಿದ ಕೆ.ಎಸ್.ಆರ್.ಟಿ.ಸಿ ಬಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಯರ್, ಸ್ಟೇರಿಂಗ್, ಗೇರ್, ಹೆಡ್ ಲೈಟ್, ಲಾಕ್ ಗಳುಳ್ಳ ಬಾಗಿಲು, ಕಿಟಕಿ, ತುರ್ತು ನಿರ್ಗಮನ ಕಿಟಕಿ, ಮಿರರ್ ಸೇರಿದಂತೆ ಎಲ್ಲವೂ ಇವೆ. ಆದರೆ ಈ ಬಸ್ ನಲ್ಲಿ ಪ್ರಯಾಣ ಮಾತ್ರ ಅಸಾಧ್ಯ, ಕಾರಣ ಇದು ನಿಜವಾದ ಬಸ್ಸಲ್ಲ, ಸಣ್ಣ ಗಾತ್ರದ ಆಟಿಕೆಯ ಬಸ್. ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಕರ್ನಾಟಕ ಸಾರಿಗೆ ಸಂಸ್ಥೆಯ

ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಐರಾವತ ➤ ಫೋಮ್ ಶೀಟ್ ಬಳಸಿ ತಯಾರಿಸಿದ ಬಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸೆ. 18ರಿಂದ ಬದಲಾಗಲಿದೆ ಎಸ್.ಬಿ.ಐ. ಎಟಿಎಂ ವಿತ್ ಡ್ರಾ ನಿಯಮ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 16. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಎಟಿಎಂನಲ್ಲಿ ಹಣದ ವಿತ್​ಡ್ರಾ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಇನ್ನು ಮುಂದೆ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ವಿತ್​ ಡ್ರಾ ಮಾಡಲು ಬಯಸಿದಲ್ಲಿ ನಿಮ್ಮ ಫೋನ್​ಗೆ ಓಟಿಪಿ ಬರುತ್ತದೆ. ನೀವು ಬ್ಯಾಂಕ್​ ಅಕೌಂಟ್ ಗೆ ನೋಂದಣಿ ಮಾಡಲಾಗಿರುವ ಮೊಬೈಲ್​ ಸಂಖ್ಯೆಗೆ ಈ ಓಟಿಪಿ ಬರುತ್ತದೆ. ಅದನ್ನು ಎಟಿಎಂ ಮೆಷಿನ್​ ಮೇಲೆ ನಮೂದು ಮಾಡಿದ ಮೇಲಷ್ಟೇ ಹಣವನ್ನು ಪಡೆಯಲು ಸಾಧ್ಯ.ಆದ್ದರಿಂದ

ಸೆ. 18ರಿಂದ ಬದಲಾಗಲಿದೆ ಎಸ್.ಬಿ.ಐ. ಎಟಿಎಂ ವಿತ್ ಡ್ರಾ ನಿಯಮ Read More »

ಕರ್ನಾಟಕ

ಚರಂಡಿಯಲ್ಲಿಯೇ ವಿದ್ಯುತ್ ಕಂಬ ಅಳವಡಿಕೆ ➤ ಅಪಾಯಕ್ಕೆ ಆಹ್ವಾನ , ಸ್ಥಳೀಯರ ಆಕ್ರೋಶ..!

(ನ್ಯೂಸ್ ಕಡಬ) newskadaba.com ಎಲಿಮಲೆ, ಸೆ.16:  ಸೋಣಂಗೇರಿ ಸುಬ್ರಹ್ಮಣ್ಯ ರಸ್ತೆಯ ಎಲಿಮಲೆಯಲ್ಲಿ ಮೆಸ್ಕಾಂ ವತಿಯಿಂದ ಹೊಸ ಹೆಚ್.ಟಿ. ಲೈನ್ ತಂತಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಕಂಬ ಅಳವಡಿಸಿ ಹೈ ಟೆನ್ಶನ್ ತಂತಿ ಎಳೆಯಲಾಗಿದೆ.  ಆದರೆ ವಿದ್ಯುತ್ ಕಂಬಗಳನ್ನು ಮಾತ್ರ ರಸ್ತೆಬದಿಯಲ್ಲಿ ನೀರು ಹೋಗುವ ಚರಂಡಿಯಲ್ಲಿಯೇ ಹಾಕಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.   ವಿದ್ಯುತ್ ಕಂಬಗಳನ್ನು ರಸ್ತೆ ಬದಿಯಲ್ಲಿ ನೀರು ಹೋಗುವ ಚರಂಡಿಯಲ್ಲಿ ಹಾಕಿ ಎಡವಟ್ಟು ಆಗಿದೆ. ಮಳೆಗಾಲದಲ್ಲಿ ಸಾಕಷ್ಟು ನೀರು ಈ ಚರಂಡಿಯಲ್ಲಿ ಹರಿಯುತ್ತಿದ್ದು

ಚರಂಡಿಯಲ್ಲಿಯೇ ವಿದ್ಯುತ್ ಕಂಬ ಅಳವಡಿಕೆ ➤ ಅಪಾಯಕ್ಕೆ ಆಹ್ವಾನ , ಸ್ಥಳೀಯರ ಆಕ್ರೋಶ..! Read More »

ಕರಾವಳಿ

ಕೋವಿಡ್ ಕೇಸ್ : ಇಂದು (ಸೆ.16) ಒಟ್ಟು 31 ಮಂದಿಯಲ್ಲಿ ಕೋರೊನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಸೆ.16:  ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು  31 ಮಂದಿಗೆ ಕೊರೋನಾ ದೃಢಗೊಂಡಿದೆ. ಕಡಬ ತಾಲೂಕಿನ ಬಲ್ಯದ 59 ವರ್ಷದ ಪುರುಷ, ಆಲಂಕಾರಿನ 40 ವರ್ಷದ ಮಹಿಳೆ, ಬಿಳಿನೆಲೆಯ 24ವರ್ಷದ ಯುವತಿ, ಶಿರಾಡಿಯ 43 ವರ್ಷದ ಮಹಿಳೆ, 63 ವರ್ಷದ ವ್ಯಕ್ತಿ, 50 ವರ್ಷದ ಮಹಿಳೆ, 60 ವರ್ಷದ ಮಹಿಳೆ, 55 ವರ್ಷದ ವ್ಯಕ್ತಿ, ಕೌಕ್ರಾಡಿ ಯ 68 ವರ್ಷದ ವ್ಯಕ್ತಿ, ನೆಲ್ಯಾಡಿಯ ವರ್ಷದ 27 ವರ್ಷದ

ಕೋವಿಡ್ ಕೇಸ್ : ಇಂದು (ಸೆ.16) ಒಟ್ಟು 31 ಮಂದಿಯಲ್ಲಿ ಕೋರೊನಾ ದೃಢ Read More »

ಕರಾವಳಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ➤ ಎರಡು ಅಂಗಡಿಯಲ್ಲಿ ಅಪಾರ ಹಾನಿ!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.16:  ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿನ ಎರಡು ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಸುಮಾರು ಎರಡು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ವಿದ್ಯುತ್‌ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಇಂದು ಮುಂಜಾನೆ ಈ ಅವಘಡ ಉಂಟಾಗಿದೆ ಎಂದು ಹೇಳಲಾಗಿದ್ದು 2 ಅಂಗಡಿ ಸಂಪೂರ್ಣ ಸುಟ್ಟುಹೋಗಿವೆ. ಸ್ಥಳಕ್ಕೆ ನಗರ ಸಭಾ ಸದಸ್ಯರಾದ ಟಿ ಜಿ ಹೆಗಡೆ , ನಗರ ಸಭೆಯ ಅಧಿಕಾರಿಗಳು ಬೇಟಿ ನೀಡಿದ್ದಾರೆ.    

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ➤ ಎರಡು ಅಂಗಡಿಯಲ್ಲಿ ಅಪಾರ ಹಾನಿ! Read More »

ಕರಾವಳಿ
Scroll to Top